Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.06.2026
Share:

By Village Missionary Movement

Friday, 12-Jun-2026

ಧೈನಂದಿನ ಧ್ಯಾನ(Kannada) – 12.06.2026

 

ಕ್ಷಮಾಪಣೆ 

 

"...ಕರ್ತನು ನಿಮ್ಮನ್ನು ಕ್ಷವಿುಸಿದಂತೆಯೇ ನೀವೂ ಕ್ಷವಿುಸಿರಿ." - ಕೊಲೊಸ್ಸೆ.3:13

 

ಮಹಾತ್ಮ ಗಾಂಧಿ ಜೈಲಿನಲ್ಲಿದ್ದಾಗ, ಸ್ಮಟ್ಸ್ ಎಂಬ ಕ್ರೂರ ಜೈಲರ್ ಎಲ್ಲಾ ಕೈದಿಗಳನ್ನು ಹೊಡೆಯುತ್ತಿದ್ದರು. ಆದರೆ ಗಾಂಧಿಯನ್ನು ಹೊಡೆಯುತ್ತಿದ್ದಾಗ, ಅವರು ಒಂದು ಹೆಸರನ್ನು ಹೇಳಿದರು ಆ ಹೆಸರು ಎಲ್ಲರನ್ನೂ ಯೋಚಿಸುವಂತೆ ಮಾಡಿತು. ಆ ದಿನದಿಂದ ಗಾಂಧಿಯನ್ನು ಹೊಡೆಯುವುದನ್ನು ನಿಲ್ಲಿಸಿಬಿಟ್ಟರು. ಒಂದು ದಿನ, ಸ್ಮಟ್ಸ್ ಗಾಂಧಿಯನ್ನು ಮಿಸ್ಟರ್ ಗಾಂಧಿ ಎಂದು ನಯವಾಗಿ ಕರೆದು, ನಾನು ನಿಮಗೆ ಏನಾದರೂ ಉಪಕಾರ ಮಾಡಬೇಕೆಂದು ಭಾವಿಸುತ್ತಿದ್ದೇನೆ. ನಿಮಗೆ ಏನು ಬೇಕು ಎಂದರು. ಗಾಂಧಿಯೂ ಕೂಡ ನನಗೆ ಒಂದು ಪುಸ್ತಕ ಬೇಕು" ಎಂದು ಕೇಳಿ ಪಡೆದುಕೊಂಡರು. ಆ ದಿನದಿಂದ, ಇಬ್ಬರೂ ಸ್ನೇಹಿತರಾದರು. ಗಾಂಧಿಯು ಬಿಡುಗಡೆಯಾದ ದಿನದಂದು, ಗಾಂಧಿ ಸ್ಮಟ್ಸ್‌ಗೆ ಜೈಲಿನಲ್ಲಿ ಹೊಲಿದ ಬೂಟುಗಳನ್ನು ಉಡುಗೊರೆಯಾಗಿ ನೀಡಿದರು. ಅವರು ಉತ್ಸಾಹದಿಂದ ಅವುಗಳನ್ನು ಹಾಕಿನೋಡಿ ನನ್ನ ಪಾದಗಳ ಅಳತೆಯನ್ನು ಇಷ್ಟು ನಿಖರವಾಗಿ ಹೊಲಿಯಲು ನಿಮಗೆ ಹೇಗೆ ಗೊತ್ತು ಎಂದು ಕೇಳಿದರು. ಗಾಂಧಿ ತಮ್ಮ ಎದೆಯ ಮೇಲಿದ್ದ ಬಟ್ಟೆಯನ್ನು ತೆಗೆದು, ನೀವು ನನ್ನನ್ನು ನಿಮ್ಮ ಬೂಟುಗಳಿಂದ ಒದೆಯುವಾಗ ನೀವು ಮಾಡಿದ ಗಾಯಗಳನ್ನು ಅಳೆದು ಈ ಬೂಟುಗಳನ್ನು ಹೊಲಿದಿದ್ದೇನೆ ಎಂದು ಹೇಳಿದರು. ನಾನೊಬ್ಬ ಮೃಗ! ಉಗ್ರ ಮೃಗ! ಎಂದು ಸ್ಮಟ್ಸ್ ಕಣ್ಣೀರಿನಿಂದ ಗಾಂಧಿಗೆ ಹೇಳಿ, ನನ್ನನ್ನು ಕ್ಷಮಿಸಿಬಿಡಿ ಎಂದರು. ಗಾಂಧಿಯ ಕ್ಷಮಿಸುವ ಗುಣವು ಅವರನ್ನು ಸೌಮ್ಯ ಮನುಷ್ಯನನ್ನಾಗಿ ಮಾರ್ಪಡಿಸಿತು. 

 

ಹೊಸ ಒಡಂಬಡಿಕೆಯಲ್ಲಿ, ಪೇತ್ರನು ಯೇಸುವಿನ ಬಳಿಗೆ ಬಂದು, "ಕರ್ತನೇ, ನನ್ನ ಸಹೋದರನು ತಪ್ಪುಮಾಡಿ ಬಂದರೆ, ನಾನು ಅವರನ್ನು ಎಷ್ಟು ಬಾರಿ ಕ್ಷಮಿಸಬೇಕು? ಏಳು ಬಾರಿ ಮಾತ್ರವಾ ಎಂದು ಕೇಳಿದರು. ಯೇಸು, ಏಳು ಬಾರಿ ಮಾತ್ರವಲ್ಲ, ಎಪ್ಪತ್ತೇಳು ಬಾರಿ ಎಂದು ನಿನಗೆ ಹೇಳುತ್ತೇನೆ. ಆದ್ದರಿಂದ ನೀವು ನಿಮ್ಮ ನಿಮ್ಮ ಸಹೋದರನ ಅಪರಾಧಗಳನ್ನು ಮನಃಪೂರ್ವಕವಾಗಿ ಕ್ಷಮಿಸದೇ ಹೋದರೆ ನನ್ನ ಪರಲೋಕದ ತಂದೆಯೂ ಸಹ ನಿಮಗೆ ಹೀಗೆಯೇ ಮಾಡುತ್ತಾರೆ ಎಂದರು. ಅಪೊಸ್ತಲನಾದ ಪೌಲನು ಎಫೆಸದವರಿಗೆ ಬರೆದ ಪತ್ರಿಕೆಯಲ್ಲಿ, "ಎಲ್ಲಾ ಕಹಿ, ಕೋಪ, ಮೂರ್ಖತ್ವ ಬೇರೆ ಎಲ್ಲಾ ರೀತಿಯ ಕೆಟ್ಟತನವೂ ನಿಮ್ಮನ್ನು ಬಿಟ್ಟು ತೊಲಗಲಿ. ಕರ್ತನು ನಿಮ್ಮನ್ನು ಕ್ಷವಿುಸಿದಂತೆಯೇ ನೀವೂ ಒಬ್ಬರನ್ನೊಬ್ಬರು ಕ್ಷವಿುಸಿರಿ ಎಂದರು.

 

ಇದನ್ನು ಓದುತ್ತಿರುವ ಪ್ರಿಯ ದೇವರ ಮಕ್ಕಳೇ, ಯೇಸು ತನ್ನ ರಕ್ತದಿಂದ ನಮ್ಮ ಪಾಪಗಳನ್ನು ತೊಳೆಯುವುದು ಮಾತ್ರವಲ್ಲದೆ ಅವುಗಳನ್ನು ಕ್ಷಮಿಸಿಯೂ ಬಿಟ್ಟರು. ಆದ್ದರಿಂದ, ನಾವು ಇತರರನ್ನು ಕ್ಷಮಿಸಬೇಕು. ಇಂದು, ಅನೇಕ ಕುಟುಂಬಗಳು ಮತ್ತು ಸಂಬಂಧಗಳು ಕ್ಷಮೆಯ ಗುಣವನ್ನು ಹೊಂದಿಲ್ಲ. ಅದು ವಿಭಜನೆಗಳು ಮತ್ತು ಸಂಘರ್ಷಗಳಿಗೆ ಕಾರಣವಾಗಿದೆ. ಇತರರ ತಪ್ಪುಗಳನ್ನು ಕ್ಷಮಿಸಲು ಪ್ರಯತ್ನಿಸೋಣ. ಮದರ್ ತೆರೇಸಾ ಹೇಳಿದಂತೆ, ಶಿಕ್ಷೆ ನೀಡುವುದರಲ್ಲಿ ವಿಳಂಬ ಮಾಡಿ. ಕ್ಷಮಿಸುವ ಬಗ್ಗೆ ಯೋಚಿಸಲೂ ಬೇಡಿ. ಮನುಷ್ಯರಾಗಿ ನಾವು ಸಂತೋಷದಿಂದ ಬದುಕಲು ಕ್ಷಮೆ ತುಂಬಾ ಅವಶ್ಯಕ. ಆದ್ದರಿಂದ ಕ್ಷಮಿಸೋಣ! ಮರೆಯೋಣ!

- Bro. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಈ ವರ್ಷ, 1000 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al padişahbet padişahbet giriş betasus casibom maximcasino pashagaming pashagaming maximcasino pashagaming superbetin superbetin