Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.07.2021 (Bible Characters Special)
Share:

By Village Missionary Movement

Thursday, 22-Jul-2021

ಧೈನಂದಿನ ಧ್ಯಾನ(Kannada) – 22.07.2021 (Bible Characters Special)

 

ಯೋಬ

 

"...ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ..." - ಯಾಕೋಬ 5:11

 

"ಸಂಪೂರ್ಣನೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೇಡನ್ನು ಬಿಟ್ಟು ತೊಲ ಗುವವನೂ ಆಗಿದ್ದ ಅವನಂತೆ ಭೂಮಿಯಲ್ಲಿ ಒಬ್ಬನೂ ಇಲ್ಲ" ಎಂದು ಕರ್ತನಿಂದ ಪದೇ ಪದೇ ಹೊಗಳಲ್ಪಟ್ಟ ಸತ್ಯವೇದದ ಮನುಷ್ಯ ಯೋಬ. ಇವರು ಶುದ್ಧವಾದ ಜೀವನವನ್ನು ಜೀವಿಸಿ ನೀತಿವಂತನಾಗಿ ನಡೆದುಕೊಳ್ಳುತ್ತಿದ್ದರು. ನೀತಿವಂತನೆಂದರೆ ದೇವರ ಮುಂದೆ ಸರಿಯಾಗಿ ಜೀವಿಸುವವನೇ ತಾನೇ! ತನ್ನ ಕುಟುಂಬದವರ ಬಳಿ ಚಿಕ್ಕ ತಪ್ಪು ಕಾಣಿಸಿದರು ಕೂಡಲೇ ದೇವರ ಬಳಿ ಸರಿಮಾಡಿಕೊಳ್ಳುವ ಸ್ವಭಾವದವರು. ದೇವರನ್ನು ಆರಾಧಿಸುವುದರಲ್ಲೂ, ಪಾಪ ಕ್ಷಮಾಪಣೆ ಕೋರುವುದರಲ್ಲೂ ತಪ್ಪದವರು. ಇಂತಹ ಪರಿಸ್ಥಿತಿಯಲ್ಲಿ ದೇವರಿಗೂ ಸೈತಾನನಿಗೂ ನಡುವೆ ನಡೆದ ಸಂಭಾಷಣೆಯನ್ನು ಅದರಿಂದ ಸಂಭವಿಸಿದ ಪರಿಣಾಮದ ನಿಮಿತ್ತವಾಗಿ ಅದರೊಳಗೆ ತಾನಿರುವುದನ್ನು ಯೋಬನು ತಿಳಿಯಲಿಲ್ಲ. ಒಂದೇ ದಿನದಲ್ಲಿ ತನ್ನ ಸುಂದರವಾದ 10 ಮಂದಿ ಮಕ್ಕಳನ್ನು, ಹೇರಳವಾದ ಆಸ್ತಿಯನ್ನು ಕಳೆದುಕೊಂಡಾಗಲೂ ದೇವರನ್ನು ಅವರು ಕಳಕೊಳ್ಳಲು ಬಯಸಲಿಲ್ಲ. ಅವರು ನನ್ನನ್ನು ಸಾಯಿಸಿ ಬಿಟ್ಟರೂ ಅವರ ಮೇಲೆ ನಂಬಿಕೆಯಿಂದಲೇ ಇರುತ್ತೇನೆಂದು ದೃಢವಾಗಿ ಹೇಳಿದರು. ತನಗೆ ಸಂಭವಿಸಿದ ಹಿಂಸೆಗಳನ್ನು ತಾಳ್ಮೆಯಿಂದ ಸಹಿಸಿದರು. "ಎಷ್ಟು ಕಷ್ಟಗಳು ಬಂದರೂ ತನ್ನನ್ನು ಪ್ರೀತಿಸುವ ನೀತಿವಂತರು ಉಂಟು" ಎಂಬ ನಿಜವನ್ನು ಸ್ಥಿರ ಪಡಿಸುವುದಕ್ಕಾಗಿ ದೇವರು ಯೋಬನನ್ನು ಆರಿಸಿಕೊಂಡರು.

 

ಹೆಂಡತಿಯ ಪರಿಹಾಸ್ಯವಾದ ಮಾತುಗಳನ್ನು, ಸ್ನೇಹಿತರ ಆರೋಪಗಳನ್ನು ಸಹಿಸಿಕೊಂಡು ಏನು ನಡೆದರೂ ದೇವರನ್ನೇ ಹಿಂಬಾಲಿಸುವೆನು ಎಂದು ದೃಢವಾಗಿದ್ದರು. ಆ ಸ್ನೇಹಿತರಿಗಾಗಿಯೂ ಪ್ರಾರ್ಥಿಸಿ ಅದರ ನಿಮಿತ್ತವಾಗಿ ಕರ್ತನ ಕೃಪೆಯನ್ನು ಹೊಂದಿಕೊಂಡರು. ಹಲವು ಸಾವಿರ ವರ್ಷಗಳ ಮುಂಚೆಯೇ ಎರಡನೇ ಬರೋಣದ ಬಗ್ಗೆಯೂ, ಪುನರುತ್ಥಾನದ ಬಗ್ಗೆಯೂ ಪ್ರಕಟಣೆಯನ್ನು ಹೊಂದಿಕೊಂಡರು. ಕೊನೆಗೆ ಸೈತಾನನ ಆಲೋಚನೆಯನ್ನು ಸುಳ್ಳು ಮಾಡಿದರು. ಸೈತಾನನು ಸೋತು ಹೋದನು.

 

ನನ್ನ ಪ್ರಿಯರೇ! ನಮ್ಮ ದುಃಖ ಹಿಂಸೆಗಳ ಮಾರ್ಗವಾಗಿ ದೇವರು ನಮಗೆ ಅನೇಕ ಪಾಠಗಳನ್ನು ಕಲಿಸಿಕೊಡುತ್ತಾರೆ ಎಂಬುದು ನಿಜವೇ. ಆದರೂ ಪಾಠ ಕಲಿಯುವುದಕ್ಕಾಗಿ ಮಾತ್ರವೇ ಹಿಂಸೆಗಳನ್ನು ಅನುಮತಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಇದನ್ನು ಯೋಬನ ಜೀವನದಿಂದ ತಿಳಿದುಕೊಳ್ಳುತ್ತೇವೆ. ಆದ್ದರಿಂದ ನಮ್ಮ ರೋಗ, ಹಿಂಸೆ, ದುಃಖ, ಉಪದ್ರವ ಎಂಬ ಎಲ್ಲಕ್ಕೂ "ಕಾರಣವನ್ನು" ತಿಳಿದುಕೊಳ್ಳಲು ಪ್ರಯತ್ನಿಸದೇ ತಾಳ್ಮೆಯಿಂದ ಇರೋಣ. ಮರೆಯಾದವುಗಳು ದೇವರಿಗೆ ಸಂಬಂಧಪಟ್ಟವು! ಒಂದು ವೇಳೆ ಇಂತಹ ಪರಿಸ್ಥಿತಿಯಲ್ಲಿ ನಡೆದು ಹೋಗುವಾಗ ನಿಮ್ಮನ್ನು ಕೀಳಾಗಿ ಮಾತಾಡಿದ ಬಂಧುಗಳು, ಸ್ನೇಹಿತರನ್ನು ಕ್ಷಮಿಸಿ ಅವರಿಗಾಗಿ ಪ್ರಾರ್ಥಿಸಲು ಪ್ರಯಾಸ ಪಡಿರಿ. ನೀವು ಕಳೆದುಕೊಂಡ ಸೌಖ್ಯ, ಸಮಾಧಾನ, ಸಂತೋಷ ಎಂಬ ಎಲ್ಲಾ ಒಳಿತುಗಳನ್ನು ದೇವರು ಎರಡರಷ್ಟಾಗಿ ಕೊಟ್ಟು ನಿಮ್ಮನ್ನು ಆಶೀರ್ವದಿಸುತ್ತಾರೆ.

- Mrs. ಸರೋಜ ಮೋಹನ್ ದಾಸ್

 

ಪ್ರಾರ್ಥನಾ ಅಂಶ:

ಈ Lock down ದಿನಗಳಲ್ಲಿ VMM ಸೇವಕರ ಅತ್ಯವಶ್ಯಕ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş