Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.07.2021 (Bible Characters Special)
Share:

By Village Missionary Movement

Monday, 12-Jul-2021

ಧೈನಂದಿನ ಧ್ಯಾನ(Kannada) – 12.07.2021 (Bible Characters Special)

 

ಹನ್ನಳು

 

"...ನನ್ನ ಮನೋವೇದನೆಯನ್ನು ಯೆಹೋವನ ಮುಂದೆ ಹೊಯ್ದಿದ್ದೇನೆ." - 1 ಸಮುವೇಲ 1:15

 

ಹನ್ನಳು, ಹಳೆಯ ಒಡಂಬಡಿಕೆ ಯಲ್ಲಿರುವ ಒಂದು ಸಾಧಾರಣ ಕೌಟುಂಬಿಕ ಮಹಿಳೆ ಮತ್ತು ಅವಳ ಪ್ರಾರ್ಥನೆಯು ಬಹು ವಿಶಿಷ್ಟವಾದದ್ದು. ಇಸ್ರಾಯೇಲಿನಲ್ಲಿ ಒಂದು ತಾಯಾಗಿ ಒದಗಿಸಿದ ಹನ್ನಳ ಜೀವನದಿಂದ ನಾವು ಹಿಂಬಾಲಿಸಬೇಕಾದ ಗುಣಲಕ್ಷಣಗಳು ಅನೇಕವಿದೆ. ಅದರಲ್ಲೂ ನಿರ್ದಿಷ್ಟವಾಗಿ ಅವಳ ಬಳಿ ಕಾಣಲ್ಪಟ್ಟ "ಮೌನವಾದ ಆತ್ಮ" ಅಳಿದುಹೋಗದ ಅಲಂಕಾರವಾಗಿ ಅವಳ ಹೃದಯದಲ್ಲಿ ಮರೆಯಾಗಿ ಕಾಣಲ್ಪಟ್ಟಿತು. ಅದು ದೇವರ ದೃಷ್ಟಿಯಲ್ಲಿ ಬಹು ಬೆಲೆಯುಳ್ಳದ್ದು.

 

ಹನ್ನಳ ಜೀವನದಲ್ಲಿ ಅವಳಿಗೆ ಗರ್ಭಫಲವಿಲ್ಲದ ಕೊರತೆಯಿತ್ತು. ಅದರಿಂದಾಗಿ ಅವಳು ತುಂಬಾ ವೇದನೆ ಪಟ್ಟಳು. ಪ್ರತಿವರ್ಷವೂ ಕರ್ತನ ಆಲಯಕ್ಕೆ ಹೋಗುವಾಗೆಲ್ಲಾ ಪೆನಿನ್ನಳು ಅವಳ ಮನಸ್ಸನ್ನು ನೋಯಿಸುತ್ತಾ ಇದ್ದಳು, ತುಂಬಾ ವೇದನೆ ಪಟ್ಟಳು, ಜಜ್ಜಲ್ಪಟ್ಟಳು. ಆದರೂ ಒಂದು ಕಾರ್ಯವನ್ನು ಗಮನಿಸಿರಿ. ಯಾವ ಸ್ಥಳದಲ್ಲಿಯೂ ಪೆನಿನ್ನಳಿಗೆ ಉತ್ತರಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ್ದಾಗಿಯೋ, "ಗಂಡನಿಗೆ ಪ್ರೀತಿ ಪಾತ್ರಳು ನಾನೇ" ಎಂದೋ ಹೇಳಲೇ ಇಲ್ಲ. ಬದಲಾಗಿ ಅವಳ ಕಣ್ಣುಗಳಿಂದ ಹರಿದುಬಂದ ಕಣ್ಣೀರೇ ಅದಕ್ಕೆಲ್ಲಾ ಪ್ರತ್ಯುತ್ತರವಾಗಿತ್ತು. ಪೆನಿನ್ನಳ ಬಳಿ ಮಾತ್ರವಲ್ಲ, ಏಲಿಯ‌ ಬಳಿಯೂ ಹಾಗೆಯೇ ನಡೆದುಕೊಂಡಳು. ಆಲಯದಲ್ಲಿ ಬಹಳ ಮನೋವೇದನೆಯಿಂದ ಪ್ರಾರ್ಥನೆ ಮಾಡಿ ಮುಗಿಸಿ ಕಣ್ಣೀರನ್ನು ಒರೆಸಿಕೊಂಡು ಎದ್ದ ಹನ್ನಳ ಬಳಿಯಲ್ಲಿ, ಏಲಿಯು,

 

"ನಿನ್ನ ಅಮಲು ಇನ್ನೂ ಇಳಿಯಲಿಲ್ಲವೋ?" ಎಂದು ಕೇಳುತ್ತಾರೆ. ಆಗಲೂ ಅವಳು ಆತುರಪಟ್ಟು ಕೋಪವಾಗಿ ಯಾವುದೇ ಮಾತನ್ನೂ ಆಡದೇ, "ಸ್ವಾಮೀ ಹಾಗಲ್ಲ" ಎಂದು ಮಾತನಾಡುತ್ತಾಳೆ. ಜೀವನದ ಕಠಿಣವಾದ ದಿನಗಳಲ್ಲಿಯೂ ಅವಳು ತನ್ನ ಒಳ್ಳೆಯ ಸ್ವಭಾವವನ್ನು ಕಳೆದುಕೊಳ್ಳಲಿಲ್ಲ. ಹೌದು, ಕುಟುಂಬದಲ್ಲಿ ಹನ್ನಳನ್ನು ಉನ್ನತಕ್ಕೆ ತಂದದ್ದು ಇಂತಹ ಒಳ್ಳೆಯ ಸ್ವಭಾವವೇ! ಇದರ ನಿಮಿತ್ತವಾಗಿ ಗಂಡನ ಪ್ರೀತಿ, ಸಹಾನುಭೂತಿ, ಆರೈಕೆಯೂ ಹೆಚ್ಚಿತು. ಶಾರೀರಿಕವಾಗಿ ಅವಳು ಪ್ರತಿಗೆ ಪ್ರತಿಯಾಗಿ ಯಾವುದನ್ನೂ ಮಾತಾಡದೇ ಹೋದದ್ದರಿಂದ ಅವಳು ಆತ್ಮಾನುಸಾರವಾದ ಮಹಿಳೆಯಾದಳು. ಅವಳು ಮೌನವಾಗಿದ್ದಳು; ಪರಲೋಕ ಅವಳಿಗಾಗಿ ತಟ್ಟಿತು. ಹೌದು, ಸಮುವೇಲನು ಹುಟ್ಟಿದನು. ಈಗ ತನ್ನ ಬಾಯಿಯನ್ನು ತೆರೆದು ದೇವರನ್ನು ಸುತ್ತಿಸುತ್ತಿದ್ದಾಳೆ.

 

ಪ್ರಿಯರೇ! ಕುಟುಂಬದಲ್ಲಿ, ಕೆಲಸ ಮಾಡುವ ಸ್ಥಳದಲ್ಲಿ, ಸಭೆಯಲ್ಲಿ, ನಿಮ್ಮ ಶಾರೀರಿಕವಾದ ಆಲೋಚನೆಯಂತೆ ಮಾತನಾಡಲು ಆತುರ ಪಡದೆ ಮೌನವಾಗಿದ್ದು ಆತ್ಮಾನುಸಾರವಾಗಿ ನಡೆದುಕೊಳ್ಳಿರಿ. ನೀವು ಮೌನವಾಗಿದ್ದರೆ, ಪರಲೋಕವೇ ನಿಮಗಾಗಿ ತಟ್ಟುತ್ತದೆ ಎಂಬುದನ್ನು ಮರೆತು ಹೋಗಬೇಡಿರಿ. ಮೌನವಾಗಿರುವುದು ಹೇಡಿತನ ಎಂದು ನೆನೆಸಬೇಡಿರಿ. ದೇವರ ದೃಷ್ಟಿಯಲ್ಲಿ ಶಾಂತವಾಗಿ ಇರುವುದು, ಮೌನವಾಗಿ ಇರುವುದು ಬಹು ಅಮೂಲ್ಯವಾದ ಅಲಂಕಾರ ವಲ್ಲವೇ? ಹನ್ನಳ ಕಥೆಯನ್ನು ನಮ್ಮ ಮಕ್ಕಳಿಗೆ ಕಲಿಸಿ ಕೊಟ್ಟಿದ್ದೇವೆ. ಇಂದು ಹನ್ನಳ ಬಳಿಯಿಂದ ಮೌನವನ್ನು ನಾವೂ ಕೂಡ ಕಲಿತುಕೊಳ್ಳೋಣ.

- Mrs. ಯಬನ್ ಸಂತೋಷ್

 

ಪ್ರಾರ್ಥನಾ ಅಂಶ:-

ಗೆತ್ಸೇಮನೆ ಕ್ಯಾಂಪಸ್ ನೊಳಗೆ ಬಂದು ಪ್ರತಿದಿನವೂ ಮಧ್ಯಾಹ್ನದ ಆಹಾರವನ್ನು ತೆಗೆದುಕೊಂಡು ಹೋಗುತ್ತಿರುವ ವ್ಯಕ್ತಿಗಳು ಯೇಸುವಿನ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş kargabet kargabet giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş casibom çarkbet vizebet alobet alobet giriş amgbahis amgbahis giriş sweet bonanza casinomilyon jojobet betsalvador bahiscasino casibom casibom giriş jojobet jojobet giriş perabet perabet giriş holiganbet holiganbet giriş casibom casibom giriş casibom güncel giriş matbet matbet giriş superbetin superbetin giriş carkbet carkbet giris supertotobet supertotobet giriş