Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.07.2021 (Bible Characters Special)
Share:

By Village Missionary Movement

Tuesday, 06-Jul-2021

ಧೈನಂದಿನ ಧ್ಯಾನ(Kannada) – 06.07.2021 (Bible Characters Special)

 

ಯೋಕೆಬೆದಳು

 

"...ನೀನು ಈ ಮಗುವನ್ನು ತೆಗೆದುಕೊಂಡು ಹೋಗಿ ನನಗೋಸ್ಕರ ಸಾಕಮ್ಮಾ;..." - ವಿಮೋಚನಾ. 2:9

 

ಕಾನಾನಿನಲ್ಲಿ ತುಂಬಾ ಬರಗಾಲವಿದ್ದ ಕಾಲದಲ್ಲಿ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಯೋಸೇಫನ ಮೂಲಕ ಐಗುಪ್ತಕ್ಕೆ ಕರೆತರಲ್ಪಟ್ಟ ಯಾಕೋಬನ ಕುಟುಂಬದವರಲ್ಲಿ ಲೇವಿಯು ಒಬ್ಬನು. ಲೇವಿಗೆ ವಯಸ್ಸಾದ ಕಾಲದಲ್ಲಿ ಹುಟ್ಟಿದ ಮಗಳೇ ಯೋಕೆಬೆದಳು. ಯೋಕೆಬೆದಳು ಎಂದರೆ, "ಯೆಹೋವನ ಮಹಿಮೆ" ಎಂದರ್ಥ. ಇವಳ ಗಂಡ ಅಮ್ರಾಮನು. ಈ ದಂಪತಿಗಳಿಗೆ ಹುಟ್ಟಿದ ಮಕ್ಕಳೇ ಆರೋನನು, ಮಿರ್ಯಾಮಳು, ಮೋಶೆ (ವಿಮೋಚನಾ.6:20). ಮೂರನೆಯ ಮಗು ಯೋಕೆಬೆದಳ ಗರ್ಭದಲ್ಲಿರುವಾಗಲೇ, ಐಗುಪ್ತದ ಅರಸನು ಹುಟ್ಟುವ ಎಲ್ಲಾ ಗಂಡುಮಕ್ಕಳನ್ನು ತಕ್ಷಣ ಸಾಯಿಸಬೇಕೆಂದು ಆಜ್ಞೆ ಕೊಟ್ಟನು. ಇಂತಹ ಘೋರವಾದ ಸಮಯದಲ್ಲಿ ಮತ್ತೊಂದು ಮಗುವಾ? ನಮಗೇನು ಒಂದು ಗಂಡು ಒಂದು ಹೆಣ್ಣು ಇದೆಯಲ್ಲವೇ, ಹೋದರೆ ಹೋಗಲಿ ಎಂದು ಸಾಮಾನ್ಯವಾಗಿ ನೆನೆಸಲಿಲ್ಲ. ಮೋಶೆಯನ್ನು ಮೂರು ತಿಂಗಳು ಬಚ್ಚಿಟ್ಟು ನಂತರ ಬಚ್ಚಿಡಲು ಸಾಧ್ಯವಿಲ್ಲದ ಕಾರಣ, ದೇವರ ಮೇಲೆ ನಂಬಿಕೆ ಇಟ್ಟು ಮೊಸಳೆಗಳು ತುಂಬಿರುವ ನೈಲ್ ನದಿಯೊಳಗೆ ಆಪಿನ ಪೆಟ್ಟಿಗೆಯಲ್ಲಿ ಇಟ್ಟು ಕಳುಹಿಸಿದಳು. ಹೌದು, ಸಮಸ್ಯೆಗಳನ್ನು ಎದುರುಗೊಳ್ಳುವ ನಂಬಿಕೆ ಭಯವನ್ನು ತೊಲಗಿಸುವ ನಂಬಿಕೆ, ವಿಧೇಯಳಾಗುವ ನಂಬಿಕೆ ಯೋಕೆಬೆದಳ ಬಳಿ ಕಾಣಲ್ಪಟ್ಟಿತು.

 

ಫರೋಹನ ಕುಮಾರ್ತೆಯ ಮೂಲಕ ಸಂಬಳದೊಂದಿಗೆ ಪುನಃ ಮೋಶೆಯನ್ನು ಬೆಳೆಸುವ ಅವಕಾಶ ಸಿಕ್ಕಿತು. ನಂಬಿದವರನ್ನು ದೇವರು ಬಿಟ್ಟು ಬಿಡುತ್ತಾರೋ? ಮಕ್ಕಳು ದೇವರು ನಮಗೆ ಕೊಟ್ಟಿರುವ ಬಹುಮಾನವಲ್ಲವೇ? ಅವರಿಗೆ ಹಣ ಖರ್ಚು ಮಾಡುವುದಕ್ಕಿಂತ ಮುಖ್ಯವಾಗಿ ಸಮಯವನ್ನು ಖರ್ಚು ಮಾಡಬೇಕು. ಅವಳು ತನ್ನ ಮಗನಿಗೆ ಹಾಲುಣಿಸಿ ಬೆಳೆಸಿದಳು ಎಂಬುದಕ್ಕಿಂತ ಜೀವ ಸ್ವರೂಪನಾದ ದೇವರ ಜ್ಞಾನದಿಂದ ಬೆಳೆಸಿರುತ್ತಾಳೆ. ಆದ್ದರಿಂದಲೇ ಮೋಶೆ ಅರಮನೆಯ ಆಡಂಬರಕ್ಕಿಂತ, ದೇವರ ಚಿತ್ತವನ್ನು ತಿಳಿದುಕೊಳ್ಳುವುದರಲ್ಲಿಯು, ಪಾಪದ ಸಂತೋಷವನ್ನು ಅನುಭವಿಸುವುದಕ್ಕಿಂತಲೂ, ಪಾಡುಗಳನ್ನು ಅನುಭವಿಸುವುದನ್ನು ಆರಿಸಿಕೊಂಡರು. ಸತ್ಯವೇದದಲ್ಲಿ ಮೊದಲು ಐದು ಪುಸ್ತಕಗಳನ್ನು ಬರೆದ ಮೋಶೆಗೆ ಎಲ್ಲಿಂದ ದೇವರ ಜ್ಞಾನ ಬಂದಿರುತ್ತದೆ.

 

ಪ್ರತಿಯೊಂದು ತಾಯಿ ತನ್ನ ಮಕ್ಕಳನ್ನು ರೂಪಿಸುವ ಕವಿತೆ. "ತಾಯಿಯ ಮಡಿಲು ಮಗುವಿಗೆ ಶ್ರೇಷ್ಠವಾದ ಪಾಠಶಾಲೆ" ಪ್ರೀತಿಯ ತಂದೆ-ತಾಯಿಯರೇ ನಿಮ್ಮ ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೀರಾ? ಯೋಕೆಬೆದಳಂತೆ ನಾವೂ ಕೂಡ ನಮ್ಮ ಮಕ್ಕಳಿಗೆ ದೇವರ ಜ್ಞಾನವನ್ನು ಕಲಿಸುತ್ತಿದ್ದೇವಾ? ಯೋಕೆಬೆದಳು ತನ್ನ ಮಕ್ಕಳನ್ನು ಬೆಳೆಸಿದ ವಿಧಾನವನ್ನು ನೋಡಿರಿ. ಮಿರ್ಯಾಮಳು ಒಂದು ಅತ್ಯುತ್ತಮವಾದ ಗಾಯಕಿ, ಪ್ರವಾದಿನಿ, ಆರಾಧನೆ ನಡೆಸುವ ವ್ಯಕ್ತಿಯಾಗಿದ್ದಳು. ಆರೋನನು ಇಸ್ರಾಯೇಲ್ಯರ ಮೊದಲ ಪ್ರಧಾನ ಮಂತ್ರಿ. ಮೋಶೆ ಇಸ್ರಾಯೇಲ್ ಜನರನ್ನು ಐಗುಪ್ತದಿಂದ ಕಾನಾನಿಗೆ ನಡೆಸುವ ಶಾಂತವುಳ್ಳ ನಾಯಕನು. ಶತ್ರುವಾದ ಫರೋಹನ ಕೈಗಳಲ್ಲಿ ದಾಸರಾಗಿದ್ದ ದೇವರ ಪ್ರಜೆಗಳನ್ನು ಬಿಡಿಸುವುದಕ್ಕೆ ಮೋಶೆ ಉಪಯೋಗವಾದನು. ನಿತ್ಯ ನರಕಾಗ್ನಿಗೆ ಹೊರಟು ಹೋಗುತ್ತಿರುವ ಆತ್ಮಗಳನ್ನು ತಪ್ಪಿಸಲು ದೇವರು ಉಪಯೋಗಿಸುವ ಮಕ್ಕಳಾಗಿ ಇಂದು ನಿಮ್ಮ ಮಕ್ಕಳು ಇರಬಹುದೇನೋ ಯಾರಿಗೆ ಗೊತ್ತು. ನಂಬಿಕೆಯುಳ್ಳ ಒಂದು ತಾಯಾಗಿ ನಮ್ಮ ಕೈಗಳಲ್ಲಿ ಕೊಡಲ್ಪಟ್ಟ ಮಕ್ಕಳನ್ನು ಬೆಳೆಸಲು ಕರ್ತನು ತಾನೇ ನಮಗೆ ಕೃಪೆ ತೋರಿಸಲಿ!

- Mrs. ಜೆಬಾ ಡೇವಿಡ್ ಗಣೇಸನ್

 

ಪ್ರಾರ್ಥನಾ ಅಂಶ:-

ಮಧ್ಯಪಾನಕ್ಕೆ ದಾಸರಾಗಿರುವ ಜನರು ಬಿಡುಗಡೆ ಹೊಂದಲು ಪ್ರಾರಂಭಿಸಿರುವ Peace centre- ಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino