Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.07.2021 (Bible Characters Special)
Share:

By Village Missionary Movement

Saturday, 24-Jul-2021

ಧೈನಂದಿನ ಧ್ಯಾನ(Kannada) – 24.07.2021 (Bible Characters Special)

 

ಕಾನಾನ್ಯಳಾದ ಸ್ತ್ರೀ

 

"ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ..." - ಮತ್ತಾಯ 21:22

 

ಯೇಸುಕ್ರಿಸ್ತನು ತೂರ್ ಸೀದೋನ್ ಪಟ್ಟಣಗಳ ಪ್ರಾಂತ್ಯಗಳಿಗೆ ಬಂದಾಗ, ಆ ಪ್ರಾಂತ್ಯದಲ್ಲಿ ಜೀವಿಸುತ್ತಿದ್ದ ಕಾನಾನ್ಯ ಸ್ತ್ರೀಯೊಬ್ಬಳು ಯೇಸುವಿನ ಬಳಿಗೆ ಬಂದು, ದೆವ್ವದ ಕಾಟ ಹೆಚ್ಚಾಗಿ ಅದರಿಂದ ಬಹಳ ವೇದನೆ ಅನುಭವಿಸುತ್ತಿದ್ದ ತನ್ನ ಮಗಳಿಗಾಗಿ ಬೇಡಿಕೊಂಡಳು. ಮೊದಲು ಯೇಸು ಯಾವ ಪ್ರತ್ಯುತ್ತರವನ್ನೂ ನೀಡಲಿಲ್ಲ. ಏಕೆಂದರೆ ಅವಳು ಯೆಹೂದ್ಯರಲ್ಲದ ಅನ್ಯಮತ ದವಳು! ಅದರಲ್ಲೂ ಶಪಿಸಲ್ಪಟ್ಟ ಜನಾಂಗಕ್ಕೆ ಸೇರಿದವಳು. ಕಾರಣ "ಕಾನಾನ್ ಶಪಿಸಲ್ಪಟ್ಟವನು" (ಆದಿ.9:25) ಎಂದು ಸತ್ಯವೇದವು ಹೇಳುತ್ತಿದೆಯಲ್ಲವಾ? ಆ ಸಂತತಿಯಿಂದ ಬಂದವಳಾದರೂ ಈಕೆ ದೇವರನ್ನು ಬಿಡುವಂತಿಲ್ಲ. ಅವಳು ಪುನಃ ದೇವರ ಬಳಿ ಬಂದು ಬೇಡಿಕೊಂಡಾಗ, ಯೇಸು "ಮಕ್ಕಳು (ಇಸ್ರಾಯೇಲ್ಯರು) ತಿನ್ನುವ ರೊಟ್ಟಿಯನ್ನು ತಕ್ಕೊಂಡು ನಾಯಿಮರಿಗಳಿಗೆ (ಅನ್ಯಜನರು) ಹಾಕುವದು ಸರಿಯಲ್ಲ" ಎಂದು ಹೇಳಿದರು. ನಾಯಿಗೆ ನಮ್ಮನ್ನು ಹೋಲಿಸಿ ಬಿಟ್ಟರೋ ಎಂದು ಅವಳು ಹಿಂದೆ ಸರಿಯಲಿಲ್ಲ. "ಸ್ವಾಮೀ, ಆ ಮಾತು ನಿಜವೇ; ಮೇಜಿನ ಕೆಳಗಿರುವ ನಾಯಿಮರಿಗಳಂತೂ ಮಕ್ಕಳ ಕೈಯಿಂದ ಬೀಳುವ ರೊಟ್ಟೀತುಂಡುಗಳನ್ನು ತಿನ್ನುತ್ತವಲ್ಲಾ" ಎಂದಳು. ಅವಳು ತನ್ನನ್ನು ನೆಲದ ಮಟ್ಟಿಗೆ ತಗ್ಗಿಸಿಕೊಂಡಳು. ಕೊನೆಗೆ ಕೃಪೆಯನ್ನು ಪಡೆದುಕೊಂಡಳು. ಅಷ್ಟು ಮಾತ್ರವಲ್ಲ ದೇವರನ್ನು ಹಿಂಬಾಲಿಸುತ್ತಾ ಆತನನ್ನು ಕರೆಯುತ್ತಾ ತನ್ನ ಮಗಳಿಗೆ ಬಿಡುಗಡೆ ಸಿಗುವವರೆಗು ಅವರನ್ನು ಬಿಟ್ಟು ದೂರ ಹೋಗಲಿಲ್ಲ. ಅವಳ ಸತತವಾದ ಪ್ರಯತ್ನಕ್ಕೆ ಫಲ ಸಿಕ್ಕಿತು. ಎಲ್ಲಾದಕ್ಕಿಂತ ಮೇಲಾಗಿ ಅವಳ ನಂಬಿಕೆಯ ಬಗ್ಗೆ ದೇವರೇ ಸಾಕ್ಷಿ ಕೊಟ್ಟರು. ಆ ಕ್ಷಣವೇ ಅವಳ ಮಗಳು ಸ್ವಸ್ಥ ಳಾದಳು. ನಮ್ಮ ಮಕ್ಕಳಿಗಾಗಿ ಪ್ರಾರ್ಥಿಸುವ ಕಾರ್ಯದಲ್ಲಿ ಕಾನಾನ್ಯ ಸ್ತ್ರೀಯು ನಮಗೊಂದು ಒಳ್ಳೆಯ ಉದಾಹರಣೆ.

 

ಹೌದು, ನಾವೂ ಕೂಡ ನಮ್ಮ ಮಕ್ಕಳು ಪಾಪದಿಂದ, ರೋಗದಿಂದ, ಕೆಟ್ಟ ಅಭ್ಯಾಸಗಳಿಂದ ಬಿಡುಗಡೆ ಹೊಂದಬೇಕೆಂದು ಬಯಸುತ್ತೇವೆ. ತಲೆಗೆ ಮೇಲೆ ಸಮಸ್ಯೆ ಬಂದುಬಿಟ್ಟರೆ ದೇವರನ್ನು ನೋಡಿ ಗೋಳಾಡಿ ಪ್ರಾರ್ಥಿಸುತ್ತೇವೆ. ಸಮಸ್ಯೆಯ ತೀವ್ರತೆಯು ಕಡಿಮೆಯಾದ ಕೂಡಲೇ ಪ್ರಾರ್ಥನೆಯ ತೀವ್ರತೆಯನ್ನೂ ಕಡಿಮೆ ಮಾಡಿಬಿಡುತ್ತೇವೆ. ಆದರೆ ಈ ಕಾನಾನ್ಯ ಸ್ತ್ರೀ ಮಾತ್ರ ಯೇಸುವೇ ಅದ್ಭುತ ಮಾಡಲು ಇಷ್ಟಪಡದೇ ಇರುವ ಸಂದರ್ಭದಲ್ಲೂ, ಅವರ ಬಳಿಯಿಂದ ಯಾವ ಉತ್ತರವೂ ಸಿಗದ ಪರಿಸ್ಥಿತಿಯಲ್ಲೂ, ನಾಯಿಗಳಂತೆ ತಾನೂ ತಳ್ಳಲ್ಪಟ್ಟ ವಳೆಂದು ಅರಿತುಕೊಂಡರೂ ಅವಳು ದೇವರನ್ನು ಬಿಡಲಿಲ್ಲ. ತನ್ನನ್ನು ದೇವರ ಮುಂದೆ ತಗ್ಗಿಸಿಕೊಂಡಳು, ಬಿಡದೇ ಹಿಂಬಾಲಿಸಿದಳು, ನಂಬಿದಳು. ಇವೆಲ್ಲವೂ ಸೇರಿ ಆಕೆಗೆ ಅದ್ಭುತವನ್ನು ಹೊತ್ತು ತಂದಿತು.

 

ಇಂದು ನಾವೂ ಕೂಡ ಒಂದು ತೀರ್ಮಾನವನ್ನು ಮಾಡೋಣ. ನನ್ನ ಮಕ್ಕಳ ಬಿಡುಗಡೆಗಾಗಿ, ಎದುರು ನೋಡುವ ಒಳ್ಳೆಯ ಕಾರ್ಯಗಳು ಕೈ ಕೂಡಿಬರಲು, ಆಶೀರ್ವದಿಸಲ್ಪಡಲು ಇರುವಂತಹ ತಡೆಗಳು ಮಾರ್ಪಡಲು ನಾನು ಬಿಡದೇ ಸತತವಾಗಿ ನಂಬಿಕೆ ಇಟ್ಟು ಪ್ರಾರ್ಥಿಸಲಿದ್ದೇನೆ. ಖಂಡಿತವಾಗಿ ಅದ್ಭುತವನ್ನು ಪಡೆದೇ ಪಡೆಯುತ್ತೇನೆ. ಅದರ ಮೂಲಕ ದೇವರನ್ನು ಮಹಿಮೆ ಪಡಿಸಲಿದ್ದೇನೆ ಎಂದು ತೀರ್ಮಾನಿಸಿರಿ. ಕರ್ತನು ನಿಮ್ಮ ನಂಬಿಕೆಯನ್ನು ಘನಪಡಿಸಲಿ.

- Bro. ಡೇವಿಡ್ ತವಮಣಿ

 

ಪ್ರಾರ್ಥನಾ ಅಂಶ:

ಪ್ರಾರ್ಥನಾ ಗುಡಾರದ ಕೆಲಸಗಳಲ್ಲಿರುವ ತಡೆಗಳು ನೀಗಿ ಶೀಘ್ರವಾಗಿ ಕಟ್ಟಿ ಮುಗಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş