By Village Missionary Movement
Wednesday, 01-Jul-2026ಧೈನಂದಿನ ಧ್ಯಾನ(Kannada) – 01.07.2026
ಮಕ್ಕಳೇ, ಕೇಳಿರಿ!
“ಮಕ್ಕಳಿರಾ, ತಂದೆಯ ಶಿಕ್ಷಣವನ್ನು ಕೇಳಿರಿ, ವಿವೇಕವನ್ನು ಗ್ರಹಿಸಲಿಕ್ಕೆ ಕಿವಿಗೊಡಿರಿ." - ಜ್ಞಾನೋಕ್ತಿ 4:1
ಮಕ್ಕಳಿಗೆ ಶಾಲೆ ಪ್ರಾರಂಭವಾಗಿ ಒಂದು ತಿಂಗಳಾಯಿತು. ಎಂದಿನಂತೆ, ಪಠ್ಯಕ್ರಮ, ತರಗತಿಯ ಚಟುವಟಿಕೆಗಳು ಮತ್ತು ಸ್ನೇಹಿತರೊಂದಿಗೆ ಸಂಭಾಷಣೆಗಳು ಮುಂದುವರೆದಿವೆ. ಈ ಸಲಹೆಯು ಶಾಲೆ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲಾ ವಯಸ್ಸಿನ ಎಲ್ಲಾ ಸುಂದರ ಮಕ್ಕಳಿಗಾಗಿ. ಶಿಕ್ಷಣಕ್ಕೆ ಬಹಳ ಮುಖ್ಯವಾದದ್ದು ಜ್ಞಾನ. ಆ ಜ್ಞಾನವು ದೇವರಿಗೆ ಭಯಪಟ್ಟಾಗ ಮಾತ್ರವೇ ಸಿಗುತ್ತದೆ ಎಂದು ಸತ್ಯವೇದವು ಅನೇಕ ಸ್ಥಳಗಳಲ್ಲಿ ಸ್ಪಷ್ಟವಾಗಿ ಹೇಳುತ್ತದೆ. ಮಕ್ಕಳು ಪೋಷಕರಿಗೆ ಕರ್ತನಿಂದ ಬಂದ ಸ್ವಾಸ್ತ್ಯವು ಗರ್ಭಫಲವು ಆತನ ಬಹುಮಾನವೇ ಎಂದು ಸತ್ಯವೇದವು ಹೇಳುತ್ತದೆ. ಆ ಸ್ವಾಸ್ಥ್ಯವನ್ನು ನಿರ್ವಹಿಸುವ ಹಕ್ಕನ್ನು ಕರ್ತನು ಈ ಭೂಮಿಯ ಮೇಲಿನ ಅವರ ಪೋಷಕರಿಗೇ ನೀಡಿದ್ದಾರೆ. ಆದ್ದರಿಂದ, ಅವರ ಬೋಧನೆಗಳನ್ನು ಕೇಳುವುದು ಮತ್ತು ಎಲ್ಲಾ ವಿಷಯಗಳಲ್ಲಿ ಅವರನ್ನು ಪಾಲಿಸುವುದು ಅವಶ್ಯಕ. ನಮ್ಮ ಹೆತ್ತವರನ್ನು ಹೇಗೆ ಪಾಲಿಸಬೇಕು ಮತ್ತು ಅವರು ವೃದ್ಧರಾದಾಗ ಅವರನ್ನು ಹೇಗೆ ಗೌರವಿಸಬೇಕು ಎಂಬುದನ್ನು ನಾವು ಜ್ಞಾನೋಕ್ತಿಗಳಿಂದ ಕಲಿಯಬಹುದು.
ನಾವು ಚಿಕ್ಕವರಿದ್ದಾಗ ನಮ್ಮ ಪೋಷಕರು ಪ್ರತಿದಿನ ಒಂದು ಅಧ್ಯಾಯ ಜ್ಞಾನೋಕ್ತಿಯನ್ನು ಓದುವಂತೆ ಒತ್ತಾಯಿಸಿದರು. ತಿಂಗಳಿಗೆ ಗರಿಷ್ಠ 31 ದಿನಗಳು. ಆದ್ದರಿಂದ ನಾವು ಪ್ರತಿದಿನ ಒಂದು ಜ್ಞಾನೋಕ್ತಿಯನ್ನು ಓದಿ ಅಭ್ಯಾಸ ಮಾಡಿದ್ದೇವೆ. ಇದಲ್ಲದೆ, ನಮ್ಮ ಯೌವನದಲ್ಲಿ EU ಸೇವೆಯ ಮೂಲಕ ACTS ಎಂಬ ಪ್ರಾರ್ಥನಾ ವಿಧಾನವನ್ನು ಮತ್ತು ASPECTS ಎಂಬ ಬೈಬಲ್ ಓದುವ ವಿಧಾನವನ್ನು ಕಲಿತು ಅಭ್ಯಾಸ ಮಾಡಿದ್ದೇವೆ. ಆಮೇಲೆ, ಕಾಲಾನಂತರದಲ್ಲಿ, ಪವಿತ್ರಾತ್ಮನ ಸಹಾಯದಿಂದ ಜೀವನದ ದೈನಂದಿನ ಅಗತ್ಯತೆಗಳು, ಸವಾಲುಗಳು ಮತ್ತು ಜೀವನದ ದೀರ್ಘಾವಧಿಯ ದರ್ಶನಗಳ ಬಗ್ಗೆ ಕಲಿತುಕೊಂಡೆವು, ಪವಿತ್ರಾತ್ಮನ ಸಹಾಯದಿಂದ ಪ್ರಾರ್ಥಿಸಿ ಜಯಹೊಂದುತ್ತಾ ಬರುತ್ತಿದ್ದೇವೆ.
ನೀವು ವಿದ್ಯಾಬ್ಯಾಸ ಮಾಡುವ ಸ್ಥಳಗಳಲ್ಲಿ ನೀವು ಎದುರಿಸುವ ಸವಾಲುಗಳ ಬಗ್ಗೆ ನಿಮ್ಮ ಹೆತ್ತವರ ಬಳಿ ಮತ್ತು ದೇವರ ಬಳಿ ಪ್ರಾರ್ಥನೆಯಲ್ಲಿ ಹೇಳುವ ಅಭ್ಯಾಸವನ್ನು ಮಾಡಿಕೊಳ್ಳಿರಿ. ಹಿರಿಯರ ಜೀವನದ ಅನುಭವಗಳು ಮತ್ತು ಬೈಬಲ್ ಜ್ಞಾನವು ನಿಮ್ಮನ್ನು ಸರಿಯಾಗಿ ಮಾರ್ಗದರ್ಶನ ಮಾಡುತ್ತದೆ. ಜ್ಞಾನೋಕ್ತಿ 15:22 ರ ಪ್ರಕಾರ, ಬಹುಮಂದಿ ಆಲೋಚನಾಪರರಿರುವಲ್ಲಿ ನಮ್ಮ ಆಲೋಚನೆಗಳು ಸ್ಥಾಪಿಸಲ್ಪಡುತ್ತವೆ. ಆದ್ದರಿಂದ, ನಿಮ್ಮ ಬಗ್ಗೆ ಕಾಳಜಿ ವಹಿಸುವ ಮತ್ತು ಉತ್ತಮ ಸಲಹೆಯನ್ನು ನೀಡಬಲ್ಲ ಹಿರಿಯ ಸೇವಕರ ಬಳಿ ಅಥವಾ ನಿಮ್ಮ ಆರೈಕೆದಾರರೊಂದಿಗೆ ನಿಮ್ಮ ಏಳುಬೀಳುಗಳ ಕಾರ್ಯಗಳನ್ನು ಹಂಚಿಕೊಳ್ಳಿರಿ. ಸ್ನೇಹಿತರನ್ನು ಆಯ್ಕೆಮಾಡುವಲ್ಲಿ ಜಾಗರೂಕರಾಗಿರಿ. ಎಲ್ಲರೊಂದಿಗೂ ನಗುಮುಖದೊಂದಿಗಿರಿ. ಹೆತ್ತವರಿಗೆ ವಿಧೇಯರಾಗಿರಿ, ವಿದ್ಯಾಭ್ಯಾಸದಲ್ಲೂ ಮತ್ತು ಕರ್ತನು ನಿಮಗಿಟ್ಟಿರುವ ಭವಿಷ್ಯದ ಬಹುದೊಡ್ಡ ದರ್ಶನದ ಯೋಜನೆಯಲ್ಲೂ ಶ್ರೇಷ್ಟವಾಗಿ ಕಾಣಲು ನಿಮಗೆ ಶುಭವಾಗಲಿ!
- Mrs. ಮೆರ್ಸಿ ಅಲೆಕ್ಸಾಂಡರ್
ಪ್ರಾರ್ಥನಾ ಅಂಶ:
ಈ ತಿಂಗಳ ಸೇವೆಗಳಿಗಾಗಿ ಮತ್ತು ಸೇವಕರ ಪ್ರಯಾಣದ ಸುರಕ್ಷತೆಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482