Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.07.2021 (Bible Characters Special)
Share:

By Village Missionary Movement

Friday, 16-Jul-2021

ಧೈನಂದಿನ ಧ್ಯಾನ(Kannada) – 16.07.2021 (Bible Characters Special)

 

ಓಬದ್ಯ

 

"...ಓಬದ್ಯನು ಕರ್ತನಿಗೆ ಬಹಳ ಭಯಪಡುವವನಾಗಿದ್ದನು." - 1ಅರಸುಗಳು 18:3

 

ಓಬದ್ಯ - ಇವರ ಹೆಸರಿನ ಅರ್ಥ "ಕರ್ತನ ಸೇವಕ". ಎಂಬದಾಗಿದೆ ಇಸ್ರಾಯೇಲಿನ ಅರಸನಾದ ಅಹಾಬನ ಅರಮನೆಯಲ್ಲಿ ಅರಮನೆಯ ಉಸ್ತುವಾರಿ ಎಂಬ ಉನ್ನತವಾದ ಸ್ಥಾನದಲ್ಲಿ ಕಾಣಲ್ಪಟ್ಟರು‌. "ಊರೊಂದಿಗೆ ಸಹಬಾಳ್ವೆ" ಎಂಬ ಸಾಮಾನ್ಯವಾದ ಮಾತುಂಟು. ಆದರೆ ಓಬದ್ಯ ಇದಕ್ಕೆ ವಿರುದ್ಧವಾಗಿ ಕಾಣಲ್ಟಟ್ಟರು. "ಕರ್ತನಿಗೆ ಬಹಳ ಭಯಪಟ್ಟು ನಡೆದರು" ಎಂದು ಸತ್ಯವೇದದಲ್ಲಿ ಕೆಲವರ ಬಗ್ಗೆ ಉಲ್ಲೇಖಿಸಲಾಗಿದೆ. ಆ ಸಾಲಿನಲ್ಲಿ ಓಬದ್ಯ ಕೂಡ ಒಬ್ಬರು. ಇಂದು ಅವರ ಬಗ್ಗೆ ನೋಡೋಣ.

 

ಇಸ್ರಾಯೇಲ್ಯರನ್ನು ವಿಗ್ರಹಾರಾಧನೆಗೆ ಕರೆದೊಯ್ಯುವಲ್ಲಿ ಅಹಾಬನೆಂಬ ಅರಸನು ಪ್ರಮುಖ ಪಾತ್ರ ವಹಿಸಿದನು. ತನ್ನ ಹೆಂಡತಿಯಾದ ಈಜೆಬೆಲಳು ಅವನನ್ನು ಕೆರಳಿಸಿದಂತೆ, ಅಹಾಬನು ದುಷ್ಟತನದಿಂದ ವರ್ತಿಸಿದನೆಂದು ನಾವು ಓದುತ್ತೇವೆ. ಜನರನ್ನು ವಿಗ್ರಹಾರಾಧನೆಗೆ ಕರೆದೊಯ್ಯುವುದು ಮಾತ್ರವಲ್ಲದೆ ಕರ್ತನ ಸೇವಕರನ್ನು ಹುಡುಕಿ ಹುಡುಕಿ ಕೊಂದರು ಎಂದು ನಾವು ಓದುತ್ತೇವೆ. ಇಂತಹ ಒಂದು ಇಕ್ಕಟ್ಟಾದ ಸಮಯದಲ್ಲಿ ಓಬದ್ಯ ಕರ್ತನ ಸೇವಕರಿಗೆ ಬಹಳ ಸಹಾಯಕರಾಗಿದ್ದರು. ಕರ್ತನ ಪ್ರವಾದಿಗಳಾದ ಸುಮಾರು ನೂರು ಜನರನ್ನು ಒಟ್ಟುಗೂಡಿಸಿ ಅವರಿಗೆ ರೊಟ್ಟಿಯನ್ನು ಮತ್ತು ನೀರನ್ನು ಕೊಟ್ಟು ಪರಾಮರ್ಶಿಸುತ್ತಾ ಬಂದರು. ಹೀಗೆ ಕರ್ತನ ಸೇವಕರನ್ನು ಸಂರಕ್ಷಿಸಿ ನೋಡಿಕೊಳ್ಳುವುದರಿಂದ ತನಗೆ ಬರುವ ಅಪಾಯದ ಬಗ್ಗೆ ಸ್ವಲ್ಪವೂ ಚಿಂತಿಸಲಿಲ್ಲ. ಅವರು ಈಜೆಬೆಲಳಿಗೆ ಈ ವಿಚಾರ ತಿಳಿದರೆ ತನ್ನನ್ನು ಜೀವಂತವಾಗಿ ಬಿಟ್ಟು ಬಿಡುವುದಿಲ್ಲ ಎಂಬುದನ್ನೂ ತಿಳಿದಿದ್ದರು. ಎಲ್ಲರಂತೆ ನಾನೂ ಅಹಾಬನೊಂದಿಗೆ, ಈಜೆಬೆಲಳೊಂದಿಗೆ ಸೇರಿ ಕಾರ್ಯ ಮಾಡುವೆನು ಎಂದು ದುಷ್ಟತನದಿಂದ ಬದುಕಲಿಲ್ಲ. ಬದಲಾಗಿ, ಓಬದ್ಯ ದೇವರನ್ನು ಪ್ರೀತಿಸುವುದರಲ್ಲಿಯೂ ದೇವರ ಸೇವಕರನ್ನು ರಕ್ಷಿಸುವ ಮತ್ತು ನೋಡಿಕೊಳ್ಳುವ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದರು. ಓಬದ್ಯ ನ ಬಳಿ ಕಂಡು ಬಂದ ಈ ಕೆಲವು ಉತ್ಸಾಹಭರಿತ ಗುಣಲಕ್ಷಣಗಳು ಒಂದೇ ದಿನ ಇದ್ದಕ್ಕಿದ್ದಂತೆ ವರವಾಗಿ ದೊರೆಯಲಿಲ್ಲ. ಓಬದ್ಯ ಚಿಕ್ಕ ವಯಸ್ಸಿನಿಂದಲೂ ಕರ್ತನಿಗೆ ಭಯಪಟ್ಟು ನಡೆದರು ಎಂಬುದಾಗಿ ಸತ್ಯವೇದವು ಅವರ ಬಗ್ಗೆ ಹೇಳುತ್ತದೆ. (1 ಅರಸು. 18:12)

 

ಇಂದಿನ ಧ್ಯಾನ ಸಂದೇಶದಲ್ಲಿ ಪವಿತ್ರಾತ್ಮನು ನಿಮ್ಮೊಂದಿಗೆ ಮಾತನಾಡುತ್ತಿದ್ದಾರೆ. ಇದನ್ನು ಓದುತ್ತಿರುವ ನೀವು ಯಾರೇ ಆಗಿರಲಿ, ಚಿಕ್ಕವರಾಗಲಿ ಅಥವಾ ವಯಸ್ಸಾದವರಾಗಲಿ ಯಾರಾಗಿದ್ದರೂ ಸರಿ, ನಿಮ್ಮ ಮುಂದೆ ಇಡಲ್ಪಡುವ ಪ್ರಶ್ನೆ ಇದುವೇ. ಕರ್ತನಿಗೆ ಭಯಪಡುವ ಭಯ ನನ್ನಲ್ಲಿದೆಯೇ ಎಂದು ನಿಮ್ಮನ್ನು ನೀವೇ ಕೇಳಿನೋಡಿರಿ. ದೇವರ ಕುರಿತ ಜ್ಞಾನ, ಭಯವಿಲ್ಲದ ಜಗತ್ತಿನಲ್ಲಿ ಬದುಕುತ್ತಿರುವ ನಮ್ಮನ್ನು ಅವರಿಗೆ ಇಷ್ಟವಾದ ರೀತಿಯಲ್ಲಿ ಬದುಕಲು ದೇವರು ನಮ್ಮನ್ನು ಕರೆಯುತ್ತಿದ್ದಾರೆ. ಮನುಷ್ಯರಲ್ಲಿ ಕೆಲವರನ್ನು ಮೆಚ್ಚಿಸುವ ಸಲುವಾಗಿ ಪರಲೋಕದ ದೇವರನ್ನು ದುಃಖಪಡಿಸಬೇಡಿರಿ. ಇವೆಲ್ಲವೂ ತಪ್ಪಾ ಎಂದು ಸಣ್ಣ ಸಣ್ಣ ವಿಷಯಗಳಲ್ಲಿ ಕಂಡುಬರುವ ನಿರಾಸಕ್ತಿ, ದೇವರಿಗೆ ಭಯಪಡುವ ಭಯ ಎಂಬ ಹಾದಿಯಿಂದ ನಾವು ತಪ್ಪಿಹೋಗುವಂತೆ ಮಾಡುತ್ತದೆ. ಜಾಗರೂಕರಾಗಿರೋಣ!

- P. ಜಾಕೋಬ್ ಶಂಕರ್

 

ಪ್ರಾರ್ಥನಾ ಅಂಶ:-

ಸೈತಾನನಿಂದ, ರೋಗಗಳಿಂದ ಕಟ್ಟಲ್ಪಟ್ಟ ಜನರಿಗೆ Healing Service ನಡೆಸಬೇಕೆಂದು, ಪ್ರಾರ್ಥಿಸಿ, ಇದರ ಮೂಲಕ ಅನೇಕರು ಅದ್ಬುತವಾದ ಬಿಡುಗಡೆಯನ್ನು ಹೊಂದಿಕೊಳ್ಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş