Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.08.2021
Share:

By Village Missionary Movement

Monday, 02-Aug-2021

ಧೈನಂದಿನ ಧ್ಯಾನ(Kannada) – 02.08.2021

 

ಕಳೆದುಕೊಂಡದ್ದನ್ನು ಪಡೆದುಕೊಳ್ಳೋಣ

 

"...ಕಂಬಳಿ ಹುಳವೂ ಒಳಗೆ ನಾಶಮಾಡುವ ಹುಳವೂ ಮಿಡತೆಗಳೂ ತಿಂದ ವರುಷಗಳಿಗೆ ಬದಲಾಗಿ ನಿಮಗೆ ಕೊಡುವೆನು." - ಯೋವೇಲ 2:25

 

ಕಳೆದ ಕೆಲವು ತಿಂಗಳುಗಳಲ್ಲಿ ನಾವೆಲ್ಲರೂ ಬಹಳಷ್ಟು ಕಾರ್ಯಗಳನ್ನು ಕಳೆದುಕೊಂಡಿದ್ದೇವೆ. ಕೊರೋನಾದ ಈ ಎರಡನೇ ಅಲೆಯಲ್ಲಿ ಕೆಲವರು ತಮ್ಮ ಕುಟುಂಬದಲ್ಲಿ ಪ್ರೀತಿಯ ವ್ಯಕ್ತಿಗಳನ್ನು ಕಳೆದುಕೊಂಡಿದ್ದಾರೆ. ರೋಗದ ಪ್ರಭಾವದಿಂದ ಕೆಲವರು ಆರೋಗ್ಯ ಕಳೆದುಕೊಂಡಿದ್ದಾರೆ. ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಅನೇಕರ ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ. ಸಣ್ಣ-ಪುಟ್ಟ ವ್ಯಾಪಾರಸ್ಥರು, ದಿನನಿತ್ಯದ ಸಂಪಾದನೆಯಿಂದ ಕುಟುಂಬವನ್ನು ಪೋಷಿಸುತ್ತಿದ್ದವರು ಹೀಗೆ ಎಲ್ಲಾ ವರ್ಗದವರು ಬಾಧಿಸಲ್ಪಟ್ಟಿದ್ದಾರೆ. ಅನೇಕರು ತಮ್ಮ ಸಂಪಾದನೆಯನ್ನೇ ಕಳೆದುಕೊಂಡಿದ್ದಾರೆ. ಇಂತಹ ವಿವಿಧ ನಷ್ಟಗಳ ಮಧ್ಯದಲ್ಲಿ ಇದಕ್ಕೆಲ್ಲಾ ಯಾವಾಗ ಒಳ್ಳೇ ಕಾಲ ಬರುತ್ತದೆಂದು ಕಾಯುತ್ತಿರುವವರಿಗೆ ದೇವರು ಕೊಡುತ್ತಿರುವ ವಾಗ್ದಾನದ ಮಾತುಗಳು ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತಿವೆ. ಕಂಬಳಿ ಹುಳವೂ ಒಳಗೆ ನಾಶಮಾಡುವ ಹುಳವೂ ಮಿಡತೆಗಳೂ ತಿಂದ ವರುಷಗಳಿಗೆ ಬದಲಾಗಿ ನಿಮಗೆ ಕೊಡುವೆನು ಎಂದು ದೇವರು ಹೇಳುತ್ತಿದ್ದಾರೆ.

 

ಆದ್ದರಿಂದ, ನಮ್ಮ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಾವು ಎದೆಗುಂದುವುದು, ನಿರುತ್ಸಾಹಗೊಳ್ಳುವುದು ಬೇಡ. ಕರ್ತನು ಕೊಟ್ಟಿರುವ ವಾಗ್ದಾನವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿರಿ. ವಾಗ್ದಾನ ಮಾಡಿದ ದೇವರು, ಮಾತು ತಪ್ಪೋದಿಲ್ಲ, ಆರ್ಥಿಕ ನಷ್ಟಗಳು ಸರಿಹೋಗುತ್ತವೆ ಮತ್ತು ಎರಡರಷ್ಟು ಆಶೀರ್ವಾದಗಳನ್ನು ಪಡೆಯಲಿದ್ದೇವೆ. ನಾವು ಕಳೆದುಕೊಂಡ ಶಾರೀರಿಕ ಸೌಖ್ಯವನ್ನು ಮರಳಿ ಪಡೆಯಲಿದ್ದೇವೆ. ಇದೆಲ್ಲ ಹೇಗೆ ದೊರೆಯುತ್ತದೆ? ಕರ್ತನ ಮಾತುಗಳನ್ನು ನಂಬಿದರೇನೆ ಸಾಕು.

 

ಇದನ್ನು ಓದುತ್ತಿರುವ ಆತ್ಮೀಯ ಸಹೋದರ ಸಹೋದರಿಯರೇ! ನಿಮ್ಮ ಜೀವನದಲ್ಲಿ ಕೊರೋನಾ ತಿಂದು ಹಾಕಿದ ಕಾರ್ಯಗಳು ಯಾವುವು? ಆರೋಗ್ಯವಾ, ಆರ್ಥಿಕ ಸ್ಥಿತಿಯಾ, ಉದ್ಯೋಗ ನಷ್ಟವಾ, ಪ್ರೀತಿಪಾತ್ರರ ಕಳೆದುಕೊಳ್ಳುವಿಕೆಯಾ, ಕುಟುಂಬದಲ್ಲಿ ಸಮಾಧಾನವಾ? ಕರ್ತನಲ್ಲಿ ನಂಬಿಕೆ ಇಡಿರಿ. ಕರ್ತನ ಕೈಯನ್ನು ಮತ್ತು ಆತನ ವಾಗ್ದಾನವನ್ನು ಗಟ್ಟಿಯಾಗಿ ಹಿಡಿದುಕೊಂಡರೆ, ಕೊರೊನಾ ತಿಂದು ಹಾಕಿದ ಪರಿಣಾಮದ ಫಲವನ್ನು ಕರ್ತನು ನಮಗೆ ಹಿಂದಿರುಗಿಸಿ ಕೊಡುತ್ತಾರೆ. ಅವರ ಕೈಗಳನ್ನು ಹಿಡಿದುಕೊಳ್ಳೋಣ. ಕಳೆದುಕೊಂಡವುಗಳನ್ನು ಪುನಃ ಪಡೆದುಕೊಂಡು ದೇವರನ್ನು ಮಹಿಮೆಪಡಿಸೋಣ, ಆಮೆನ್.

- Mrs. ಭುವನ ಧನಪಾಲನ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel