By Village Missionary Movement
Thursday, 08-Jul-2021ಧೈನಂದಿನ ಧ್ಯಾನ(Kannada) – 08.07.2021 (Bible Characters Special)
ದೆಬೋರಳು
"ನಾನು ಯಾಬೀನನ ಸೇನಾಪತಿಯಾದ ಸೀಸೆರನನ್ನೂ ಅವನ ಸೈನ್ಯರಥಗಳನ್ನೂ ನಿನ್ನ ಬಳಿಗೆ ಕೀಷೋನ್ ಹಳ್ಳಕ್ಕೆ ಎಳೆದುಕೊಂಡು ಬಂದು ನಿನ್ನ ಕೈಗೆ ಒಪ್ಪಿಸುವೆನು..." - ನ್ಯಾಯಸ್ಥಾಪಕರು 4:7
ಇಂದಿನ ಧ್ಯಾನ ಭಾಗದಲ್ಲಿ ದೆಬೋರಳಾದ ನಾನೇ ನಿಮ್ಮೊಂದಿಗೆ ಮಾತನಾಡಲು ಬಂದಿದ್ದೇನೆ. ನಾನೊಂದು ಸತ್ಯವೇದದಮಹಿಳೆ. ದೆಬೋರಳೆಂಬ ನನ್ನ ಹೆಸರಿಗೆ "ಜೇನ್ನೊಣ" ಎಂದರ್ಥ. ನಾನು ಜೇನ್ನೊಣದಂತೆ ಚುರು-ಚುರುಕಾಗಿ ಕಾರ್ಯನಿರ್ವಹಿಸಿದೆನು. ನನ್ನ ಗಂಡ ಲಪ್ಪೀದೋತನು. ನಾವು ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿರುವ ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಒಂದು ಖರ್ಜೂರದ ಮರದ ಕೆಳಗೆ ಜೀವಿಸಿದೆವು.
ಕುಟುಂಬ ಯಜಮಾನಿಯಾದ ನನ್ನ ಜವಾಬ್ದಾರಿಗಳನ್ನು ಕರ್ತವ್ಯಗಳನ್ನು ವೇಗವಾಗಿ ಮುಗಿಸಿ ಪ್ರತಿದಿನವೂ ಖರ್ಜೂರದ ಮರದ ಕೆಳಗೆ ಬಂದು ಆಸೀನಳಾಗುತ್ತಿದ್ದೆನು. ಜನರು ತೆಗೆದುಕೊಂಡು ಬರುತ್ತಿದ್ದ ಒಂದರ ನಂತರ ಒಂದೊಂದು ಸಮಸ್ಯೆಗಳಿಗೂ ದೇವರ ಸಹಾಯದೊಂದಿಗೆ ನ್ಯಾಯ ವಿಚಾರಿಸಿ ತೀರ್ಪು ಕೊಡುತ್ತಿದ್ದೆನು. ಇಸ್ರಾಯೇಲ್ಯರ 16 ನ್ಯಾಯಾಧಿಪತಿಗಳಲ್ಲಿ ನಾನೊಬ್ಬಳೇ ಮಹಿಳೆ. ಸತ್ಯವೇದದಲ್ಲಿ 7 ಜನ ಪ್ರವಾದಿಗಳಲ್ಲಿ ನಾನೂ ಒಬ್ಬಳು. ಯಾಬೀನನೆಂಬ ಕಾನಾನ್ಯ ರಾಜನು 20 ವರ್ಷಗಳಿಂದ ದೇವರ ಮಕ್ಕಳಾದ ನಮ್ಮನ್ನು ಹಿಂಸೆಪಡಿಸಿದನು. ನಾವು ಕರ್ತನನ್ನು ನೋಡಿ ಮೊರೆ ಇಟ್ಟದ್ದರ ನಿಮಿತ್ತವಾಗಿ ಕರ್ತನು ಬಾರಾಕನನ್ನು ಎಬ್ಬಿಸಿದರು. ಆದರೆ ಬಾರಾಕನೋ ಯುದ್ಧಕ್ಕೆ ಭಯಪಟ್ಟು, "ನೀನು ನನ್ನೊಂದಿಗೆ ಬಂದರೇನೆ ನಾನು ಹೋಗುತ್ತೇನೆ" ಎಂದನು. ನಾನೂ ಹೋದೆನು. ನಾವು ಯುದ್ಧದಲ್ಲಿ ಜಯವನ್ನು ಹೊಂದಿದ್ದರಿಂದ ಕರ್ತನನ್ನು ಹಾಡಿ ಸ್ತುತಿಸಿದೆವು. ನನಗೆ ಯಾವಾಗಲೂ ಕರ್ತನನ್ನು ಸ್ತುತಿಸಿ ಹಾಡುತ್ತಲೇ ಇರುವುದೆಂದರೆ ತುಂಬಾ ಇಷ್ಟ.
ನಾನು ಇಸ್ರಾಯೇಲ್ಯರ ನ್ಯಾಯಾಧಿಪತಿಯಾಗಿದ್ದ ದಿನಗಳಲ್ಲಿ 40 ವರ್ಷಗಳು ದೇಶವು ಸಮಾಧಾನವಾಗಿತ್ತು. ನಾನು ಜನರ ಕ್ಷೇಮಕ್ಕಾಗಿ ಸಮಾಜಕ್ಕೆ ಹಲವು ಒಳ್ಳೆಯ ಕಾರ್ಯಗಳನ್ನು ಮಾಡಲು ದೇವರು ನನ್ನ ಕೈಗಳನ್ನು ಬಲಪಡಿಸಿದರು. ಬಹು ಘೋರ ಅಧಿಕಾರಿಯಾಗಿದ್ದ ಯಾಬೀನನಿಗೆ ಭಯಪಟ್ಟು ಜನರು ಗ್ರಾಮಗಳನ್ನು ಬಿಟ್ಟು ಓಡಿ ಹೋದರು. ಅವರನ್ನು ಮತ್ತೆ ಕರೆದುಕೊಂಡು ಬಂದು ಅವರವರ ಗ್ರಾಮಗಳಲ್ಲಿ ವಾಸಿಸುವಂತೆ ಮಾಡಿದೆನು. ದೇವರ ಬಲದಿಂದ ಹೀಗೆ ಅನೇಕ ಒಳ್ಳೆಯ ಕಾರ್ಯಗಳನ್ನು ಜನರಿಗೆ ಮಾಡಿದ್ದರಿಂದ ಅವರು ನನ್ನನ್ನು ತಾಯಾದ ದೆಬೋರಳು ಎಂದು ಕರೆದರು.
ನನ್ನ ಸಹೋದರ ಸಹೋದರಿಯರೇ! ನೀವೂ ದೇವರಿಗಾಗಿ ಕಾರ್ಯಮಾಡಲು ಎದ್ದೇಳಿರಿ. ಪರಿಸ್ಥಿತಿಗಳು ಅನುಕೂಲವಾಗಿಲ್ಲ ಎನ್ನುತ್ತೀರಾ? ನನ್ನ ಜೀವನದಲ್ಲಿಯೂ ಅನಾನುಕೂಲವಾದ ಪರಿಸ್ಥಿತಿಗಳೇ ಇದ್ದವು. ಕುಟುಂಬದ ಜವಾಬ್ದಾರಿಗಳು ಪ್ರತಿದಿನದ ಕರ್ತವ್ಯಗಳು ನನಗೂ ಇದ್ದವು. ಅವುಗಳನ್ನು ಯೋಜನೆ ಹಾಕಿ ಮಾಡಿ ಮುಗಿಸುತ್ತಾ ದೇವರಿಗಾಗಿ ಎದ್ದು ಪ್ರಕಾಶಿಸಲು ವೈರಾಗ್ಯದಿಂದಿದ್ದೆನು. ದೇವರಿಗಾಗಿ ಎದ್ದೇಳುವ ಪ್ರತಿಯೊಬ್ಬರು ಸಾಧಿಸದೆ ಕುಗ್ಗಿ ಹೋಗುವುದಿಲ್ಲ. ಬಲಹೀನ ಪಾತ್ರವಾಗಿರುವ ಮಹಿಳೆಯರನ್ನು ದೇವರು ತಮ್ಮ ಚಿತ್ತದಂತೆ ಉಪಯೋಗಿಸುತ್ತಾರೆ ಎಂಬುದು ನಿಶ್ಚಯ. ಹೌದು, ನಿಮ್ಮ ಮೂಲಕ ಸುತ್ತಲಿರುವ ಗ್ರಾಮಗಳಿಗೆ ರಕ್ಷಣೆಯನ್ನು ನೀಡುವಂತೆ ದೇವರು ಸಿದ್ದರಾಗಿದ್ದಾರೆ. ಎದ್ದೇಳುತ್ತೀರಾ? ಇಸ್ರಾಯೇಲ್ಯರಿಗೆ ತಾಯಾಗಿ ಎದ್ದೇಳಿದ ನಾನು, ಭಾರತಕ್ಕೆ ತಾಯಾಗಿ ನೀವು ಮಾರ್ಪಡಬೇಕೆಂದು ಹಾರೈಸಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೇನೆ.
- Mrs. ಜೆಬಾ ಡೇವಿಡ್ ಗಣೇಸನ್
ಪ್ರಾರ್ಥನಾ ಅಂಶ:-
Lock down ಕಾರಣದಿಂದ ಶಾಲೆಗೆ ಹೋಗದೆ ಮನೆಗಳಲ್ಲಿರುವ ಮಕ್ಕಳ ಸಂರಕ್ಷಣೆ ಮತ್ತು ಭವಿಷ್ಯಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482