Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.07.2021 (Bible Characters Special)
Share:

By Village Missionary Movement

Thursday, 29-Jul-2021

ಧೈನಂದಿನ ಧ್ಯಾನ(Kannada) – 29.07.2021 (Bible Characters Special)

 

ಓನೇಸಿಮನು

 

"ಅವನು ಕಳೆದುಹೋದ ಸಮಯದಲ್ಲಿ ನಿನಗೆ ಅಪ್ರಯೋಜಕ ನಾಗಿದ್ದನು. ಈಗ ನಿನಗೂ ನನಗೂ ಪ್ರಯೋಜನ ವಾಗಿದ್ದಾನೆ." - ಫಿಲೆಮೋನ 11

 

ಮಾಡಿದ ತಪ್ಪಿಗಾಗಿ ಒಬ್ಬನು ಪೊಲೀಸರಿಂದ ಹಿಡಿಯಲ್ಪಟ್ಟು ಜೈಲಿಗೆ ಹೋಗುವುದು ಆ ವ್ಯಕ್ತಿಯ ಜೀವನದಲ್ಲಿ ಒಂದು ದೊಡ್ಡ ಕಪ್ಪು ಚುಕ್ಕೆ! ಅವನು ಶಿಕ್ಷೆಯನ್ನು ಅನುಭವಿಸಿ ಬಿಡುಗಡೆಯಾಗಿ ಹೊರಬಂದರೂ ಸಹ, ಸಮಾಜವು ಅವನನ್ನು "ಜೈಲಿಗೆ ಹೋದವನು (ಖೈದಿ)" ಎಂಬ ದೃಷ್ಟಿಯಲ್ಲೇ ನೋಡುತ್ತದೆ.

 

ಈ ರೀತಿಯಾಗಿ ಜೈಲಿಗೆ ಹೋದ ಯುವಕನೇ ಓನೇಸಿಮನು. ಈ ಯುವಕನ ಬಗ್ಗೆ ಅಪೊಸ್ತಲನಾದ ಪೌಲನು, ಫಿಲೆಮೋನ ಎಂಬವರಿಗೆ ಬರೆದ ಪತ್ರಿಕೆ ಹೊಸ ಒಡಂಬಡಿಕೆಯಲ್ಲಿ 276 ನೇ ಪುಟದಲ್ಲಿ ಓದಬಹುದು. ಓನೇಸಿಮನು, ಆ ದಿನಗಳಲ್ಲಿ ತನ್ನ ಯಜಮಾನನಾದ ಫಿಲೆಮೋನನ ವಿರುದ್ಧ ಮಾಡಿದ ಒಂದು ತಪ್ಪಿನಿಂದಾಗಿ ಜೈಲಿನಲ್ಲಿ ಬಂಧಿಸಲ್ಪಟ್ಟನು. ಆದರೆ ಅಲ್ಲಿ ಅವನಿಗೊಂದು ದೊಡ್ಡ ತಿರುವು ಕಾದಿತ್ತು. ಸುವಾರ್ತೆಯ ನಿಮಿತ್ತವಾಗಿ ಅಲ್ಲೇ ಜೈಲಿನಲ್ಲಿ. ಅಪೊಸ್ತಲನಾದ ಪೌಲನು ಕೂಡ ಅಲ್ಲಿದ್ದರು. ಪೌಲನ ಪ್ರೀತಿ ಮತ್ತು ಪ್ರಾರ್ಥನೆಯ ಮೂಲಕ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟು ಓನೇಸಿಮನು ರಕ್ಷಿಸಲ್ಪಟ್ಟನು. ನಂತರ ಓನೇಸಿಮನು ಬಿಡುಗಡೆಯಾಗುವ ದಿನ ಬಂದಿತು. ಅವನನ್ನು ಕ್ರಿಸ್ತನೊಳಗೆ ಸೇರಿಸಿಕೊಳ್ಳಬೇಕೆಂದು, ಪೌಲನು ತನ್ನ ಯಜಮಾನನಾದ ಫಿಲೆಮೋನನಿಗೆ ಬರೆದ ಪ್ರೀತಿಯ ಪತ್ರವೇ ಫಿಲೆಮೋನ.

 

ಪ್ರಿಯರೇ! ಈ ಸಂದೇಶವನ್ನು ಓದುತ್ತಿರುವ ನೀವು ಜೀವನದಲ್ಲಿ ಮಾಡಿದ ಯಾವುದೋ ಒಂದು ದೊಡ್ಡ ತಪ್ಪಿನ ನಿಮಿತ್ತವಾಗಿ ನೀವು ಸಮಾಜದಿಂದಲೂ, ಕುಟುಂಬದಿಂದಲೂ, ಸ್ನೇಹಿತರಿಂದಲೂ ತಳ್ಳಲ್ಪಟ್ಟ ವ್ಯಕ್ತಿಯಾಗಿರಬಹುದು. ಒಂದು ವೇಳೆ ಓನೇಸಿಮನಂತೆ ಜೈಲಿಗೂ ಹೋಗಿ ಬಂದಿರಬಹುದು. ನಿಮ್ಮೊಂದಿಗೆ ಮಾತನಾಡಲು ಅಥವಾ ಕಾಳಜಿ ತೋರಿಸಲು ಯಾರೂ ಇಲ್ಲದ ಸ್ಥಿತಿಯಲ್ಲಿ ನೀವು ಇರಬಹುದು. ಇನ್ನು ಈ ಸಮಾಜದಲ್ಲಿ ಒಂದು ಗೌರವಾನ್ವಿತ ಜೀವನ ನನಗಿಲ್ಲ ಎಂಬ ಸ್ಥಿತಿಗೆ ಕೂಡ ನೀವು ಬಂದಿರಬಹುದು.

 

ನಾನು ನಿಮಗೊಂದು ಒಳ್ಳೆಯ ಸುದ್ದಿಯನ್ನು ಹೇಳುತ್ತೇನೆ. ಯೇಸು ಕ್ರಿಸ್ತನಲ್ಲಿ ವಿಶ್ವಾಸವಿಟ್ಟು ನೀವು ಆತನನ್ನು ನಂಬುವಾಗ ಅವರು ನಿಮ್ಮ ಕತ್ತಲೆಯ ಜೀವನವನ್ನು ಬೆಳಕಾಗಿ ಬದಲಾಯಿಸುತ್ತಾರೆ. ನಿಮ್ಮ ಪಾಪಗಳು ಕ್ಷಮಿಸಲ್ಪಡುತ್ತವೆ. ತಪ್ಪಿತಸ್ಥ ಭಾವನೆಯಿಂದ ಸಂಪೂರ್ಣವಾದ ಬಿಡುಗಡೆಯನ್ನು ಪಡೆದುಕೊಳ್ಳುತ್ತೀರಿ. ಅಷ್ಟೇ ಅಲ್ಲ, ಮನುಷ್ಯರ ಕಣ್ಣುಗಳಲ್ಲಿ ದಯೆ ಎಂಬ ಒಂದು ಆಶೀರ್ವಾದವನ್ನೂ ಕೊಡುತ್ತಾರೆ. ಅನಿರೀಕ್ಷಿತ ಜನರು ನಿಮ್ಮನ್ನು ಹುಡುಕಿ ಬಂದು ನಿಮ್ಮನ್ನು ಪ್ರೀತಿಯಿಂದ ಸ್ವೀಕರಿಸುವುದನ್ನು ನೋಡಬಹುದು. ಕ್ರೈಸ್ತ ವಿಶ್ವಾಸಿಗಳೊಳಗೆ ಐಕ್ಯತೆ ಇರುವ ‌ಸಭೆಗಳಿಗೆ ನೀವು ಹೋಗುವಾಗ, ನಿಮ್ಮ ಹಿಂದಿನ ಜೀವನವನ್ನು ತಿಳಿದ ಕೂಡಲೇ, ನಿಮ್ಮನ್ನು ನಿಜವಾಗಿ ಪ್ರೀತಿಸಿ, ನಿಮ್ಮ ಬಗ್ಗೆ ಕಾಳಜಿ ವಹಿಸುವ ಜನರ ಗುಂಪೊಂದನ್ನು ನೀವು ಕಾಣುತ್ತೀರ. ಮೇಲಿನ ವಾಕ್ಯದಲ್ಲಿರುವಂತೆ, ಮೊದಲು ಯಾರಿಗೂ ಪ್ರಯೋಜನವಿಲ್ಲದ ಓನೇಸಿಮನು, ನಂತರ ಎಲ್ಲರಿಗೂ ಪ್ರಯೋಜಕನಾದಂತೆಯೇ ನಿಮ್ಮ ಜೀವನವು ಅನೇಕರಿಗೆ ಆಶೀರ್ವಾದಕರವಾಗಿ ಮಾರ್ಪಡುತ್ತದೆ.

- J. ಸಂತೋಷ್

       

ಪ್ರಾರ್ಥನಾ ಅಂಶ:

ಎಲ್ಲಾ ರಾಜ್ಯಗಳಿಂದಲೂ 12 ಮಿಷನರಿಗಳನ್ನು ಕರ್ತನು ಕರೆತರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş