Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.06.2026
Share:

By Village Missionary Movement

Sunday, 21-Jun-2026

ಧೈನಂದಿನ ಧ್ಯಾನ(Kannada) – 21.06.2026

 

ಪಾಪಗಳನ್ನು ಮುಚ್ಚಿಡಬೇಡ

 

"ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು." - ಜ್ಞಾನೋಕ್ತಿ 28:13

 

ಒಂದು ಸುಂದರವಾದ ಹಳ್ಳಿ. ವನಿತಾ ಮತ್ತು ವಿನಿತಾ ಎಂಬ ಇಬ್ಬರು ಗೆಳತಿಯರು ಇದ್ದರು. ಅವರು ಒಟ್ಟಿಗೆ ಶಾಲೆಗೆ ಹೋಗಿ ಆಟವಾಡುತ್ತಿದ್ದರು. ಒಂದು ದಿನ, ಅವರು ಆಲದ ಮರದ ಕೆಳಗೆ ಕುಳಿತು ಆಟವಾಡುತ್ತಿದ್ದರು. ನಂತರ, ವಿನಿತಾಳ ಅಜ್ಜ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅವಳು ತನ್ನ ಅಜ್ಜನನ್ನು, ಎಲ್ಲಿಗೆ ಹೋಗುತ್ತಿದ್ದೀರ, ಅಜ್ಜ ಎಂದು ಕೇಳಿದಳು. ನಾನು ಸಾಹುಕಾರನ ತೋಟದಿಂದ ಕೊಯ್ದ ಮಾವಿನ ಹಣ್ಣುಗಳನ್ನು ಅವರ ಮನೆಗೆ ಕೊಡಲು ಹೋಗುತ್ತಿದ್ದೇನೆ ಎಂದರು. ತಕ್ಷಣ, ಅವರಿಬ್ಬರೂ, ಅಜ್ಜ, ನಾವು ಕೂಡ ನಿಮ್ಮ ಜೊತೆ ತೋಟಕ್ಕೆ ಬರುತ್ತೇವೆ ಎಂದರು. ಅಜ್ಜ ಕೂಡ, ಸರಿ, ಬನ್ನಿ ಎಂದು ಹೇಳಿ ಅವರನ್ನು ತಮ್ಮೊಂದಿಗೆ ಕರೆದೊಯ್ದರು. ಇಬ್ಬರೂ ಆಟವಾಡುವುದನ್ನು ಮುಂದುವರೆಸಿದರು. ರೈತನ ತೋಟವೂ ಬಂತು. ಅವರು ಮಾವಿನ ಹಣ್ಣುಗಳನ್ನು ಬುಟ್ಟಿಯಲ್ಲಿ ಹಾಕಿ ಅಜ್ಜನ ತಲೆಯ ಮೇಲೆ ಇಟ್ಟರು. ಅವರು ಅಜ್ಜನ ಬಳಿ, ನಾವು ತೋಟವನ್ನು ಸುತ್ತಿ ನೋಡಬಹುದ ಅಜ್ಜ ಎಂದು ಕೇಳಿದರು. ಅಜ್ಜ ಬೇಡಮ್ಮ. ನಾವು ಇದನ್ನು ಸಾಹುಕಾರರ ಮನೆಯಲ್ಲಿ ಇಟ್ಟು ಮನೆಗೆ ಹೋಗೋಣ ಎಂದರು. ಮುಂದೆ ಹೋಗುತ್ತಿದ್ದ ಅಜ್ಜ ಹಿಂತಿರುಗಿ ನೋಡಿ ಬೇಗ ನಡೆದುಕೊಂಡು ಬನ್ನಿ ಎಂದರು. ಆಗ ಮೂರು ಮಾವಿನ ಹಣ್ಣುಗಳು ಬುಟ್ಟಿಯಿಂದ ಕೆಳಗೆ ಬಿದ್ದವು. ಅಜ್ಜ ಅದನ್ನು ನಿರ್ಲಕ್ಷಿಸಿ ಬೇಗನೆ ನಡೆದರು. ಹಿಂದೆ ಬಂದ ವನಿತಾ ಮತ್ತು ವಿನಿತಾ ಬಿದ್ದ ಮಾವಿನ ಹಣ್ಣುಗಳನ್ನು ಎತ್ತಿಕೊಂಡು ತಿನ್ನುತ್ತಾ ನಡೆದರು. ಮಾವಿನ ಹಣ್ಣುಗಳು ರುಚಿಕರವಾಗಿದ್ದವು. ಅಜ್ಜ ಸಾಹುಕಾರನ ಮನೆಯೊಳಗೆ ಹೋದರು. ಇವರಿಬ್ಬರೂ ಹಣ್ಣು ತಿನ್ನುತ್ತಾ ಹೊರಗೆ ನಿಂತರು. ಮನೆಯ ಒಳಗಿನಿಂದ ಸಾಹುಕಾರ ಅಜ್ಜನನ್ನು ಬೈಯುತ್ತಿರುವುದು ಕೇಳಿಸಿತು. ಅವರಿಬ್ಬರೂ ಗೇಟಿನ ಒಳಗೆ ಹೋಗಿ ನೋಡಿದಾಗ, ಸಾಹುಕಾರ ಹಣ್ಣುಗಳನ್ನು ತೂಗುತ್ತಾ ಅಜ್ಜನನ್ನು ಬೈಯುವುದನ್ನು ನೋಡಿದರು. ತಕ್ಷಣ ವನಿತಾ ಮತ್ತು ವಿನಿತಾ ಒಳಗೆ ಹೋಗಿ, ಅಯ್ಯಾ, ನಮ್ಮನ್ನು ಕ್ಷಮಿಸಿ ಎಂದರು. ಅಜ್ಜ ಹಣ್ಣುಗಳನ್ನು ತರುತ್ತಿದ್ದಾಗ, ಮೂರು ಹಣ್ಣುಗಳು ಬಿದ್ದವು. ನಾವೇ ಅವುಗಳನ್ನು ತೆಗೆದುಕೊಂಡು ತಿಂದೆವು. ಅಜ್ಜನಿಗೆ ಅದು ಗೊತ್ತಾಗಲಿಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದರು. ಅಯ್ಯಾ, ಆ ಹಣ್ಣುಗಳಿಗೆ ಎಷ್ಟು ರೂಪಾಯಿ ಎಂದು ಹೇಳಿದರೆ, ನಾವು ನಮ್ಮ ತಂದೆಯಿಂದ ಅದನ್ನು ತಂದುಕೊಡುತ್ತೇವೆ ಎಂದರು. ತಕ್ಷಣ ಸಾಹುಕಾರ 'very good' ಮಕ್ಕಳೇ, ನೀವು ನಿಮ್ಮ ತಪ್ಪನ್ನು ಒಪ್ಪಿಕೊಂಡಿದ್ದೀರಿ. ಇಂದಿನಿಂದ, ನೀವು ಕೆಳಗಿನಿಂದ ಏನಾದರೂ ತೆಗೆದುಕೊಂಡರೆ, ನೀವು ಅದನ್ನು ಸರಿಯಾದ ಮಾಲೀಕರಿಗೆ ನೀಡಬೇಕು, ಸರೀನಾ ಎಂದು ಹೇಳಿ ಎರಡು ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಇಬ್ಬರಿಗೂ ಒಂದೊಂದು ಕೊಟ್ಟರು.

 

ತಮ್ಮ, ತಂಗಿ ತಪ್ಪು ಮಾಡಿದರೆ ಅದನ್ನು ಮರೆಮಾಡಬಾರದು. ಮಾಡಿದ ತಪ್ಪನ್ನು ಅರಿಕೆ ಮಾಡಿ ಕ್ಷಮಾಪಣೆ ಹೊಂದಿಕೊಳ್ಳಬೇಕು. O. k ನಾ bye

- Sis. ಸೋಫಿಯಾ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş pokerklas betpas maximcasino pashagaming pashagaming egebet casibom casinolevant virusbet ultrabet grandpashabet royalbet perabet matbet kralbet perabet perabet giriş meritbet meritbet giriş