Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.07.2021 (Bible Characters Special)
Share:

By Village Missionary Movement

Tuesday, 27-Jul-2021

ಧೈನಂದಿನ ಧ್ಯಾನ(Kannada) – 27.07.2021 (Bible Characters Special)

 

ಪಾಪಿಯಾದ ಸ್ತ್ರೀ

 

"...ಇವಳ ಪಾಪಗಳು ಬಹಳವಾಗಿದ್ದರೂ ಅವು ಕ್ಷವಿುಸಲ್ಪಟ್ಟಿವೆ. ಇದಕ್ಕೆ ಪ್ರಮಾಣವೇನಂದರೆ ಇವಳು ತೋರಿಸಿದ ಪ್ರೀತಿ ಬಹಳ..." - ಲೂಕ 7:47

 

ಇವಳೊಂದು ಪಾಪಿಯಾದ ಸ್ತ್ರೀ. ಅವಳಿದ್ದ ಊರಿನಲ್ಲಿ ಒಂದು ಫರಿಸಾಯನ ಮನೆಗೆ ಯೇಸುಕ್ರಿಸ್ತನು ಔತಣಕ್ಕೆ ಕರೆಯಲ್ಪಟ್ಟಿದ್ದಾರೆ ಎಂಬುದನ್ನು ಅರಿತುಕೊಂಡು ವೇಗವಾಗಿ ಅಲ್ಲಿಗೆ ಹೋದಳು. ಪಾಪಗಳನ್ನು ಕ್ಷಮಿಸಲು ಯೇಸುವಿಗೆ ಅಧಿಕಾರ ಉಂಟು ಎಂಬುದನ್ನು ಅವರಿಂದ ನಿಜವಾದ ಸಮಾಧಾನ ಉಂಟಾಗುತ್ತದೆಂಬ ಸತ್ಯವನ್ನು ಅರಿತಿದ್ದಳು. ಆದ್ದರಿಂದ ರಕ್ಷಣೆಯನ್ನು ಸಮಾಧಾನವನ್ನು ಪಡೆದುಕೊಳ್ಳಲು ಸರಿಯಾದ ಸಿದ್ಧತೆಗಳೊಂದಿಗೆ ಔತಣದ ಮನೆಗೆ ಹೋದಳು. ಯಾರ ಬಗ್ಗೆಯೂ ಯಾವುದರ ಬಗ್ಗೆಯೂ ಅವಳು ಚಿಂತಿಸಲಿಲ್ಲ. ಯಾರಿಗೂ ಭಯಪಡಲಿಲ್ಲ, ನಾಚಿಕೆಯು ಪಡಲಿಲ್ಲ. ಕೈಗಳಲ್ಲಿ ಸುಗಂಧ ತೈಲದೊಂದಿಗೆ ಮನೆಯೊಳಗೆ ಹೋಗಿ ಅವರ ಪಾದದ ಬಳಿ ನಿಂತು ಅವರ ಪಾದಗಳಿಗೆ ಮುತ್ತಿಟ್ಟು ಆ ತೈಲವನ್ನು ಹಚ್ಚಿದಳು. ಯೇಸು ತನ್ನ ಹೇರಳವಾದ ಪಾಪಗಳನ್ನು ಕ್ಷಮಿಸುವವರು ಎಂದು ಅವಳು ಅರಿತಿದ್ದದರಿಂದ ಯಾವ ಯಾವ ವಿಧಗಳಲೆಲ್ಲಾ ತನ್ನ ಪ್ರೀತಿಯನ್ನು ತೋರಿಸಲು ಸಾಧ್ಯವೋ ಅಷ್ಟು ವಿಧಗಳಲ್ಲಿಯೂ ತನ್ನ ಪ್ರೀತಿಯನ್ನು ಹೊರಪಡಿಸಿದಳು. ಯೇಸುವೇ ಅವಳ ಪ್ರೀತಿಯನ್ನು ಹೊಗಳುತ್ತಿದ್ದಾರೆಂದರೆ ನೋಡಿ!

 

ಯೇಸು ನಮ್ಮನ್ನೂ ಆ ರೀತಿಯಾಗಿ ಹೊಗಳುವ ಮಟ್ಟಿಗೆ ನಾವು ಅವರನ್ನು ಪ್ರೀತಿಸುತ್ತಿದ್ದೇವಾ! ನನ್ನ ಹೇರಳವಾದ ಪಾಪಗಳನ್ನು ಯೇಸು ಎಷ್ಟೊಂದು ಪ್ರೀತಿಯಿಂದ ಕ್ಷಮಿಸಿದ್ದಾರೆ ಎಂಬ ಆಳವಾದ ಆಲೋಚನೆ ಆ ಹೆಣ್ಣಿನಂತೆ ನಮಗೂ ಇದ್ದರೇನೆ ನಾವು ಯೇಸುವಿನ ಮೇಲೆ ಹೆಚ್ಚು ಪ್ರೀತಿ ತೋರಿಸಲು ಸಾಧ್ಯ. ಹಾಗೆ ಪ್ರೀತಿಸುವಾಗ ನಮ್ಮ ಭಯ, ನಾಚಿಕೆ ಎಲ್ಲವನ್ನು ಮರೆತು ಯೇಸುವಿಗೆ ಸೇವೆ ಮಾಡಿ ಅವರೇ ಲೋಕ ರಕ್ಷಕನು, ಸಮಾಧಾನ ಪ್ರಭು ಎಂದು ನಮ್ಮ ಸುತ್ತಲೂ ಇರುವವರಿಗೆ ತೋರಿಸಲು ಸಾಧ್ಯ.

 

ಪಾಪಗಳು ಕ್ಷಮಿಸಲ್ಪಟ್ಟ ಆ ಸ್ತ್ರೀ ಇಂದು ನಮ್ಮನ್ನು ನೋಡಿದರೆ ಏನು ಹೇಳುತ್ತಾರೆ? "ನಿಮ್ಮ ದೇಶದಲ್ಲಿ ಕೋಟ್ಯಾಂತರ ಜನರು ಯೇಸುವೆ ಪಾಪ ವಿಮೋಚನೆ ಮಾಡಿ ಮೋಕ್ಷ ಜೀವನವನ್ನು ಕೊಡುವವರು ಎಂಬುದನ್ನು ಅರಿಯದೇ ಪುಣ್ಯನದಿಗಳಲ್ಲಿ ಮುಳುಗಿ ತಮ್ಮ ಪಾಪಗಳನ್ನು ಹೋಗಲಾಡಿಸಲು ನೆನೆಸುತ್ತಿದ್ದಾರಲ್ಲಾ! ಯಜ್ಞವನ್ನು ಸಮರ್ಪಿಸಿ ಪುಣ್ಯ ಸ್ಥಳಗಳಿಗೆ ಯಾತ್ರೆ ಹೋಗಿ, ವ್ರತ ಮಾಡಿ ತಮ್ಮ ಶರೀರವನ್ನು ನೋಯಿಸಿ ಕೊಳ್ಳುತ್ತಿದ್ದಾರಲ್ಲಾ! ಇನ್ನು ಕೆಲವರು ವ್ಯಭಿಚಾರ, ವೇಶ್ಯಾವಾಟಿಕೆ, ಮದ್ಯಪಾನ ಇಂಥಾ ಅಭ್ಯಾಸಗಳಿಗೆ ದಾಸರಾಗಿ ತಮ್ಮನ್ನೇ ಕೆಡಿಸಿಕೊಳ್ಳುತ್ತಿದ್ದಾರಲ್ಲ? ಎಷ್ಟು ಜನ ಸಮಾಧಾನವನ್ನು ಕಳೆದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರಲ್ಲಾ? ಇದೇ ಪರಿಸ್ಥಿತಿಯಲ್ಲಿದ್ದ ನಾನು "ಯೇಸುವೆ ರಕ್ಷಕನು" ಎಂಬುದನ್ನು ತಿಳಿದು ಕೊಂಡದ್ದರಿಂದ ಪಾಪ ಕ್ಷಮಾಪಣೆಯನ್ನು ಹೊಂದಿಕೊಂಡೆನು. ಆದರೆ ನಿಮ್ಮ ಸುತ್ತಲಿರುವ ಜನರಿಗೆ ನೀವೇ ತಾನೇ ಯೇಸುವನ್ನು ಪರಿಚಯ ಮಾಡಬೇಕು. ಪಾಪದ ವೇದನೆಯನ್ನು ನಾನು ತಿಳಿದಿರುವುದರಿಂದ ಅಂಗಲಾಚುತ್ತಿದ್ದೇನೆ. ನೀವು ನನ್ನಂಥವರನ್ನು ಬೇಗನೆ ಭೇಟಿ ಮಾಡುತ್ತೀರಾ?"

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಪ್ರಾರ್ಥನಾ ಗುಡಾರದ ಕರೆಂಟ್ ಮತ್ತು ಕರೆಂಟ್ ಸಂಬಂಧವಾದ ಉಪಕರಣಗಳನ್ನು ತೆಗೆದುಕೊಳ್ಳಲ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel