Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.07.2021 (Bible Characters Special)
Share:

By Village Missionary Movement

Wednesday, 07-Jul-2021

ಧೈನಂದಿನ ಧ್ಯಾನ(Kannada) – 07.07.2021 (Bible Characters Special)

 

ಕಾಲೇಬನು

 

"...ನಾವು ನಿರ್ಭಯವಾಗಿ ಆ ಬೆಟ್ಟದ ಸೀಮೆಗೆ ಹತ್ತಿಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳೋಣ; ಅದನ್ನು ಜಯಿಸಬಲ್ಲೆವು..." - ಅರಣ್ಯಕಾಂಡ 13:30

 

ಕಾನಾನ್ ದೇಶವು-

ಇಸ್ರಾಯೇಲ್ಯರಿಗೆ ವಾಗ್ದಾನ ಮಾಡಲ್ಪಟ್ಟ ಹಾಲು ಜೇನು ಹರಿಯುವ ಒಳ್ಳೆಯ ದೇಶ. ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆ 12 ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನು ಕಳಿಸುತ್ತಾರೆ. ಅವರಲ್ಲಿ 10 ಜನರು ತಿರುಗಿ ಬಂದು "ಅವರು ಉನ್ನತ ಪುರುಷರು, ನಾವೋ ಮಿಡತೆಗಳಂತಿದ್ದೇವೆ" ಎಂದು ಕೆಟ್ಟ ಸುದ್ದಿಯನ್ನು ಹರಡಿದರು. ಈ 10 ಜನರು ತಮ್ಮನ್ನು ಅವರೊಂದಿಗೆ ಹೋಲಿಸಿ ನೋಡಿ ಭಯಪಟ್ಟರು. ಆದರೆ ಯೆಹೋಶುವನು, ಕಾಲೇಬನು ತಮ್ಮನ್ನಲ್ಲ, ತಮ್ಮೊಳಗಿರುವ ದೇವರೊಂದಿಗೆ ಅವರನ್ನು ಹೋಲಿಸಿ ನೋಡಿ, "ಕರ್ತನು ನಮ್ಮೊಂದಿಗಿದ್ದಾರೆ. ನಾವು ಭಯಪಡಬೇಕಾದ ಅವಶ್ಯಕತೆ ಇಲ್ಲ, ಸುಲಭವಾಗಿ ಸ್ವತಂತ್ರಿಸಿಕೊಳ್ಳಬಹುದು" ಎಂದರು. ಇಂತಹ ನಂಬಿಕೆಯ ವೀರರಲ್ಲಿ ಒಬ್ಬನಾದ ಕಾಲೇಬನ ಬಗ್ಗೆ ಇನ್ನೂ ಕೆಲವು ಕಾರ್ಯಗಳನ್ನು ತಿಳಿದುಕೊಳ್ಳೋಣವಾ?

 

ಕಾಲೇಬನ ಬಗ್ಗೆ ಸತ್ಯವೇದವು ಮತ್ತೆ ಮತ್ತೆ ಹೇಳುತ್ತಿರುವ ಶ್ರೇಷ್ಠವಾದ ಸಾಕ್ಷಿ, "ಅವರು ಕರ್ತನನ್ನು ಉತ್ತಮವಾಗಿ ಹಿಂಬಾಲಿಸುತ್ತಿದ್ದರು" ಎಂಬುದೇ! ಹೌದು, ಅವರು ಕರ್ತನನ್ನು ಉತ್ತಮವಾಗಿ ಹಿಂಬಾಲಿಸಿದ್ದೇ ದೇವರ ಮೇಲೆ ಅಲುಗಾಡಿಸಲು ಸಾಧ್ಯವಿಲ್ಲದ ನಂಬಿಕೆ ರೂಪಗೊಳ್ಳಲು ಸಾಧ್ಯವಾಯಿತು. ಇಸ್ರಾಯೇಲ್ಯರೆಲ್ಲರು ದೇವರ ಅದ್ಭುತವಾದ ನಡೆಸುವಿಕೆಯಡಿಯಲ್ಲಿ ಇದ್ದವರೇ. ಆದರೂ ಸ್ವಾಧೀನ ಪಡಿಸಿಕೊಳ್ಳುವವರಿಗೇ ಇಲ್ಲದ ನಂಬಿಕೆ ಇವರಿಗೆ ಬರಲು ಕಾರಣವೇನು? ದೇವರೊಂದಿಗಿರುವ ಉತ್ತಮವಾದ ಸಂಬಂಧ, ಉತ್ತಮವಾದ ಹೃದಯವೇ ದೇವರ ಶಕ್ತಿಯನ್ನು ಸರಿಯಾಗಿ ತಿಳಿದುಕೊಳ್ಳವಂತಹ ಬೆಳಕನ್ನು ಅವರಿಗೆ ಕೊಟ್ಟಿತು. "ದೇವರು ಕಾನಾನನ್ನು ನಮಗೆ ಕೊಡುತ್ತೇನೆಂದು ಹೇಳಿಬಿಟ್ಟರು. ಆದ್ದರಿಂದ ಮಾಡದೆ ಇರುತ್ತಾರೋ? ಇಸ್ರಾಯೇಲ್ ದೇವರಿಗೆ ಕಠಿಣವಾದದ್ದು ಯಾವುದಾದರೂ ಉಂಟೋ?"ಎಂದು ಕರ್ತನು ಹೇಳಿದ್ದನ್ನು ಹಾಗೆಯೇ ನಂಬುವುದು ಸುಲಭವಾಗಿದ್ದರೂ ಅಮೂಲ್ಯವಾದ ನಂಬಿಕೆಯುಳ್ಳವರಾಗಿದ್ದರು. 85 ನೇ ವಯಸ್ಸಿನಲ್ಲಿ 40 ನೇ ವರ್ಷದಲ್ಲಿದ್ದ ಬಲವನ್ನು ಹೊಂದಿದ್ದರು. ಮೋಶೆಯ ಬಳಿ ಬೆಟ್ಟದ ಸೀಮೆಯನ್ನು ಕೊಡಿ ಎಂದು ಕೇಳಿ ಪಡೆದುಕೊಂಡರು.

 

ಪ್ರಿಯರೇ! ನಮ್ಮ ಭಾರತ ದೇಶವನ್ನು ಖಂಡಿತವಾಗಿ ಸ್ವತಂತ್ರಿಸಿಕೊಳ್ಳುತ್ತೇವೆ ಎಂಬ ನಂಬಿಕೆಯು ನಮಗುಂಟಾ? ಅಥವಾ ಅಧಿಕಾರವನ್ನು ಅಧಿಕಾರಿಗಳನ್ನು, ಕಾನೂನನ್ನು, ವಿರೋಧಿಗಳನ್ನು ಕಂಡು ಇವರು ನಮಗಿಂತ ಬಲಿಷ್ಠರು. ನಾವು ಬಹಳ ಬಲಹೀನರು, ಮಿಡತೆಗಳಂತಿದ್ದೇವೆಂದು ನೆನೆಸುತ್ತಿದ್ದೀರಾ? ನಾವು ಪ್ರತಿಯೊಂದು ದಿನವೂ ಉತ್ತಮವಾದ ಹೃದಯದೊಂದಿಗೆ ದೇವರನ್ನು ಹಿಂಬಾಲಿಸುವವರಾಗಿದ್ದರೆ ಖಂಡಿತವಾಗಿ ಕಾಲೇಬನೊಳಗಿದ್ದ ಅಲುಗಾಡಿಸಲು ಸಾಧ್ಯವಿಲ್ಲದ ವೈರಾಗ್ಯವು ನಂಬಿಕೆಯು ನಮ್ಮೊಳಗೂ ಇರುತ್ತದೆ. ದೇವರು ಯಾರೆಂದು ಅವರಿಂದ ಮಾಡಲಾಗದ ಅತಿಶಯವಾದ ಕಾರ್ಯಗಳು ಒಂದೂ ಇಲ್ಲ ಎಂಬುದರ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯು ನಮಗಿದ್ದರೆ "ಸುಲಭವಾಗಿ ಜಯಿಸಬಹುದು" ಎಂಬ ನಂಬಿಕೆಯನ್ನು ನಮಗೆ ಕೊಡುತ್ತದೆ. ಹೌದು, ಪರಿಸ್ಥಿತಿಗಳನ್ನಲ್ಲ, ಸುತ್ತಲಿರುವ ಮನುಷ್ಯರೂ ಅಲ್ಲ, ನಮ್ಮೊಳಗಿರುವ ಸರ್ವಶಕ್ತನಾದ ದೇವರನ್ನೇ ದೃಷ್ಟಿಸಿ ನೋಡೋಣ. ಬಹಳ ಸುಲಭವಾಗಿ ನಮ್ಮ ದೇಶವನ್ನು ಕ್ರಿಸ್ತನಿಗೆ ಸ್ವಂತ ಮಾಡಿಕೊಳ್ಳೋಣ. ಪರಲೋಕವನ್ನು ಭಾರತದವರು ತುಂಬಿಸುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.

- Bro. ಡೇವಿಡ್ ತವಮಣಿ

 

ಪ್ರಾರ್ಥನಾ ಅಂಶ:-

ನಮ್ಮ ಗೆತ್ಸೇಮನೆ ಕ್ಯಾಂಪಸ್ ನಲ್ಲಿ ನಡೆಯುತ್ತಿರುವಂತಹ ಕಟ್ಟಡದ ಕೆಲಸಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino