Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.07.2021 (Bible Characters Special)
Share:

By Village Missionary Movement

Saturday, 03-Jul-2021

ಧೈನಂದಿನ ಧ್ಯಾನ(Kannada) – 03.07.2021 (Bible Characters Special)

 

ನೋಹ

 

"….ನೋಹ... ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು." - ಇಬ್ರಿಯರಿಗೆ 11:7

 

ಸೃಷ್ಟಿಯ ದಿನಗಳಲ್ಲಿ ದೇವರು ಎಲ್ಲವನ್ನೂ ಉಂಟು ಮಾಡಿ ಒಳ್ಳೇದು, ಒಳ್ಳೇದು ಎಂದು ನೋಡಿದರು. ಆದರೆ ಭೂಮಿಯಲ್ಲಿ ಮನುಷ್ಯರು ಅಭಿವೃದ್ಧಿಯಾಗಲು ಪ್ರಾರಂಭವಾಗಿ ದುಷ್ಟತನ ಹೆಚ್ಚಾದದರಿಂದ ಮನುಷ್ಯರನ್ನು ಉಂಟು ಮಾಡಿದ್ದಕ್ಕೆ ದೇವರು ದುಃಖಪಟ್ಟರು. ಆದ್ದರಿಂದ ಎಲ್ಲವನ್ನೂ ಅಳಿಸಿಬಿಡಲು ತೀರ್ಮಾನಿಸಿದರು. ಆದ್ದರಿಂದ ಆ ದೊಡ್ಡ ಗುಂಪಿನಲ್ಲಿ ನೀತಿವಂತನು ಉತ್ತಮನು ಆಗಿದ್ದ ನೋಹನನ್ನು ಕರ್ತನ ಕಣ್ಣುಗಳು ಕಂಡವು. ಲೋಕಕ್ಕೆ No (ನೋ) ಎನ್ನುವ ದೇವರಿಗೆ Ok (ಹ) ಎಂದು ನೋಹ ಜೀವಿಸಿದ್ದರಿಂದಲೇ ತಾನೇ? ಲೋಕವು ಕ್ರಾಂತಿಯನ್ನು ಕೊಂಡು ಬರಲು ದೊಡ್ಡ ಗುಂಪನ್ನು ನಂಬುತ್ತದೆ. ಆದರೆ ದೇವರೋ ಒಬ್ಬ ವ್ಯಕ್ತಿಯನ್ನೇ ಎದುರು ನೋಡುತ್ತಾರೆ. ಆ ಒಬ್ಬ ವ್ಯಕ್ತಿಯಾಗಿದ್ದವರೇ ನೋಹ. ಈ ದಿನದಲ್ಲಿಯೂ ನೋಹನ ಬಗ್ಗೆ ಕೆಲವೊಂದು ಕಾರ್ಯಗಳನ್ನು ಧ್ಯಾನಿಸೋಣ.

 

ಕೃಪೆ ಹೊಂದಿದ ನೋಹ:

ಬಹುದೊಡ್ಡ ಗುಂಪಿನ ಜನರು ನಾಶವಾಗಲು ನೇಮಿಸಲ್ಪಟ್ಟಿದ್ದಾ ಗ ನೋಹನಿಗೆ ಮಾತ್ರ ಕರ್ತನ ಕಣ್ಣುಗಳಲ್ಲಿ ಕೃಪೆ ದೊರೆಯಿತು. ಅರ್ಹತೆ ಇಲ್ಲದ ಒಬ್ಬರಿಗೆ ದೇವರು ತೋರಿಸುವ ಕನಿಕರವೇ ಕೃಪೆ. ದೇವರು ನಮ್ಮೊಬ್ಬೊಬ್ಬರ ಜೀವನದಲ್ಲಿಯೂ ತೋರಿಸುವ ದಯೆಯನ್ನು ನೀವು ನೆನೆಸಿ ನೋಡುವುದುಂಟಾ? ತಿನ್ನಲು ಆಹಾರ, ತೊಡಲು ವಸ್ತ್ರ, ಜೀವಿಸಲು ಸ್ಥಳ ನಿಮಗಿದ್ದರೆ ಲೋಕದಲ್ಲಿರುವ 75% ಜನರಿಗಿಂತ ಅಧಿಕ ಸೌಲಭ್ಯವನ್ನು ನೀವು ಹೊಂದಿದ್ದೀರ. ನೆನೆಸಿದ ಸಮಯದಲ್ಲಿ ನೆನೆಸಿದ ವ್ಯಕ್ತಿಯೊಂದಿಗೆ ಮೊಬೈಲ್ನಲ್ಲಿ ಮಾತನಾಡಲು ಸಾಧ್ಯವಾದರೆ ಅಂತಹ ಅವಕಾಶವೇ ಇಲ್ಲದೆ ಲೋಕದಲ್ಲಿರುವ 175 ಕೋಟಿ ಜನರಿಗಿಂತ ನೀವು ಹೆಚ್ಚಾದವರು. ರೋಗದಿಂದ ಮುಂಜಾನೆ ಜೀವಂತವಾಗಿ ಎದ್ದೇಳಲು ಅವಕಾಶವಿಲ್ಲದೆ ರಾತ್ರಿ ಹಾಸಿಗೆಯಲ್ಲಿ ಪ್ರಾಣಕಳೆದುಕೊಂಡ ಹಲವರಿಗಿಂತ ನೀವು ಭಾಗ್ಯವಂತರು. ದಾಹವಿದ್ದರೆ ಕುಡಿಯುವುದಕ್ಕೆ ನೀರು ಇದೆಯಾ? ಹಾಗಾದರೆ ನೂರು ಕೋಟಿಗೂ ಹೆಚ್ಚಾಗಿರುವ ಜನರೊಳಗೆ ನೀವು ಹೆಚ್ಚಿನವರು. ಇನ್ನು ಇಂತಹ ಅನೇಕ ಕೃಪೆಗಳನ್ನು ದೇವರು ಪ್ರತಿಯೊಂದು ದಿನವೂ ನಮಗೆ ಕೊಡುತ್ತಲೇ ಇದ್ದಾರೆ. ಎಷ್ಟೊಂದು ಕೃಪೆಯನ್ನು ಹೊಂದಿದ ನಾವು ಅದನ್ನು ಕಳೆದುಕೊಳ್ಳುವಂತೆ ಜೀವಿಸುತ್ತಿದ್ದೇವಾ ಎಂದು ಆಲೋಚಿಸೋಣ. ನೋಹನೋ ಹೊಂದಿಕೊಂಡ ಕೃಪೆಗೆ ಪಾತ್ರನಾಗಿ ಜೀವಿಸಿದರು.

 

ವಿಧೇಯನಾದ ನೋಹ:

ಕೃಪೆ ಹೊಂದಿದ್ದು ಮಾತ್ರವಲ್ಲ ದೇವರ ಆಜ್ಞೆಗಳಿಗೆಲ್ಲಾ ವಿಧೇಯತೆಯುಳ್ಳವರಾಗಿಯೇ ನೋಹ ಜೀವಿಸಿದರು. ಇಬ್ರಿಯರಿಗೆ.11:7 ರಲ್ಲಿ ನೋಹ ನಂಬಿಕೆ ಇಟ್ಟದ್ದರಿಂದಲೇ ಕಾಣದವುಗಳ ಬಗ್ಗೆ ಎಚ್ಚರಿಕೆಯನ್ನು ಪಡೆದು ಕುಟುಂಬವನ್ನು ರಕ್ಷಿಸಲು ನಾವೆಯನ್ನು ಮಾಡಿದರು ಎಂದು ನೋಡುತ್ತೇವೆ. ಮಳೆಯನ್ನೇ ನೋಡಿರದ ಕಾಲದಲ್ಲಿ ಜೀವಿಸಿದ ನೋಹ, ದೇವರ ಮಾತಿಗೆ ವಿಧೇಯನಾಗಿ ಎಲ್ಲಾ ಕಾರ್ಯಗಳನ್ನು ನೆರವೇರಿಸಿದರು. ನಮ್ಮ ಜೀವನದಲ್ಲಿ ದೇವರ ಮಾತಿಗೆ 99% ವಿಧೇಯರಾಗಿ 1% ವಿಧೇಯರಾಗದೆ ಇರುವುದು ಅವಿಧೇಯತೆಗೆ ಸಮಾನ.100% ವಿಧೇಯತೆಯೇ ವಿಧೇಯತೆ. ಸ್ನೇಹಿತರು, ಬಂಧು ಮಿತ್ರರ ಗೇಲಿಯ ಮಾತುಗಳಿಗೆ ಕಿವಿಗೊಡದೆ ದೇವರ ಮಾತಿಗೆ ವಿಧೇಯರಾದರು ನೋಹ. ನೋಹನ ಜೀವನದಲ್ಲಿದ್ದ ವಿಧೇಯತೆ ನಮಗೂ ಅಗತ್ಯವಲ್ಲವೇ? ವಿಧೇಯರಾಗಿ ದೇವರ ಚಿತ್ತವನ್ನು ಈ ಭೂಮಿಯಲ್ಲಿ ನೆರವೇರಿಸೋಣ.

- Mrs. ಜೆಬಾ ಡೇವಿಡ್ ಗಣೇಸನ್

 

ಪ್ರಾರ್ಥನಾ ಅಂಶ:-

ಮಿಷನರಿ ಮಕ್ಕಳ ಶಾಲಾ ಶುಲ್ಕವನ್ನು ಕಟ್ಟಲು ಬೇಕಾದ ಹಣದ ಅವಶ್ಯಕತೆಗಳನ್ನು ಕರ್ತನು ಪೂರೈಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino