Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.06.2026
Share:

By Village Missionary Movement

Thursday, 18-Jun-2026

ಧೈನಂದಿನ ಧ್ಯಾನ(Kannada) – 18.06.2026

 

ಆತ್ಮ ಭಾರ

 

"…(ಯೇಸು) ನನಗೆ ನೀರಡಿಕೆ ಆಗಿದೆ ಅಂದನು." - ಯೋಹಾನ 19:28

 

ಯೇಸುವನ್ನು ಶಿಲುಬೆಗೇರಿಸಿದಾಗ, "ನನಗೆ ಬಾಯಾರಿಕೆಯಾಗಿದೆ" ಎಂದು ಹೇಳಿದರು. ಏಕೆಂದರೆ ಅವರಿಗೆ ದೈಹಿಕವಾಗಿ ಬಾಯಾರಿಕೆಯಾಗಿರಲಿಲ್ಲ, ಅದು ಆತ್ಮದಾಹ. 

 

ಯೇಸು ತಾನು ಸೇವೆ ಮಾಡುವಾಗ, "ನಾನು ನೀತಿವಂತರನ್ನು ಕರೆಯುವದಕ್ಕೆ ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು (ಮತ್ತಾಯ 9:13) ಅಂದನು. ಅದೇ ರೀತಿ, ಸ್ನಾನಿಕನಾದ ಯೋಹಾನನು ಅವರನ್ನು ನೋಡಿ, "ಅಗೋ [ಯಜ್ಞಕ್ಕೆ] ದೇವರು ನೇವಿುಸಿದ ಕುರಿ (ಯೋಹಾನ 1:29) ಎಂದು ಹೇಳಿದನು. ಹೌದು, ಅವರು ಆತ್ಮಗಳಿಗಾಗಿಯೇ ಬಂದರು. ಅವರು ಜನರನ್ನು ನೋಡಿದಾಗ, ಆತ್ಮ ಭಾರದಿಂದ ಮನಮರುಗಿದರು. ಶಿಲುಬೆಗೆ ಹೋಗುವ ಮೊದಲು, ಪಂಕ್ತಿಯಲ್ಲಿದ್ದಾಗ ತನ್ನನ್ನು ತೋರಿಸಿಕೊಡಲಿರುವ ಯೂದನ ಆತ್ಮದ ಬಗ್ಗೆ ಚಿಂತಿಸಿ ಅಯ್ಯೋ; ಆ ಮನುಷ್ಯನು ಹುಟ್ಟದಿದ್ದರೆ ಅವನಿಗೆ ಒಳ್ಳೇದಾಗಿತ್ತು (ಮತ್ತಾಯ 26:24) ಅಂದನು. "ಶಿಲುಬೆಯಲ್ಲಿ ನೇತಾಡುವಾಗಲೂ 

 

ಆತನನ್ನು ನಿಂದಿಸಿದ, ಸುಮ್ಮನೆ ನಿಂತು ನೋಡುತ್ತಿದ್ದ, ಅಳುತ್ತಿದ್ದ ಆತನನ್ನು ಸ್ವೀಕರಿಸದ ಜನರನ್ನು ನೆನೆಸಿ ಭಾರಪಟ್ಟು, ನೀರಡಿಕೆಯಾಗಿದೆ ಎಂದರು. ಆದ್ದರಿಂದ, ಪುನರುತ್ಥಾನದ ನಂತರ, ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ.

 

ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಕೊಡಿರಿ ಎಂದರು. ಹೌದು, ಪ್ರತಿಯೊಬ್ಬ ಮಾನವನ ಆತ್ಮವು ಅಮೂಲ್ಯವಾಗಿದೆ. ಇಡೀ ಜಗತ್ತನ್ನು ತಕ್ಕಡಿಯ ಒಂದು ತಟ್ಟೆಯ ಮೇಲೂ ಒಂದು ಆತ್ಮವನ್ನು ಇನ್ನೊಂದು ತಟ್ಟೆಯ ಮೇಲೂ ಇಟ್ಟರೆ, ಆತ್ಮವೇ ಅಮೂಲ್ಯವಾದದ್ದು. ಆ ಆತ್ಮದ ವಿಮೋಚನೆಗಾಗಿ ಯೇಸು ಕ್ರಿಸ್ತನು ತನ್ನನ್ನೇ ಶಿಲುಬೆಯ ಮೇಲೆ ಅರ್ಪಿಸಿದರು. ನಾವು ಉಚಿತವಾಗಿ ವಿಮೋಚನೆಯನ್ನು ಪಡೆದಿದ್ದೇವೆ. ಆದರೆ ಅದು ದೋಷವಿಲ್ಲದ ರಕ್ತವನ್ನು ಸುರಿಸಿ ಸಂಪಾದಿಸಲ್ಪಟ್ಟದ್ದು. ಇದನ್ನು ಅರಿತುಕೊಂಡು, ನಮ್ಮ ರಕ್ಷಣೆಯನ್ನು ಕಾಪಾಡಿಕೊಂಡು, ಇತರರ ಆತ್ಮಗಳ ಬಗ್ಗೆ ಕಾಳಜಿಯುಳ್ಳವರಾಗಿ, ಯೇಸುವಿನ ಬಗ್ಗೆ ತಿಳಿಸಿ ಅವರ ಆತ್ಮಗಳ ವಿಮೋಚನೆಗಾಗಿ ಪ್ರಾರ್ಥಿಸಿ, ಕಾರ್ಯನಿರ್ವಹಿಸೋಣ. 

- Mrs.ಎಮೀಮಾ ಸೌಂದರರಾಜನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet perabet perabet giriş matbet matbet giriş padişahbet pokerklas perabet madridbet madridbet betpas