Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.06.2026
Share:

By Village Missionary Movement

Thursday, 25-Jun-2026

ಧೈನಂದಿನ ಧ್ಯಾನ(Kannada) – 25.06.2026

 

ಶಾಂತಗುಣ

 

"ಮನುಷ್ಯನ ಕೋಪವು ದೇವರಿಗೆ ಮೆಚ್ಚಿಕೆಯಾಗಿರುವ ನೀತಿಗೆ ಅನುಕೂಲವಾಗುವದಿಲ್ಲ" - ಯಾಕೋಬ 1:20

 

"ಅಪ್ಪಾ, ಎದ್ದೇಳಿ ನನ್ನ ಬಿಟ್ಟು ಹೋಗ್ಬೇಡಿ" ಎಂದು ಸತ್ತು ಹೋದ ತನ್ನ ತಂದೆಯನ್ನು ನೋಡಿ ಅಳುತ್ತಿದ್ದನು ವ್ಯಾಟ್ಸನ್. ಹಣಕ್ಕೆ ಆಸೆಪಟ್ಟು, ಅವನ ತಂದೆಯ ಸ್ನೇಹಿತನು ಅವರ ಎಲ್ಲಾ ಆಸ್ತಿಗಳನ್ನು ವಂಚಿಸಿ ತನ್ನ ಹೆಸರಿಗೆ ವರ್ಗಾಯಿಸಿ ಕೊಂಡರು. ಇದನ್ನು ತಿಳಿದ, ವ್ಯಾಟ್ಸನ್‌ನ ತಂದೆ ಮನನೊಂದು ಹೃದಯಾಘಾತದಿಂದ ನಿಧನರಾದರು. ಬಹಳ ಕೋಪಗೊಂಡ ವ್ಯಾಟ್ಸನ್ ತನ್ನ ತಂದೆಯ ಸ್ನೇಹಿತನನ್ನು ಕೊಂದು ಸೇಡು ತೀರಿಸಿಕೊಂಡನು. ಇದಕ್ಕಾಗಿ, ಅವನನ್ನು ಬಂಧಿಸಿ ಜೈಲು ಶಿಕ್ಷೆ ವಿಧಿಸಿದರು. ಜೈಲಿನಲ್ಲಿದ್ದ ವ್ಯಾಟ್ಸನ್ ತಪ್ಪಿತಸ್ಥ ಮನೋಭಾವದಿಂದ ಕಾಣಲ್ಪಟ್ಟನು. ಅವನು ಕೊಲೆ ಮಾಡಿದ ವ್ಯಕ್ತಿಯ ಕುಟುಂಬವು ತುಂಬಾ ನೋವಿನಲ್ಲಿದ್ದರೂ, ಅವರು ವ್ಯಾಟ್ಸನ್ ಮೇಲೆ ಕಾಳಜಿವಹಿಸಿ ಅವನು ಮನತಿರುಗಬೇಕೆಂದು ಪ್ರಾರ್ಥಿಸುತ್ತಾ ಇದ್ದರು.

 

ಆ ಸಮಯದಲ್ಲಿ, ಸುವಾರ್ತೆಯನ್ನು ಸಾರಲು ಒಬ್ಬ ಮಿಷನರಿ ಜೈಲಿಗೆ ಬಂದರು. ಆ ದಿನ ಅವರು ಯಾಕೋಬ 1:20 ನ್ನು ಹೇಳಿ, ನಾವು ಕೋಪಗೊಂಡರೆ, ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಏಕೆಂದರೆ ಕೋಪವು ತುಂಬಾ ಕೆಟ್ಟದ್ದು. ಅದು ನಮ್ಮಲ್ಲಿ ಕಾಣಲ್ಪಡುವ ದೇವರ ಸ್ವಾರೂಪ್ಯವನ್ನು ಹಾಳುಮಾಡುತ್ತದೆ. "ಕೋಪಮಾಡಬೇಕಾದರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ (ಎಫೆಸ 4:26) ಎಂಬ ವಾಕ್ಯವನ್ನು ಸಹ ಅವರಿಗೆ ಬೋಧಿಸಿ ಸಲಹೆ ನೀಡಿದರು. ಅವರ ಬೋಧನೆಯನ್ನು ಮೌನವಾಗಿ ಕೇಳುತ್ತಿದ್ದ ವ್ಯಾಟ್ಸನ್ ತನ್ನ ತಪ್ಪನ್ನು ಅರಿತುಕೊಂಡು ಯೇಸುವಿನ ಬಳಿ ಕ್ಷಮೆಯನ್ನು ಕೇಳಿದನು. ತನ್ನ ಪಾಪಗಳನ್ನು ಕರ್ತನ ಬಳಿ ಒಪ್ಪಿಕೊಂಡು, ಪಾಪಕ್ಷಮಾಪಣೆಯ ನಿಶ್ಚಯವನ್ನು ಪಡೆದುಕೊಂಡ ಅವನೊಳಗೆ ದೈವೀಕ ಸಮಾಧಾನ ಉಂಟಾಯಿತು. ಮೂರ್ಖವಾದ ಕೋಪದಿಂದ ಕಾಣಲ್ಪಟ್ಟ ಅವನ ಮುಖವು ಶಾಂತವಾಗಿ ಮಾರ್ಪಟ್ಟಿತು. ಅವನು ಪ್ರತಿದಿನ ಬೆಳಿಗ್ಗೆ ಎದ್ದು ಹಾಡುಗಳನ್ನು ಹಾಡಿ, ಬೈಬಲ್ ಓದಿ ಪ್ರಾರ್ಥಿಸಲು ಪ್ರಾರಂಭಿಸಿದನು. ಸೆರೆಮನೆಯಲ್ಲಿರುವವರಿಗೆ ಸುವಾರ್ತೆ ಸಾರಿದನು. ವ್ಯಾಟ್ಸನ್‌ನ ಶಿಕ್ಷೆ ಮುಗಿದಾಗ, ತನ್ನ ತಂದೆಯನ್ನು ಮೋಸ ಮಾಡಿದ ವ್ಯಕ್ತಿಯ ಕುಟುಂಬವು ಅವನಿಗೆ ಸಲ್ಲಬೇಕಾದ ಎಲ್ಲಾ ಆಸ್ತಿಯನ್ನು ಅವನಿಗೆ ಹಿಂದಿರುಗಿಸಿತು. ಅವನು ದೇವರಿಗೆ ಕೃತಜ್ಞತೆ ಸಲ್ಲಿಸಿದನು. ಅದರ ನಂತರ, ಅವನು ಯಾವಾಗಲೂ ಶಾಂತಗುಣವುಳ್ಳವನಾಗಿ ಕಾಣುತ್ತಿದ್ದನು.

 

ಇದನ್ನು ಓದುತ್ತಿರುವ ಪ್ರಿಯ ಸ್ನೇಹಿತರೇ, ಮನುಷ್ಯನ ಕೋಪವು ನಿಷ್ಪ್ರಯೋಜಕವಾಗಿದೆ. ನಮ್ಮ ಸಮಸ್ಯೆ ಏನೇ ಇರಲಿ, ನಾವು ಅದನ್ನು ಮೌನವಾಗಿ ದೇವರಿಗೆ ಹೇಳುವಾಗ, ಅವರು ನಮಗಾಗಿ ಹೋರಾಡಿ ನಮಗೆ ನ್ಯಾಯ ಸಿಗುವಂತೆ ಮಾಡುತ್ತಾರೆ. ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ ಮನಮರುಗುವವರಾಗಿಯೂ ಇದ್ದು ಕ್ರಿಸ್ತನಲ್ಲಿ ದೇವರು ನಿಮ್ಮನ್ನು ಕ್ಷಮಿಸಿದಂತೆಯೇ, ನೀವು ಸಹ ಒಬ್ಬರಿಗೊಬ್ಬರು ಕ್ಷಮಿಸಿರಿ. ಯಾವ ಕಾರ್ಯವಾದರೂ ಕೋಪಗೊಳ್ಳದೆ ಶಾಂತವಾಗಿರೋಣ. ನಮ್ಮ ಜೀವನವನ್ನು ದೇವರ ಹಸ್ತಗಳಲ್ಲಿ ಒಪ್ಪಿಸೋಣ. ಆತನೇ ನಮ್ಮನ್ನು ಆಳಲಿ.

- R. ಬ್ಲೆಸ್ಸಿ ಜೆನಿಫರ್

 

ಪ್ರಾರ್ಥನಾ ಅಂಶ:

ನಮ್ಮ ಮಕ್ಕಳ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ದೇವರ ಭದ್ರತೆ ಉಂಟಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet pashagaming perabet perabet giriş egebet pashagaming giriş safirbet safirbet giriş betasus betasus giriş virüsbet virusbet egebet giriş medusabahis medusabahis giriş grandpashabet grandpashabet giriş jojobet jojobet giriş holiganbet holiganbet giriş casibom casibom giriş vaycasino vaycasino giriş pusulabet pusulabet giriş perabet perabet giriş perabet perabet giriş