Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.06.2021
Share:

By Village Missionary Movement

Tuesday, 29-Jun-2021

ಧೈನಂದಿನ ಧ್ಯಾನ(Kannada) – 29.06.2021

 

ನ್ಯಾಯದ ಕುರ್ಚಿ

 

"...ನಿನ್ನ ಸಹೋದರನನ್ನು ನೀನು ಹೀನೈಸುವದೇನು? ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕಲ್ಲಾ" - ರೋಮಾ 14:10

 

ಲಕ್ಷಾಂತರ ಜನರನ್ನು ಕೊಂದು ಹಾಕಿದ ಸರ್ವಾಧಿಕಾರಿ ಹಿಟ್ಲರ್-ನನ್ನು ಕುರಿತು ಒಬ್ಬರು ಹೇಳುವಾಗ, "ಹಿಟ್ಲರ್-ನನ್ನು ನರಕದಲ್ಲಿ ಹಾಕುವುದಕ್ಕೆ ಮುಂಚೆ ಇನ್ನು ನರಕವನ್ನು ಬಹಳ ಅಧಿಕವಾಗಿ ಬಿಸಿಯಾಗಿ ಮಾಡಬೇಕು" ಎಂದರಂತೆ. ಅಂದರೆ ಅವರಿಗೆ ಕೊಡಲ್ಪಡ ಬೇಕಾದ ದಂಡನೆ ನರಕಕ್ಕಿಂತ ಕಠಿಣವಾಗಿ ಇರಬೇಕು ಎಂಬುದೇ! ಆದರೆ ಸತ್ಯವೇದವು ಹೇಳುವುದು ಏನು? ನೀನು ಯಾರಿಗೂ ನ್ಯಾಯತೀರಿಸಿ ಬೇಡ. ಅಂದರೆ "ಎಲ್ಲರೂ" ಕ್ರಿಸ್ತನ ನ್ಯಾಯಸ್ಥಾನದ ಮುಂದೆ ನಿಂತುಕೊಳ್ಳಬೇಕು. ಅಂದರೆ ನೀನು ಘೋರವಾದ ಪಾಪಿಯೆಂದು ನಡೆಸುವವನು ಮಾತ್ರವಲ್ಲ, ನೀನೂ ಲೆಕ್ಕ ಒಪ್ಪಿಸಲು ದೇವರ ಮುಂದೆ ನಿಂತುಕೊಳ್ಳಬೇಕು ಎಂಬುದೇ! ಆದ್ದರಿಂದ ಯಾರನ್ನು ನ್ಯಾಯ ತೀರಿಸಲೋ, ಅಪರಾಧಿಯೆಂದು ತೀರ್ಮಾನಿಸಲೋ ಮುನ್ನುಗ್ಗಬೇಡ. ಇದು ನಮ್ಮ ಕೆಲಸವಲ್ಲ.

 

ಯೇಸು ಒಂದು ದಿನ ಯೆರೂಸಲೇಮಿನಲ್ಲಿದ್ದಾಗ ಫರಿಸಾಯರು ವ್ಯಭಿಚಾರದಲ್ಲಿ ನೇರವಾಗಿ ಸಿಕ್ಕಿಬಿದ್ದ ಒಂದು ಹೆಣ್ಣನ್ನು ಕರೆದುಕೊಂಡು ಬಂದು ಅವರ ಮುಂದೆ ನಿಲ್ಲಿಸಿದರು. ಅವರೆಲ್ಲರೂ ಅವಳನ್ನು ಕಲ್ಲೆಸೆದು ಕೊಲ್ಲಬೇಕೆಂದು ಸಿದ್ಧವಾಗಿ ನಿಂತಿದ್ದಾಗ "ನಿಮ್ಮಲ್ಲಿ ಪಾಪವಿಲ್ಲ ದವನು ಮೊದಲು ಕಲ್ಲೆಸೆಯಲಿ" ಎಂದರು ಯೇಸು. ಅದನ್ನು ಕೇಳಿದ ಕೂಡಲೇ ಒಬ್ಬರು ಕೂಡ ಆ ಸ್ಥಳದಲ್ಲಿ ನಿಲ್ಲಲಿಲ್ಲ. ಹೌದು , ಬಹಿರಂಗವಾಗಿ ಪಾಪ ಮಾಡಿದವರನ್ನು ಜನರು ಕಂಡರು ಆದರೂ ಎಲ್ಲರ ಅಂತರಂಗ ಗಳನ್ನು ಅರಿತಿರುವ ದೇವರೋ, "ಅವಳನ್ನು ಅಪರಾಧಿಯೆಂದು ತೀರ್ಮಾನಿಸುವ ನೀನು ಪಾಪಿತಾನೇ"ಎಂಬುದನ್ನು ಸುಂದರವಾಗಿ ಎತ್ತಿ ತೋರಿಸಿದರು.

 

ಇದನ್ನು ಓದುತ್ತಿರುವ ಪ್ರಿಯರೇ! ನಮಗೆ ಯಾವಾಗಲೂ ಬೇರೆಯವರ ಕೊರತೆಗಳೇ ಕಣ್ಮುಂದೆ ನಿಲ್ಲುತ್ತವೆ. ಅವರು ದಂಡಿಸಲ್ಪಡಬೇಕು ಎಂಬ ಆತುರವೂ ನಮ್ಮ ಬಳಿ ಇದೆ. ಆದರೆ ಇಂದಿನ ಧ್ಯಾನವು ಹೇಳುವ ಸಂದೇಶವೇನು? ನಾವು ಒಬ್ಬೊಬ್ಬರೂ ನಮ್ಮನ್ನು ಕುರಿತು ದೇವರ ಬಳಿ ಲೆಕ್ಕ ಒಪ್ಪಿಸಬೇಕು. ಕಾರ್ಯವು ಹೀಗಿರುವುದರಿಂದ ನಾವು ಯಾರನ್ನು ಅಪರಾಧಿಗಳೆಂದು ನಿರ್ಣಯಿಸುವುದು ಬೇಡ. ನಮ್ಮನ್ನು ನಾವೇ ನಿಧಾನಿಸಿ ನೋಡೋಣ. ನೀತಿಯುಳ್ಳ ನ್ಯಾಯಾಧಿಪತಿ ಯೇಸುಕ್ರಿಸ್ತನೇ! ನಾವು ಎಂದಿಗೂ ಅವರ ಸಿಂಹಾಸನದಲ್ಲಿ ಕುಳಿತುಕೊಳ್ಳಬೇಕೆಂದು ಪ್ರಶ್ನಿಸುವುದು ಬೇಡ. ಪೌಲನು ರೋಮಾಪುರದಲ್ಲಿರುವ ಸಭೆ ಯವರಿಗೆ ಹೇಳುವ ಈ ಆಲೋಚನೆಗೆ ನಾವೂ ವಿಧೇಯರಾಗೋಣ. ದೇವರ ಸನ್ನಿಧಿಯಲ್ಲಿ ಕರುಣೆ ಹೊಂದೋಣ.

- Mrs. ಯಬನ್ ಸಂತೋಷ್

 

ಪ್ರಾರ್ಥನಾ ಅಂಶ:-

ಗ್ರಾಮಗಳಲ್ಲಿ ನಾವು ಸಂಧಿಸುವ ಕಿರಿಯರು ಅಂತ್ಯಕಾಲದ ಉಜ್ಜೀವನಕ್ಕಾಗಿ ಆಯುಧಗಳಾಗಿ ರೂಪಿಸಲ್ಪಡಲು ಪ್ರಾರ್ಥಿಸೋಣ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş