Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.07.2021 (Bible Characters Special)
Share:

By Village Missionary Movement

Saturday, 17-Jul-2021

ಧೈನಂದಿನ ಧ್ಯಾನ(Kannada) – 17.07.2021 (Bible Characters Special)

 

ಶೂನೇಮ್ಯಳು

 

"ಪ್ರವಾದಿಯನ್ನು ಪ್ರವಾದಿಯೆಂದು ಸೇರಿಸಿಕೊಳ್ಳುವವನು ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು;..." - ಮತ್ತಾಯ 10:41

 

ಶೂನೇಮಿ - ಇದು ಆ ಮಹಿಳೆಯ ಹೆಸರಲ್ಲ. ಅವಳು ವಾಸಿಸುತ್ತಿದ್ದ ಊರಿನ ಹೆಸರು ಅದು! ಪ್ರವಾದಿಯಾಗಿದ್ದ ಎಲೀಷ ಆ ಊರಿಗೆ ಹೋದಾಗ, ಅವಳು ತನ್ನ ಮನೆಗೆ ಬಂದು ಊಟ ಮಾಡಬೇಕೆಂದು ಅವರನ್ನು ಬೇಡಿಕೊಂಡಳು. ಅವರು ಪ್ರಯಾಣ ಮಾಡಿ ಬರುವಾಗಲೆಲ್ಲಾ ಅವಳು ಅವರನ್ನು ಪ್ರೀತಿಯಿಂದ ಉಪಚರಿಸುತ್ತಿದ್ದಳು. ಅಷ್ಟೇ ಅಲ್ಲ, ಅವರು ಉಳಿದುಕೊಳ್ಳಲು ಆರಾಮದಾಯಕವಾದ ಕೋಣೆಯನ್ನು ನಿರ್ಮಿಸಿ, ಅಲ್ಲಿ ಅವರಿಗೆ ಬೇಕಾದ ಎಲ್ಲಾ ಕಾರ್ಯಗಳನ್ನೂ ಮಾಡಿಕೊಟ್ಟಳು. ಅವಳ ಪ್ರೀತಿಯ ಕಾಳಜಿ, ಉಪಚಾರ, ಘನಪಡಿಸುವಿಕೆಯಂತಹ ಸದ್ಗುಣ, ಇವರಿಗಾಗಿ ಏನಾದರೂ ಮಾಡಬೇಕೆಂಬ ಬಯಕೆಯನ್ನು ಎಲೀಷನಿಗೆ ಉಂಟುಮಾಡಿತು. “ಸಕಲ ಸಲಕರಣೆಯೊಂದಿಗೆ ನಮ್ಮನ್ನು ವಿಚಾರಿಸುತ್ತಿದ್ದೀಯಲ್ಲಾ, ನಾನು ನಿನಗೆ ಏನು ಮಾಡಬೇಕು? ರಾಜನ ಬಳಿ ನಿನಗಾಗಿ ಮಾತನಾಡಲು ಏನಾದರೂ ಇದೆಯೇ? ” ಎಂದು ಕೇಳಿದರು. ಆದರೆ ಅವಳು ಮಾತ್ರ ತನಗೆ ಮಕ್ಕಳಿಲ್ಲ ಎಂಬ ಒಂದು ಕೊರತೆ ಇರುವುದನ್ನು ಬಹಿರಂಗಪಡಿಸದೆ "ನನ್ನ ಜನರ ನಡುವೆ ನಾನು ಸಂತೋಷವಾಗಿ ವಾಸಿಸುತ್ತಿದ್ದೇನೆ" ಎಂದು ಹೇಳಿದಳು. ಹೌದು, ಅವಳು ಪ್ರತಿಫಲವಾಗಿ ಏನನ್ನೂ ನಿರೀಕ್ಷಿಸದೇ ಅವರನ್ನು ಉಪಚರಿಸಿದಳು ಎಂಬುದನ್ನು ಇದರಿಂದ ನಾವು ತಿಳಿದುಕೊಳ್ಳಬಹುದು.

 

ಗೇಹಜಿಯ ಮೂಲಕ ವಿಷಯವನ್ನು ತಿಳಿದುಕೊಂಡು, ಪ್ರವಾದಿ (ಎಲೀಷ) ಅವಳನ್ನು ಆಶೀರ್ವದಿಸಿದಾಗ ಒಂದು ಗಂಡು ಮಗುವನ್ನು ಹೆತ್ತಳು. ಅವನು ಬೆಳೆದಾಗ ಒಂದು ದಿನ ಅವನು ನೋವಿನಿಂದ ಸತ್ತುಹೋದನು. ಅದು ಅವಳ ಹೃದಯವನ್ನು ಬಹಳ ನೋಯಿಸಿದರೂ "ವಿಶ್ವಾಸಿಯು ಹೆದರುವುದಿಲ್ಲ" ಎಂಬ ವಾಕ್ಯದ ಪ್ರಕಾರ ಅವಳು ಇದನ್ನು ತನ್ನ ಗಂಡನಿಗೂ ಹೇಳದೇ, ತನ್ನ ಮಗನನ್ನು ಎಲೀಷನು ಇರುತ್ತಿದ್ದ ಕೋಣೆಯಲ್ಲಿ ಮಲಗಿಸಿಬಿಟ್ಟು ಕರ್ಮೆಲ್‌ ಬೆಟ್ಟದ ಮೇಲಿದ್ದ ದೇವರ ಮನುಷ್ಯ (ಎಲೀಷ) ನ ಬಳಿಗೆ ಹೋಗಿ ಅವರ ಕಾಲುಗಳನ್ನು ಹಿಡಿದುಕೊಂಡು ತನ್ನ ಸ್ಥಿತಿಯನ್ನು ಅವರಿಗೆ ತಿಳಿಸಿದಳು. ಅವರು ತನ್ನ ಸೇವಕನನ್ನು ಕಳುಹಿಸುತ್ತೇನೆಂದು ಹೇಳಿದಾಗ ಇಲ್ಲ ನೀವೇ ಬರಬೇಕು ಎಂದು ಒತ್ತಾಯಿಸಿದಳು. ಅವಳು ನಂಬಿದಂತೆ ತನ್ನ ಮಗನನ್ನು ಮರಳಿ ಪಡೆದಳು. ಸತ್ಯವೇದದಲ್ಲಿ ಹೆಸರೇ ಹೇಳಲ್ಪಡದ ಮಹಿಳೆಯಾಗಿ, ಬೋಧಕರು ಹೆಚ್ಚು ಬೋಧಿಸದ ಮಹಿಳೆಯಾಗಿ ಕಾಣಲ್ಟಟ್ಟರೂ, ಉಪಚರಿಸುವದರಲ್ಲಿಯೂ, ದೇವರ ಮಕ್ಕಳನ್ನು ಘನಪಡಿಸುವದರಲ್ಲಿಯೂ, ದೃಢವಾಗಿ ನಂಬುವುದರಲ್ಲಿಯೂ ಇವಳು ನಮ್ಮೆಲ್ಲರಿಗೂ ಉತ್ತಮವಾದ ಉದಾಹರಣೆ ಎಂದೇ ಹೇಳಬಹುದು.

 

ಪ್ರಿಯರೇ! ಒಂದು ವೇಳೆ ನಮಗೆ ಸೇವೆ ಮಾಡಲು ಅವಕಾಶವಿಲ್ಲದಿರಬಹುದು. ಆದರೆ ನಾವು ಶೂನೇಮ್ಯಳಂತೆ ನಮ್ಮ ಊರಿಗೆ ಬರುವ ದೇವರ ಸೇವಕರನ್ನು ಪ್ರೀತಿಯಿಂದ ನಮ್ಮ ಮನೆಗಳಿಗೆ ಆಹ್ವಾನಿಸಿ ಅವರನ್ನು ಉಪಚರಿಸಬಹುದೇ!ಪ್ರವಾದಿಯನ್ನು ಪ್ರವಾದಿಯೆಂದು ಸೇರಿಸಿಕೊಳ್ಳುವವನು ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು ಎಂದು ಸತ್ಯವೇದವು ಹೇಳುವುದನ್ನು ಮೇಲ್ಕಂಡ ವಾಕ್ಯದಲ್ಲಿ ನಾವು ನೋಡುತ್ತೇವೆ. ಹೌದು, ಶೂನೇಮ್ಯಳಂತೆ, ಪ್ರತಿಫಲವಾಗಿ ಏನನ್ನೂ ನಿರೀಕ್ಷಿಸದೆ ನಾವು ಒಳ್ಳೇದನ್ನು ಮಾಡುವಾಗ, ದೇವರು ಅದಕ್ಕೆ ತಕ್ಕಂತೆ ಪ್ರತಿಫಲವನ್ನು ನೀಡುತ್ತಾರೆ ಎಂಬುದರಲ್ಲಿ ಯಾವುದೇ ರೀತಿಯ ಸಂದೇಹವೇ ಇಲ್ಲ.

- Mrs.ಅನಿತಾ ಅಲಗರ್ ಸಾಮಿ

 

ಪ್ರಾರ್ಥನಾ ಅಂಶ:-

7000 ಮಿಷನರಿಗಳಿಗೆ ಪ್ರತೀ ತಿಂಗಳು ರೂ. 5000 / - ಕೊಟ್ಟು ಬೆಂಬಲಿಸುವ ಕುಟುಂಬಗಳನ್ನು ಕರ್ತನು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş