Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.07.2021 (Kids Special)
Share:

By Village Missionary Movement

Sunday, 18-Jul-2021

ಧೈನಂದಿನ ಧ್ಯಾನ(Kannada) – 18.07.2021 (Kids Special)

 

ಮಾತಾಡುವ ದೇವರು

 

"ನಿರ್ಮಲಚಿತ್ತರು ಧನ್ಯರು; ಅವರು ದೇವರನ್ನು ನೋಡುವರು." - ಮತ್ತಾಯ 5:8

 

ಹಲೋ ಪುಟಾಣಿಗಳೇ! ಹೇಗಿದ್ದೀರಾ? ನಿಮ್ಮ ಮನೆಯಲ್ಲಿ ಅಣ್ಣ, ಅಕ್ಕ, ತಮ್ಮ, ತಂಗಿ ಯಾರಾದರೂ ಇದ್ದಾರಾ? ಅವರೊಂದಿಗೆ ಹೊಡೆದಾಟ, ಜಗಳ, ಸಮಾಧಾನ ಹೀಗೆ ನಿಮ್ಮ ಮನೆಯೇ ಕಳಕಳೆಯಾಗಿ ಇರುತ್ತೆ ತಾನೇ. ಆದರೆ... ನಿಮ್ಮ ಹಾಗೆ ಪುಟಾಣಿಗಳು ಇಲ್ಲದ ಮನೆ ಹೇಗಿರುತ್ತದೆ? ಮೌನವಾಗಿ ಬರಿದಾಗಿತಾನೇ ಇರುತ್ತದೆ. ಹೀಗೆಯೇ ಹನ್ನ Aunty ಯವರ ಮನೆಯೂ ಬರಿದಾಗಿತ್ತು. ತನಗೆ ಒಂದು ಮಗುವಿಲ್ಲವೇ ಎಂದು ತುಂಬಾ ಚಿಂತೆ ಮಾಡಿದರು. ಆಲಯಕ್ಕೆ ಹೋಗಿ ಕಣ್ಣೀರಿನೊಂದಿಗೆ ಪ್ರಾರ್ಥನೆ ಮಾಡಿದರು. ದೇವರೇ! ನೀವು ನನಗೆ ಒಂದು ಮಗುವನ್ನು ಕೊಟ್ಟರೆ, ಅದನ್ನು ನಿಮಗೇ ಕೊಡುತ್ತೇನೆ ಎಂದು ಹರಕೆ ಮಾಡಿ ಪ್ರಾರ್ಥನೆಯನ್ನು ಮುಗಿಸಿದರು. ಪ್ರಾರ್ಥಿಸಿದ ನಂತರ, ಮಕ್ಕಳಿಲ್ಲವೇ ಎಂದು ನೆನಸಿ ಹನ್ನಳು ಚಿಂತಿಸಲೇ ಇಲ್ಲ.

 

ದೇವರು ಪ್ರಾರ್ಥನೆಯನ್ನು ಕೇಳಿ ಒಂದು ಸುಂದರವಾದ ಗಂಡುಮಗುವನ್ನು ಕೊಟ್ಟರು. ಆ ಮಗುವನ್ನು ಹನ್ನಳು ತುಂಬಾ ಪ್ರೀತಿಸಿದರು. ಮಗುವಿನ ತಂದೆ ಎಲ್ಕಾನನೂ ತುಂಬಾ ಮುದ್ದಾಗಿ ನೋಡಿಕೊಳ್ಳುತ್ತಿದ್ದರು. ಅವನಿಗೆ ಸಮುವೇಲನೆಂದು ಹೆಸರಿಟ್ಟರು. ಮಗು ಚೆನ್ನಾಗಿ ಓಡಾಡಲು ಪ್ರಾರಂಭಿಸಿತು. ಬೆಳೆದು ಸ್ವಲ್ಪ ದೊಡ್ಡವನಾದ ಮೇಲೆ ದೂರದಲ್ಲಿದ್ದ ಶೀಲೋವಿನಲ್ಲಿ ತಾನು ಪ್ರಾರ್ಥಿಸಿದ ಆಲಯಕ್ಕೆ ಸಮುವೇಲನನ್ನು ಕರೆದುಕೊಂಡು ಹೋದರು. ಆಲಯದಲ್ಲಿದ್ದ ಯಾಜಕನಾದ ಏಲಿ ತಾತನ ಬಳಿ ಬಿಟ್ಟು ಬಿಟ್ಟು, ದೇವರ ಬಳಿ ಮಾಡಿದ ಹರಕೆಯನ್ನು ನೆರವೇರಿಸಿದರು. ಸಮುವೇಲನು ಸ್ವಲ್ಪ ಅತ್ತನು. ಏಲಿ ತಾತ ಅವನನ್ನು ಚೆನ್ನಾಗಿ ನೋಡಿಕೊಂಡರು. ಸಮುವೇಲನು ಆಲಯದ ಬಾಗಿಲು, ಕಿಟಕಿಯನ್ನು ಒರೆಸಿ, ಬಾಗಿಲು ತೆರೆಯುವುದು, ಆರಾಧನೆಗೆ ಚಾಪೆ ಹಾಕುವುದು ಹೀಗೆ ತಾತ ಹೇಳುವ ಎಲ್ಲಾ ಕೆಲಸಗಳನ್ನು ಸಂತೋಷದಿಂದ ಮಾಡುತ್ತಾ ಬಂದನು. ಒಂದು ದಿನ ರಾತ್ರಿ ಸಮುವೇಲನು ಮಲಗಿರುವಾಗ ಯಾರೋ ಸಮುವೇಲನೇ ಎಂದು ಕರೆದ ಹಾಗಿತ್ತು. ಅವನೆದ್ದು ಏಲಿ ತಾತನ ಬಳಿ ಹೋಗಿ, "ನನ್ನನ್ನು ಕರೆದಿರ" ಎಂದು ಕೇಳಿದನು. "ನಾನು ಕರೆಯಲಿಲ್ಲ! ನೀನು ಹೋಗಿ ಮಲಗು" ಎಂದರು. ಎರಡನೇ ಬಾರಿ, ಮೂರನೇ ಬಾರಿಯೂ ಹಾಗೆಯೇ ಶಬ್ದ ಕೇಳಿಸಿತು. ಏಲಿ ತಾತನ ಬಳಿ ಹೋಗಿ, "ತಾತ ಕರೆದಿರ? ಎಂದನು. "ಇಲ್ಲಪ್ಪ" ಎಂದು ಹೇಳಿಬಿಟ್ಟು ತಾತ ಯೋಚಿಸಿದರು. ದೇವರೇ ಅವನನ್ನು ಕರೆದಿದ್ದಾರೆ ಎಂದು ಗ್ರಹಿಸಿ, "ತಿರಿಗಿ ಶಬ್ದ ಕೇಳಿಸಿದರೆ ಕರ್ತನೇ ಹೇಳಿ, ದಾಸನು ಕಾದಿದ್ದೇನೆ ಎಂದು ಹೇಳು"ಎಂದರು. ಸಮುವೇಲನು ಹೋಗಿ ಮಲಗಿಕೊಂಡನು. ತಿರಿಗಿ "ಸಮುವೇಲನೇ, ಸಮುವೇಲನೇ" ಎಂದು ಕರೆಯುವ ಶಬ್ದ ಕೇಳಿದ ಕೂಡಲೇ,ಅಪ್ಪಣೆಯಾಗಲಿ, ನಿನ್ನ ದಾಸನು ಕಾದಿದ್ದಾನೆ" ಎಂದು ದೇವರೊಂದಿಗೆ ಮಾತನಾಡಿದನು. ಆ ಸ್ಥಳದಲ್ಲಿ ನಡೆಯಲಿರುವ ಅನೇಕ ಕಾರ್ಯಗಳ ಬಗ್ಗೆ ದೇವರು ಸಮುವೇಲನ ಬಳಿ ಮಾತನಾಡಿದರು.

 

ಪುಟಾಣಿಗಳೇ, ನಿಮ್ಮೊಂದಿಗೆ ಯೇಸಪ್ಪ ಮಾತನಾಡಬೇಕೆಂದು ಆಸೆಯಾಗುತ್ತಿದೆಯಾ, ನೀನು ಕೂಡ ಯೇಸುವಿನ ಸ್ವರವನ್ನು ಕೇಳಲು ಸಾಧ್ಯ. ಯಾವಾಗ ಗೊತ್ತಾ? ನಿಮ್ಮ ಜೀವನ ಪರಿಶುದ್ಧವಾಗಿ, ಸಮುವೇಲನ ಹಾಗೆ ಯೇಸುವಿಗೂ, ಮನುಷ್ಯರಿಗೂ ಇಷ್ಟವಾಗಿ ನಡೆದುಕೊಳ್ಳುವಾಗ ಯೇಸಪ್ಪನ ಶಬ್ದವನ್ನು ಕೇಳಲು ಸಾಧ್ಯ. Ok.

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş