Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.07.2026
Share:

By Village Missionary Movement

Thursday, 02-Jul-2026

ಧೈನಂದಿನ ಧ್ಯಾನ(Kannada) – 02.07.2026

 

ಗೋಡೆಯಲ್ಲಿ ಒಂದು ರಂಧ್ರ 

 

"...ಪ್ರಾರ್ಥನೆಗೆ ಸಿದ್ದವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರ್ರಿ" - 1 ಪೇತ್ರ 4:7

 

ಒಬ್ಬ ವ್ಯಾಪಾರಿಯ ಮನೆಯಲ್ಲಿ ಬಹಳಷ್ಟು ಹಣವಿತ್ತು. ಇದನ್ನು ತಿಳಿದಿದ್ದ ಕಳ್ಳನು ಪ್ರತಿ ರಾತ್ರಿಯೂ ವ್ಯಾಪಾರಿಯ ಮನೆಯನ್ನು ದೋಚಲು ಬರುತ್ತಿದ್ದನು. ಅವನ ಮನೆಯು ದೊಡ್ಡ ಗೋಡೆಯಿಂದ ಸುತ್ತುವರೆದಿರುವುದರಿಂದ, ಕಳ್ಳತನ ಮಾಡಲು ಸಾಧ್ಯವಾಗದೇ ಹಿಂತಿರುಗಿ ಹೋಗುತ್ತಿದ್ದನು. ಒಂದು ದಿನ, ಅವನು ಎಂದಿನಂತೆ ಆ ಮನೆಗೆ ಹೋದನು. ಆಗ ಆ ಮನೆಯ ಗೋಡೆಯಲ್ಲಿ ಒಂದು ರಂಧ್ರ ಇರುವುದನ್ನು ನೋಡಿ ಅದರ ಮೂಲಕ ಒಳಗೆ ಹೋದನು. ಈಗ ಅವನ ಉದ್ದೇಶವು ಕದಿಯುವುದು ಅಲ್ಲ. ಈ ಮನೆಯಲ್ಲಿ ರಾತ್ರಿ ಹೊತ್ತು ಮಾತ್ರ ಹೇಗೆ ಕಾಂಪೌಡ್ ಗೋಡೆ ಉಂಟಾಗುತ್ತಿದೆ ಎಂದೂ, ಅದೇ ಸಮಯದಲ್ಲಿ, ಇಂದು ರಾತ್ರಿ ಮಾತ್ರ ಗೋಡೆಯಲ್ಲಿ ರಂಧ್ರವಿದೆಯಲ್ಲಾ ಏನಿದು ಆಶ್ಚರ್ಯ! ಇದರ ಸತ್ಯವನ್ನು ತಿಳಿದುಕೊಳ್ಳಲು ಬಯಸಿದನು.

 

ಆದ್ದರಿಂದ ಅವನು ವ್ಯಾಪಾರಿಯನ್ನು ನಿದ್ರೆಯಿಂದ ಎಬ್ಬಿಸಿ ಅವನ ಅನುಮಾನದ ಬಗ್ಗೆ ಕೇಳಿದನು. ವ್ಯಾಪಾರಿ ಸ್ವಲ್ಪ ಹೊತ್ತು ಯೋಚಿಸಿ, ನಾನು ಪ್ರತಿ ರಾತ್ರಿ ಯೇಸುವಿನ ಬಳಿ ನನ್ನನ್ನು ಮತ್ತು ನನಗಿರುವ ಎಲ್ಲವನ್ನೂ ಕಾಪಾಡಿ ಎಂದು ಪ್ರಾರ್ಥಿಸುತ್ತೇನೆ. ಆದರೆ ಇಂದು, ನಾನು ತುಂಬಾ ದಣಿದಿದ್ದರಿಂದ, ನಾನು ಪ್ರಾರ್ಥಿಸಲು ಮರೆತಿದ್ದೇನೆ. ನಾನು ನನ್ನ ಹಾಸಿಗೆಯ ಮೇಲೆ ಬಿದ್ದು ಹಾಗೆ ನಿದ್ರೆಮಾಡಿಬಿಟ್ಟೆ ಎಂದರು. ಆಗ ಕಳ್ಳನು ಯೇಸು ಕ್ರಿಸ್ತನ ಶಕ್ತಿಯಿಂದ ಸ್ಪರ್ಶಿಸಲ್ಪಟ್ಟನು. 

 

ನನ್ನ ಪ್ರೀತಿಯ ದೇವಜನರೇ! ವ್ಯಾಪಾರಿಯ ಮನೆಯಲ್ಲಿ ಎಷ್ಟು ಸಮಯದವರೆಗೆ ಸಂರಕ್ಷಣೆಯ ಗೋಡೆ ಇತ್ತು ಎಂಬುದನ್ನು ನೋಡಿ. ವ್ಯಾಪಾರಿ ಪ್ರಾರ್ಥಿಸುವ ದಿನದವರೆಗೆ ರಾತ್ರಿಯಲ್ಲಿ ರಕ್ಷಣಾ ಗೋಡೆ ಇರುತ್ತಿತ್ತು. ಅವರು ಯಾವಾಗ ಪ್ರಾರ್ಥಿಸಲು ಮರೆತರೋ ಆಗ ರಕ್ಷಣಾ ಗೋಡೆಯೊಳಗೆ ರಂಧ್ರ ಕಾಣಿಸಿಕೊಂಡಿತು?ಹೌದು, ನೀವು ಯೋಬನ ಪುಸ್ತಕದ ಮೊದಲ ಅಧ್ಯಾಯವನ್ನು ಓದಿದರೆ, ಸೈತಾನನು (ಕಳ್ಳನು) ದೇವರ ಮುಂದೆ ಬರುತ್ತಾನೆ, ದೇವರು ಸೈತಾನನನ್ನು (ಕಳ್ಳನನ್ನು) ನೋಡಿ ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಎಲ್ಲಿಂದ ಬಂದಿ ಎಂದು, ಆಗ ಸೈತಾನನು ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು ಎಂದು ಹೇಳಿದನು. ಆಗ ಯೆಹೋವನು ನನ್ನ ದಾಸನಾದ ಯೋಬನ ಮನೆಗೆ ಹೋಗಿದ್ದಾ? ಅಂದರು. ಆಗ ಸೈತಾನನು, ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ ಅಂದನು.

 

ನಾವು ಪ್ರಾರ್ಥಿಸುವವರೆಗೂ, ದೇವರು ನಮಗೆ ಮತ್ತು ನಮ್ಮ ಆಸ್ತಿಗಳಿಗೆ ಹೆಚ್ಚಿನ ಭದ್ರತೆ ನೀಡುತ್ತಾರೆ. ನಾವು ಪ್ರಾರ್ಥನೆಯಲ್ಲಿ ಸ್ವಲ್ಪ ದಣಿದಾಗ, ಭದ್ರತೆ ಸ್ವಲ್ಪ ಕಡಿಮೆಯಾಗುತ್ತದೆ. ಮೋಶೆ ತಾನು ಪ್ರಾರ್ಥಿಸಿದಾಗ ಇಸ್ರಾಯೇಲ್ಯರಿಗೂ ಮತ್ತು ಯೆಹೋಶುವನಿಗೂ ದೇವರ ಸಹಾಯ ದೊರೆಯಿತು. ಯೆಹೋಶುವನ ಗುಂಪು ಅಮಾಲೇಕ್ಯರನ್ನು ಸೋಲಿಸಿದರು. ಮೋಶೆಯ ಪ್ರಾರ್ಥನೆ ದುರ್ಬಲವಾದಾಗ, ಅಮಾಲೇಕ್ಯರು ಜಯಿಸುತ್ತಿದ್ದರು (ವಿಮೋಚನಕಾಂಡ 17:12-15). ಆದ್ದರಿಂದ, ಪ್ರೀತಿಯ ದೇವಜನರೇ, ಪ್ರಾರ್ಥನೆಯಲ್ಲಿ ಜಾಗರೂಕರಾಗಿರಿ. ಕರ್ತನು ತಾನೇ ನಿಮ್ಮನ್ನು ಆಶೀರ್ವದಿಸಲಿ! 

- Rev.S.A ಇಮ್ಮಾನುವೇಲ್ 

 

ಪ್ರಾರ್ಥನಾ ಅಂಶ:

ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಪ್ರಯೋಜನ ಪಡೆಯುವವರು ದೇವರ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet güncel giriş holiganbet holiganbet giriş casibom giriş casibom casibom giriş casibom matbet matbet giriş casibom casibom giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş https://yourfilterconnection.com/ Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş holiganbet holiganbet giriş jojobet jojobet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş jojobet holiganbet jojobet cratosroyalbet betgit jojobet betpuan gameofbet grandpashabet grandpashabet teosbet holiganbet Hiltonbet Hiltonbet giriş grandpashabet imajbet matbet grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş