Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.06.2021 (Kids Special)
Share:

By Village Missionary Movement

Sunday, 27-Jun-2021

ಧೈನಂದಿನ ಧ್ಯಾನ(Kannada) – 27.06.2021 (Kids Special)

 

“ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ;” - 1ಥೆಸಲೋನಿಕ 5:18

 

ಹಲೋ ಮಕ್ಕಳೇ! ಹೇಗಿದ್ದೀರಾ ನೀವು ತುಂಬಾ ಸಂತೋಷವಾಗಿ ಇದ್ದೀರಾ ಅಂತ ಅಂದುಕೊಳ್ಳುತ್ತಿದ್ದೇನೆ. ಏಕೆಂದರೆ ಸ್ಕೂಲ್ ಇಲ್ಲ ಎಷ್ಟು ಹೊತ್ತಾದರೂ ಮಲಗಬಹುದು, ಜಾಲಿಯಾಗಿ ಆಟ ಆಡಬಹುದು, ಅಲ್ವೇ? ಸ್ಕೂಲ್ ಯಾವಾಗ ತೆರೆಯುತ್ತಾರೋ ಗೊತ್ತಿಲ್ಲ. ಮಲಗಿಕೊಳ್ಳುವುದು, ಎದ್ದೇಳುವುದು, ಆಟವಾಡಿ ಕೊಳ್ಳುವುದು ಹೀಗೆ ನಿಮಗೆ ಸಿಗುವ ಅವಕಾಶ ಯಾರಿಗೂ ಸಿಕ್ಕಿಲ್ಲ. ಆದರೆ ಎಚ್ಚರವಾಗಿರಬೇಕು. ಅಗತ್ಯವಿಲ್ಲದೆ ಹೊರಗೆ ಹೋಗಬಾರದು, ಕೈ, ಕಾಲು, ಮುಖ ಶುದ್ಧವಾಗಿ ತೊಳೆದುಕೊಳ್ಳಬೇಕು. ಯಾವುದೆಂದರೆ ಅದು ತೆಗೆದುಕೊಂಡು ತಿನ್ನಬಾರದು. ಓಕೆ ! Tv, cell phone ನೋಡುತ್ತಾ ನಿಮ್ಮ ಕಣ್ಣುಗಳನ್ನು ಹಾಳು ಮಾಡಿಕೊಳ್ಳಬಾರದು. ಯೇಸಪ್ಪನಿಗೆ ಇಷ್ಟವಾದ ಕೆಲಸಗಳು ಮಾಡಬೇಕು ಸರಿಯಾ! ಕಥೆ ಕೇಳೋಣ?

 

ಒಂದು ದಟ್ಟವಾದ ಅಡವಿಯೊಳಗೆ ಒಂದು ಚಿಕ್ಕಗ್ರಾಮವಿತ್ತು. ಆ ಗ್ರಾಮದಲ್ಲಿ ಸೌದೆಗಳನ್ನು ಹೊಡೆದು ಮಾರುವ ಒಬ್ಬ ವ್ಯಕ್ತಿ ಜೀವಿಸುತ್ತಿದ್ದನು. ಆತನಿಗೆ ಹೆಂಡತಿ, ಒಬ್ಬ ಮಗ ಇದ್ದರು. ಈ ಮೂರು ಜನ ಸೇರಿ ಅಡವಿಗೆ ಹೋಗಿ ಸೌದೆಗಳನ್ನು ಕಡಿದು ಜೀವನವನ್ನು ಸಾಗಿಸುತ್ತಿದ್ದರು. ಯಾವ ಕೆಲಸ ಮಾಡಿದರೂ ದೇವರಲ್ಲಿ ಭಯಭಕ್ತಿಯಿಂದ ಪ್ರಾರ್ಥಿಸುತ್ತಾ ಕರ್ತನೇ ಈ ದಿನಕ್ಕೆ ಅಗತ್ಯವಾದ ಶುಭವನ್ನು ನಮಗೆ ದಯಪಾಲಿಸು ಎಂದು ಪ್ರಾರ್ಥಿಸುತ್ತಿದ್ದರು. ಒಂದು ದಿನ ಸೌದೆ ಹೊಡೆಯುತ್ತಿರುವಾಗ ಕುದುರೆಯ ಮರಿ ಒಂದು ಅವರ ಹಿಂದೆ ಬಂದು ನಿಂತುಬಿಟ್ಟಿತು. ಅದನ್ನು ಕಟ್ಟಿ ಹಾಕಿ ಆಹಾರ ಕೊಟ್ಟು ಬೆಳೆಸಿಕೊಂಡರು. ಕೆಲವು ತಿಂಗಳುಗಳಲ್ಲೇ ಆ ಕುದುರೆ ಚೆನ್ನಾಗಿ ಬಲವುಳ್ಳದ್ದಾಗಿ ಬೆಳೆಯಿತು. ರಥಕ್ಕೆ ಕಟ್ಟುವುದಕ್ಕೆ ಆ ಕುದುರೆ ಬೇಕೆಂದು ಅದನ್ನು ಕೊಂಡು ಕೊಳ್ಳುವುದಕ್ಕೆ ಬಹಳ ಜನ ಬಂದರು ಆದರೆ ಯಜಮಾನನು, ಇಲ್ಲ ನಾನು ಇದನ್ನು ನನ್ನ ಮಗುವಿನ ಹಾಗೆ ಬೆಳೆಸಿದ್ದೇನೆ. ಇದು ದೇವರು ನನಗೆ ಕೊಟ್ಟ ಬಹುಮಾನ ಎಂದು ಅದನ್ನು ಮಾರುವುದಕ್ಕೆ ಇಷ್ಟಪಡಲಿಲ್ಲ. ಆ ಊರಿನವರೆಲ್ಲರು ಬೈಯ್ಯುವುದಕ್ಕೆ ಪ್ರಾರಂಭಿಸಿದರು. ಈತನಿಗೆ ಬದುಕುವುದಕ್ಕೆ ಗೊತ್ತಿಲ್ಲ ಎಂದು ಹೇಳಿದರು. ಒಂದು ದಿನ ರಾತ್ರಿ ಕುದುರೆಯು ಕಾಣಿಸದೆ ಹೋಯಿತು ಕೂಡಲೇ ಆ ಊರಿನವರೆಲ್ಲರೂ ಆ ವಿಷಯವನ್ನು ತಿಳಿದುಕೊಂಡು ನಗುತ್ತಿದ್ದರು. ಆದರೆ ಆ ಯಜಮಾನನು ಮಾತ್ರ ಸಮಸ್ತವೂ ಒಳ್ಳೆಯದಕ್ಕಾಗಿಯೇ ದೇವರು ಮಾಡಿದರೆಂದು, ಆತನು ಏನು ಮಾಡಿದರು ನನ್ನ ಶುಭಕ್ಕಾಗಿಯೆ ಮಾಡುತ್ತಾರೆ ಎಂದು ಕೃತಜ್ಞತೆ ಹೇಳಿದನು.

 

ಒಂದು ದಿನ ಮುಂಜಾನೆಯಲ್ಲಿ ಒಂದು ದೊಡ್ಡ ಶಬ್ದ ಕೇಳಿಸಿತು ಅದನ್ನು ಕೇಳಿದ ಯಜಮಾನನು ಬಾಗಿಲು ತೆರೆದು ನೋಡಿದಾಗ ಕಾಣಿಸದೆ ಹೋದ ಕುದುರೆಯೊಂದಿಗೆ ಹನ್ನೆರಡು ಕುದುರೆಗಳು ಬಂದು ನಿಂತು ಕೊಂಡವು. ಅದನ್ನು ನೋಡಿದ ಊರಿನವರೆಲ್ಲ ಆಶ್ಚರ್ಯಪಟ್ಟರು. ಕುದುರೆ ರೇಸ್, ಕುದುರೆಯ ಸವಾರಿಗಾಗಿ ಕುದುರೆಗಳಿಗೆ ತರಬೇತಿ ಕೊಟ್ಟರು. ಈ ಕಾರ್ಯದ ಮೂಲಕ ದೇವರು ಆತನ ಕುಟುಂಬವನ್ನು ಆಶೀರ್ವದಿಸಿದರು. ಎಂತಹ ಪರಿಸ್ಥಿತಿಗಳಲ್ಲಿಯೂ ನಿರುತ್ಸಾಹ ಹೊಂದದೆ ದೇವರಿಗೆ ಕೃತಜ್ಞತೆ ಹೇಳಿದ್ದರಿಂದ ಇವರು ಆಶೀರ್ವದಿಸಲ್ಪಟ್ಟರು ಎಂಬುದನ್ನು ಆ ಗ್ರಾಮದ ಜನರು ಗ್ರಹಿಸಿದರು.

 

ಮುದ್ದು ಮಕ್ಕಳೇ...ನೀವು ಕೂಡ ನಿಮ್ಮ ಕುಟುಂಬದಲ್ಲಿ ಉಂಟಾಗುವ ಕಷ್ಟವಾದ ಸಮಯದಲ್ಲಿಯೂ ಕೂಡ ಕೃತಜ್ಞತೆಯನ್ನು ಸಲ್ಲಿಸುವುದಕ್ಕೆ ಕಲಿತುಕೊಂಡರೆ ಕೇಡನ್ನು ಕೂಡ ದೇವರು ಶುಭವಾಗಿ ಮಾರ್ಪಡಿಸುತ್ತಾರೆ. ನೀವು ಹಾಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೀರಲ್ಲವೇ!!!

- ಸಹೋದರಿ. ದೆಬೋರ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş