Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.07.2021 (Bible Characters Special)
Share:

By Village Missionary Movement

Wednesday, 14-Jul-2021

ಧೈನಂದಿನ ಧ್ಯಾನ(Kannada) – 14.07.2021 (Bible Characters Special)

 

ಯೆಪ್ತಾಹನ ಮಗಳು

 

"ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು;" - ಯೋಹಾನ 3:16

 

ಯೆಪ್ತಾಹ ಎಂದರೇನೆ ನಮ್ಮ ನೆನಪಿಗೆ ಬರುವುದು ಹರಕೆ. ನ್ಯಾಯಸ್ಥಾಪಕರು 11ನೇ ಅಧ್ಯಾಯವನ್ನು ಓದುವಾಗ ಯೆಪ್ತಾಹನ ಕುರಿತ ಕಾರ್ಯಗಳನ್ನು ತಿಳಿದುಕೊಳ್ಳುತ್ತೇವೆ. ಅವರೊಂದು ಪರಾಕ್ರಮ ಶಾಲಿಯಾದ ಮನುಷ್ಯ. ಆದರೆ ಅವರ ಸ್ವಂತ ಜನರೇ ಅವರನ್ನು, "ನೀನು ಬೇಕಾಗಿಲ್ಲ, ಓಡಿಹೋಗು" ಎಂದು ಓಡಿಸಿ ಬಿಡುತ್ತಾರೆ. ಓಡಿಸಿದ ಮನುಷ್ಯರೇ ತಿರುಗಿ ಯೆಪ್ತಾಹನನ್ನು ಹುಡುಕಿ ಬಂದು, ಅವರನ್ನು ತಮಗೆ ನಾಯಕನನ್ನಾಗಿ ನೇಮಿಸಲು ಒಪ್ಪಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಯೆಪ್ತಾಹನು ಅಮ್ಮೋನಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗುವಾಗ ಕರ್ತನ ಬಳಿ ಒಂದು ಹರಕೆ ಮಾಡಿಬಿಟ್ಟು ಹೊರಡುತ್ತಾರೆ. "ನಾನು ಸುರಕ್ಷಿತನಾಗಿ ಮನೆಗೆ ಮುಟ್ಟಿದಾಗ ನನ್ನನ್ನು ಎದುರುಗೊಳ್ಳುವದಕ್ಕಾಗಿ ನನ್ನ ಮನೆಯ ಬಾಗಲಿನಿಂದ ಮೊದಲು ಬರುವಂಥ ಪ್ರಾಣಿಯು ನಿನ್ನದೇ ಎಂದು ಅದನ್ನು ಕರ್ತನಿಗೆ ಹೋಮಮಾಡುವೆನು" ಎಂದು ಹರಕೆ ಮಾಡಿದನು.

 

ಯುದ್ಧದಲ್ಲಿ ಕರ್ತನು ಕೊಟ್ಟ ಜಯದೊಂದಿಗೆ ಯೆಪ್ತಾಹನು ತನ್ನ ಮನೆಯನ್ನು ಸಮೀಪಿಸಿದಾಗ ಅವನ ಮಗಳು ದಮ್ಮಡಿಬಡಿಯುತ್ತಾ ನಾಟ್ಯವಾಡುತ್ತಾ ಅವಳ ತಂದೆಯನ್ನು ಎದುರುಗೊಳ್ಳುವದಕ್ಕಾಗಿ ಬಂದಳು. ಯೆಪ್ತಾಹನ ಮಗಳು-ಒಂದು ಯೌವನಸ್ಥಳು. ಆಕೆಯು ಅವನ ಒಬ್ಬಳೇ ಮಗಳು. ಆಕೆಯನ್ನು ಕಾಣುತ್ತಲೆ ತಾನು ಯೆಹೋವನ ಬಳಿ ಮಾಡಿದ ಹರಕೆಯನ್ನು ನೆನೆಸಿಕೊಂಡು ಗೋಳಾಡುತ್ತಾರೆ. ಆದರೆ ಅವರ ಮಗಳು ಯಾವುದೇ ರೀತಿಯ ಗೊಂದಲವೋ, ಆತಂಕವೋ ಇಲ್ಲದವಳಾಗಿ ತನ್ನ ತಂದೆಯು ಯೆಹೋವನ ಬಳಿ ಮಾಡಿದ ಹರಕೆಯನ್ನು ನೆರವೇರಿಸುವುದಕ್ಕಾಗಿ ಸರ್ವಾಂಗ ದಹನಬಲಿಯಾಗಿ, ಕರ್ತನಿಗೆ ಮಾಡಿದ ಹರಕೆಯನ್ನು ನೆರವೇರಿಸಲು ಧೈರ್ಯವಾಗಿ ತನ್ನನ್ನು ಬಲಿಯಾಗಿ ಒಪ್ಪಿಸಿಕೊಡುತ್ತಾಳೆ.

 

ಪ್ರಿಯರೇ! ಲೋಕದಲ್ಲಿ ನಾವು ಬಯಸುವ, ಪ್ರೀತಿ ಇಟ್ಟಿರುವ ಮನುಷ್ಯರಿಗಾಗಿ ಏನನ್ನಾದರೂ ಮಾಡಿಬಿಡಬೇಕು ಎಂದು ಆತಂಕಗೊಂಡವರಾಗಿ ಜೀವಿಸುತ್ತಿದ್ದೇವೆ. ಮತ್ತೊಬ್ಬರು ನಮಗಾಗಿ ಏನಾದರೂ ಮಾಡಬೇಕು ಎಂದು ಎದುರು ನೋಡುವವರಾಗಿದ್ದೇವೆ. ಆದರೆ ಯಾವುದೇ ಎದುರು ನೋಡುವಿಕೆ ಇಲ್ಲದೆ ಮನುಷ್ಯ ರಾಗಿರುವ ನಮ್ಮ ಬಿಡುಗಡೆಗಾಗಿ ತನ್ನನ್ನೇ ಶಿಲುಬೆಯಲ್ಲಿ ಬಲಿಯಾಗಿ ಅರ್ಪಿಸಿದ ಕ್ರಿಸ್ತನ ಪ್ರೀತಿ ಎಷ್ಟು ಅಮೂಲ್ಯವಾದದ್ದು! ಅವರು ನಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ವಿವರಿಸಲು ಮಾತುಗಳೇ ಇಲ್ಲ. ಶಿಲುಬೆಯ ಮೇಲಿನ ಪ್ರೀತಿಯನ್ನು ಗ್ರಹಿಸಿದ ವರಾಗಿ, ಅನುದಿನವು ಮತ್ತೊಬ್ಬರಿಗೆ ಕ್ರಿಸ್ತನ ಪ್ರೀತಿಯನ್ನು ಪ್ರಕಟಿಸುವ ಸಾಕ್ಷಿಗಳಾಗಿ, ನಡೆದಾಡುವ ಪತ್ರಿಕೆಗಳಾಗಿ ಈ ಲೋಕದಲ್ಲಿ ಜೀವಿಸಲು ನಮ್ಮನ್ನೇ ಜೀವ ಬಲಿಯಾಗಿ ಕರ್ತನ ಬಳಿ ಸಮರ್ಪಿಸೋಣ.

- Mrs.ಜೆಬಕನಿ ಶೇಖರ್

 

ಪ್ರಾರ್ಥನಾ ಅಂಶ:-

ಒಂದೊಂದು ರಾಜ್ಯದಲ್ಲೂ ಯೌವನಸ್ಥರಿಗಾಗಿ ವಿಶೇಷ ಕೂಟಗಳನ್ನು ನಡೆಸಲು ದೇವರು ಕೃಪೆ ತೋರಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin