By Village Missionary Movement
Thursday, 11-Jun-2026ಧೈನಂದಿನ ಧ್ಯಾನ(Kannada) – 11.06.2026
ದೇವರಿಗಾಗಿ ನನ್ನ ಪಾಲು ಏನು?
"...ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು" - 2 ಕೊರಿಂಥ 9:7
ಒಬ್ಬ ವ್ಯಕ್ತಿ ತನ್ನ ಸಂಬಳದ ಹಣವನ್ನು ತಂದು ಒಂದು ಪೆಟ್ಟಿಗೆಯಲ್ಲಿ ಹಾಕಿಟ್ಟರು. ಮಧ್ಯರಾತ್ರಿಯಲ್ಲಿ, ಎಲ್ಲಾ 500 ರೂಪಾಯಿ ನೋಟುಗಳು ಜಿಗಿದು ನೃತ್ಯ ಮಾಡಿ ಹಾಡಲು ಪ್ರಾರಂಭಿಸಿದವು. 'ನಾವು ಸೂಪರ್ ಮಾರ್ಕೆಟ್ ಗೆ ಹೋಗುತ್ತೇವೆ, ನಾವು ಸೂಪರ್ ಮಾರ್ಕೆಟ್ ಗೆ ಹೋಗುತ್ತೇವೆ' ಎಂದು. ನಂತರ 100 ರೂಪಾಯಿ ನೋಟುಗಳು ಚಪ್ಪಾಳೆ ತಟ್ಟಿ ನೃತ್ಯ ಮಾಡಿ 'ನಾವು ಶಾಲೆಗೆ ಹೋಗುತ್ತೇವೆ, ನಾವು ಶಾಲೆಗೆ ಹೋಗುತ್ತೇವೆ' ಎಂದು ಹಾಡಿದವು. ಇದನ್ನು ನೋಡಿದ 10 ರೂಪಾಯಿ ನೋಟುಗಳು ಸಹ 'ನಾವು ಅಂಗಡಿಗೆ ಹೋಗುತ್ತೇವೆ, ನಾವು ಅಂಗಡಿಗೆ ಹೋಗುತ್ತೇವೆ' ಎಂದು ನಕ್ಕವು. ನಂತರ ಎಲ್ಲರೂ ಹೊರಗೆ ಹೋಗುತ್ತಿದ್ದಾರೆ ಎಂದು ಸಣ್ಣ ನಾಣ್ಯಗಳು ತುಂಬಾ ದುಃಖಪಟ್ಟವು. 500 ರೂಪಾಯಿ ನೋಟುಗಳು ದಿನಸಿ ಖರೀದಿಸಲು, 100 ರೂಪಾಯಿ ನೋಟುಗಳು ಶಾಲಾ ಶುಲ್ಕವನ್ನು ಪಾವತಿಸಲು ಮತ್ತು 10 ರೂಪಾಯಿ ನೋಟುಗಳು ತರಕಾರಿಗಳನ್ನು ಖರೀದಿಸಲು ಹೋಗುತ್ತಿವೆ. ನಾವು ಎಲ್ಲಿಗೆ ಹೋಗುತ್ತೇವೋ ಎಂದು ತುಂಬಾ ದುಃಖದಲ್ಲಿದ್ದವು. ಇದ್ದಕ್ಕಿದ್ದಂತೆ, ಸಣ್ಣ ನಾಣ್ಯಗಳ ಮುಖ ಅರಳಿ, 'ನಾವು ಆಲಯಕ್ಕೆ ಹೋಗುತ್ತಿದ್ದೇವಲ್ಲಾ' ಎಂದು ನಕ್ಕವು.
ನನ್ನ ಪ್ರೀತಿಯ ದೇವರ ಮಕ್ಕಳೇ, ಅರ್ಥವಾಗುತ್ತಿದೆಯಾ? ಇಂದು ನಾವು ಯೇಸುವಿಗೆ ಏನು ಕೊಡಲಿದ್ದೇವೆ? 500 ರೂ, 100 ರೂ, 10 ರೂ ಅಥವಾ ನಾಣ್ಯಗಳಾ ಯಾವುವು? ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು ಎಂದು ಸತ್ಯವೇದವು ಹೇಳುತ್ತಿದೆ. ನಾನು 20 ವರ್ಷಗಳಿಗೂ ಹೆಚ್ಚು ಕಾಲ ಸಭೆಯ ಸೇವೆಯನ್ನು ಮಾಡುತ್ತಿದ್ದೇನೆ. ನಾನು ಕಾಣಿಕೆ ಪೆಟ್ಟಿಗೆಯನ್ನು ತೆರೆದಾಗ, ಹಾಲು ಮಾರುವವರು, ರಿಕ್ಷಾ ಚಾಲಕರು ಮತ್ತು ಆಟೋ ಚಾಲಕರು ತೆಗೆದುಕೊಳ್ಳದ ಹರಿದ ನೋಟುಗಳು ಕಾಣಿಕೆ ಪೆಟ್ಟಿಗೆಯಲ್ಲಿ ಇರುವುದನ್ನು ನೋಡಿದ್ದೇನೆ. ಇದನ್ನೇ ಮಲಾಕಿ ಪ್ರವಾದನೆಯ ಪುಸ್ತಕದಲ್ಲಿ ಹೀಗೆ ಬರೆಯಲಾಗಿದೆ ಒಳ್ಳೆಯದನ್ನು ಇಟ್ಟುಕೊಂಡು" ಕಳವಿನ ಪಶುವನ್ನೂ ಕುಂಟಾದದ್ದನ್ನೂ ರೋಗಿಯಾದದ್ದನ್ನೂ ಕಾಣಿಕೆಯಾಗಿ ತಂದೊಪ್ಪಿಸುತ್ತೀರಿ" ಎಂದು (ಮಲಾಕಿ 1:13).
ಕರ್ತನಿಗೆ ಅರ್ಪಿಸತಕ್ಕ ಕಾಣಿಕೆ ಮೊದಲ ಮಾಗಿದ ಹಣ್ಣು, ಬಂಡವಾಳ, ಉತ್ತಮ ರೂಪಾಯಿ ನೋಟುಗಳು. ಯಾರಿಗೆ ಮತ್ತು ಯಾವುದಕ್ಕೆ ನಾವು ಪ್ರಾಮುಖ್ಯತೆ ನೀಡುತ್ತಿದ್ದೇವೆ? ದೇವರಿಗಾ, ಅಥವಾ ಇತರ ವಿಷಯಗಳಿಗಾ? ನಾವು ಯಾವುದನ್ನು ಬಿತ್ತುತ್ತೇವೋ ಅದನ್ನೇ ಕೊಯ್ಯುತ್ತೇವೆ. ಕರ್ತನಿಗೇ ಮೊದಲ ಸ್ಥಾನ, ಮೊದಲ ಬಾರಿಗೆ. ದೇವರು ಅದನ್ನು ಸ್ವೀಕರಿಸುತ್ತಾರೆ. ಕಾಯಿನನು ಮೊದಲ ಬಾರಿಗೆ ನೀಡಲಿಲ್ಲ. ಹೇಬೆಲನು ಮೊದಲ ಬಾರಿಗೇ ಕೊಟ್ಟರು. ಕರ್ತನು ಆ ಕಾಣಿಕೆಯನ್ನು ಸ್ವೀಕರಿಸಿದರು. ನಾವು ಕೊಟ್ಟದ್ದನ್ನು ಕರ್ತನು ಸ್ವೀಕರಿಸಿದರೆ ಮಾತ್ರ ಅದು ನಮಗೆ ಆಶೀರ್ವಾದವಾಗಿರುತ್ತದೆ. ಕರ್ತನಿಗೇ ಮೊದಲ ಸ್ಥಾನ ಕೊಡೋಣ. ಕರ್ತನು ತಾನೇ ನಮ್ಮನ್ನು ಆಶೀರ್ವದಿಸಲಿ.
- Mrs. ಹೆಪ್ಸಿಬಾ ಇಮ್ಮಾನುವೇಲ್
ಪ್ರಾರ್ಥನಾ ಅಂಶ:
ಭಾರತದಾದ್ಯಂತ ಒಂದು ಲಕ್ಷ ಹಳ್ಳಿಗಳನ್ನು ಭೇಟಿ ಮಾಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482