Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.07.2021 (Bible Characters Special)
Share:

By Village Missionary Movement

Sunday, 11-Jul-2021

ಧೈನಂದಿನ ಧ್ಯಾನ(Kannada) – 11.07.2021 (Bible Characters Special)

 

ಮೂರು ಶಿಲುಬೆಗಳು

 

"ಮಾನಸಾಂತರಪಡುವ ಒಬ್ಬಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವಾಗುವದೆಂದು" - ಲೂಕ 15:7

 

ಪುಟಾಣಿಗಳೇ, ಇಂದು ನಾವೆಲ್ಲರೂ ಯೆರೂಸಲೇಮ್ ಪಟ್ಟಣದ ಹೊರಗಿರುವ ಗೊಲ್ಗೊಥಾ ಎಂಬ ಬೆಟ್ಟದಲ್ಲಿ ಏನು ನಡೆಯಿತು ಎಂಬುದನ್ನು ನೋಡುವುದಕ್ಕಾಗಿ 2000 ವರ್ಷಗಳ ಹಿಂದೆ ಹೋಗಲಿದ್ದೇವೆ. ರೆಡೀನಾ?

 

ಆ ಬೆಟ್ಟದಲ್ಲಿ ಮೂರು ಶಿಲುಬೆಗಳು ನಿಲ್ಲಿಸಲ್ಪಟ್ಟಿದ್ದವು. ಒಂದೊಂದು ಶಿಲುಬೆಯಲ್ಲೂ ಒಬ್ಬೊಬ್ಬರನ್ನು ಏರಿಸಲಾಗಿತ್ತು. ಮಧ್ಯದಲ್ಲಿರುವ ಶಿಲುಬೆಯೇ ನಿಮ್ಮನ್ನು ನನ್ನನ್ನು ರಕ್ಷಿಸಲು ನೇತಾಡಿದ ಕರ್ತನಾದ ಯೇಸುಕ್ರಿಸ್ತನ ಶಿಲುಬೆ. ಅವರ ಎರಡೂ ಕಡೆಗಳಲ್ಲಿ ಇಬ್ಬರು ಕಳ್ಳರನ್ನು ಹಾಕಿದ್ದರು. ಅವರಲ್ಲಿ ಒಬ್ಬನು ಯೇಸುವನ್ನು ನೋಡಿ ಶಬ್ದವಾಗಿ ಗೇಲಿ ಮಾಡಿದನು. "ನೀನು ದೇವರಾಗಿದ್ದರೆ ಶಿಲುಬೆಯಿಂದ ಇಳಿದು ಬಾ. ನಮ್ಮನ್ನು ಈ ದಂಡನೆಯಿಂದ ಕಾಪಾಡು" ಎಂದನು. ಯೇಸು ಮಾತ್ರ ಏನನ್ನೂ ಮಾತಾಡದೆ ಮೌನವಾಗಿ, ಕೈ ಕಾಲುಗಳಲ್ಲಿ ಇದ್ದ ಗಾಯಗಳ ವೇದನೆಯನ್ನು ಸಹಿಸಿಕೊಂಡಿದ್ದರು.

 

ಆದರೂ ನೋಡು, ಇನ್ನೊಬ್ಬ ಕಳ್ಳನು ಗೇಲಿ ಮಾಡಿದವನನ್ನು ನೋಡಿ, "ನಿನಗೆ ದೇವರ ಭಯವೇ ಇಲ್ಲವೋ? ನಾವಿಬ್ಬರೂ ತಪ್ಪು ಮಾಡಿರುವುದರಿಂದ ದಂಡಿಸಲ್ಪಟ್ಟಿದ್ದೇವೆ. ಆದರೆ ಇವರು ಯಾವ ತಪ್ಪೂ ಮಾಡದೇ ದಂಡಿಸಲ್ಪಡುತ್ತಿದ್ದಾರೆ. ಅವರನ್ನು ಗೇಲಿ ಮಾಡುವುದನ್ನು ನಿಲ್ಲಿಸು" ಎಂದು ಕೋಪದಿಂದ ಹೇಳಿದನು. ಸ್ವಲ್ಪ ಸಮಯದ ಮೌನದ ನಂತರ ಅವನು ಯೇಸುವಿನ ಕಡೆಗೆ ತಿರುಗಿ, ಕಣ್ಣೀರು ತುಂಬಿದ ಕಣ್ಣುಗಳೊಂದಿಗೆ, "ದೇವರೇ ನೀವು ನಿಮ್ಮ ರಾಜ್ಯವನ್ನು ಪಡೆದು ಬರುವಾಗ ನನ್ನನ್ನು ನೆನೆಸಿಕೊಳ್ಳಿರಿ" ಎಂದನು. ಯೇಸಪ್ಪನಿಗೆ ಇವನನ್ನು ಕಂಡು ಬಹಳ ಇಷ್ಟವಾಯಿತು. ಚೆನ್ನಾಗಿ ಗಮನಿಸಿ ಕೇಳಮ್ಮ! ಯೇಸುಕ್ರಿಸ್ತನು ಬಹಳ ಅದ್ಭುತಗಳನ್ನು ಮಾಡಿದಾಗ, ಅಂದರೆ ವ್ಯಾಧಿಗಳನ್ನು ಸ್ವಸ್ಥ ಮಾಡಿ, ಸತ್ತವರನ್ನು ಎಬ್ಬಿಸಿದಾಗ ಕೂಡ ಕೆಲವರು ಅವರನ್ನು ನಂಬಲಿಲ್ಲ. ಆದರೆ ಇಲ್ಲಿ ಬಹು ಮೋಸವಾದ ಅಪರಾಧಿಯಾಗಿದ್ದ ಈ ಕಳ್ಳನು ಯೇಸು ಬಹಳ ಬಲಹೀನವಾದ ಮನುಷ್ಯನಾಗಿ ನೇತಾಡುತ್ತಿದ್ದ ಸಮಯದಲ್ಲಿ ಅವರ ಮೇಲೆ ನಂಬಿಕೆ ಇಟ್ಟನು. ಸೂಪರ್ ಅಲ್ವಾ? ಯೇಸು ಅವನನ್ನು ನೋಡಿ ಇಂದು ನೀನು ನನ್ನೊಂದಿಗೆ ಪರದೈಸಿನಲ್ಲಿ ಇರುತ್ತೀಯ ಎಂದರು. ಹೌದು, ಅವನು ತನ್ನ ಪಾಪಗಳನ್ನೆಲ್ಲಾ ಕ್ಷಮಿಸಲ್ಪಟ್ಟವನಾಗಿ ಜೀವನದ ಕೊನೆಯ ನಿಮಿಷಗಳಲ್ಲಿ ಮಾನಸಾಂತರ ಹೊಂದಿ ಪರಲೋಕಕ್ಕೆ ಹೋಗುವ ಭಾಗ್ಯವನ್ನು ಪಡೆದುಕೊಂಡನು.

 

ಪುಟಾಣಿಗಳೇ, ಇಂದು ಲೋಕದಲ್ಲಿ ಬಹಳ ಜನ ಯೇಸಪ್ಪನನ್ನು ಆಶೀರ್ವಾದಕ್ಕಾಗಿ, ಅವಶ್ಯಕತೆಗಾಗಿ, ಸಮಸ್ಯೆ ನೀಗುವುದಕ್ಕಾಗಿ, ವ್ಯಾಧಿ ಮಾರ್ಪಡಲು ಹುಡುಕುತ್ತಾರೆ. ಆದರೆ ಆ ಕಳ್ಳನು ಇವನ್ನೆಲ್ಲಾ ಕೇಳಲಿಲ್ಲ, ಅವನು ಕೇಳಿದ್ದು ರಕ್ಷಣೆಯನ್ನು ಮಾತ್ರವೇ! ನೀನು ಕೂಡ ಲೋಕದ ಆಶೀರ್ವಾದಕ್ಕಾಗಿ ದೇವರನ್ನು ಹುಡುಕದೆ, ನಿನ್ನ ಜೀವನದಲ್ಲಿ ಯೇಸು ತುಂಬಿರುವಂತೆ ಅವರನ್ನು ಹುಡುಕುವುದಾದರೆ ಬೆಲೆಕಟ್ಟಲಾಗದ ಪರಲೋಕ ಜೀವನಕ್ಕೆ ಸ್ವಂತದವನಾಗುತ್ತೀಯ, ಏನು Ok ನಾ.

- Mrs.ಅನಿತ ಅಲಗರಸಾಮಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin