Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.07.2021 (Bible Characters Special)
Share:

By Village Missionary Movement

Friday, 02-Jul-2021

ಧೈನಂದಿನ ಧ್ಯಾನ(Kannada) – 02.07.2021 (Bible Characters Special)

 

ಅಬ್ರಹಾಮನು

 

"ಅಬ್ರಾಮನು ಲೋಟನಿಗೆ - ನನಗೂ ನಿನಗೂ,... ಜಗಳವಿರಬಾರದು; ನಾವು ಸಹೋದರರಲ್ಲವೇ." - ಆದಿಕಾಂಡ 13:8

 

ಸಂಬಂಧವಾ, ಆಸ್ತಿಯ? ಎಂದು ತೀರ್ಮಾನಿಸಬೇಕಾದ ಸ್ಥಿತಿಯಲ್ಲಿದ್ದ ಅಬ್ರಹಾಮನ ಬಳಿಯಲ್ಲಿ ಲೋಟನು ನಿಂತಿದ್ದರು. ಐಗುಪ್ತವನ್ನು ಬಿಟ್ಟು ಹೊರ ಬಂದ ಸಮಯದಲ್ಲಿ ಅಬ್ರಹಾಮನೊಂದಿಗೆ, ಅವರ ಅಣ್ಣನ ಮಗನಾದ ಲೋಟನು ಬಂದರು. ಅಬ್ರಹಾಮನು ಹೇರಳವಾದ ಚಿನ್ನ, ಬೆಳ್ಳಿ, ಕುರಿ ದನಗಳುಳ್ಳ ಶ್ರೀಮಂತನು. ಅವರೊಂದಿಗೆ ಲೋಟನ ಕುರಿ ದನಗಳು, ಕೆಲಸಗಾರರು ಇದ್ದರು. ಇಬ್ಬರ ಗುಡಾರಗಳು ಅಕ್ಕಪಕ್ಕವೇ ಇದ್ದವು. ಹೀಗೆ ಐಕ್ಯವಾಗಿ ಜೀವಿಸುತ್ತಿದ್ದ ದಿನಗಳಲ್ಲಿ ಒಂದು ದಿನ ಇಬ್ಬರ ಕುರುಬರಿಗೂ ಜಗಳವಾಯಿತು. ಇಷ್ಟು ದಿನಗಳಿಂದ ಒಗ್ಗಟ್ಟಾಗಿ ಜೀವಿಸುತ್ತಿದ್ದ ಇವರ ಮನೆ ಸಮಸ್ಯೆಗಳನ್ನು ನೋಡಲು ಕೂಡಿಬಂದರು ಅವರೊಂದಿಗೆ ವಾಸಿಸುತ್ತಿದ್ದ ಕಾನಾನ್ಯರು ಪೆರಿಜ್ಜೀಯರು! ದೊಡ್ಡ ಭೂಕಂಪ ಸಂಭವಿಸುತ್ತದೇನೊ ಎಂದು ನೋಡಿದರೆ ಚಿಕ್ಕ ಮೆಣಸಿನಕಾಯಿ ಬಾಂಬ್ ಕೂಡ ಸಿಡಿಯಲಿಲ್ಲ. ಅಬ್ರಹಾಮನು ಬಹಳ ತಾಳ್ಮೆಯಿಂದ ಲೋಟನ ಬಳಿ ಮಾತಾಡುತ್ತಿದ್ದರು, "ನಾವು ಸಹೋದರರು, ನಮ್ಮೊಳಗೆ ಜಗಳಗಳು ಬೇಡ. ಇಷ್ಟೊಂದು ದೊಡ್ಡ ದೇಶ ನಮ್ಮ ಮುಂದೆ ಇದೆ. ಆದ್ದರಿಂದ ನೀನು ಬಲಕ್ಕೆ ಹೋದರೆ ನಾನು ಎಡಗಡೆಗೆ ಹೋಗುತ್ತೇನೆ. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುತ್ತೇನೆ" ಎಂದು ಹೇಳಿ ತನ್ನೊಂದಿಗೆ ಅಂಟಿಕೊಂಡಿದ್ದ ಲೋಟನಿಗೆ ಆರಿಸಿಕೊಳ್ಳುವ ಹಕ್ಕನ್ನು ದೊಡ್ಡಸ್ತಿಕೆಯಿಂದ ಬಿಟ್ಟುಕೊಟ್ಟರು. ಲೋಟನಿಗಿಂತ ಅಬ್ರಹಾಮನು ವಯಸ್ಸಿನಲ್ಲಿ, ಅಂತಸ್ತಿನಲ್ಲಿ, ಜೀವನದ ಅನುಭವದಲ್ಲಿ ಹಿರಿಯರಾಗಿದ್ದರೂ ತನ್ನ ಹಕ್ಕನ್ನು ಹಿಂದಕ್ಕೆ ಹಾಕಿ, ಸಂಬಂಧ ಚದರಿ ಹೋಗದಂತೆ ನೋಡಿಕೊಂಡರು.

 

ಪ್ರಿಯರೇ! ನಮ್ಮ ಬಗ್ಗೆ ಏನು? ನಾವು ಯಾವುದಕ್ಕೆ ಮುಖ್ಯ ತ್ವವನ್ನು ಕೊಡುತ್ತಿದ್ದೇವೆ? ಹಕ್ಕುಗಾಗಿಯಾ, ಸಂಬಂಧಕ್ಕಾಗಿಯ? 1ಅಡಿ ಜಾಗಕ್ಕಾಗಿ ಹಕ್ಕು ಚಲಾಯಿಸಿ ಸಂಬಂಧಗಳನ್ನು ಒಡೆದು ಹಾಕುವವರಾಗಿದ್ದೇವಾ? ಯೋಚಿಸೋಣ. ಸಂಬಂಧಕ್ಕಾಗಿ, ಹಕ್ಕಿಗಿಂತ ಹಳೇ ಒಡಂಬಡಿಕೆಯ ಅಬ್ರಹಾಮನನ್ನು ಹೊಸ ಒಡಂಬಡಿಕೆಯೂ ಮರೆಯದೆ ಹಲವು ಸ್ಥಳಗಳಲ್ಲಿ ಅವರನ್ನು ಎತ್ತಿ ತೋರಿಸುತ್ತಿದೆ. ಇಂದು ನಾವೂ ಅವರ ಬಗ್ಗೆ ಮಾತನಾಡುತ್ತಿದ್ದೇವೆ. ಹೌದು, ಈ ಲೋಕವು ಸ್ಥಿರವಾದದ್ದಲ್ಲ. ನಮ್ಮ ಜೀವಕ್ಕೂ ಏನೂ ಗ್ಯಾರಂಟಿ ಇಲ್ಲ. ನಾಳೆ ನಮ್ಮದಲ್ಲ. ಆದರೆ ಏಕೆ ಕುಟುಂಬವನ್ನು ಯುದ್ಧರಂಗ ಮಾಡಿ ಬಿಡುತ್ತಿದ್ದೇವೆ. ಒಂದು ತಾಯಿಯ ಗರ್ಭದಲ್ಲಿ ಹುಟ್ಟಿದವರು, ಒಂದೇ ಊರಿನಲ್ಲಿ ವಿರೋಧಿಗಳಾಗಿ ಇರಬಹುದಾ? ಅಬ್ರಹಾಮನನ್ನು ನೆನೆಸಿಕೊಳ್ಳೋಣ. ಬಿಟ್ಟುಕೊಟ್ಟರೆ ದೇವರು ನಿಮ್ಮನ್ನು ಪ್ರೋತ್ಸಾಹಿಸಿ ಜೀವಿಸ ಮಾಡುತ್ತಾರೆ.

- C. ಜಯಕುಮಾರಿ

 

ಪ್ರಾರ್ಥನಾ ಅಂಶ:-

ಪ್ರತಿದಿನವೂ YouTube, Facebook ನಲ್ಲಿ ಹೊರಬರುವ ಸತ್ಯವೇದ ಪಾಠವನ್ನು ಅನೇಕರು ನೋಡಿ ಆತ್ಮೀಕ ಜೀವನದಲ್ಲಿ ಬಲಗೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet