Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.07.2021 (Bible Characters Special)
Share:

By Village Missionary Movement

Thursday, 15-Jul-2021

ಧೈನಂದಿನ ಧ್ಯಾನ(Kannada) – 14.07.2021 (Bible Characters Special)

 

ಅರಿಮಥಾಯದ ಯೋಸೇಫನು

 

"...ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ." - 1ಯೋಹಾನ 4:18

 

ಇಸ್ರಾಯೇಲಿನ ಉಚ್ಚನ್ಯಾಯಾಲಯದಂತಹದ್ದು ತೆರಿಗೆ ವಸೂಲಿ ಆಲೋಚನಾ ಸಂಘ. ಅದರಲ್ಲಿ ಗೌರವಾನ್ವಿತ ಆಲೋಚನಾಗಾರನಾಗಿ ಇದ್ದವರೇ ಅರಿಮಥಾಯ ಊರಿಗೆ ಸೇರಿದ ಯೋಸೇಫನು. ಆ ಸಂಘದ ತೀರ್ಮಾನದಂತೆಯೇ ಯೇಸುವಿಗೆ ಮರಣದಂಡನೆಯನ್ನು ವಿಧಿಸಿತು. ಆ ಸಂಘದ ಸದಸ್ಯನಾಗಿದ್ದುಕೊಂಡು ಯೇಸುವನ್ನು ಹಿಂಬಾಲಿಸುವುದು ಅಪಾಯಕಾರಿ. ಆದರೆ ತನ್ನ ಪ್ರಭಾವ, ಜೀವನ ಎಲ್ಲವನ್ನು ಕ್ಷುಲ್ಲಕವಾಗಿ ಗೌರವಿಸಿ ಯೇಸುವನ್ನು ಹಿಂಬಾಲಿಸಿದರು ಈ ಯೋಸೇಫನು. ಧನವಂತರು ಪರಲೋಕರಾಜ್ಯದಲ್ಲಿ ಪ್ರವೇಶಿಸುವುದು ಅಪರೂಪ ಎಂದು ಯೇಸುವೇ ಹೇಳಿರುವಾಗ, ಧನವಂತರಾಗಿದ್ದ ಅವರು ದೇವರ ರಾಜ್ಯ ಬರಲು ಕಾದಿದ್ದರು. ಪ್ರಾರಂಭದಲ್ಲಿ ಯೆಹೂದ್ಯರಿಗೆ ಭಯಪಟ್ಟದ್ದರಿಂದ ಅಂತರಂಗ ಶಿಷ್ಯನಾಗಿದ್ದ ಅವರು, ಯೇಸುವಿನ ಮರಣದ ನಂತರ ಹಿಂಜಾರಿ ಹೋಗಲಿಲ್ಲ. ಪಾಪಿಗಳಿಗಾಗಿ ಮರಣಿಸಿ, ಜೀವಂತವಾಗಿ ಎದ್ದೇಳುತ್ತೇನೆ ಎಂಬ ಯೇಸುವಿನ ಮಾತುಗಳನ್ನು ಸಂಪೂರ್ಣವಾಗಿ ನಂಬಿದರು. ಆದ್ದರಿಂದ ಈಗ ಬಹಿರಂಗವಾಗಿ ಪಿಲಾತನ ಬಳಿಗೆ ಧೈರ್ಯದಿಂದ ಹೋಗಿ ಯೇಸುವಿನ ಶರೀರವನ್ನು ಕೇಳಿ ತೆಗೆದುಕೊಂಡು, ತೆರಿಗೆ ವಸೂಲಿ ಸಂಘದಲ್ಲಿ ಸದಸ್ಯನಾಗಿದ್ದ ನಿಕೋದೇಮನೆಂಬ ಸಹ ವಿಶ್ವಾಸಿಯೊಂದಿಗೆ ಸೇರಿ, ಯೇಸುವನ್ನು ಬಹಳ ಮರ್ಯಾದೆಯೊಂದಿಗೆ ಸಮಾಧಿ ಮಾಡಿದರು. ಯೆಹೂದ್ಯರಿಗೆ ಸ್ವಲ್ಪವೂ ಭಯಪಡದೆ ಅವರು ಹೀಗೆಲ್ಲಾ ಹೇಗೆ ಮಾಡಿದರು? ಅವರು ಯೇಸುವಿನ ಮೇಲೆ ಇಟ್ಟಿದ್ದ ಸಂಪೂರ್ಣವಾದ ಪ್ರೀತಿ ಭಯವನ್ನು ದೂರ ತಳ್ಳಿತು. ಪ್ರೀತಿಯಿಂದ ಕಾರ್ಯಮಾಡುವ ನಂಬಿಕೆ ಅವರ ಬಳಿ ಇತ್ತು. ತನ್ನ ನಂಬಿಕೆ ಸತ್ತದ್ದಲ್ಲ. ಅದು ಜೀವವುಳ್ಳದ್ದೆಂದು ತನ್ನ ಕ್ರಿಯೆಗಳಿಂದ ಖಚಿತಪಡಿಸಿದರು.

 

ಯೇಸುವಿನ ಪುನರುತ್ಥಾನದ ದಿನವನ್ನು ನೆನಸಿಕೊಳ್ಳಲು ಸಿದ್ಧವಾಗಿರುವ ನಮ್ಮೊಂದಿಗೆ, ಇಂದು ಯೋಸೇಫನು ನೆರಳಿನಂತೆ ಮಾತಾಡುತ್ತಿದ್ದಾರೆ. ಕ್ರೈಸ್ತ ವಿರೋಧಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ದೇವರ ರಾಜ್ಯಕ್ಕಾಗಿ ಧೈರ್ಯದಿಂದ ನಿಂತು ಸುವಾರ್ತೆ ಸಾರಲು ನಾವು ಸಿದ್ಧರಾಗಿದ್ದೇವಾ? ಬಂಧು ಮಿತ್ರರಿಗೆ ಭಯಪಡುತ್ತಾ ಯೇಸುವನ್ನು ಬಹಿರಂಗವಾಗಿ ಅಂಗೀಕರಿಸಲು ಹಿಂಜರಿಯುತ್ತಿದ್ದೇವಾ? ಕ್ರೈಸ್ತರೆಂದು ತಿಳಿದರೆ, ಕೆಲಸ, ಸ್ಕಾಲರ್ಶಿಪ್ ಸಿಗುವುದಿಲ್ಲ ಎಂಬ ಪರಿಸ್ಥಿತಿಗಳು ಬರುವಾಗ ಕರ್ತನು ಎಲ್ಲವನ್ನು ನೋಡಿಕೊಳ್ಳುತ್ತಾರೆ ಎಂಬ ಮನೋಲ್ಲಾಸ ಉಂಟಾ? ಸುವಾರ್ತೆ ಕೆಲಸಗಳಲ್ಲಿ ಭಾಗವಹಿಸಿದರೆ ಪದವಿ ಕಳೆದುಕೊಳ್ಳುತ್ತೇವೋ, ಪದವಿಯ ಉನ್ನತವು ಬಾಧಿಸಲ್ಪಡುತ್ತದೋ ಎಂಬ ಭಯವುಂಟಾ? ಆದರೆ ಯೋಸೇಫನು ಯೆಹೂದ್ಯರಿಗೆ ಭಯಪಡಲಿಲ್ಲ, ತನ್ನ ಪದವಿ ಕಳೆದುಕೊಳ್ಳುತ್ತೇನೆ ಎಂದು ಕೂಡಾ ಭಯ ಪಡಲಿಲ್ಲ.

 

ಅಷ್ಟು ಮಾತ್ರವಲ್ಲದೆ ಬೆಲೆಬಾಳುವ ಶುದ್ಧವಾದ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ತೋಡಿದ್ದ ತನ್ನ ಹೊಸ ಸಮಾಧಿಯಲ್ಲಿ ಇಟ್ಟು ಯೇಸುವನ್ನು ಒಳ್ಳೆ ರೀತಿಯಲ್ಲಿ ಸಮಾಧಿ ಮಾಡಿದರು. ಯೇಸುವಿಗಾಗಿ ತಮ್ಮ ಆಸ್ತಿಯಲ್ಲಿ ದೊಡ್ಡ ಭಾಗವನ್ನು ಖರ್ಚು ಮಾಡಲು ಮುಂದೆ ಬಂದರು. ಯೇಸು ಮರಣಹೊಂದಿದಾಗ ಧನವಂತನೊಂದಿಗಿದ್ದರು. (ಯೆಶಾಯ.53:9) ಎಂಬ ಪ್ರವಾದನೆಯು ನೆರವೇರುವ ದೇವರ ಯೋಜನೆಯಲ್ಲಿ ಈ ಯೋಸೇಫನು ಸೇರಿಸಲ್ಪಟ್ಟರು. ಅವರ ಗುಣಲಕ್ಷಣಗಳು ನಮ್ಮ ಬಳಿಯಲ್ಲಿಯೂ ಕಾಣಲ್ಪಟ್ಟರೆ , ದೇವರು ನಿಜವಾಗಿ ಅವರ ಬಿಡುಗಡೆಯ ಯೋಜನೆಯಲ್ಲಿ ನಮ್ಮನ್ನೂ ಸೇರಿಸಿಕೊಳ್ಳುತ್ತಾರೆ.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:-

ಒಂದು ಗ್ರಾಮವನ್ನು ರೂ.2000/- ಕೊಟ್ಟು ದತ್ತುತೆಗೆದುಕೊಳ್ಳುವ ಕುಟುಂಬಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş