By Village Missionary Movement
Sunday, 04-Jul-2021ಧೈನಂದಿನ ಧ್ಯಾನ(Kannada) – 04.07.2021 (Bible Characters Special)
ಬೆಟ್ಟದಲ್ಲಿ ನಡೆದ ಅದ್ಭುತ
"...ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು." - 2 ಕೊರಿಂಥ 9:7
ಅದೊಂದು ಅರಣ್ಯ ಸ್ಥಳ. ಅಲ್ಲಿ ಗುಂಪುಗುಂಪಾಗಿ ಜನರು ಕುಳಿತು ಬಹಳ ಗಮನವಿಟ್ಟು ಯೇಸಪ್ಪನ ಸಂದೇಶಗಳನ್ನು ಕೇಳುತ್ತಿದ್ದರು. ಅಲ್ಲಿದ್ದ ಒಂದು ಪುಟ್ಟ ಬೆಟ್ಟದ ಮೇಲೆ ನಮ್ಮ ಜೀಸಸ್ ಕುಳಿತು ಮನಮರುಗಿ ಜನರ ಬಳಿ ಮಾತಾಡುತ್ತಿದ್ದರು. ಚಿಕ್ಕಮಕ್ಕಳು ಕೂಡ ಯಾವುದೇ ರೀತಿಯ ತೀಟೆ ಮಾಡದೆ ಬಹಳ ಗಮನವಿಟ್ಟು ಯೇಸಪ್ಪನ ಬಾಯನ್ನೇ ನೋಡುತ್ತಿದ್ದರು. ಸಮಯ ಕಳೆಯುತ್ತಾ ಕಳೆಯುತ್ತಾ ಎಲ್ಲರಿಗೂ ಹೊಟ್ಟೆ ಹಸಿವಾಗಲು ಪ್ರಾರಂಭಿಸಿತು. ಪುಟಾಣಿಗಳೆಲ್ಲರೂ ಸ್ವಲ್ಪ ಸಿಡುಕಲು ಪ್ರಾರಂಭಿಸಿದರು.
ಆಗ ಯೇಸಪ್ಪ ತಮ್ಮ ಶಿಷ್ಯರಲ್ಲಿ ಒಬ್ಬರಾಗಿದ್ದ ಫಿಲಿಪ್ಪನನ್ನು ಕರೆದು "ಇವರಿಗೆಲ್ಲಾ ಆಹಾರ ಕೊಡಬೇಕು. ಎಲ್ಲಿಂದ ರೊಟ್ಟಿಗಳನ್ನು ತೆಗೆದುಕೊಳ್ಳೋಣ?" ಎಂದು ಕೇಳಿದರು. "ದೇವರೇ, ಐದು ಸಾವಿರಕ್ಕೂ ಹೆಚ್ಚು ಜನರಿದ್ದಾರೆ, 200 ರೂಪಾಯಿಗಳಿಗೆ ತೆಗೆದುಕೊಂಡು ಬಂದರು ಸಾಕಾಗುವುದಿಲ್ಲ" ಎಂದರು ಫಿಲಿಪ್ಪನು.ಆಗ ಅಂದ್ರೆಯ ಅಣ್ಣನವರು ಗುಂಪಿನ ಮಧ್ಯದಿಂದ ಒಬ್ಬ ಚಿಕ್ಕ ಹುಡುಗನನ್ನು ಕೈಹಿಡಿದು ಕರೆದುಕೊಂಡು ಯೇಸಪ್ಪನ ಬಳಿ ಬಂದು, "ಈ ಹುಡುಗನ ಬಳಿ 5 ರೊಟ್ಟಿಗಳು, 2 ಮೀನುಗಳು ಇವೆ" ಎಂದರು. ಆ ಹುಡುಗ ಕೈಗಳಲ್ಲಿ 2-step ಟಿಫನ್ ಬಾಕ್ಸ್ ನೊಂದಿಗೆ ನಗುತ್ತಾ ಬಂದು ಯೇಸುವಿನ ಬಳಿ ಅದನ್ನು ಕೊಟ್ಟನು. ಅಲ್ಲಿ ಕೂಡಿದ್ದವರು ನಿಧಾನವಾಗಿ ತಮ್ಮ ಮಕ್ಕಳ ಕಿವಿಗಳಲ್ಲಿ ಏನನ್ನೋ ಪಿಸುಗುಟ್ಟುತ್ತಿದ್ದರು. ಒಂದು ತಾಯಿ ತನ್ನ ಮಗನ ಬಳಿ, "ನಿನ್ನ ಬಳಿ ಇದ್ದಿದ್ದರೆ ಕೊಡುತ್ತಿದ್ದೆಯಾ? ಆ ತಮ್ಮನನ್ನು ನೋಡು, ಎಷ್ಟು ಒಳ್ಳೆಯ ಹುಡುಗನಾಗಿದ್ದಾನೆ" ಎಂದರು. ಆದರೂ ಇದು 5000 ಜನರಿಗೆ ಕೊಡಲು ಸಾಕಾ? ಇಲ್ಲವೇ ಇಲ್ಲ. So, Jesus ಅದನ್ನು ಕೈಯಲ್ಲಿ ತೆಗೆದುಕೊಂಡು ಆಕಾಶವನ್ನು ದೃಷ್ಟಿಸಿ ನೋಡಿ ಪ್ರಾರ್ಥಿಸಿ, ಅದನ್ನು ಶಿಷ್ಯರ ಬಳಿ ಕೊಟ್ಟು, ಎಲ್ಲರನ್ನೂ ಸಾಲಾಗಿ ಕೂರಿಸಿ, "ಆಹಾರವನ್ನು ಬಡಿಸಿರಿ"ಎಂದರು. ಶಿಷ್ಯರು ಹಾಗೆಯೇ ಮಾಡಿದರು. ಎಂಥಾ ಆಶ್ಚರ್ಯ? ಎತ್ತುತ್ತಾ ಎತ್ತುತ್ತಾ ರೊಟ್ಟಿ ಮೀನು ಕಡಿಮೆಯಾಗದೆ ಬರುತ್ತಲೇ ಇದ್ದವು. ಮೀನು ಇಷ್ಟಪಡುವವರೆಲ್ಲರೂ ತೆಗೆದುಕೊಂಡು ತೆಗೆದುಕೊಂಡು ತಿಂದರು. ಎಲ್ಲರೂ ತಿಂದು ಮುಗಿಸಿದ ನಂತರ ಮಿಕ್ಕಿದ್ದು 12 ಬುಟ್ಟಿಗಳ ತುಂಬಾ ಎತ್ತಿಕೊಂಡರು.
ಆ ಚಿಕ್ಕ ಹುಡುಗನನ್ನು ನೋಡಿದವರೆಲ್ಲರೂ ಅವನ ಕೈಹಿಡಿದು ಅಲುಗಾಡಿಸಿದರು. ಕೆಲವರು ಕೆನ್ನೆಯನ್ನು ಪ್ರೀತಿಯಿಂದ ಮುಟ್ಟಿ ಮುತ್ತು ಕೊಟ್ಟರು. ಇನ್ನು ಕೆಲವು ಅಣ್ಣಂದಿರು ಅವನ ಬೆನ್ನು ತಟ್ಟಿ very good ಎಂದು ಹೇಳಿದರು. ನಿನಗೆಂದು ಒಂದನ್ನೂ ಕೂಡ ತೆಗೆದುಕೊಳ್ಳದೆ ಹಾಗೆಯೇ ಎಲ್ಲವನ್ನು ಕೊಟ್ಟುಬಿಡಲು ನಿನಗೆ ಹೇಗೆ ಮನಸ್ಸು ಬಂತು? ಎಂದು ಪ್ರತಿಯೊಬ್ಬರೂ ಅವನನ್ನು ಮೆಚ್ಚಿಕೊಂಡರು.
ಪುಟಾಣಿಗಳೇ! ನೀವು ಕೂಡ ಯೇಸಪ್ಪನಿಗೆ ಕೊಡಬಹುದು. ಯಾವುದನ್ನು, ಹೇಗೆ, ಎಲ್ಲಿ ಕೊಡುವುದು? ಎಂದು ಕೇಳುತ್ತೀರ? ಒಂದು ಮಣ್ಣಿನ ಹುಂಡಿಯನ್ನು ತೆಗೆದುಕೊಂಡು, ಅದರಲ್ಲಿ ನಿನ್ನ ಅಮ್ಮ, ಅಪ್ಪ ನಿನಗೆ ಕೊಡುವ ಪಾಕೆಟ್ ಮಣಿಯನ್ನು ಕೂಡಿಡು. ಅದನ್ನು ನಮಗಿಂತ ಕಷ್ಟಪಡುವವರು ಓದಲು ಸಾಧ್ಯವಾಗದಿರುವವರಿಗೆ ಕೊಡಬಹುದು. ಅದು ಮಾತ್ರವಲ್ಲ ನಿನ್ನ ಊರಿಗೆ ಸೇವೆ ಮಾಡಲು ಬರುವ ಸೇವಕರ ಬಳಿ ಕೊಟ್ಟು ಸೇವೆಗೆ ಉಪಯೋಗಿಸುವಂತೆ ಕೊಡಬಹುದು. ಸ್ವಲ್ಪ ಕಾಸು ತಾನೇ ಇದನ್ನು ಹೇಗೆ ಕೊಡಲಿ ಎಂದು ನೆನೆಸಬೇಡ, 5 ರೊಟ್ಟಿ 2 ಮೀನುಗಳೇ ತಾನೇ ಎಲ್ಲರಿಗೂ ಹೇಗೆ ಸಾಕಾಗುತ್ತದೆ ಎಂದು ಆ ಹುಡುಗ ನೆನೆಸಲಿಲ್ಲ. ಯಾವುದಾದರೂ ಸರಿ ಯೇಸಪ್ಪನ ಕೈಗಳಲ್ಲಿ ಕೊಟ್ಟುಬಿಟ್ಟರೆ ಅದು ಆಶೀರ್ವದಿಸಲ್ಪಡುತ್ತದೆ. ಏನು ಪುಟಾಣಿಗಳೇ ಹುಂಡಿ ತೆಗೆದುಕೊಳ್ಳಲು ರೆಡೀನಾ?
- Mrs.ಜೀವಾ ವಿಜಯ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482