By Village Missionary Movement
Thursday, 01-Jul-2021ಧೈನಂದಿನ ಧ್ಯಾನ(Kannada) – 01.07.2021 (Bible Characters Special)
ಹೇಬೆಲನು
"...ತಾನು (ಹೇಬೆಲನು) ನೀತಿವಂತನೆಂದು ಸಾಕ್ಷಿಹೊಂದಿದನು;... ಅವನು ಸತ್ತಿದ್ದರೂ ಅವನ ನಂಬಿಕೆಯ ಮೂಲಕ ಇನ್ನೂ ಮಾತಾಡುತ್ತಾನೆ." - ಇಬ್ರಿಯರಿಗೆ 11:4
ಒಂದೇ ಮನೆಯಲ್ಲಿ, ಒಂದೇ ಪರಿಸ್ಥಿತಿಯಲ್ಲಿ, ದೇವರ ಕುರಿತಾದ ಒಂದೇ ಬೋಧನೆಯಲ್ಲಿ ಬೆಳೆದು ಬಂದ ಇಬ್ಬರು ಮಕ್ಕಳು. ಆದರೂ ಇಬ್ಬರ ಗುಣಲಕ್ಷಣಗಳು, ಎದುರುಬದುರಾಗಿ ಒಬ್ಬರಿಗೊಬ್ಬರು ಸಂಪೂರ್ಣವಾಗಿ ವ್ಯತ್ಯಾಸವಾಗಿದ್ದರು. ಅವರಿಬ್ಬರೂ ಸಹೋದರರೇ ಕಾಯಿನನು, ಹೇಬೆಲನು. ಭೂಮಿಯಲ್ಲಿ ಜನಿಸಿದ ಮೊದಲ ಮಕ್ಕಳು ಇವರೇ. ಇವರು ಯೌವನಸ್ಥರಾದ ದಿನಗಳಲ್ಲಿ ಹೇಬೆಲನು ಕುರಿಗಳನ್ನು ಮೇಯಿಸುತ್ತಿದ್ದನು, ಕಾಯಿನನು ವ್ಯವಸಾಯ ಮಾಡುತ್ತಿದ್ದನು.
ಕೆಲವು ದಿನಗಳ ನಂತರ, ಇಬ್ಬರು ಕರ್ತನಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದರು. ಕರ್ತನು ಹೇಬೆಲನನ್ನು ಅವನ ಕಾಣಿಕೆಯನ್ನು ಅಂಗೀಕರಿಸಿದರು. ಕಾಯಿನನು ತನ್ನ ಕಾಣಿಕೆಯನ್ನು ದೇವರು ಅಂಗೀಕರಿಸಿದೆ ಹೋದದ್ದರಿಂದ ತನ್ನ ಸಹೋದರನ ಮೇಲೆ ಹೊಟ್ಟೆಕಿಚ್ಚುಪಟ್ಟು, ಕೋಪಗೊಂಡನು. ಇದಕ್ಕಿಂತ ಮೋಸವಾದ ಕೊಲೆ ಮಾಡಬೇಕೆಂಬ ದುರಾತ್ಮವು ಕಾಯಿನನನ್ನು ಹಿಡಿದು ಕೊಲ್ಲುವಂತೆ ಬಾಗಿಲಲ್ಲೇ ಸಿದ್ಧವಾಗಿ ಕಾಯುತ್ತಿತ್ತು. ಕಾಯಿನನು ದುರುದ್ದೇಶದಿಂದ ಹೇಬೆಲನನ್ನು ತನ್ನೊಂದಿಗೆ ಹೊಲಕ್ಕೆ ವಾಕಿಂಗ್ ಹೋಗಲು ಕರೆಯುತ್ತಾನೆ. ಆದರೆ ಹೇಬೆಲನ ಹೃದಯದಲ್ಲಿ, "ನನ್ನ ಅಣ್ಣನಿಗಿಂತ ನಾನು ವಿಶೇಷವಾದವನು" ಎಂಬ ಹೆಮ್ಮೆಯೋ, ಅವನು ತನಗೆ ಕೇಡು ಮಾಡುತ್ತಾನೆ ಎಂಬ ಸಂದೇಹವೂ ಇರಲಿಲ್ಲ. ಸ್ವಚ್ಛವಾದ ಮನಸ್ಸಿನೊಂದಿಗೆ ತನ್ನ ಸಹೋದರನೊಂದಿಗೆ ನಡೆದನು. ಆದರೆ ಕಾಯಿನನು ಹೊಟ್ಟೆಕಿಚ್ಚಿನಿಂದ ಉಬ್ಬಿಕೊಂಡು ಹೇಬೆಲನನ್ನು ಕೊಂದುಹಾಕಿದನು. ಹೇಬೆಲನು ನಾಶವಾದನು; ಇನ್ನು ಪಂದ್ಯಕ್ಕೆ ಯಾರೂ ಇಲ್ಲ ಎಂದು ಕಾಯಿನನು ನೆನೆಸಿರುತ್ತಾನೆ. ಆದರೆ ನಿಜವಾಗಿಯೂ ನಾಶವಾದದ್ದು ಹೇಬೆಲನಲ್ಲ, ಕಾಯಿನನು! ಹೇಬೆಲನು ದೇವರ ಸನ್ನಿಧಿಗೆ ಸೇರಿಸಲ್ಪಟ್ಟನು. ಕಾಯಿನನು ದೇವರ ಸನ್ನಿಧಿಯಿಂದ ದೂರ ತಳ್ಳಲ್ಪಟ್ಟನು.
ಪ್ರಿಯರೇ! ತನ್ನನ್ನು ಕೊಲ್ಲಲು ಸಿದ್ಧನಾಗಿದ್ದ ಕಾಯಿನನನ್ನು ಸ್ವಲ್ಪವೂ ಸಂದೇಹ ಪಡದ ಹೇಬೆಲನ ಒಳ್ಳೆಯ ಮನಸ್ಸನ್ನು ನೋಡಿರಿ. ಇಂತಹ ಮನಸ್ಸೇ ತಾನೆ ನಮಗೆ ಅಗತ್ಯ. ಹೇಬೆಲನ ಹೃದಯವು ಕಾಯಿನನಿಗೆ ವಿರುದ್ಧವಾಗಿ ಹೆಮ್ಮೆಪಟ್ಟು ತನ್ನನ್ನು ಹೆಚ್ಚಿಸಿಕೊಳ್ಳಲೇ ಇಲ್ಲ! ತನ್ನನ್ನು ಕಾಯಿನನೊಂದಿಗೆ ಹೋಲಿಸಿ ಸಂತೋಷಪಡಲೋ ಅಥವಾ ಕಾಯಿನನ ಜೀವನದಲ್ಲಿರುವ ಕೊರತೆಗಳನ್ನು ನೋಡುವುದಕ್ಕೋ ಅವನು ಸಾಸಿವೆಯಷ್ಟು ಬಯಸಲಿಲ್ಲ. ನಮ್ಮ ಸಹೋದರರೊಂದಿಗಿರುವ ಸಂಬಂಧದಲ್ಲಿ ನಾವು ಹಿಂಬಾಲಿಸಿ ನಡೆಯಬೇಕಾದ ಮಾರ್ಗವೂ ಇದೇ. ಹೇಬೆಲನಿಗೆ ಈ ಗುಣವನ್ನು ಹೇಳಿಕೊಡಲು ಸತ್ಯವೇದವೋ, ಸಭೆಯೋ, ಸೇವಕರೋ ಇರಲಿಲ್ಲ. ತಾನು ಹಿಂಬಾಲಿಸತಕ್ಕ ಮೂಲ ಮಾದರಿಯು ಅವನ ಮುಂದೆ ಇರಲಿಲ್ಲ. ಆದರೂ ದೇವರನ್ನು ಮಾತ್ರವೇ ನೋಡುತ್ತಾ ನೀತಿವಂತನಾಗಿ ಜೀವಿಸಿದನು. ಅವರು ನನ್ನ ಮೇಲೆ ಹೊಟ್ಟೆಕಿಚ್ಚು ಪಡುತ್ತಾರೋ, ನನ್ನ ಕುಟುಂಬಕ್ಕೆ ಏನಾದರೂ ಕೇಡು ಮಾಡಿ ಬಿಡುತ್ತಾರೋ ಎಂದು ಯಾವಾಗಲೂ ಸಂದೇಹದಿಂದ ಜೀವಿಸಬೇಡ. ವಂಚನೆ ಇಲ್ಲದೆ ಕಳಂಕವಿಲ್ಲದೆ ಶುದ್ಧವಾದ ಮನಸ್ಸಿನೊಂದಿಗೆ ಜೀವಿಸೋಣ. ಕರ್ತನನ್ನು ನಂಬಿ ಒಳ್ಳೆಯದನ್ನು ಮಾಡುತ್ತಲೇ ಇರೋಣ. ತನ್ನನ್ನು ತೋರಿಸಿ ಕೊಡುವವನನ್ನು ಜೊತೆಯಲ್ಲೇ ಇಟ್ಟುಕೊಂಡಿದ್ದು ಅವನ ಕಾಲುಗಳನ್ನೂ ತೊಳೆದು, ಸ್ನೇಹಿತನೇ ಎಂದು ಕರೆದ ಯೇಸುಕ್ರಿಸ್ತನಂತಹ ಗುಣಲಕ್ಷಣವು ನಮ್ಮಲ್ಲಿಯೂ ಕಾಣಲ್ಪಡಲಿ.
- Bro. ಜೆಕರ್ಯ
ಪ್ರಾರ್ಥನಾ ಅಂಶ:-
ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482