Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.07.2021 (Bible Characters Special)
Share:

By Village Missionary Movement

Friday, 09-Jul-2021

ಧೈನಂದಿನ ಧ್ಯಾನ(Kannada) – 09.07.2021 (Bible Characters Special)

 

ನವೋಮಿ

 

"ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ” - ಯಾಕೋಬ 1:14

 

ನ್ಯಾಯಾಧಿಪತಿಗಳು ನ್ಯಾಯ ವಿಚಾರಿಸುತ್ತಿದ್ದ ದಿನಗಳಲ್ಲಿ ಇಸ್ರಾಯೇಲ್ ದೇಶದಲ್ಲಿ ಬರಗಾಲ ಉಂಟಾಯಿತು. ಆಗ ರೊಟ್ಟಿಗಳ ಗೃಹವಾದ ಬೇತ್ಲೆಹೇಮಿನಿಂದ, ಎಲೀಮೆಲೆಕನು ತನ್ನ ಹೆಂಡತಿಯಾದ ನವೋಮಿಯನ್ನು ಇಬ್ಬರು ಗಂಡುಮಕ್ಕಳನ್ನು ಕರೆದುಕೊಂಡು ಮೋವಾಬ್ ದೇಶಕ್ಕೆ ಹೋಗಿ ಅಲ್ಲಿ ವಾಸಿಸುತ್ತಿದ್ದರು. ಆ ದಿನಗಳಲ್ಲಿ ಎಲೀಮೆಲೆಕನು ಮರಣಹೊಂದಿದರು. ನಂತರ ತಮ್ಮ ಗಂಡು ಮಕ್ಕಳಿಗೆ ಅದೇ ದೇಶದಲ್ಲಿ ಹೆಣ್ಣು ನೋಡಿ ಮದುವೆ ಮಾಡಿದರು ನವೋಮಿ. ಆ ಇಬ್ಬರು ಮಕ್ಕಳ ಮೇಲೆ ನವೋಮಿ ತುಂಬಾ ಪ್ರೀತಿ ಇಟ್ಟಿದ್ದರು. ಕೆಲ ವರ್ಷಗಳಲ್ಲೇ ಇಬ್ಬರು ಗಂಡು ಮಕ್ಕಳೂ ಸತ್ತು ಹೋದರು. ನವೋಮಿ ಒಂಟಿ ಮರವಾದಳು. ಈಗ ಯೋಚಿಸುತ್ತಿದ್ದಾಳೆ, ಒಂದು ಗಂಡಸಿನ ಜೊತೆ ಇಲ್ಲದೆ ಅನ್ಯ ದೇಶದಲ್ಲಿ ಬದುಕುವುದಕ್ಕಿಂತ ನಮ್ಮ ದೇಶಕ್ಕೆ ಹೋಗುವುದೇ ಒಳ್ಳೆಯದು ಎಂದು ತೀರ್ಮಾನಿಸಿ ಹೊರಟಳು. ಅಲಸ್ಯವಾಗಿ ತೆಗೆದುಕೊಂಡ ತೀರ್ಮಾನವಾದರೂ 10 ವರ್ಷಗಳು ತೆಗೆದುಕೊಳ್ಳದ ಒಂದು ಒಳ್ಳೆಯ ತೀರ್ಮಾನವನ್ನೇ ತೆಗೆದುಕೊಂಡಿದ್ದಾಳೆ. ತನ್ನ ಇಬ್ಬರು ಸೊಸೆಯಂದಿರನ್ನು ಆಶೀರ್ವದಿಸಿ ಮುತ್ತಿಟ್ಟು ಅವರನ್ನು ತಾಯಿ ಮನೆಗೆ ಕಳುಹಿಸುತ್ತಿದ್ದಾಳೆ. ಆದರೆ ಅವರೋ ಹೋಗುವುದಿಲ್ಲ ಎಂದು ಅಳುತ್ತಿದ್ದಾರೆ. ಸೊಸೆಯಂದಿರ ಹೃದಯದಲ್ಲಿ ಅತ್ತೆ ಎಷ್ಟೊಂದು ಸ್ಥಳ ಸಂಪಾದಿಸಿದ್ದಾಳೆ ನೋಡಿರಿ! ಬಹಳ ಬಲವಂತದಿಂದ ಒಬ್ಬಳು ಹೊರಟುಹೋದರೂ ರೂತಳು ನವೋಮಿಯನ್ನು ಬಿಟ್ಟು ಬೇರ್ಪಡದೆ ಬೇತ್ಲೆಹೇಮಿಗೆ ಹೋಗುತ್ತಿದ್ದಾಳೆ.

 

ಬೇತ್ಲೆಹೇಮ್ ಗೆ ಹೋದ ನವೋಮಿ, ಇನ್ನು ನನ್ನನ್ನು (ಇಂಪಾದ ಮಗಳು) ಎಂದು ಕರೆಯದೆ ಮಾರ (ಕಹಿ) ಎಂದು ಕರೆಯಿರಿ, ಸರ್ವಶಕ್ತನು ನನಗೆ ಬಹಳ ಕಹಿಯನ್ನು ಕೊಟ್ಟರು ಎಂದೂ ತನ್ನ ಈ ಸ್ಥಿತಿಗೆ ದೇವರೇ ಕಾರಣ ಎಂದು ಹೇಳುತ್ತಿದ್ದಾಳೆ. ದೇವರ ಮೇಲೆ 4 ಅಪರಾಧಗಳನ್ನು ಹೊರಿಸುತ್ತಿದ್ದಾಳೆ. ದೇವರು ನನಗೆ ಕಹಿಯನ್ನು ಕೊಟ್ಟರು, ನನ್ನನ್ನು ಬರಿದಾಗಿ ತಿರುಗಿ ಬರುವಂತೆ ಮಾಡಿದರು, ನನ್ನನ್ನು ಬಹಳ ಕಷ್ಟ ಪಡಿಸಿದರು, ನನ್ನನ್ನು ಬಹಳ ಅವಮಾನ ಪಡಿಸಿದರು ಎಂದು ಹೇಳಿದಳು. ಆದರೂ ಇವುಗಳಿಗೆಲ್ಲಾ ಕಾರಣ ನವೋಮಿಯೆ ಹೊರತು ದೇವರಲ್ಲ. ಬರಗಾಲವೆಂದು ಹೊರಟುಹೋದವರು ಬರಗಾಲ ತೀರಿದ ಕೂಡಲೇ ಪುನಃ ಬಂದಿರಬಹುದು. ಗಂಡ ಸತ್ತು ಹೋದಾಗಲೂ ಈ ಆಲೋಚನೆ ಬರಲಿಲ್ಲ ಆ ಅನ್ಯ ದೇಶದಲ್ಲಿ ದೇವರನ್ನು ತಿಳಿಯದ ಹೆಣ್ಣುಮಕ್ಕಳನ್ನು ತನ್ನ ಕುಮಾರರಿಗೆ ಹೆಂಡತಿಯರಾಗಿ ಮಾಡಿದಳು. ಹೀಗೆ ತನ್ನ ಇಷ್ಟದಂತೆಯೇ ಎಲ್ಲವನ್ನು ಮಾಡಿದರೂ ದೇವರು ಅವರ ಮೇಲೆ ಕರುಣೆಯುಳ್ಳವರಾಗಿಯೇ ಇದ್ದರು.

 

ಹೀಗೆಯೇ ಇಂದು ಅನೇಕರು ತಮ್ಮ ಜೀವನದಲ್ಲಿ ಸ್ವಂತ ಯೋಚನೆಯಂತೆ ತಪ್ಪಾದ ತೀರ್ಮಾನಗಳನ್ನು ಮಾಡಿಬಿಟ್ಟು ಅದರ ಮುಕ್ತಾಯವು ಘೋರವಾಗಿರುವಾಗ ದೇವರು ನನ್ನನ್ನು ಶೋಧಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ ಎಂದು ಸತ್ಯವೇದವು ಹೇಳುತ್ತಿದೆಯಲ್ಲವೇ! ಆದರೂ ನಮ್ಮ ದೇವರು ಕರುಣೆಯುಳ್ಳವರಾಗಿ ದಿಕ್ಕಿಲ್ಲದವರಿಗೆ ವಿಧವೆಯರಿಗೆ ನ್ಯಾಯ ವಿಚಾರಿಸುವವರು. ರೂತಳಿಗೆ ತನ್ನ ಸಂಬಂಧಿಕನಾದ ಬೋವಜನನ್ನು ವಿವಾಹ ಮಾಡಿ ವಿಧವೆಯ ವಿವಾಹವನ್ನು ನಡೆಸಿಕೊಟ್ಟ ಮೊಟ್ಟ ಮೊದಲ ಮಹಿಳೆಯಾದಳು ನವೋಮಿ. ಅವರಿಗೆ ಹುಟ್ಟಿದ ಓಬೆದನ ಸಂತತಿಯಲ್ಲೇ ಯೇಸುಕ್ರಿಸ್ತನು ಜನಿಸುತ್ತಾರೆ. ಆಹಾ... ಎಂಥಾ ಅದ್ಭುತ! ಮತ್ತಾಯ 1ನೇ ಅಧ್ಯಾಯದಲ್ಲಿರುವ ಯೇಸುಕ್ರಿಸ್ತನ ವಂಶಾವಳಿಯ ಪಟ್ಟಿಯಲ್ಲೇ ಈ ಮೋವಾಬ್ ಸ್ತ್ರೀಯು ಸ್ಥಾನ ಸಂಪಾದಿಸಿ ಬಿಟ್ಟಳು. ನವೋಮಿಯ ಕಹಿಯಾದ ಜೀವನ ಮಾರ್ಪಟ್ಟಿತು. ಹೌದು, ನಮ್ಮ ಸ್ವಂತ ಇಷ್ಟದಂತೆ ಎಲ್ಲಿದ್ದರೂ ಮತ್ತೆ ದೇವರ ಸಂರಕ್ಷಣೆಯ ಸರಹದ್ದಿನೊಳಗೆ ಬಂದು ಬಿಟ್ಟರೆ ನಮ್ಮ ಜೀವನ ಮಧುರವಾಗಿ ಮಾರ್ಪಡುತ್ತದೆ. ಹಲ್ಲೇಲೂಯ!

- Mrs.ಭುವನ ಧನಪಾಲ್

 

ಪ್ರಾರ್ಥನಾ ಅಂಶ:-

ಮಿಷಿನರಿಯ ಹೆಂಡತಿಯಾದ ನಿರೋಷ ರವರಿಗೆ ದೇವರು ಕೊಟ್ಟ ಒಳ್ಳೆಯ ಹೆಣ್ಣು ಮಗುವಿಗಾಗಿ ಕರ್ತನನ್ನು ಸ್ತುತಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al