By Village Missionary Movement
Saturday, 27-Jun-2026ಧೈನಂದಿನ ಧ್ಯಾನ(Kannada) – 27.06.2026
ಬಂಡೆಯಾದ ಯೇಸು
“...ಅವರ ಹಿಂದೆ ಹೋಗುತ್ತಿದ್ದ ದೈವಿಕವಾದ ಬಂಡೆಯೊಳಗಿಂದ ಬಂದ ನೀರನ್ನು ಕುಡಿಯುತ್ತಿದ್ದರು; ಆ ಬಂಡೆ ಕ್ರಿಸ್ತನೇ" - 1 ಕೊರಿಂಥ 10:4
ಹಡಗು ಸಮುದ್ರದ ಮೇಲೆ ಸಾಗುತ್ತಿರುವಾಗ, ಇದ್ದಕ್ಕಿದ್ದಂತೆ ಬಿರುಗಾಳಿ ಬಂದು ಹಡಗು ಹಾನಿಗೊಳಗಾಯಿತು. ಹಡಗಿನಲ್ಲಿದ್ದ ಅನೇಕ ಜನರು ಸಮುದ್ರದಲ್ಲಿ ತಮ್ಮ ಪ್ರಾಣಕ್ಕಾಗಿ ಹೋರಾಡುತ್ತಿದ್ದರು. ಅದೃಷ್ಟವಶಾತ್ ಒಬ್ಬ ಹುಡುಗ ಮಾತ್ರ ಬಂಡೆಯ ಮೇಲೆ ಎಸೆಯಲ್ಪಟ್ಟನು. 2 ಗಂಟೆಗಳ ನಂತರ, ರಕ್ಷಣಾ ತಂಡವು ಬಂದು ಬಂಡೆಯ ಮೇಲಿದ್ದ ಹುಡುಗನನ್ನು ಕಾಪಾಡಿದರು. ಆಗ ಅವನ ಬಳಿ ನಿನಗೆ ಭಯ ಆಗುತ್ತಿಲ್ಲವಾ? ಎಂದು ಕೇಳಿದರು. ಅದಕ್ಕೆ ದೃಢವಾದ ಬಂಡೆಯ ಮೇಲೆ ನಾನು ಇದ್ದುದರಿಂದ, ಬದುಕುಳಿಯುತ್ತೇನೆ ಎಂಬ ನಂಬಿಕೆ ನನ್ನೊಳಗೆ ಇತ್ತು ಎಂದನು.
ಸತ್ಯವೇದದಲ್ಲಿಯೂ, ಮೋಶೆಯು ಇಸ್ರಾಯೇಲ್ ಜನರನ್ನು ಐಗುಪ್ತದಿಂದ ಕಾನಾನ್ ದೇಶಕ್ಕೆ ಕರೆದೊಯ್ಯುತ್ತಿದ್ದಾಗ, ಅವರು ನೀರಿಲ್ಲದೆ ಕಷ್ಟಪಟ್ಟರು. ನಂತರ ಜನರು ಮೋಶೆಯೊಂದಿಗೆ ವಾದಿಸಿದರು ಮತ್ತು ಕಲ್ಲೆಸೆಯಲು ಪ್ರಯತ್ನಿಸಿದರು. ಮೋಶೆ ಕರ್ತನನ್ನು ನೋಡಿ ಪ್ರಾರ್ಥಿಸಿದರು. ಆಗ ಕರ್ತನು ಮೋಶೆಗೆ, ಹೋರೇಬಿನಲ್ಲಿ ನಿನಗಿಂತ ಮುಂಚೆ ಹೋಗಿ ಬಂಡೆಯ ಮೇಲೆ ನಿಲ್ಲುತ್ತೇನೆ; ನೀನು ಆ ಬಂಡೆಯನ್ನು ಹೊಡೆ, ಆಗ ಜನರು ಕುಡಿಯಲು ನೀರು ಅದರಿಂದ ಬರುತ್ತದೆ ಎಂದರು; ಮೋಶೆಯು ಇಸ್ರಾಯೇಲ್ಯರ ಕಣ್ಣುಗಳ ಮುಂದೆ ಹಾಗೆಯೇ ಮಾಡಿದರು. ಇಸ್ರಾಯೇಲಿನ ಜನರು ನೀರನ್ನು ಕುಡಿದರು. ಪೌಲನು ಇದನ್ನು ಬರೆಯುವಾಗ, ಎಲ್ಲರೂ ಜ್ಞಾನ ಬಂಡೆಯ ನೀರನ್ನು ಕುಡಿದರು, ಮತ್ತು ಆ ಬಂಡೆಯು ಕ್ರಿಸ್ತನೇ ಎಂದರು. ಈಗಲೂ ನಮ್ಮ ಕೊರತೆಗಳನ್ನು ಪೂರೈಸುವವರಾಗಿರುವ ಬಂಡೆಯು ಕ್ರಿಸ್ತನೇ. ದಾವೀದನು ದೇವರನ್ನು ನನ್ನ ಬಂಡೆ ನನ್ನ ಕೋಟೆ ಎಂದು ಕರೆಯುತ್ತಾರೆ. ಆದ್ದರಿಂದ ಶತ್ರುಗಳು ಅವರನ್ನು ಕುಗ್ಗಿಸಿದರೂ ಜಯಿಸಲು ಸಾಧ್ಯವಾಗಲಿಲ್ಲ. ಸೌಲನು ಬೆನ್ನಟ್ಟಿ ಬಂದರೂ, ದಾವೀದನನ್ನು ತಪ್ಪಿಸಿ ಕಾಪಾಡಿದರು. ಇಸ್ರಾಯೇಲ್ ಜನರು ಪ್ರಯಾಣಿಸುತ್ತಿದ್ದಾಗ ಮತ್ತೆ ನೀರು ಸಿಗದೇ ಹೋಯಿತು. ಆಗ ದೇವರು, ಮಾತನಾಡು ಎಂದು ಹೇಳಿದರು. ಜನರು ಗೊಣಗಿದ್ದರಿಂದ ಮೋಶೆ ಕೋಪಗೊಂಡು ಹಳೆಯ ಅನುಭವವನ್ನು ಬಳಸಿಕೊಂಡು ಬಂಡೆಯನ್ನು ಹೊಡೆಯುತ್ತಾರೆ, ನೀರು ಬಂತು. ಪರಿಣಾಮವಾಗಿ, ಕಾನಾನ್ ಜೀವವನ್ನು ಕಳೆದುಕೊಂಡರು. ಏಕೆಂದರೆ ಕ್ರಿಸ್ತನನ್ನು ಒಂದೇ ಬಾರಿ ಮಾತ್ರ ಹೊಡೆಯಲ್ಪಡಬೇಕು.
ನಮಗಾಗಿ ಲೋಕಕ್ಕೆ ಬಂದು ಪಾಡುಪಟ್ಟು, ಸತ್ತು ಪುನರುತ್ಥಾನನಾದ ಬಂಡೆಯಾದ ಕ್ರಿಸ್ತನು, ನಮ್ಮ ಕೊರತೆಗಳನ್ನು ಪರಿಹರಿಸಲು ಇಂದಿಗೂ ನಮ್ಮೊಂದಿಗಿದ್ದಾರೆ. ನಾವು ಆತನೊಂದಿಗೆ ಮಾತನಾಡುವಾಗ, ಅಂದರೆ, ನಮ್ಮ ಕೊರತೆಗಳು, ಅಗತ್ಯಗಳು, ಕಷ್ಟಗಳು ಮತ್ತು ಸಂಕಟಗಳನ್ನು ನಾವು ಆತನಿಗೆ ಹೇಳುವಾಗ, ದೇವರು ಅವುಗಳನ್ನು ಬದಲಾಯಿಸುತ್ತಾರೆ. ಸಂದರ್ಭಗಳು ಎಷ್ಟೇ ಕಷ್ಟಕರವಾಗಿದ್ದರೂ ನಮಗೆ ಸಹಾಯ ಮಾಡುವುದು ಆತನಿಗೆ ಸುಲಭ. ಆದ್ದರಿಂದ, ನಾವು ಪರಿಸ್ಥಿತಿಗೆ ಹೆದರಬಾರದು. ಕೀರ್ತನೆಗಾರನು ಹೇಳುವಾಗ, “ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ." ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮೊಂದಿಗಿರುತ್ತೇನೆ ಎಂದು ಹೇಳಿದವರು ಮಾತು ತಪ್ಪದವರು. ಆತನು ನಮ್ಮೊಂದಿಗಿದ್ದು ನಮ್ಮನ್ನು ಮುನ್ನಡೆಸುತ್ತಾರೆ. ಆದ್ದರಿಂದ, ಬಂಡೆಯಾದ ಕ್ರಿಸ್ತನನ್ನು ಹಿಡಿದುಕೊಳ್ಳಿರಿ.
- S. ಸಿಂಧು
ಪ್ರಾರ್ಥನಾ ಅಂಶ:
ನಮ್ಮ ಯುವ ಶಿಬಿರದಲ್ಲಿರುವ ಯುವಕರು ತಾವು ತೆಗೆದುಕೊಂಡ ನಿರ್ಧಾರದಲ್ಲಿ ದೃಢವಾಗಿರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482