Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.06.2026
Share:

By Village Missionary Movement

Tuesday, 16-Jun-2026

ಧೈನಂದಿನ ಧ್ಯಾನ(Kannada) – 16.06.2026

 

ಸುತ್ತಲು ಆವರಿಸಿದ ಧ್ವನಿ 

 

"...ಯೆರೂಸಲೇವಿುನ ಉತ್ಸವದ ಹರ್ಷಧ್ವನಿಯು ಬಹುದೂರದವರೆಗೂ ಕೇಳಿಸಿತು." - ನೆಹೆಮಿಯ 12:43

 

ವಾಲ್ಟ್ ಡಿಸ್ನಿ ಕಂಪನಿಯು ಸಂಗೀತವನ್ನು ಕೇಳುವಲ್ಲಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಿತು. ಇದನ್ನು ಸ್ಟೀರಿಯೊಫೋನಿಕ್ ಧ್ವನಿ ಎಂದು ಕರೆಯಬಹುದು. ವಾಲ್ಟ್ ಡಿಸ್ನಿ ಕಂಪನಿಯು ವೇದಿಕೆಗಳಲ್ಲಿ ಪ್ರದರ್ಶನಗಳನ್ನು ಅಥವಾ ಪರದೆಯ ಮೇಲೆ ಕಾಣುವುದನ್ನು ಅಥವಾ ಸಂಗೀತವನ್ನು ಕೇಳಲು ಮತ್ತು ಆನಂದಿಸಲು ಆಂಪ್ಲಿಫೈಯರ್‌ಗಳನ್ನು ಬಳಸುವ ವಿಧಾನವನ್ನು ರಚಿಸಿತು. ಈ ರೀತಿಯಾಗಿ, ನಾವು ಇನ್ನೂ ನಮ್ಮನ್ನು ಸುತ್ತುವರೆದಿರುವ ಧ್ವನಿಯ ಮೂಲಕ ಹೊಸ ರೀತಿಯಲ್ಲಿ ಸಂಗೀತವನ್ನು ಕೇಳುತ್ತೇವೆ ಮತ್ತು ಆನಂದಿಸುತ್ತೇವೆ. ಆದರೆ ನೆಹೆಮಿಯ ಇದನ್ನು ಸಾವಿರಾರು ವರ್ಷಗಳ ಹಿಂದೆ ಜಾರಿಗೆ ತಂದರು. ಯೆರೂಸಲೇಮಿನ ಪುನರ್ನಿರ್ಮಿಸಲಾದ ಗೋಡೆಯನ್ನು ಪ್ರತಿಷ್ಠೆ ಮಾಡುವಾಗ, ನೆಹೆಮಿಯ ಈ ವಿಧಾನವನ್ನು ಪರಿಚಯಿಸಿದರು. "ಆಮೇಲೆ ನಾನು ಯೆಹೂದ ಪ್ರಭುಗಳನ್ನು ಗೋಡೆಯ ಮೇಲೆ ಕರಕೊಂಡು ಬಂದು, ಸ್ತುತಿ ಮಾಡಿ ನಡೆದುಕೊಂಡು ಹೋಗುವಂತೆ ಎರಡು ದೊಡ್ಡ ಗುಂಪುಗಳನ್ನು ನಿಲ್ಲಿಸಿದೆನು" (ನೆಹೆಮಿಯ 12:31) ಎಂದು ಅವರು ವಿವರಿಸುತ್ತಾರೆ. ಗೋಡೆಯ ಮೇಲೆ ಬಲಗಡೆಗೆ ತಿಪ್ಪೆಬಾಗಲಲ್ಲಿ ಪ್ರಾರಂಭವಾಗಿ ಎರಡು ಹಾಡುವ ಗುಂಪುಗಳೂ ಬಲಗಡೆ ಎಡಗಡೆಗೆ ಬೇರ್ಪಟ್ಟು ಸ್ತುತಿಯೊಂದಿಗೆ ಯೆರೂಸಲೇಮನ್ನು ಸುತ್ತಿ ಆಲಯದಲ್ಲಿ ಬಂದು ನಿಂತರು. ಗಾಯಕವೃಂದಗಳು ಜನರನ್ನು ಬಹು ಸಂತೋಷದೊಳಗೆ ನಡೆಸಿಕೊಂಡು ಹೋದರು. ಏಕೆಂದರೆ ದೇವರು ಅವರಿಗೆ ಬಹು ಸಂತೋಷವನ್ನು ಉಂಟುಮಾಡಿದ್ದರಿಂದ ಸಂತೋಷವಾಗಿದ್ದರು. ಯೆರೂಸಲೇವಿುನ ಉತ್ಸವದ ಹರ್ಷಧ್ವನಿಯು "ಬಹುದೂರದವರೆಗೂ ಕೇಳಿಸಿತು". ಸನ್ಬಲ್ಲಟನಂತಹ ಶತ್ರುಗಳ ವಿರೋಧವನ್ನು ಜಯಿಸಿ ಗೋಡೆಯನ್ನು ಪುನರ್ನಿರ್ಮಿಸಲು ಸಹಾಯ ಮಾಡಿದ್ದಕ್ಕಾಗಿ ಅವರು ದೇವರನ್ನು ಸ್ತುತಿಸಿದರು. 

 

ಪ್ರಿಯರೇ, ಒಂದು Stereo effect ಹಾಗೆ ದೇವರನ್ನು ಸ್ತುತಿಸಿ ಹಾಡುವುದು ನಮ್ಮನ್ನು ಸುತ್ತಲೂ ಆವರಿಸಬೇಕು. ನಮ್ಮ ಸ್ತುತಿ ಹೇಗಿದೆ? 

- A. ಬ್ಯೂಲಾ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al instagram unban service instagram unban service matbet matbet bahiscasino betsat betsat pashagaming pashagaming bahiscasino giriş