Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.06.2026
Share:

By Village Missionary Movement

Wednesday, 17-Jun-2026

ಧೈನಂದಿನ ಧ್ಯಾನ(Kannada) – 17.06.2026

 

ಗ್ರಹಿಸದೇ ಇದ್ದರು

 

"ಆದರೆ ನೋಹನ ದಿವಸಗಳು ಇದ್ದಂತೆಯೇ ಮನುಷ್ಯ ಕುಮಾರನ ಬರೋಣವೂ ಇರುವದು" - ಮತ್ತಾಯ 24:37

 

ನಮ್ಮ ಕರ್ತನಾದ ಯೇಸು ಕ್ರಿಸ್ತನು ಎರಡನೇ ಬಾರಿ ಹಿಂದಿರುಗಿ ಬರುವಾಗ, ಲೋಕವು ನೋಹನ ದಿನಗಳಲ್ಲಿ ಇದ್ದಂತೆಯೇ ಇರುತ್ತದೆ. ಮತ್ತಾಯ 24:38 ರಲ್ಲಿ, ನೋಹನ ದಿನಗಳ ಸ್ಥಿತಿ ಎಂಥದ್ದು ಎಂದು ದೇವರು ಹೇಳುತ್ತಿದ್ದಾರೆ. ಮೊದಲನೆಯದಾಗಿ, ಜನರು ತಿನ್ನುತ್ತಾ ಕುಡಿಯುತ್ತಾ ಇದ್ದರು. ಇದು ಅವರ ದೈನಂದಿನ ಜೀವನದ ಒಂದು ಭಾಗವಾಗಿತ್ತು. ಕುಡಿಯುವುದು ಎಂದು ಹೇಳುವಾಗ ಇದು ಮಧ್ಯಪಾನದಂತವುಗಳನ್ನು ಉಲ್ಲೇಖಿಸದೇ, ಆಹಾರದ ಒಂದು ಭಾಗವಾಗಿ ಹೇಳಲ್ಪಟ್ಟಿದೆ. ನಂತರ ಅದೇ ವಚನದಲ್ಲಿ, "ಹೆಣ್ಣು ತೆಗೆದುಕೊಳ್ಳುವುದು ಕೊಡುವುದು" ಎಂದು ಕರ್ತನು ಹೇಳುವಾಗ ಇದು ವ್ಯಭಿಚಾರದಂತಹ ಪಾಪವನ್ನು ಹೇಳದೇ ಮದುವೆಯ ಬಗ್ಗೆ ಹೇಳಲಾಗಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನೋಹನ ದಿನಗಳಲ್ಲಿ, ಜನರು ದೈನಂದಿನ ಜೀವನ, ತಿನ್ನುವುದು ಮದುವೆಯಾಗುವಂತದ್ದು ಇಂತಹ ಸಾಮಾನ್ಯ ಪಾಪರಹಿತ ವಿಷಯಗಳಲ್ಲೇ ತೊಡಗಿದ್ದರು. ಆದರೆ ಅವರು ತಮ್ಮ ಜೀವನದಲ್ಲಿ ಸೃಷ್ಟಿಕರ್ತನಾದ ದೇವರನ್ನು ಹುಡುಕಲಿಲ್ಲ. ಅವರು ಆತನಿಗೆ ಮೊದಲ ಸ್ಥಾನವನ್ನು ನೀಡಲಿಲ್ಲ.

 

ಪ್ರಿಯರೇ, ನಾವು ಕೂಡ ಕರ್ತನಾದ ಯೇಸು ಕ್ರಿಸ್ತನನ್ನು ಪ್ರೀತಿಸಿ ಆತನನ್ನು ನಮ್ಮ ಜೀವನದ ಕೇಂದ್ರವನ್ನಾಗಿ ಮಾಡಿಕೊಳ್ಳುವ ಬದಲು, ಆಹಾರ ಮತ್ತು ವಿವಾಹದಂತಹ ಜೀವನದ ಐಹಿಕ ವಿಷಯಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವ ಅಪಾಯದಲ್ಲಿರಬಹುದು. ಈ ವಾಕ್ಯಭಾಗವು ಜೀವನದ ಪ್ರತಿಯೊಂದು ಸನ್ನಿವೇಶದಲ್ಲೂ ಕರ್ತನನ್ನು ಮೊದಲು ಇಡಲು ನಮಗೆ ನೆನಪಿಸುತ್ತಿದೆ.

- Bro. ಸಂತೋಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet bahiscasino pashagaming pashagaming betpas betpas giriş perabet perabet giriş perabet perabet giriş matbet matbet giriş padişahbet virusbet virüsbet pokerklas