Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.08.2021
Share:

By Village Missionary Movement

Tuesday, 03-Aug-2021

ಧೈನಂದಿನ ಧ್ಯಾನ(Kannada) – 03.08.2021

 

ನೀವು ವಿಶೇಷವಾದವರು

 

"ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು." - ಮತ್ತಾಯ 10:31

 

ನಮ್ಮ ತಲೆಯಲ್ಲಿರುವ ಕೂದಲುಗಳ ಲೆಕ್ಕವು ಸಹ ದೇವರಿಗೆ ಗೊತ್ತೆಂಬುದು ನಮಗೆ ಎಷ್ಟು ಆಶ್ಚರ್ಯವನ್ನುಂಟು ಮಾಡುತ್ತಿದೆ. ನಮ್ಮ ಮೇಲೆ ಇಷ್ಟೊಂದು ಅಕ್ಕರೆಯನ್ನು ಇಟ್ಟಿರುವ ದೇವರು ನಮ್ಮ ಶರೀರದ ಅಂಗಾಂಗಗಳು ಮತ್ತು ನಮ್ಮ ಜೀವದ ಬಗ್ಗೆಯೂ ಎಷ್ಟು ಅಕ್ಕರೆಯುಳ್ಳವರಾಗಿರುತ್ತಾರೆ ಎಂಬುದನ್ನು ನೆನಿಸಿ ನೋಡಿ ಕರ್ತನನ್ನು ಕೃತಜ್ಞತೆಯೊಂದಿಗೆ ಸ್ತುತಿಸಲು ಬದ್ಧರಾಗಿದ್ದೇವೆ. ಕರ್ತನ ಅನುಮತಿ ಇಲ್ಲದೆ ಯಾವ ಹಾನಿಯೂ ನಮಗೆ ಸಂಭವಿಸಲು ಸಾಧ್ಯವೇ ಇಲ್ಲ.

 

ಈಗಿರುವ ಈ ಮಾರಕ ರೋಗವು ನಮ್ಮನ್ನು ಹೆದರಿಸುತ್ತಿದೆ ಮತ್ತು ಲಸಿಕೆ ಹಾಕುವಲ್ಲೂ ಹಲವು ತೊಡಕುಗಳು. ನಾವು ಅನೇಕರನ್ನು ಕಳೆದುಕೊಳ್ಳಲು ಕೊಟ್ಟು ಬಿಟ್ಟಿದ್ದೇವೆ. ಈ ಪರಿಸ್ಥಿತಿಯಲ್ಲೂ ದೇವರ ಚಿತ್ತವಿಲ್ಲದೆ ನನ್ನ ದೇವರು ನನ್ನ ಜೀವನದಲ್ಲಿ ಏನನ್ನೂ ಅನುಮತಿಸುವುದಿಲ್ಲ ಎಂಬ ನಿಶ್ಚಯವು, ನಾವು ಆತನೊಂದಿಗೆ ಹೊಂದಿರುವ ಸಂಬಂಧದಲ್ಲಿ ಮಾತ್ರವೆ ಇದೆ. ಹೊರೆಗಳು, ಸಮಸ್ಯೆಗಳು, ನೋವುಗಳು, ಸಾವುಗಳು, ರೋಗಗಳ ಸಮಯದಲ್ಲಿಯೂ ನಾವು ಪ್ರಯೋಜನಗಳನ್ನು ಕಾಣಬಹುದು ಮತ್ತು ಅನುಭವಿಸಬಹುದು. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ದೇವರಿಗೆ ಕೃತಜ್ಞತೆ ಹೇಳಲು ಮರೆಯಬಾರದು.

 

ಕೃತಜ್ಞತೆ ಹೇಳುವವರಿಗೆ ಏನೇನು ಪ್ರಯೋಜನಗಳು ಸಿಗುತ್ತದೆಂದರೆ, 

1. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ 2. ನೆಮ್ಮದಿಯಾಗಿ ಮಲಗಲು ಸಾಧ್ಯವಾಗುತ್ತದೆ

3. ಸೃಜನಶೀಲ ಚಿಂತನೆಯು ದೊರೆಯುತ್ತದೆ 

4. ಯಾವಾಗಲೂ ಜಾಗರೂಕತೆಯಿಂದ ಕಾರ್ಯಮಾಡಲು ಸಾಧ್ಯವಾಗುತ್ತದೆ 

5. ನಾವು ಬಹಳ ಸಂತೋಷದಿಂದ ಕಾಣುತ್ತೇವೆ

6. ಇತರರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ 

7. ಸುಲಭವಾಗಿ ಕ್ಷಮಿಸುವ ಸ್ವಭಾವವು ಏರ್ಪಡುತ್ತದೆ 

8. ಯಾವುದೇ ಪರಿಸ್ಥಿತಿಯಲ್ಲೂ ಇತರರನ್ನು ದೂಷಿಸಲು ಸಾಧ್ಯವೇ ಇಲ್ಲ.

 

ನನ್ನ ಪ್ರಿಯರೇ! ದೇವರಿಗೆ ಕೃತಜ್ಞತೆ ಸಲ್ಲಿಸುವುದರ ಮೂಲಕ ನಾವು ಮೇಲೆ ತಿಳಿಸಿದ ಎಲ್ಲ ಉತ್ತಮ ಗುಣಗಳನ್ನು ಪಡೆದು ಸಂತೋಷದಿಂದ ಬದುಕಲು ಸಾಧ್ಯ. ಆ ದಿನಗಳಲ್ಲಿ ನಾವು ಕೂಡ ಎಲ್ಲಾ ಕಾರ್ಯಗಳನ್ನು, ನಮ್ಮ ಕಣ್ಣ ಮುಂದೆ ತಂದು ದೇವರಿಗೆ ನಮ್ಮ ಪೂರ್ಣ ಹೃದಯದಿಂದ ಕೃತಜ್ಞತೆ ಸಲ್ಲಿಸಿ ಆತನನ್ನು ಮಹಿಮೆ ಪಡಿಸೋಣ. ಆತನನ್ನು ಸ್ತುತಿಸುವುದೆಂದರೆ ನಾವು ಆತನನ್ನು ಪ್ರೀತಿಸುತ್ತಿದ್ದೇವೆ ಎಂಬುದಕ್ಕೆ ಗುರುತು. ನಾವು ನಮ್ಮ ದೇವರನ್ನು ಹೃದಯದ ಆಳದಿಂದ ಸ್ತುತಿಸಿ, ಪ್ರೀತಿಸಿ, ಆತನು ನಮಗೆ ಕೊಟ್ಟಿರುವ ಉಸಿರಿನಿಂದ ಬದುಕೋಣ. ದೇವರು ನನ್ನ ಆಶ್ರಯ, ನನ್ನ ಸಹಾಯಕ, ನನ್ನ ಸಂರಕ್ಷಕ, ನನ್ನ ಸೌಖ್ಯ ದಾಯಕ, ನನ್ನ ಆದರಣೆ ಎಂದು ನಮ್ಮನ್ನು ಆತನಲ್ಲಿ ಒಂದುಗೂಡಿಸಿ ಬದುಕೋಣ! ಆತನ ಆರೈಕೆಯಲ್ಲಿ ಬದುಕುವ ನಾವು ವಿಶೇಷವಾದವರೇ! ದೈವೀಕ ಸ್ವಸ್ಥತೆಯು ನಮ್ಮನ್ನು ಕಾಪಾಡಲಿ.

- Mrs. ಸರೋಜಾ ಮೋಹನ್ ದಾಸ್

 

ಪ್ರಾರ್ಥನಾ ಅಂಶ:

ಮಿಷನರಿ ಮಕ್ಕಳ ಶಾಲಾ ಶುಲ್ಕವನ್ನು ಕಟ್ಟಲು ಬೇಕಾದ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel