By Village Missionary Movement
Friday, 19-Jun-2026ಧೈನಂದಿನ ಧ್ಯಾನ(Kannada) – 19.06.2026
ಆಶೀರ್ವಾದವಾ? ಎಚ್ಚರಿಕೆಯಾ?
"...ಸುನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ಉಳಿಸಿದನು" - 2 ಪೇತ್ರ 2:5
ಇಂದು, ಕರ್ತನ ಮಾತುಗಳನ್ನು ಪ್ರಪಂಚದಾದ್ಯಂತ ಹಲವು ಪರಿಮಾಣಗಳಲ್ಲಿ ಬೋಧಿಸಲಾಗುತ್ತಿದೆ. ಮಾನಸಾಂತರದ ಬಗ್ಗೆ ಎಚ್ಚರಿಕೆಯ ಮಾತುಗಳನ್ನು ಕೇಳುವ ಬದಲು, ಅನೇಕ ಜನರು ಸಮೃದ್ಧ ಜೀವನದ ಬಗ್ಗೆ ಆಶೀರ್ವಾದದ ಮಾತುಗಳನ್ನು ಕೇಳಲು ಬಯಸುತ್ತಿದ್ದಾರೆ. "ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ ಇರುವದು" ಎಂದು ಯೇಸುಕ್ರಿಸ್ತನು ಹೇಳಿದರು. ನೋಹನು ದೇವರ ಮಾತನ್ನು ಕೇಳಿ ಆತನ ಚಿತ್ತವನ್ನು ಮಾಡಿದ ವ್ಯಕ್ತಿಯಾಗಿದ್ದರು. ಅವರು ನೀತಿಯ ಬಗ್ಗೆ ಬೋಧಿಸಿದರು. ಲೋಕವು ಪ್ರವಾಹದಿಂದ ನಾಶವಾಗುತ್ತದೆ ಎಂದು ದೇವರು ಎಚ್ಚರಿಕೆಯ ಸಂದೇಶವನ್ನು ನೀಡಿದ್ದರೂ, ಯಾರೂ ಕೇಳಲಿಲ್ಲ, ಆದ್ದರಿಂದ ಅವರು ನಾಶವಾದರು. ನೋಹನು ದುಷ್ಟತನದಿಂದ ತುಂಬಿದ ಜನರ ನಡುವೆ ನಂಬಿಗಸ್ತನಾಗಿ ವಾಸಿಸುತ್ತಿದ್ದರು ಮತ್ತು ದೇವರ ಎಚ್ಚರಿಕೆಯನ್ನು ಆಲಿಸಿದರು. ಆದ್ದರಿಂದ, ಅವರು ಮತ್ತು ಅವರ ಕುಟುಂಬವು ರಕ್ಷಿಸಲ್ಪಟ್ಟಿತು. ದೇವರ ಎಚ್ಚರಿಕೆಯ ಸಂದೇಶವನ್ನು ಕೇಳಿದ ನಂತರ ನಿನೆವೆಯ ಜನರು ತಮ್ಮನ್ನು ತಗ್ಗಿಸಿಕೊಂಡು ಮನತಿರುಗಿದರು. ಆದ್ದರಿಂದ, ಕರ್ತನು ನಿನೆವೆಯ ಜನರನ್ನು ನಾಶವಾಗದಂತೆ ರಕ್ಷಿಸಿದರು. ಪಾಪದಲ್ಲಿ ಜೀವಿಸಿದ ಸೊದೋಮ್ ಗೊಮೋರ ಜನರ ನಡುವೆ ನೀತಿವಂತನಾಗಿ ಬದುಕಿದ ಲೋಟನನ್ನು ದೇವರು ಕುಟುಂಬವಾಗಿ ರಕ್ಷಿಸಿದರು. ನಾವು ಸಹ ಕರ್ತನ ಎಚ್ಚರಿಕೆಯನ್ನು ಸ್ವೀಕರಿಸಿ ನೀತಿಯನ್ನು, ನ್ಯಾಯ ತೀರ್ಪನ್ನು ಕುರಿತ ಮಾತುಗಳ ಕಡೆಗೆ ನೇರವಾಗಿ ನಮ್ಮ ಮನಸ್ಸನ್ನು ತಿರುಗಿಸಿ ಅದಕ್ಕೆ ಕಿವಿಗೊಟ್ಟು ನಡೆಯಬೇಕು. "ನನ್ನ ನಿಯಮಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಕೊಂಡು ಸತ್ಯಪರನಾಗಿ ಇರುವುದಾದರೆ ಅವನೇ ನೀತಿವಂತನು (ಯೆಹೆಜ್ಕೇಲ 18:9) ಎಂದು ಸತ್ಯವೇದವು ಹೇಳುತ್ತಿದೆ.
ನೋಹನ ಕಾಲದಲ್ಲಿ ಸಂಭವಿಸಿದಂತೆಯೇ, ಇಂದಿಗೂ ಅನೇಕರು ದೇವರ ಎಚ್ಚರಿಕೆಯನ್ನು ತಿರಸ್ಕರಿಸಿ ಅಧರ್ಮದಿಂದ ಬದುಕುತ್ತಿದ್ದಾರೆ. ಆದರೆ, ಕರ್ತನ ಬರೋಣದಲ್ಲಿ ನಾವು ರಕ್ಷಿಸಲ್ಪಡಲು ಎಚ್ಚರಿಕೆಯ ಮಾತುಗಳನ್ನು ಕೇಳಿ ಮನತಿರುಗಿ, ನೋಹ ಮತ್ತು ಲೋಟನ ಹಾಗೆ, ನಿನೆವೆಯ ಜನರಂತೆ ನೀತಿವಂತರಾಗಿ ಬದುಕೋಣ. ವಿನಾಶದಿಂದ ತಪ್ಪಿಸಲ್ಪಟ್ಟು ನಿತ್ಯಜೀವವನ್ನು ಪಡೆಯೋಣ. ಅದುವೇ ನಿತ್ಯವಾದ ಆಶೀರ್ವಾದ.
- Mrs. ಹೆಪ್ಸಿಬಾ ರವಿಚಂದ್ರನ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482