Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.06.2021
Share:

By Village Missionary Movement

Monday, 28-Jun-2021

ಧೈನಂದಿನ ಧ್ಯಾನ(Kannada) – 28.06.2021

 

ಪಾಪದ ಮೇಲೆ ಜಯ

 

“ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ” - ರೋಮಾ 6:23

 

ಜಾನ್ ಬ್ರಕ್ ಬೋರ್ಡ್ ಕರ್ತನಿಗಾಗಿ ಸಾಕ್ಷಿಯಾಗಿ ಮರಣ ಹೊಂದಿದ ವ್ಯಕ್ತಿ. ಆತನು ಒಂದು ದಿನಕ್ಕೆ ನಾಲ್ಕು ಗಂಟೆಗಳು ಮಾತ್ರ ನಿದ್ದೆ ಮಾಡುತ್ತಾರಂತೆ. ಆತನು ಆಹಾರವನ್ನು ಕೂಡ ಕಡಿಮೆಯಾಗಿ ತೆಗೆದುಕೊಳ್ಳುತ್ತಾರೆ. ಮಿಕ್ಕ ಸಮಯವನ್ನು ಬೈಬಲ್ ಓದುವುದಕ್ಕೂ, ಧ್ಯಾನಿಸುವುದಕ್ಕೂ, ಪ್ರಾರ್ಥಿಸುವುದಕ್ಕೂ, ಮತ್ತೊಬ್ಬರಿಗೆ ಕರ್ತನನ್ನು ಪ್ರಕಟಿಸುವುದಕ್ಕೂ, ಒಳ್ಳೆಯದನ್ನು ಮಾಡುವುದಕ್ಕೂ ಸಮಯವನ್ನು ಪ್ರತ್ಯೇಕಿಸುತ್ತಾರೆ. ಈತನು ಪಾಪದ ಬಗ್ಗೆ ಜನರಿಗೆ ಮೃದುವಾಗಿಯೂ ಅದೇ ಸಮಯದಲ್ಲಿ ಖಂಡಿತವಾಗಿಯೂ ಗದರಿಸಿ ಎಚ್ಚರಿಸುವವರು. ಏಕೆಂದರೆ ಜನರು ದೇವರೊಂದಿಗೆ ಸಹವಾಸ ಉಳ್ಳವರಾಗಿರಬೇಕು ಎಂದು ಹೋರಾಡುವವರು. ಜಾನ್ ಬ್ರಕ್ ಬೋರ್ಡ್ ರವರ ಆತ್ಮೀಕ ಜೀವನವು ಬಹಳ ಆಳವಾಗಿತ್ತು. ತನ್ನ ಅನುದಿನದ ಪಾಪದ ಕಾರ್ಯಗಳನ್ನು ಒಂದು ಪೇಪರ್ ಮೇಲೆ ಬರೆದು ತನ್ನ ಪ್ರತ್ಯೇಕ ಪ್ರಾರ್ಥನೆಯಲ್ಲಿ ದೇವರ ಮುಂದೆ ಮೊಣಕಾಲೂರಿ ಪ್ರತಿಯೊಂದು ಪಾಪವನ್ನು ದೇವರಿಗೆ ಸಮರ್ಪಿಸಿ ಎದೆ ಬಡಿದುಕೊಳ್ಳುತ್ತಾ ಅಳುತ್ತಾ ಕ್ಷಮಾಪಣೆ ಕೇಳುವುದು ಆತನಿಗಿರುವ ಅಭ್ಯಾಸ. ಹಾಗೆ ಮಾಡುತ್ತಾ ತನ್ನ ರಕ್ಷಣೆಯ ಜೀವನವನ್ನು ಪ್ರತಿದಿನ ನೂತನ ಮಾಡಿಕೊಳ್ಳುತ್ತಿದ್ದರು.

 

ಈತನು ತನ್ನ ಜೀವನದಲ್ಲಿ ಗ್ರಹಿಸಿದ ಮುಖ್ಯವಾದ ಕಾರ್ಯ ಪಾಪದ ಸಂಬಳ ಮರಣ. ಎಂಬುದು. ಅದು ಬಹಳ ಭಯಂಕರವಾದದ್ದು. ಪಾಪವುದೇವರಿಗೂ ಮನುಷ್ಯನಿಗೂ ಇರುವ ಸಂಬಂಧವನ್ನು ಬೇರ್ಪಡಿಸುತ್ತದೆ. ದೇವರಿಲ್ಲದ ಜೀವನ ಏಕೆ ಎಂಬುದೇ ಆತನ ಒಂದು ಆಲೋಚನೆ. ಅಪೊಸ್ತಲನಾದ ಪೌಲನು ಪಾಪದ ಬಗ್ಗೆ ಅದರ ಮೂಲದ ಬಗ್ಗೆ ಅನೇಕ ಕಾರ್ಯಗಳನ್ನು ಹೇಳುತ್ತಿದ್ದಾರೆ. ಬಯಸಿದ್ದನ್ನು ಮಾಡದೆ ಅದನ್ನು ವಿರೋಧಿಸುತ್ತಿರುವ ಕಾರ್ಯಗಳನ್ನು ಮಾಡುತ್ತಿದ್ದೇನೆ. ನಾನಲ್ಲ ನನ್ನಲ್ಲಿ ವಾಸಮಾಡುತ್ತಿರುವ ಪಾಪವೇ ಹಾಗೆ ಮಾಡುತ್ತಿದೆ ಎಂದು ಪಾಪದ ಬಗ್ಗೆ ಅದರ ಕ್ರಿಯೆಗಳ ಬಗ್ಗೆ ವಿವರಿಸುತ್ತಿದ್ದಾರೆ.

 

ಪ್ರಿಯರೇ! ನಾವು ಪಾಪದೊಂದಿಗೆ ಅನುದಿನವೂ ಹೋರಾಡುತ್ತಲೇ ಇದ್ದೇವೆ.. ಅದರಲ್ಲಿ ನಾವು ದಾಸರಾಗಿದ್ದು ಬಿಡದೆ ಅದರಿಂದ ತಪ್ಪಿಸಿಕೊಳ್ಳಬೇಕು ಅಂದರೆ ಜಾನ್ ಬ್ರಕ್ ಬೋರ್ಡ್ ನ ಹಾಗೆ ಬೈಬಲ್ ಓದುವುದು, ಪ್ರಾರ್ಥಿಸುವುದು, ಒಳ್ಳೆಯದನ್ನು ಮಾಡುವುದು ಎಂಬ ಕಾರ್ಯಗಳಲ್ಲಿ ಮುಂದೆ ಇರಬೇಕು. ದೇವರು ಖಂಡಿತವಾಗಿ ಆಶೀರ್ವದಿಸುತ್ತಾರೆ. ಆಮೆನ್.

- ಬ್ರದರ್.ಪಿ. ಸ್ಟೀವ್ ಮ್ಯಾಥ್ಯೂ

 

ಪ್ರಾರ್ಥನಾ ಅಂಶ:-

ನಾವು ನಡೆಸುತ್ತಿರುವ ಯೌವ್ವನಸ್ಥರು, ಚಿಕ್ಕ ಮಕ್ಕಳು ದೇವರ ಬಳಿಯಿಂದ ಹಿಂಜಾರಿ ಹೋಗದಂತೆ ದೇವರಲ್ಲಿ ಸ್ಥಿರವಾಗಿರುವಂತೆ ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al