Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.07.2021 (Bible Characters Special)
Share:

By Village Missionary Movement

Monday, 26-Jul-2021

ಧೈನಂದಿನ ಧ್ಯಾನ(Kannada) – 26.07.2021 (Bible Characters Special)

 

ಶತಾಧಿಪತಿ

 

"...ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ...ಅಂದನು." - ಲೂಕ 7:9

 

ಕೆಲವರು ಪ್ರದರ್ಶಿಸುವ ಅಸಾಧಾರಣವಾದ ಪ್ರದರ್ಶನಗಳ ಬಗ್ಗೆ ಕೇಳಿದರೆ ಅಥವಾ ನೋಡಿದರೆ ನಾವು ತುಂಬಾ ಆಶ್ಚರ್ಯಪಡುತ್ತೇವೆ. ಆದರೆ ಒಬ್ಬರ ಗುಣವನ್ನು ಕಂಡು ಯೇಸುಕ್ರಿಸ್ತನೇ ಆಶ್ಚರ್ಯಪಟ್ಟರೆಂದರೆ ಅದು ನಮ್ಮನ್ನೂ ಆಶ್ಚರ್ಯ ಪಡಿಸುತ್ತದಲ್ಲವಾ? ಹೌದು ಯೇಸುಕ್ರಿಸ್ತನನ್ನೇ ಆಶ್ಚರ್ಯಪಡಿಸಿದವರು ಈ ಶತಾಧಿಪತಿಯೇ. ಅವರ ಹೆಸರು ಸತ್ಯವೇದದಲ್ಲಿ ಕೊಡಲ್ಪಟ್ಟಿಲ್ಲ ಆದರೂ ಅವರ ಪ್ರತಿಯೊಂದು ಸತ್ಕಾರ್ಯಗಳೂ ಸತ್ಯವೇದದಲ್ಲಿ ಬರೆಯುವುದಕ್ಕೆ ಅರ್ಹತೆಯುಳ್ಳವುಗಳಾಗಿವೆ. ಅವರ ಜೀವನವನ್ನು ನಮ್ಮ ಜೀವನದೊಂದಿಗೆ ಹೋಲಿಸಿ ನೋಡಿ ನಾವು ಕೂಡ ಅವರಂತೆ ದೇವರು ಮೆಚ್ಚುವ ಜೀವನವನ್ನು ಜೀವಿಸಲು ಪ್ರಯಾಸಪಡೋಣ.

 

ಶತಾಧಿಪತಿ ಒಂದು ಸೈನ್ಯಕ್ಕೆ ನಾಯಕನಾಗಿದ್ದರೂ, ತನ್ನ ಕೆಲಸದವನ ಮೇಲೆ ಪ್ರೀತಿ ಯುಳ್ಳವನಾಗಿದ್ದಾನು. ಅವರು ತನ್ನ ಹೆಂಡತಿ ಮಕ್ಕಳ ಸೌಖ್ಯಕ್ಕಾಗಿ ಯೇಸುವಿನ ಬಳಿಗೆ ಬಂದಿದ್ದರೆ, ಆಶ್ಚರ್ಯ ಪಡಲು ಏನೂ ಇಲ್ಲ. ಆದರೆ ಅವರು ತನ್ನ ಕೆಲಸದವನಿಗಾಗಿ ದೇವರನ್ನು ಬೇಡಿಕೊಂಡರು. ಇಂದು ನಮ್ಮ ಚಿಂತೆ, ಮನಸ್ಥಿತಿ, ಕ್ರಿಯೆಗಳು ಈ ರೀತಿ ಇದೆಯಾ? ನಮ್ಮ ಮನೆಗಳಲ್ಲಿ ಕೆಲಸದವರ ಬಗ್ಗೆ ನಮಗೆ ಅಕ್ಕರೆ ಉಂಟಾ?

 

ಇವರು ಅನ್ಯಜಾತಿಯವನಾಗಿದ್ದರೂ ಯೆಹೂದ್ಯರನ್ನು ಪ್ರೀತಿಸಿ ಅವರಿಗಾಗಿ ಒಂದು ಆಲಯವನ್ನೂ ಕಟ್ಟಿಕೊಟ್ಟಿದ್ದಾರೆ. ಇವರ ಪ್ರವರ್ತನೆಯನ್ನು ನೋಡಿರಿ! ಜನಾಂಗೀಯ ಭಾವನೆ, ಜಾತಿ ಭಾವನೆಯನ್ನು ದಾಟಿ ದೊಡ್ಡಸ್ತಿಕೆಯಿಂದ ತನ್ನಿಂದ ಸಾಧ್ಯವಾದ ಒಳ್ಳೆಯ ಕಾರ್ಯಗಳನ್ನು ಮತ್ತೊಬ್ಬರಿಗೆ ಮಾಡಬೇಕೆಂಬ ಆಲೋಚನೆಯುಳ್ಳವರಾಗಿದ್ದರು. ಆದ್ದರಿಂದ ನಾವು ಇನ್ನೂ ನಾನು, ನಮ್ಮದು, ನಮ್ಮಜನಾಂಗ ಎಂಬ ಒಂದು ಚಿಕ್ಕ ವೃತ್ತದೊಳಗೇ ನಿಂತುಬಿಡದೆ ವಿಶಾಲವಾದ ಮನೋಭಾವದಿಂದ ಕಾಣಲ್ಪಡೋಣ.

 

"ದೇವರೇ ನೀನು ನನ್ನ ಮನೆಯೊಳಗೆ ಬರಲು ನಾನು ಅರ್ಹನಲ್ಲ" ಎಂದು ತನ್ನನ್ನು ತಗ್ಗಿಸಿಕೊಂಡು ತನ್ನ ಸ್ನೇಹಿತನ ಬಳಿ ಹೇಳಿ ಕಳುಹಿಸಿದರು. ನಾವು ಪ್ರಾರ್ಥಿಸುವಾಗ ದೇವರ ಬಳಿ ನಮ್ಮನ್ನು ತಗ್ಗಿಸಿ ಕೊಳ್ಳುತ್ತೇವೆ; ಆದರೆ ನಮ್ಮ ಪ್ರತಿನಿತ್ಯದ ಜೀವನದಲ್ಲಿ ಮನುಷ್ಯರ ಮುಂದೆ ನಮ್ಮನ್ನು ತಗ್ಗಿಸಿಕೊಳ್ಳಲು ಮನಸ್ಸಿಲ್ಲದವರಾಗಿದ್ದೇವೆ. ಅದು ನಮಗೆ ತುಂಬಾ ಕಠಿಣವಾಗಿದೆ.

 

ಒಂದು ಮಾತು ಮಾತ್ರ ಹೇಳಿ ಎಂದು ದೇವರ ಮಾತಿನ ಮೇಲೆ ದೃಢವಾದ ನಂಬಿಕೆ ಇಟ್ಟಿದ್ದರು. ಇಂದು ನಾವು ಮನುಷ್ಯರು ನೀಡುವ ಭರವಸೆಗಳನ್ನು ನಂಬುತ್ತೇವೆ. ಆದರೆ ಸತ್ಯವೇದದ ವಾಕ್ಯಗಳನ್ನು ಯಾವ ಪ್ರಮಾಣದಲ್ಲಿ ನಂಬುತ್ತಿದ್ದೇವೆ ಎಂದು ಯೋಚಿಸೋಣ.

 

ಶತಾಧಿಪತಿಯ ಹೆಸರು ಸತ್ಯವೇದದಲ್ಲಿ ಇಲ್ಲದೇ ಹೋದರೂ ಜೀವ ಪುಸ್ತಕದಲ್ಲಿ ಇದೆ. ನಾವು ಈ ಲೋಕದಲ್ಲಿ ಹೆಸರುಗಳಿಸಿದವರಾಗಿ ಇರಬೇಕೆಂದು ಬಯಸದೆ, ಜೀವ ಪುಸ್ತಕದಲ್ಲಿ ಸ್ಥಳ ಸಂಪಾದಿಸುವಂತೆ ಒಳ್ಳೆಯ ಸಾಕ್ಷಿಯಾಗಿ ಜೀವಿಸೋಣ.

- Mrs. ಪುಷ್ಪ ಸೈಮನ್

 

ಪ್ರಾರ್ಥನಾ ಅಂಶ:

ಸೇವೆಯಲ್ಲಿ ಸಹ ಸೇವಕರಾಗಿರುವವರಿಗಾಗಿ ಅವರ ಸಂರಕ್ಷಣೆಗಾಗಿ ಮತ್ತು ಅವರ ಅತ್ಯವಶ್ಯಕ ಅಗತ್ಯಗಳು ಪೂರೈಸಲ್ಪಡುವುದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş