Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.07.2021 (Bible Characters Special)
Share:

By Village Missionary Movement

Wednesday, 28-Jul-2021

ಧೈನಂದಿನ ಧ್ಯಾನ(Kannada) – 28.07.2021 (Bible Characters Special)

 

ಬಾರ್ನಬ

 

"... (ಬಾರ್ನಬ ಅಂದರೆ ಆದರ ಣೆಯ ಮಗನು) ತನಗಿದ್ದ ಭೂಮಿಯನ್ನು ಮಾರಿ,..." - ಅಪೊಸ್ತಲ. 4:36,37

 

ಯೇಸು ಕ್ರಿಸ್ತನು ಪರಲೋಕಕ್ಕೆ ಏರಿಹೋದ ನಂತರ, ಶಿಷ್ಯರು ಪರಿಶುದ್ಧಾತ್ಮನಿಂದ ತುಂಬಿಸಲ್ಪಟ್ಟು ಸೇವೆ ಮಾಡಲು ಪ್ರಾರಂಭಿಸಿದರು. ಅವರು ದೇವರ ವಾಕ್ಯವನ್ನು ಧೈರ್ಯವಾಗಿ ಹೇಳಿದರು. ಆಗ ವಿಶ್ವಾಸಿಗಳ ದೊಡ್ಡ ಗುಂಪು ಅವರೊಂದಿಗೆ ಸೇರಿ ತಮ್ಮ ಹೊಲ ಮನೆಗಳೆಲ್ಲವನ್ನು ಮಾರಿ ಅದರಿಂದ ಬಂದ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟರು. ಅವುಗಳನ್ನೆಲ್ಲಾ ಅವರು ಎಲ್ಲರಿಗೂ ಹಂಚಿ ಕೊಟ್ಟರು. ಆ ದಿನಗಳಲ್ಲಿ ತನ್ನ ಹೊಲವನ್ನು ಮಾರಿ ಕೊಟ್ಟವರೆಂದು ಸತ್ಯವೇದದಲ್ಲಿ ಪರಿಚಯಿಸಲ್ಪಟ್ಟವರೇ ಬಾರ್ನಬ! ಇವರೊಬ್ಬ ಯಾಜಕನು. ಯಾಜಕರು ದೇವರ ಸೇವೆ ಮಾಡುವವರಾಗಿರುವುದರಿಂದ ಅವರ ಬಳಿ ದೊಡ್ಡ ಮಟ್ಟದಲ್ಲಿ ಆಸ್ತಿಯೋ, ಹೊಲವೋ ಇರುವುದಿಲ್ಲ. ದೇವರೇ ಅವರ ಆಸ್ತಿ ಆದ್ದರಿಂದ ಬಾರ್ನಬನ ಬಳಿಯೂ ಸ್ವಲ್ಪವೇ ಇದ್ದಿರಬಹುದು. ಆದರೆ ಅವರು ಅದನ್ನೂ ಮಾರಿ ಅಪೊಸ್ತಲರ ಪಾದದಲ್ಲಿಟ್ಟರು. ಆದರಣೆಯ ಮಗನೆಂಬ ಅರ್ಥಕೊಡುವ ಬಾರ್ನಬ ಮತ್ತೊಬ್ಬರಿಗೆ ಸಹಾಯ ಮಾಡುವ ಮನಸ್ಸುಳ್ಳವರು. ಹಿಂದಿನ ದಿನಗಳಲ್ಲಿ ಸೇವೆಯಲ್ಲಿ, ಬರಗಾಲದಿಂದ ತತ್ತರಿಸುತ್ತಿದ್ದ ಸಹೋದರರಿಗಾಗಿ ಹಣ ಶೇಖರಿಸಲು ಬಹಳ ಆಸಕ್ತಿಯಿಂದ ಕಾರ್ಯ ಮಾಡಿದರು.

 

ಸೇವಕರನ್ನು ಉತ್ತೇಜಿಸಿದ ಬಾರ್ನಬ: ಆ ದಿನಗಳಲ್ಲೇ ಪೌಲನು ರಕ್ಷಣೆ ಹೊಂದಿ ಸೇವೆ ಮಾಡಲು ತನ್ನನ್ನು ಸಮರ್ಪಿಸಿಕೊಂಡರು. ಅವರ ಹಳೆಯ ದುಷ್ಟ ಜೀವನವನ್ನು ನೋಡಿದವರು ಪೌಲನನ್ನು ಸೇರಿಸಿಕೊಳ್ಳಲು ಭಯಪಟ್ಟಾಗ, ಬಾರ್ನಬ ಪೌಲನನ್ನು ಯೆರೂಸಲೇಮಿನಲ್ಲಿದ್ದ ಶಿಷ್ಯರಿಗೆ ಪರಿಚಯಿಸಿದರು. ಪೌಲನ ಸೇವೆಯ ಬಯಕೆಗೆ ಬಾರ್ನಬನನ್ನು ಸಾಕ್ಷಿಯಾಗಿ ತೋರಿಸಿದರು. ಕೇವಲವಾಗಿ ನೆನೆಸಲ್ಪಟ್ಟ ಮಾರ್ಕನನ್ನು ತನ್ನೊಂದಿಗೆ ಸೇರಿಸಿಕೊಂಡು ಉತ್ತಮವಾದ ಸೇವಕನಾಗಿ ರೂಪಿಸಿದರು. ಬಾರ್ನಬ ಯಾಜಕನಾಗಿದ್ದದರಿಂದ ಸತ್ಯವೇದವನ್ನು ಚೆನ್ನಾಗಿ ಕಲಿತಿದ್ದರೂ ಬುದ್ಧಿವಂತನಾಗಿದ್ದ ಪೌಲನಿಗೆ ಸ್ಥಳ ಕೊಟ್ಟು ತಾನೇ ಮೊದಲಿನವನೆಂದು ಹೆಮ್ಮೆ ಪಡದೇ ಹಿಂದೆ ನಿಂತು ಪೌಲನನ್ನು ಉತ್ತೇಜಿಸಿದರು. ಪೇತ್ರನೂ,ಪೌಲನೂ ರಕ್ತ ಸಾಕ್ಷಿಗಳಾಗಿ ಸತ್ತನಂತರ ಅಲ್ಲಿದ್ದ ವಿಶ್ವಾಸಿಗಳು ಚದುರಿಹೋದರು. ಅವರನ್ನು ಆದರಿಸಿ ಉತ್ಸಾಹ ಪಡಿಸಿದರು. ಹಿಂಜಾರಿಹೋದ ಕ್ರೈಸ್ತರನ್ನು ಗದರಿಸಿದರು.

 

ಪ್ರಿಯರೇ! ತನಗಿರುವ ಸ್ವಲ್ಪವನ್ನೂ ಕೊಟ್ಟ ಗುಣ, ಸೇವಕರನ್ನು ರೂಪಿಸಿತು, ವಿಶ್ವಾಸಿಗಳನ್ನು ಉತ್ಸಾಹ ಪಡಿಸಿತು, ನಂತರ ದೇವರಿಗಾಗಿ ರಕ್ತ ಸಾಕ್ಷಿಯಾಗಿ ಸತ್ತರು ಎಂದು ಅವರ ಸ್ವಭಾವದ ಬಗ್ಗೆ ಧ್ಯಾನಿಸಿದ ನಾವೂ ಕೂಡ ನಮ್ಮನ್ನು ಸಂಪೂರ್ಣವಾಗಿ ದೇವರಿಗಾಗಿ ಸಮರ್ಪಿಸಿಕೊಳ್ಳೋಣವಾ.

- Mrs. ಜ್ಯೋತಿ ಆನಂದ್

 

ಪ್ರಾರ್ಥನಾ ಅಂಶ:

New life Home ನಲ್ಲಿರುವ ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಭವಿಷ್ಯವು ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş