Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.07.2021 (Bible Characters Special)
Share:

By Village Missionary Movement

Wednesday, 21-Jul-2021

ಧೈನಂದಿನ ಧ್ಯಾನ(Kannada) – 21.07.2021 (Bible Characters Special)

 

ಯೋಷೀಯ

 

"...(ಯೋಷೀಯ) ಮೋಶೆಯ ಎಲ್ಲಾ ನ್ಯಾಯಪ್ರಮಾ ಣದ ಪ್ರಕಾರ ಕರ್ತನ ಬಳಿಗೆ ತಿರುಗಿದ ಅರಸನ ಹಾಗೆ ಅವನ ಮುಂದೆ ಯಾವನೂ ಇರಲಿಲ್ಲ;..." - 2 ಅರಸುಗಳು 23:25

 

ಸತ್ಯವೇದದಲ್ಲಿ ಇಸ್ರಾಯೇಲ್ ರಾಜರ ಚರಿತ್ರೆಗಳು ಬಹಳ ರೋಮಾಂಚಕವಾದದ್ದು. ಅವರ ಬಹಿರಂಗವಾದ ಕಾರ್ಯಗಳನ್ನು ಮಾತ್ರವಲ್ಲದೆ ಹೃದಯದ ಆಲೋಚನೆಗಳನ್ನೂ ದೇವರು ಚಿತ್ರವಾಗಿ ಸೆರೆಹಿಡಿದು ತೋರಿಸಿದ್ದಾರೆ. ಅವರಲ್ಲಿ ಒಳ್ಳೆಯ ಮೂಲ ಮಾದರಿಗಳಿಗಿಂತ, ನಮ್ಮನ್ನು ಎಚ್ಚರಿಸುವ ಮೂಲ ಮಾದರಿಗಳೇ ಹೆಚ್ಚು. ಅದರಲ್ಲೂ ಬಹಳ ಚಿಕ್ಕ ವಯಸ್ಸಿನಲ್ಲೇ ರಾಜನಾಗಿ, ಅತ್ಯಂತ ದೊಡ್ಡ ಆಧ್ಯಾತ್ಮಿಕ ಪುನರುಜ್ಜೀವನವನ್ನು ಸೃಷ್ಟಿಸಿದವರು ಕಿಂಗ್ ಯೋಷೀಯ! ಅವರ ಜೀವನದಿಂದ ನಾವು ಖಂಡಿತವಾಗಿಯೂ ಬಹಳಷ್ಟು ಕಾರ್ಯಗಳನ್ನು ಕಲಿತುಕೊಳ್ಳಬಹುದು. ನಮ್ಮ ದೇಶದ ಪ್ರಸ್ತುತ ಸ್ಥಿತಿಯನ್ನು ನೋಡುವಾಗ, ಕಾಲಚಕ್ರವನ್ನು ತಿರುಗಿಸಿ ಕ್ರಿ.ಪೂ.639 ನೇ ವರ್ಷಕ್ಕೆ ನಾವು ಹಿಂತಿರುಗಿದರೆ ಚೆನ್ನಾಗಿರುತ್ತದೆ. ಹೌದು, ಅದುವೇ ರಾಜನಾದ ಯೋಷೀಯನ ಆಳ್ವಿಕೆಯ ಕಾಲ!

 

ಇವರು ಯೆಹೂದವನ್ನು ಆಳಿದ ದೈವಭಕ್ತಿಯುಳ್ಳ ರಾಜ. ತಮ್ಮ 8 ನೇ ವಯಸ್ಸಿನಿಂದಲೇ ರಾಜನಾಗಿದ್ದು 31 ವರ್ಷಗಳ ಕಾಲ (639-608) ಆಳಿದರು. ಅವರ ಹಿಂದಿನವರು 70 ವರ್ಷಗಳಿಗಿಂತ ಹೆಚ್ಚು ಕಾಲ ಆಳಿದರು. ಆದರೆ ಯೋಷೀಯನೋ ತಾನು ಚಿಕ್ಕವನಿದ್ದಾಗಲೇ ದೇವರನ್ನು ಹುಡುಕಲು ಪ್ರಾರಂಭಿಸಿ, ಚಿತ್ರಗಳನ್ನು ಮತ್ತು ವಿಗ್ರಹಗಳನ್ನು ನಾಶಮಾಡಿ, ಯೆಹೂದ ಮತ್ತು ಯೆರೂಸಲೇಮನ್ನು ಶುದ್ಧೀಕರಿಸಲು ಪ್ರಾರಂಭಿಸಿದರು. 18 ನೇ ವಯಸ್ಸಿನಲ್ಲಿ ಅವರು ಆಲಯವನ್ನು ದುರಸ್ತಿ ಮಾಡಲು ಪ್ರಾರಂಭಿಸಿದರು. ಆಗ ಮಹಾಯಾಜಕನಾದ ಹಿಲ್ಕೀಯನ ಕೈಯಲ್ಲಿ ಧರ್ಮೋಪದೇಶ ಗ್ರಂಥವು(ಆದಿಕಾಂಡ. ದಿಂದ ಧರ್ಮೋಪದೇಶ ಕಾಂಡದ ವರೆಗೆ) ಸಿಕ್ಕಿತು. ಅದರಲ್ಲಿ ನ್ಯಾಯಪ್ರಮಾಣದ ಪ್ರಕಾರ ನಡೆಯದೇ ಹೋದರೆ ಬರುವ ಶಾಪಗಳನ್ನು ಯೋಷೀಯನು ಕೇಳಿದಾಗ ಹೆದರಿ, ನಡುಗುತ್ತಾ ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನನ್ನು ತಗ್ಗಿಸಿಕೊಂಡರು (2 ಅರಸು.22:19). ಇವರ ಬಗ್ಗೆ ಸತ್ಯವೇದವು ಹೇಳುವ ಒಳ್ಳೆಯ ಸಾಕ್ಷಿ ಏನು ಗೊತ್ತಾ? “ಅವನ ಮುಂದೆ ಯಾವನೂ ಇರಲಿಲ್ಲ; ಅವನ ತರುವಾಯ ಅವನ ಹಾಗೆ ಯಾವನೂ ಎದ್ದಿರಲಿಲ್ಲ."

 

ನಂಬಿಕೆಯ ಗುಂಪಿನವರೇ! ಯೋಷೀಯ ರಾಜನು ಇಂದು ನಮ್ಮನ್ನು ಭೇಟಿಯಾದರೆ ಏನು ಹೇಳುತ್ತಾರೆ ಗೊತ್ತಾ? “ ಧರ್ಮಶಾಸ್ತ್ರದ ಮೊದಲ ಐದು ಪುಸ್ತಕಗಳನ್ನು ಓದುವಾಗಲೇ ನನ್ನ ಹೃದಯ ಮುಳುಗಿತೇ, ಇಡೀ ಬೈಬಲ್‌ ಅನ್ನು ಇಟ್ಟುಕೊಂಡು ನಿಮ್ಮಿಂದ ಹೇಗೆ ಅದನ್ನು ಓದದೆ ವಿಧೇಯರಾಗದೇ ಕಾರ್ಯಮಾಡದೇ ಇರಲು ಸಾಧ್ಯವಾಗುತ್ತಿದೆ? ಜನರೇ, ನನಗಿಂತ ಮೊದಲಿದ್ದ ರಾಜರು ನನಗೆ ಆದರ್ಶಪ್ರಾಯರಾಗಿರಲಿಲ್ಲ. ಅವರು ಧರ್ಮಶಾಸ್ತ್ರವನ್ನು ಹುಡುಕಲೇ ಇಲ್ಲ. ದೇವಾಲಯದಲ್ಲಿಯೇ ಧರ್ಮಶಾಸ್ತ್ರವು ಕಳೆದುಹೋಯಿತು. ಎಷ್ಟೊಂದು ಭೀಕರ! ಇಸ್ರಾಯೇಲಿನ ಅರಸನಾದ ಎರಡನೇ ಯಾರೊಬ್ಬಾಮನ II ಕಾಲದಲ್ಲಿ ಜೀವಿಸಿದ ಯೋಷೀಯ ಪ್ರವಾದಿಯ ಮೂಲಕ ಕರ್ತನು ನೀಡಿದ ಎಚ್ಚರಿಕೆ ನಿಮಗೆ ನೆನಪಿದೆಯೇ? “ನೀನು ನಿನ್ನ ದೇವರ ನ್ಯಾಯಪ್ರಮಾಣವನ್ನು ಮರೆತು ಬಿಟ್ಟಿದ್ದರಿಂದ ನಾನು ಸಹ ನಿನ್ನ ಮಕ್ಕಳನ್ನು ಮರೆತು ಬಿಡುವೆನು” ಎಂದು ಆದ್ದರಿಂದ ಸತ್ಯವೇದವನ್ನು ಓದಿರಿ, ಅದಕ್ಕೆ ವಿಧೇಯರಾಗಿರಿ. ಈ ದುಷ್ಟ ಜಗತ್ತಿನಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ಅದು ಮಾತ್ರ! ನನ್ನ ಆಳ್ವಿಕೆಯ ಕಾಲದಲ್ಲಿ ಜನರು ಸಮಾಧಾನವಾಗಿದ್ದರು. ನೀವು ಸತ್ಯವೇದವನ್ನು ಪ್ರೀತಿಸುವುದಾದರೆ, ಆಳ್ವಿಕೆ ಯಾರ ಕೈಯಲ್ಲಿದ್ದರೂ ಕೂಡ ನಿಮಗೆ ಸಮಾಧಾನವಿರುತ್ತದೆ."

- P.ರಾಮ್‌ಕುಮಾರ್ ಜೇಮ್ಸ್

 

ಪ್ರಾರ್ಥನಾ ಅಂಶ: 

ಪ್ರತಿದಿನವೂ ಧ್ಯಾನ ಸಂದೇಶವನ್ನು ಬರೆದುಕೊಡುವ ದೇವರ ಮಕ್ಕಳನ್ನು ದೇವರು ತನ್ನ ಅಭಿಷೇಕದಿಂದ ತುಂಬಿಸುವಂತೆ ಪ್ರಾರ್ಥಿಸಿರಿ.

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş