Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.07.2021 (Bible Characters Special)
Share:

By Village Missionary Movement

Monday, 05-Jul-2021

ಧೈನಂದಿನ ಧ್ಯಾನ(Kannada) – 05.07.2021 (Bible Characters Special)

 

ಇಸಾಕನು

 

“ಇಸಾಕನು... ರೆಬೆಕ್ಕಳನ್ನು... ಪ್ರೀತಿಮಾಡಿದನು” - ಆದಿಕಾಂಡ 24:67

 

ನಮ್ಮ ಮೂಲ ಪಿತೃ ವಾದ ಅಬ್ರಹಾಮ-ಸಾರ ದಂಪತಿಗಳಿಗೆ ವಯಸ್ಸಾದ ಕಾಲದಲ್ಲಿ ಹುಟ್ಟಿದ ಮಗನೇ ಇಸಾಕನು. ಇವರ ವಿವಾಹಕ್ಕೆ ಮುಂಚೆಯೇ ಅವರ ತಾಯಿ ಮರಣಹೊಂದಿದರು. 40 ನೇ ವಯಸ್ಸಿನಲ್ಲಿ ಮದುವೆ ಮಾಡಿಕೊಂಡು ತನ್ನ ಹೆಂಡತಿಯಾದ ರೆಬೆಕ್ಕಳನ್ನು ಬಹಳವಾಗಿ ಪ್ರೀತಿಸಿದರು. ಇವರ ಕುಟುಂಬ ಜೀವನದಿಂದ ನಾವು ಕಲಿತುಕೊಳ್ಳಬೇಕಾದ ಕಾರ್ಯಗಳನ್ನು, ಬಿಟ್ಟು ಬಿಡಬೇಕಾದ ಕಾರ್ಯಗಳನ್ನು ಸ್ವಲ್ಪ ತಿರುಗಿ ನೋಡೋಣವಾ?

 

ಕಲಿತುಕೊಳ್ಳ ಬೇಕಾದವುಗಳು:

ಇಸಾಕನು ಒಬ್ಬ ಪ್ರಾರ್ಥಿಸುವ ವ್ಯಕ್ತಿಯಾಗಿದ್ದರು. ವಿವಾಹಕ್ಕಿಂತ ಮುಂಚೆ ಒಬ್ಬ ಯೌವನಸ್ಥನಾಗಿದ್ದ ದಿನಗಳಲ್ಲಿ ಸಂಜೆ ವೇಳೆಯಲ್ಲಿ ಧ್ಯಾನ ಮಾಡಲು ಹೊರಗೆ ಹೋಗುತ್ತಿದ್ದರು. (ಆದಿಕಾಂಡ 24:3) ಪ್ರತಿದಿನವೂ ಅವರ ಪ್ರಾರ್ಥನಾ ಜೀವಿತವು ಬೆಳೆದು ಅಭಿವೃದ್ಧಿಯಾಯಿತು. ಇವರಿಗೆ 10 ವರ್ಷ ಮಕ್ಕಳಿರಲಿಲ್ಲ. ಆದರೂ ಹೆಂಡತಿಯ ಮೇಲೆ ಕೊರತೆ ಹೇಳಲಿಲ್ಲ, ಮತ್ತೊಬ್ಬರ ಬಳಿ ತಮ್ಮ ಕುಟುಂಬದ ಕೊರತೆಯ ಬಗ್ಗೆ ಮಾತನಾಡಲೂ ಇಲ್ಲ, ಬದಲಾಗಿ ಬಂಜೆಯಾಗಿದ್ದ ತನ್ನ ಹೆಂಡತಿಗಾಗಿ ಕರ್ತನನ್ನು ನೋಡಿ ವಿಜ್ಞಾಪನೆ ಮಾಡಿದರು (ಆದಿ.25:21) ಕರ್ತನು ಪ್ರಾರ್ಥನೆಯನ್ನು ಕೇಳಿದರು. ಹೌದು, ನಮ್ಮ ಕುಟುಂಬ ಜೀವನದಲ್ಲಿಯೂ ಗಂಡ- ಹೆಂಡತಿಯ ನಡುವೆ ಸ್ನೇಹಿತರೋ, ಬಂಧುಗಳೋ, ನಿಮ್ಮ ಹೆತ್ತವರೋ ಯಾರೂ ಕೂಡ ನುಗ್ಗಬಾರದು‌. ದೇವರ ಬಳಿ ಮಾತ್ರವೇ ಅದನ್ನು ತಿಳಿಯಪಡಿಸಬೇಕು. ನಮ್ಮಲ್ಲಿ ಎಷ್ಟು ಜನರು ಹೆಂಡತಿಯನ್ನು, ಗಂಡನನ್ನು ವಿವಾಹವಾದ ದಿನದಲ್ಲಿದ್ದಹಾಗೆ ಇಂದಿನವರೆಗೂ ಪ್ರೀತಿಸುತ್ತಿದ್ದೇವೆ. ಹೆಂಡತಿಗೆ ಗರ್ಭಫಲವಿಲ್ಲದೇ ಇರಬಹುದು, ಬಲಹೀನತೆ ಇರಬಹುದು ಅಥವಾ ಗಂಡನಿಗೆ ನಿರಂತರವಾಗಿ ಕೆಲಸವಿಲ್ಲದೆ ಇರಬಹುದು ಆದರೂ ದೇವರು ಕೊಟ್ಟ ಬಾಳಸಂಗಾತಿಯನ್ನು ಅಂತರಾಳದಿಂದ ಪ್ರೀತಿಸುತ್ತಿದ್ದೇವಾ ಎಂದು ಯೋಚಿಸೋಣ. ಅದಲ್ಲದೆ ಇಸಾಕನು ಹೆಂಡತಿಯೊಂದಿಗೆ ಸಮಯ ಕಳೆದನು. ಈ ದಿನಗಳಲ್ಲಿ ನಮ್ಮ ಸಮಯವನ್ನು ನುಂಗಲು ಅನೇಕ ಕಾರ್ಯಗಳು ಕಾದಿವೆ. T.V., ಮೊಬೈಲ್, ನ್ಯೂಸ್ ಪೇಪರ್ ಇವುಗಳಲ್ಲಿ ಮುಳುಗಿ ಹೋಗುತ್ತಿರುವ ಗಂಡಂದಿರೂ ಉಂಟು. ನಿಮ್ಮ ಶರೀರದ ಅರ್ಧಾಂಗಿಯಾದ ಬಾಳಸಂಗಾತಿಯೊಂದಿಗೆ ಸಮಯವನ್ನು ಕಳೆಯಿರಿ. ಅದೇ ಕುಟುಂಬವೆಂಬ ಕಟ್ಟಡವನ್ನು ಬಲವಾಗಿ ಹಿಡಿದುಕೊಳ್ಳುವ ಆಧಾರಸ್ತಂಭವಾಗಿದೆ.

 

 

ಬಿಟ್ಟು ಬಿಡಬೇಕಾದ ಕಾರ್ಯಗಳು:

ಈ ದಂಪತಿಗಳು ಮಕ್ಕಳನ್ನು ಬೆಳೆಸುವಲ್ಲಿ ಪಕ್ಷಪಾತವಾಗಿ ನಡೆದುಕೊಂಡರು. ಏಶಾವನು ಅಪ್ಪನ ಮಗ, ಯಾಕೋಬನು ಅಮ್ಮನ ಮಗ ಎಂದು ಅವರೊಳಗೇ ಭೇದಗಳಿದ್ದವು. ಇದರ ನಿಮಿತ್ತವಾಗಿ ಕುಟುಂಬದಲ್ಲಿ ದೊಡ್ಡ ಬೇರ್ಪಡುವಿಕೆ ಉಂಟಾಯಿತು. ನಾವು ನಮ್ಮ ಮಕ್ಕಳೆಲ್ಲರನ್ನು ಒಂದೇ ರೀತಿಯಾಗಿ ಪ್ರೀತಿಸೋಣ. 5 ಬೆರಳುಗಳು ಒಂದೇ ರೀತಿ ಇರುವುದಿಲ್ಲ ಅದರಂತೆ ಮಕ್ಕಳು ಒಬ್ಬೊಬ್ಬರು ಒಂದೊಂದು ವಿಧವಾಗಿ ಇರುವುದು ಸಾಮಾನ್ಯ. ಆದರೂ ಅವರನ್ನು ಸಮಾನವಾಗಿ ಪ್ರೀತಿಸಿ, ಆಶೀರ್ವಾದಗಳನ್ನು ಸರಿಸಮವಾಗಿ ಹಂಚಿ ಕೊಡುವುದೇ ನಮ್ಮ ಕುಟುಂಬಕ್ಕೆ ಆಶೀರ್ವಾದ! ನಮ್ಮ ಕುಟುಂಬ ಆಶೀರ್ವದಿಸಲ್ಪಡಲು, ಪ್ರೀತಿ ತುಂಬಿ ಹರಿಯಲು ದೇವರು ಸಹಾಯ ಮಾಡಲಿ.

- Mrs. ಅಗತಾ ಸಮುವೇಲ್

 

ಪ್ರಾರ್ಥನಾ ಅಂಶ:-

ನಮ್ಮ ಸೇವೆಯನ್ನು ಪ್ರಾರ್ಥನೆಯಿಂದಲೂ, ಕಾಣಿಕೆಗಳಿಂದಲೂ ಬೆಂಬಲಿಸುತ್ತಿರುವ ಪಾಲುದಾರರ ಕುಟುಂಬಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet