Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.07.2021 (Bible Characters Special)
Share:

By Village Missionary Movement

Monday, 19-Jul-2021

ಧೈನಂದಿನ ಧ್ಯಾನ(Kannada) – 19.07.2021 (Bible Characters Special)

 

ನಾಮಾನನು

 

"...ಜ್ಞಾನಿಯು ಉಚಿತಾಲೋಚನೆಯನ್ನು ಗಮನಿಸುವನು." - ಜ್ಞಾನೋಕ್ತಿಗಳು. 12:15

 

ದೈನಂದಿನ ಜೀವನದಲ್ಲಿ ನಮ್ಮಲ್ಲಿ ಅನೇಕರು ನಮಗಿಂತ ಕಿರಿಯರು, ಅಂದರೆ ವಯಸ್ಸು ಅಥವಾ ಅನುಭವದಲ್ಲಿ ಕಿರಿಯರು ಏನಾದರೂ ಒಂದು ಕಾರ್ಯವನ್ನು ಮಾಡಲು ಹೇಳಿದರೆ ಅದನ್ನು ಒಪ್ಪಿಕೊಳ್ಳುವುದು ಕೆಲವರಿಗೆ ಸ್ವಲ್ಪ ಕಷ್ಟವಾಗುತ್ತದೆ; ಅನೇಕರಿಗೆ ಇದು ಹೆಚ್ಚು ಕಷ್ಟಕರವಾಗಿರುತ್ತದೆ. ನಾವು ಪ್ರತಿದಿನ ಭೇಟಿಯಾಗುವ ಜನರೊಂದಿಗೆ ದೇವರು ತನ್ನ ಕಾರ್ಯಗಳನ್ನು ನೆರವೇರಿಸುವಂತೆ ಯೋಜನೆ ಹಾಕಿದ್ದಾರೆ. ಆದ್ದರಿಂದ ಇತರರ ಸಹಾಯ, ಸಲಹೆಯನ್ನು ಸ್ವೀಕರಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ದೇವರು ಅವರ ಮೂಲಕ ನಮಗೆ ನೀಡಿರುವ ಆಶೀರ್ವಾದವನ್ನು ನಾವು ಕಳೆದುಕೊಳ್ಳುವ ಸಾಧ್ಯತೆಯಿದೆ. ಕೆಲವೊಮ್ಮೆ ಚಿಕ್ಕವರು ಸಹ ನಮಗೆ ಸಹಾಯ ಮಾಡಬಹುದು. ಪುಟ್ಟ ಮಕ್ಕಳ ಸಹಾಯ ಪಡೆಯುವುದು ಕೀಳರಿಮೆಯ ಸ್ಥಿತಿಯನ್ನು ತೋರಿಸುವಂತೆ ಲೋಕವು ಭಾವಿಸುತ್ತದೆ. ಆದರೆ ನಾವು ಲೋಕದವರಲ್ಲ; ಲೋಕವನ್ನು ಜಯಿಸಿದವರು. 

 

ಸಿರಿಯಾದ ಅರಸನ ಸೇನಾಪತಿಯಾಗಿದ್ದ ನಾಮಾನನ ಮನೆಯಲ್ಲಿ ಇಸ್ರಾಯೇಲ್ ನಿಂದ ಕೆಲಸದವಳಾಗಿ ಬಂದ ಚಿಕ್ಕ ಹುಡುಗಿ ಒಬ್ಬಳು ಇದ್ದಳು. ಪರಾಕ್ರಮಶಾಲಿಯಾಗಿದ್ದ ಇವನೋ ಕುಷ್ಠರೋಗಿಯಾಗಿದ್ದನು. ಇದನ್ನು ತಿಳಿದ ಚಿಕ್ಕ ಹುಡುಗಿ, “ನಮ್ಮ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಇರುತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು. ಅವನು ಇವನನ್ನು ಕುಷ್ಠರೋಗದಿಂದ ವಾಸಿಮಾಡುತ್ತಿದ್ದನು” ಎಂದು ಆಲೋಚನೆ ಹೇಳಿದಳು. ಚಿಕ್ಕ ಹುಡುಗಿಯ ಮಾತನ್ನು ಕೇಳಿ ರಾಜನಿಂದ ಪತ್ರವನ್ನು ತೆಗೆದುಕೊಂಡು ಹೊರಟು ಹೋದನು ನಾಮಾನನು. ಆದರೆ ಎಲೀಷನು ತನ್ನ ಸೇವಕನನ್ನು ಕಳುಹಿಸಿ ಯೊರ್ದಾನಿನಲ್ಲಿ ಏಳು ಬಾರಿ ಮುಳುಗುವಂತೆ ಹೇಳಿ ಕಳುಹಿಸುತ್ತಾನೆ. ನಾಮಾನನೋ ಒಂದು ದೇಶದ ಸೇನಾಪತಿ, ರಾಜನಿಗೆ ಪ್ರಿಯವಾದವನು, ಬಹು ದೂರದಿಂದ ಬಂದಿದ್ದಾನೆ. ಆದರೆ ಭೇಟಿಯಾಗಬೇಕಾದ ವ್ಯಕ್ತಿಯನ್ನು ಭೇಟಿ ಮಾಡಲಿಲ್ಲ. ಮನೆಕೆಲಸಗಾರನನ್ನು ಭೇಟಿಯಾಗಲು ಸಾಧ್ಯವಾಯಿತು. ಈ ಪರಿಸ್ಥಿತಿಯನ್ನು ನಮ್ಮ ಮನೋನೇತ್ರಗಳ ಮುಂದೆ ಸ್ವಲ್ಪ ತರೋಣ. ತನ್ನ ಸ್ಥಾನಮಾನ ಮತ್ತು ಅಧಿಕಾರದಿಂದ ಎಲೀಷ ಬಂದು ಮುಟ್ಟಿ ಪ್ರಾರ್ಥಿಸಿ ಗುಣಪಡಿಸುತ್ತಾರೆ ಎಂದು ಭಾವಿಸಿದನು. ಆದರೆ ಬಂದದ್ದೋ ಸೇವಕ. ನೀವು ಮಾಡಬೇಕಾಗಿರುವುದು ಯೊರ್ದನ್‌ನಲ್ಲಿ ಏಳು ಬಾರಿ ಮುಣುಗಿ ಸ್ನಾನ ಮಾಡುವ ಸಾದಾರಣ ಕಾರ್ಯ.ಆದರೆ ನಾಮಾನನು ತುಂಬಾ ಕೋಪಗೊಂಡವನಾಗಿ ಹೊರಟು ಹೋಗಲು ಯೋಚಿಸುತ್ತಾನೆ. ಆಗ ಜೊತೆಗಿದ್ದ ಸೇವಕನು ತಾಳ್ಮೆಯಿಂದ ಧೈರ್ಯದಿಂದ ಪ್ರವಾದಿ ಒಂದು ದೊಡ್ಡ ಕೆಲಸ ಮಾಡುವಂತೆ ಹೇಳಿದರೆ ನೀವು ಖಂಡಿತವಾಗಿ ಮಾಡುತ್ತೀರಲ್ಲವೇ? ಎಂದು ಹೇಳಿದ ಮಾತುಗಳನ್ನು ಕೇಳಿ ನಾಮಾನನು ಯೊರ್ದಾನಿನಲ್ಲಿ ಏಳು ಬಾರಿ ಮುಳುಗುತ್ತಾನೆ. ಕುಷ್ಠರೋಗವು ನೀಗಿ ಗುಣಹೊಂದಿದವನಾಗಿ ಹಿಂತಿರುಗಿದನು.

 

ಇದನ್ನು ಓದುತ್ತಿರುವ ಆತ್ಮೀಯ ಸಹೋದರ, ಸಹೋದರಿಯೇ, ನಿಮಗೆ ಸಹಾಯ ಮಾಡುವಂತೆ ನಿಮ್ಮ ಕುಟುಂಬದಲ್ಲಿ, ಬೀದಿಯಲ್ಲಿ, ಸಭೆಯಲ್ಲಿ, ವಲಯದಲ್ಲಿ ದೇವರು ನಿಮಗೆ ಅನೇಕ ಸ್ನೇಹಿತರನ್ನು ಕೊಟ್ಟಿದ್ದಾರೆ. ಅವರ ಸಲಹೆಯನ್ನು ಕೇಳುತ್ತೇವೆಯೇ ಅಥವಾ ನಾಮಾನನು ಎಲೀಷನೇ ನೇರವಾಗಿ ಬಂದು ಆ ಕೆಲಸವನ್ನು ಮಾಡಬೇಕೆಂದು ನಾಮಾನನು ನಿರೀಕ್ಷಿಸಿದಂತೆಯೇ ದೇವರೇ ಮಾತನಾಡಬೇಕು, ದೇವರೇ ನನಗೆ ಹೇಳಬೇಕು ಎಂದು ಭಾವಿಸಿ ಇತರರ ಮಾತುಗಳನ್ನು ಮತ್ತು ಸಲಹೆಗಳನ್ನು ನಾವು ನಿರ್ಲಕ್ಷ್ಯ ಮಾಡುತ್ತಿದ್ದೇವೆಯೇ? ಪುಟ್ಟ ಹುಡುಗಿ ಅದರಲ್ಲೂ ಗುಲಾಮಳಾಗಿದ್ದವಳು, ಮತ್ತು ತನ್ನ ಕೆಳಗಿರುವ ಸೇವಕ ಇವರಿಬ್ಬರ ಮಾತುಗಳನ್ನು ಕೇಳಿದನು, ವಿಧೇಯನಾದನು ಅದ್ಭುತವನ್ನು ಪಡೆದುಕೊಂಡನು. ಇಂದಿಗೂ ನಮ್ಮ ಮುಂದೆ ಸಾಕ್ಷಿಯಾಗಿ ನಿಂತಿದ್ದಾನೆ. ನಮಗೂ ಕರ್ತನ ಅನೇಕ ಸಲಹೆಗಳು ಬರುತ್ತಲೇ ಇದೆ. ಕೇಳಿ ವಿಧೇಯರಾದರೆ ಅದ್ಭುತ ... ಇಲ್ಲದಿದ್ದರೆ ...! ಮುಕ್ತಾಯ ನಮ್ಮ ಕೈಯಲ್ಲಿ!

- L. ಅಲಗರಸಾಮಿ

 

ಪ್ರಾರ್ಥನಾ ಅಂಶ:-

 ಹಳ್ಳಿಗಳಲ್ಲಿ ನಾವು ಭೇಟಿಯಾಗಿ ಮುನ್ನಡೆಸಿದ ಚಿಕ್ಕ ಮಕ್ಕಳು,ಯೌವನಸ್ಥರು ಕರ್ತನಲ್ಲಿ ನೆಲೆಗೊಳ್ಳಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş