Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.07.2021 (Bible Characters Special)
Share:

By Village Missionary Movement

Friday, 30-Jul-2021

ಧೈನಂದಿನ ಧ್ಯಾನ(Kannada) – 30.07.2021 (Bible Characters Special)

 

ಪ್ರಮಾಣೀಕರಣ

 

"ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯನಲ್ಲ; ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು." - 2 ಕೊರಿಂಥ 10:18

 

ಸತ್ಯವೇದದಲ್ಲಿ ಸಾವಿರಾರು ವ್ಯಕ್ತಿಗಳ ಹೆಸರುಗಳು ಸ್ಥಳ ಸಂಪಾದಿಸಿವೆ. ಅದರಲ್ಲಿ ಅನೇಕರ ಜೀವನ ವಿಧಾನವನ್ನು ಅವರ ನಡತೆಗಳನ್ನು ನೋಡುತ್ತೇವೆ. ಅದರಲ್ಲಿ ಕೆಲವರ ಬಗ್ಗೆ ದೇವರು "ಪ್ರಮಾಣೀಕರಣ" ನೀಡಿದ್ದಾರೆ. ಅದರಲ್ಲೂ ನಿರ್ದಿಷ್ಟವಾಗಿ ದೇವರ ಬಳಿಯಲ್ಲಿ ಮೊಟ್ಟಮೊದಲು ಒಳ್ಳೆಯ ಸಾಕ್ಷಿ ಹೊಂದಿದ ಹೆಸರು ನೋಹ. ಅವರ ಬಗ್ಗೆ ದೇವರು, "ಈಗಿನವರಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿ ನಡೆಯುವದನ್ನು ನೋಡಿದ್ದೇನೆ" ಎಂದು ಸರ್ಟಿಫಿಕೇಟ್ ಕೊಟ್ಟರು. ನೋಹ ಎಂಥಾ ಜನರ ಮಧ್ಯೆ ಜೀವಿಸುವಾಗ ಇಂತಹ ಸಾಕ್ಷಿಯನ್ನು ಪಡೆದರು ಗೊತ್ತಾ? ಮನುಷ್ಯರ ಕೆಟ್ಟತನವು ಭೂವಿುಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿತ್ತು. ಭೂಮಿಯಲ್ಲಿ ಅನ್ಯಾಯ ಹೆಚ್ಚಾಗಿತ್ತು. ಇಂತಹ ಜನರ ಮಧ್ಯದಲ್ಲಿ ಜೀವಿಸುವಾಗಲೇ ನೋಹ ತನ್ನನ್ನು ನೀತಿವಂತನಾಗಿ ಕಾಪಾಡಿಕೊಂಡರು.

 

ಅದರಂತೆ ಯಾಕೋಬನು ತನ್ನ ಮುಪ್ಪಿನ ಕಾಲದಲ್ಲಿ ತನ್ನ ಗಂಡು ಮಕ್ಕಳ ಬಗ್ಗೆ ಪರಿಶುದ್ಧಾತ್ಮನ ಪ್ರೇರಣೆಯಂತೆ ಪ್ರವಾದನೆ ನುಡಿದರು. ಆಗ ಯೋಸೇಫನ ಬಗ್ಗೆ ಪರಿಶುದ್ಧಾತ್ಮನು "ಫಲ ಕೊಡುವ ಮರ" ಎಂದು ಪ್ರಮಾಣೀಕರಣವನ್ನು ನೀಡಿದರು. ಪಾಪಕ್ಕೊಳಗಾಗಿ ಬಾಡಿ ಹೋಗದಂತೆ ಫಲ ಕೊಡುತ್ತಲೇ ಇದ್ದರು. ಹೌದು, ಯೋಸೇಫನು ಏಕಾಂತವಾಗಿರುವಾಗಲೂ, ಫರೋಹನ ಹೆಂಡತಿಯ ಇಷ್ಟಕ್ಕೆ ಒಳಗಾಗದೆ ತನ್ನನ್ನು ಉತ್ತಮನಾಗಿ ಕಾಪಾಡಿಕೊಂಡರು. "ನಾನು ದೇವರಿಗೆ ವಿರೋಧವಾಗಿ ಪಾಪ ಮಾಡುವುದು ಹೇಗೆ? ಎಂದರು. ಪಾಪ ಮಾಡುವ ಪರಿಸ್ಥಿತಿಗಳು ಅನುಕೂಲವಾಗಿದ್ದರು ತನ್ನನ್ನು ಪರಿಶುದ್ಧವಾಗಿ ಕಾಪಾಡಿಕೊಂಡ ಯೋಸೇಫನನ್ನು ದೇವರು ಐಗುಪ್ತಕ್ಕೆ ಅಧಿಕಾರಿಯಾಗುವಂತೆ ಹೆಚ್ಚಿಸಿದರು.

 

ದೇವರ ಮಕ್ಕಳೇ! ನಮ್ಮ ಬಗ್ಗೆ ದೇವರು ಇಂತಹ ಪ್ರಮಾಣೀಕರಣವನ್ನು ಕೊಡಲು ಸಾಧ್ಯವೇ? ಒಂದು ವೇಳೆ ಮನುಷ್ಯರು ನಮ್ಮ ಹೊರಾಂಗಣ ನಡತೆಯನ್ನು ನೋಡಿ ನಮ್ಮನ್ನು ಒಳ್ಳೆಯವರೆಂದು ಹೊಗಳಬಹುದು. ಆದರೆ ದೇವರೊಬ್ಬರೇ ನಮ್ಮ ಹೃದಯವನ್ನು ಅದರ ಆಂತರ್ಯವನ್ನು ಸ್ಪಷ್ಟವಾಗಿ ಅರಿತವರು. ಅವರು ನಮ್ಮ ಬಗ್ಗೆ ಪ್ರಮಾಣೀಕರಣವನ್ನು ನೀಡಲು ಸಾಧ್ಯವಾ?

 

ದೇವರ ಬಳಿಯಿಂದ ಉತ್ತಮ ಸಾಕ್ಷಿಯನ್ನು ಪಡೆದ ನೋಹ, ಯೋಸೇಫನಂತವರು ಸಾಕ್ಷಿಯನ್ನು ಕಾಪಾಡಿಕೊಂಡರು. "ನನ್ನ ಸಹ ವಿದ್ಯಾರ್ಥಿಗಳು ತಪ್ಪು ಮಾಡಿದ್ದರಿಂದಲೇ ನಾನು ಅದರಂತೆ ಮಾಡಿದೆನು" ಎಂದು ಹೇಳುವವರು ಸಾಮಾನ್ಯ ವಿದ್ಯಾರ್ಥಿಗಳು. ಆದರೂ ಕೆಸರಿನಿಂದಲೇ ತಾನೇ ತಾವರೆ ಹೂ ಅರಳುತ್ತದೆ. ಒಂದು ಹನಿ ನೀರು ತನ್ನ ಮೇಲೆ ಬಿದ್ದರೂ ಅದು ಕೂಡಲೇ ಒದರಿ ಬಿಡುತ್ತದಲ್ಲವೇ? ಅದರಂತೆ ಈ ಪಾಪ ತುಂಬಿದ ಪರಿಸ್ಥಿತಿಯಲ್ಲಿ ನಾವು ಜೀವಿಸಿದರು, ಪರಿಶುದ್ಧಾತ್ಮನ ಸಹಾಯದಿಂದ ನಾವು ಪರಿಶುದ್ಧವಾಗಿ ಜೀವಿಸಿ ದೇವರ ಬಳಿ ಒಳ್ಳೆಯ ಸಾಕ್ಷಿ ಹೊಂದಿಕೊಳ್ಳಲು ಸಾಧ್ಯ. ಪ್ರಯತ್ನಿಸೋಣವಾ!

- Mrs. ಮಣಿಮೊಳಿ

 

ಪ್ರಾರ್ಥನಾ ಅಂಶ:

12 ಮಿಷಿನರಿಗಳ ಮೂಲಕ ಆಯಾ ರಾಜ್ಯಗಳಲ್ಲಿ ಸಮರ್ಪಿಸಲ್ಪಟ್ಟ 500 ಮಿಷನರಿಗಳನ್ನು ದೇವರು ಎಬ್ಬಿಸಿ ಕೊಡುವಂತೆ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al