Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.07.2021 (Kids Special)
Share:

By Village Missionary Movement

Sunday, 25-Jul-2021

ಧೈನಂದಿನ ಧ್ಯಾನ(Kannada) – 25.07.2021 (Kids Special)

 

ಮಿರ್ಯಾಮಳ ಜ್ಞಾನ

 

"ಜ್ಞಾನಿಯು ಆತ್ಮಗಳನ್ನು ಆಕರ್ಷಿಸುವನು." - ಜ್ಞಾನೋಕ್ತಿಗಳು 11:30

 

ಕ್ವಾ....ಕ್ವಾ..... ಎಂದು ಶಬ್ಧ ಮಾಡಿ ಅಳುತ್ತಿದ್ದ ಒಂದು ಸುಂದರವಾದ ಗಂಡು ಮಗು ಹುಟ್ಟಿತು. ಮಗು ಕೈಗಳನ್ನು ಆಡಿಸುತ್ತಾ, ಕಾಲುಗಳಿಂದ ಒದೆಯುತ್ತಾ ಇತ್ತು. ಆದರೆ ಆ ಮನೆಯಲ್ಲಿ ಎಲ್ಲರೂ ದುಃಖದಲ್ಲಿದ್ದರು. ತಾಯಿ ತನ್ನ ಮಗು ಅಳದಂತೆ ಅಪ್ಪಿಕೊಂಡಳು. ಸಂತೋಷವಾಗಿ ಇರಬೇಕಾದಂತಹ ತಾಯಿ ಚಿಂತೆ ಮತ್ತು ಭಯದಿಂದ ಇದ್ದಳು. ಯಾಕೆ ಗೊತ್ತಾ? ಐಗುಪ್ತದೇಶದಲ್ಲಿ ಇಸ್ರಾಯೇಲ್ಯರು ದಾಸರಾಗಿದ್ದರು. ಆ ದೇಶದಲ್ಲಿ ಇಸ್ರಾಯೇಲ್ಯರು ಅಧಿಕವಾಗಿ ಅಭಿವೃದ್ಧಿಯಾದದ್ದರಿಂದ, "ಅವರಿಗೆ ಹುಟ್ಟುವ ಗಂಡು ಮಕ್ಕಳನ್ನು ಕೊಂದು ಹಾಕಿರಿ" ಎಂದು ಬಹಳ ಕಠಿಣವಾದ ಆಜ್ಞೆಯನ್ನು ಕೊಟ್ಟಿದ್ದರು ಆ ದೇಶದ ರಾಜ. ಈಗ ಹೇಳಿ, ಹೀಗಿರುವಾಗ ಅವರು ಸಂತೋಷವಾಗಿರಲು ಹೇಗೆ ಸಾಧ್ಯ? ಸಾಧ್ಯವಿಲ್ಲ ತಾನೇ. ಆ ಮಗುವಿಗೆ ಆರೋನ್ ಎಂಬ ಅಣ್ಣ, ಮಿರ್ಯಾಮಳೆಂಬ ಅಕ್ಕ ಇದ್ದರು. ಇವರಿಬ್ಬರೂ ತಮಗೆ ತಮ್ಮ ಹುಟ್ಟಿದ ವಿಷಯವನ್ನು ಯಾರ ಬಳಿಯೂ ಹೇಳದೆ, ರಹಸ್ಯವಾಗಿ ಇಟ್ಟುಕೊಂಡರು.

 

ಮಗು ಬೆಳೆಯುತ್ತಾ ಬೆಳೆಯುತ್ತಾ ಶಬ್ಧ ಹೆಚ್ಚಾಯಿತು. ಅಣ್ಣನನ್ನು, ಅಕ್ಕನನ್ನು ನೋಡಿ ನಗಲು ಪ್ರಾರಂಭಿಸಿತು. ಇನ್ನುಮೇಲೆ ಈ ಮಗುವನ್ನು ಬಚ್ಚಿಡಲು ಸಾಧ್ಯವಿಲ್ಲ ಎಂದು ಅಮ್ಮ ನೆನೆಸಿದರು. ಕೂಡಲೇ ಮಿರ್ಯಾಮಳನ್ನು ಕರೆದು, "ನದಿ ತೀರಕ್ಕೆ ಹೋಗಿ ಆಪಿನ ಕಡ್ಡಿಗಳನ್ನು ಮುರಿದುಕೊಂಡು ಬಾ, ಆರೋನ್, ನೀನು ಅಂಟಿಸಲು ಸ್ವಲ್ಪ ಗಮ್ ತೆಗೆದುಕೊಂಡು ಬಾ" ಎಂದರು ಅಮ್ಮ. ಇದನ್ನೆಲ್ಲ ತೆಗೆದುಕೊಂಡು ಅಮ್ಮ ಏನು ಮಾಡುತ್ತಾರೆ ಎಂದು ಯೋಚಿಸುತ್ತಲೇ ಇಬ್ಬರು ಅಮ್ಮ ಹೇಳಿದ ಕೆಲಸವನ್ನು ಮಾಡಿ ಮುಗಿಸಿದರು. ಅಮ್ಮ ಆಪಿನ ಕಡ್ಡಿಗಳಿಂದ ವೇಗವಾಗಿ ಒಂದು ಪೆಟ್ಟಿಗೆಯನ್ನು ಮಾಡಿದರು. ಅದರೊಳಗೆ ನೀರು ಹೋಗದಂತೆ ಗಮ್ ಹಚ್ಚಿದರು. ನಂತರ ಮಗುವನ್ನು ಪೆಟ್ಟಿಗೆಯಲ್ಲಿ ಇಟ್ಟರು. ಮಿರ್ಯಾಮಳಿಗೂ, ಆರೋನನಿಗೂ ತುಂಬಾ ಅಳು ಬಂತು. ಬೇರೆ ದಾರಿಯಿಲ್ಲ. ನೈಲ್ ನದಿಗೆ ತೆಗೆದುಕೊಂಡು ಹೋಗಿ ಪೆಟ್ಟಿಗೆಯನ್ನು ತೇಲುವಂತೆ ಬಿಟ್ಟರು. ಮಿರ್ಯಾಮಳು ನದಿ ಪಕ್ಕದಲ್ಲೇ ನಿಂತು ತಮ್ಮನಿಗೆ ಏನಾಗುತ್ತದೋ? ಎಂದು ನೋಡುತ್ತಿದ್ದಳು. ಸ್ವಲ್ಪ ಸಮಯದ ನಂತರ ಯುವರಾಣಿ ಆ ದಾರಿಯಲ್ಲಿ ಬಂದರು. ಏನಿದು ಪೆಟ್ಟಿಗೆ ಎಂದು ತೆರೆದು ನೋಡಿದರೆ ಸುಂದರವಾದ ಮಗು ಹಸಿವಿನಿಂದ ಅಳುತ್ತಿತ್ತು. ದೂರದಲ್ಲಿ ನಿಂತಿದ್ದ ಮಿರ್ಯಾಮಳು ಓಡಿಬಂದು, " ನಾನು ಹೋಗಿ ಸಹಾಯಕ್ಕೆ ಯಾರನ್ನಾದರೂ ಕರೆದುಕೊಂಡು ಬರಲಾ ಯುವರಾಣಿ" ಎಂದು ಜ್ಞಾನವಾಗಿ ಮಾತನಾಡಿದಳು. ಆ ಯುವರಾಣಿ ಸರಿ ಎಂದಕೂಡಲೇ ಓಡಿ ಹೋಗಿ ತನ್ನ ತಾಯಿಯನ್ನು ಕರೆದುಕೊಂಡು ಬಂದಳು. ಆಗ ಯುವರಾಣಿ ಆಕೆಗೆ "ಈ ಮಗು ದೊಡ್ಡವನಾಗುವವರೆಗೂ ಇವನನ್ನು ಬೆಳೆಸಿ ನನಗೆ ಕೊಡು" ಎಂದು ಅಪ್ಪಣೆ ಕೊಟ್ಟಳು. ನಂತರ ಮಗುವನ್ನು ಕಾಪಾಡಿದ ದೇವರಿಗೆ ತಾಯಿ ಮತ್ತು ಮಗುವಿನ ಅಕ್ಕ ಮಿರ್ಯಾಮಳು ಇಬ್ಬರೂ ಕೃತಜ್ಞತೆಯನ್ನು ಹೇಳುತ್ತಲೇ ಮನೇ ಕಡೆಗೆ ಹೊರಟರು.

 

ಪುಟಾಣಿಗಳೇ, ಮಿರ್ಯಾಮಳು ತನ್ನ ತಮ್ಮನನ್ನು ಕಾಪಾಡುವುದಕ್ಕಾಗಿ ಎಷ್ಟು ಜ್ಞಾನವಾಗಿ ಕಾರ್ಯ ಮಾಡಿದಳು ನೋಡಿದ್ರಾ? ಸರಿ ನೀನೂ ಕೂಡ ಮಿರ್ಯಾಮಳ ಹಾಗೆ ಜ್ಞಾನವಾಗಿ ಮಾತಾಡಬೇಕು ಎಂಬುದಕ್ಕಾಗಿಯೇ ಈ ಕಥೆಯನ್ನು ನಿನಗೆ ಹೇಳುತ್ತಿದ್ದೇನೆ. ನೀನು ಏನು ಮಾಡಬಹುದು ಗೊತ್ತಾ? ರಜೆಯಲ್ಲಿ ನಿನ್ನ ಮನೆಗೆ ಬಂದಿರುವ ನಿನ್ನ ಅತ್ತೆಯ ಮಕ್ಕಳು, ಚಿಕ್ಕಮ್ಮನ ಮಕ್ಕಳು ಹೀಗೆ ಎಲ್ಲರೊಂದಿಗೂ ಜ್ಞಾನವಾಗಿ ಮಾತಾಡಿ ನಿನ್ನ ಊರಿನಲ್ಲಿ ನಡೆಯುವ VBS ಗೆ ಕರೆದುಕೊಂಡು ಹೋಗಿ ಅವರ ಆತ್ಮವು ನರಕಕ್ಕೆ ಹೋಗದಂತೆ ಕಾಪಾಡು. ಸರೀನಾ?

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet