Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.06.2021
Share:

By Village Missionary Movement

Saturday, 26-Jun-2021

ಧೈನಂದಿನ ಧ್ಯಾನ(Kannada) – 26.06.2021

 

"ನೀನು ನಿನಗೋಸ್ಕರ ಮಹತ್ತಾದವುಗಳನ್ನು ಹುಡುಕುತ್ತೀಯೋ?” - ಯೆರೆಮಿಯ 45:5

 

ಘನತೆ ಹೊಂದಿದ ವ್ಯಕ್ತಿಯಾಗಿ ಹೆಸರು ಪಡೆಯಬೇಕು, ಸಮಾಜದಲ್ಲಿ, ಸಭೆಯಲ್ಲಿ ಪ್ರಸಿದ್ಧನಾಗಿರಬೇಕು ಎಂಬುದು ಕ್ರೈಸ್ತರೆಲ್ಲರ ದೊಡ್ಡ ಶೋಧನೆ. ಇದನ್ನು ನಮ್ಮಲ್ಲಿ ಬೆಳೆಯಲು ಬಿಟ್ಟರೆ ಸೈತಾನನ ಕಣ್ಣುಗಳಲ್ಲಿ ಸುಲಭವಾಗಿ ಸಿಕ್ಕಿ ಕೊಳ್ಳುತ್ತೇವೆ.

 

ಯೇಸುಕ್ರಿಸ್ತನ ಜೀವನವನ್ನು ನಾವು ನೋಡುವುದಾದರೆ ತನ್ನ ಜೀವನದ ಅಧಿಕ ಭಾಗವನ್ನು ಬಡಗಿ (ಕಾರ್ಪೆಂಟರ್) ಆಗಿಯೇ ಮರದಂಗಡಿಯಲ್ಲಿ ಕಳೆದರು. ಮತ್ತು ಲೋಕದ ದೊಡ್ಡ ಪಟ್ಟಣಗಳಾದ ರೋಮ್, ಏಥೆನ್ಸ್, ಅಲೆಕ್ಸಾಂಡ್ರಿಯಾ ಎಂಬ ಸ್ಥಳಗಳಿಗೆ ಹೋಗಿ ಅಲ್ಲಿ ಅವರು ಪ್ರಸಂಗ ಮಾಡುವುದಕ್ಕೆ ಪ್ರಯತ್ನಿಸಲಿಲ್ಲ. ಅವರು ಸುತ್ತಾಡಿದ ನಜರೇತ್ ಎಂಬುದು ಒಂದು ಚಿಕ್ಕ ಊರು. ಗಲಿಲಯ ಕೂಡ ಅಲ್ಪವಾದದ್ದೆ ಆದರೆ ಆತನು ಒಂದು ಅದ್ಭುತವನ್ನು ಮಾಡಿದಮೇಲೆ "ಯಾರಿಗೂ ಇದರ ಬಗ್ಗೆ ಹೇಳಬೇಡ" ಎಂದು ಹೇಳುತ್ತಿದ್ದರು. ಆತನು ಬೈಬಲ್ ಹಿಡಿಯದಷ್ಟು ಅದ್ಭುತ ಕಾರ್ಯಗಳನ್ನು ಮಾಡಿದರು. ಆದರೂ ಎಂದಿಗೂ ಅದರ ಬಗ್ಗೆ ಪ್ರಚಾರ ಮಾಡಿಕೊಳ್ಳಲಿಲ್ಲ. ಆದರೆ ನಾವು ಮಾತ್ರ ನಾವು ಮಾಡಿದ ಕಾರ್ಯಗಳನ್ನು ತೋರಿಸಿ ಅನೇಕರ ಆಕರ್ಷಣೆಯನ್ನು ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದೇವೆ. ದೇವರಿಗಾಗಿ ಮಾಡುತ್ತಿರುವ ದೇವಾಲಯದ ಕೆಲಸಗಳಲ್ಲಿಯೂ, ಸುವಾರ್ತೆಯ ಕೆಲಸದಲ್ಲಿಯೂ ನಾವು ಹೆಚ್ಚಿನವರಾಗಿ ಕಾಣಬೇಕು ಎಂದು ಪ್ರಯತ್ನಿಸುತ್ತಿದ್ದೇವೆ. ನಮ್ಮ ಸತ್ಕಾರ್ಯಗಳಲ್ಲಿ, ಜ್ಞಾನ ವಿವೇಕಗಳಲ್ಲಿಯು ಯಾರು ಹಿಡಿಸಿಕೊಳ್ಳದಿದ್ದರೆ ಅದನ್ನು ನಾವು ಸಹಿಸುವುದಿಲ್ಲ. ಮರೆಯಾಗಿರುವ ಕ್ರೈಸ್ತನಾಗಿರುವುದಕ್ಕೆ ನಾವು ಇಷ್ಟಪಡುತ್ತಿಲ್ಲ.

 

ದೇವರ ಸೇವಕರಾದ ಟಾಫಿ ಹೇಳುತ್ತಿರುವ ಮಾತು. ಇದು ದೇವರ ಸೇವೆ ಇಲ್ಲಿ ಮನುಷ್ಯನು ಮರೆಮಾಡಲ್ಪಟ್ಟು ದೇವರನ್ನು ಮಹಿಮೆ ಪಡಿಸಬೇಕು. ದೇವರ ಕೆಲಸದಲ್ಲಿ ಜಾಹೀರಾತುಗಳು ಅವಶ್ಯವಿಲ್ಲ ಎಂದು ಹೇಳಿದರು. ಕೊನೆಯದಾಗಿ ಆತನ ಸಮಾಧಿಯ ಮೇಲೆ ಬರೆದ ಮಾತು, ಕಾಣದ ವ್ಯಕ್ತಿಯಾಗಿರಲು ಬಯಸಿದವರು ಆದರೂ ಎಲ್ಲರಿಗೂ ಕಾಣಿಸುವವನಾಗಿ ಜೀವಿಸಿದವರು ಎಂದು ಬರೆಯಲ್ಪಟ್ಟಿದೆ.

 

ಪ್ರಿಯರೇ! ಅತಿಶಯ ಪಡುವ ವಿಷಯದಲ್ಲಿ ದೀಕ್ಷಾಸ್ನಾನ ಕೊಡುವ ಯೋಹಾನನು ತನ್ನ ಜೀವನದಲ್ಲಿ ದೂರವಾಗಿಯೆ ಇದ್ದನು. "ದೇವರು ಹೆಚ್ಚಿಸಲ್ಪಡಬೇಕು, ನಾನು ತಗ್ಗಿಸಲ್ಪಡಬೇಕು" ಎನ್ನುವುದು ಮಾತ್ರವೇ ಆತನ ಗುರಿಯಾಗಿತ್ತು. ನಮ್ಮ ಆಲೋಚನೆ ಹೇಗಿದೆ? ಎಲ್ಲರಿಂದಲೂ ಅತಿಶಯ ಪಡುವ ಕ್ರೈಸ್ತನಾಗಿ ಜೀವಿಸಬೇಕು ಎಂದು ಅಂದುಕೊಳ್ಳುತ್ತಿದ್ದೀಯ? ಕ್ರಿಸ್ತನ ಆಲೋಚನೆಯುಳ್ಳವರಾಗಿ ಇರುತ್ತಿದ್ದೆವಾ? ನಮ್ಮನ್ನು ಮೇಲೆ ಕರೆತರುವುದಕ್ಕೆ ಕರ್ತನು ಪ್ರಯತ್ನಿಸುವವರೆಗೂ ನಾವು ಸರಿಯಾದ ಸ್ಥಳದಲ್ಲಿ ಕಾದಿರೋಣ. ಕ್ರಿಸ್ತನಿಂದ ಮಾತ್ರವೇ ಪ್ರೀತಿಸಲ್ಪಡುವುದಕ್ಕೂ, ಪ್ರೋತ್ಸಾಹಿಸಲ್ಪಡುವುದಕ್ಕೂ ಆಸೆ ಪಡೋಣ. ಇತರರ ಮುಂದೆ ಮರೆಯಾದವನ ಹಾಗೆಯೂ, ಅಲ್ಪ ನಾಗಿಯೂ ಇರುವಂತೆ ನಮ್ಮನ್ನು ನಾವು ಕಾಪಾಡಿಕೊಳ್ಳೋಣ. ಆ ರೀತಿಯಾಗಿ ಇರಬೇಕೆಂದು ಪ್ರಾರ್ಥಿಸೋಣ.

- ವಿಲಿಯಂ ಮೆಕ್ ಡೋನಾಲ್ಡ್

 

ಪ್ರಾರ್ಥನಾ ಅಂಶ:-

ಬಡಜನರಿಗೆ ಈ ಕರೋನಾ ದಿನಗಳಲ್ಲಿ ನಮ್ಮಿಂದ ಮಾಡಲಾಗುವ ಸಹಾಯವನ್ನು ಮಾಡುತ್ತಿದ್ದೇವೆ. ಇದರ ಮೂಲಕ ಜನರು ದೇವರನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin