Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.06.2021
Share:

By Village Missionary Movement

Thursday, 24-Jun-2021

ಧೈನಂದಿನ ಧ್ಯಾನ(Kannada) – 24.06.2021

 

“ಹೊತ್ತಾರೆ ನಿನ್ನ ಕೃಪೆಯು ನನಗೆ ಪ್ರಕಟವಾಗಲಿ; ನಿನ್ನಲ್ಲಿ ಭರವಸವಿಟ್ಟಿದ್ದೇನಲ್ಲಾ. ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು; ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ” - ಕೀರ್ತನೆಗಳು 143:8

 

ಬೆಳಗಾಗುವುದಕ್ಕಿಂತಾ ಮುಂಚೆ ಕತ್ತಲು ಆವರಿಸಿರುವ ಮುಂಜಾನೆಯ ಸಮಯ ಕರ್ತನೊಂದಿಗೆ ಸಂಭಾಷಿಸಲು ಒಂದು ಅದ್ಭುತವಾದ ಸಮಯ. ಮನುಷ್ಯರ ಮುಖವನ್ನು ನೋಡುವುದಕ್ಕಿಂತ ಮುಂಚೆ ಕರ್ತನ ಸನ್ನಿಧಾನವನ್ನು ಹುಡುಕುತ್ತಾ ಆ ದಿನಕ್ಕೆ ದೇವರ ಯೋಜನೆಯನ್ನು ಗ್ರಹಿಸಿ ದೇವರ ಕೃಪೆಯನ್ನು ಹೊಂದಿಕೊಳ್ಳುವುದಕ್ಕೆ ಕಾದಿರುವ ಸಮಯವೇ ಜಯ ಹೊಂದಿಕೊಳ್ಳುವ ಸಮಯ. ನಿಜವಾಗಿಯೂ ಪ್ರತಿಯೊಂದು ಕ್ರೈಸ್ತನ ಜೀವನದಲ್ಲಿ ಇದು ಕ್ರಮವಾಗಿದ್ದರೆ ಆತನು ಖಂಡಿತವಾಗಿ ಲೋಕವನ್ನು ಜಯಿಸುತ್ತಾನೆ.

 

ನಮ್ಮ ರಕ್ಷಕನಾದ ಯೇಸುಕ್ರಿಸ್ತನು ಕೂಡ ಮುಂಜಾನೆಯಲ್ಲಿ ಎದ್ದು ತಂದೆಯ ಸಮ್ಮುಖಕ್ಕೆ ಹೋದರು. ತಂದೆಯ ಚಿತ್ತವನ್ನು ಅವರ ಯೋಜನೆಯನ್ನು ತಿಳಿದುಕೊಂಡರು. ಅದರ ಪ್ರಕಾರ ಅದ್ಭುತ ಕಾರ್ಯಗಳನ್ನು ಮಾಡುತ್ತಾ ಸೈತಾನನನ್ನು ಸುಲಭವಾಗಿ ಜಯಿಸಿದರು. ಮತ್ತು ಬೈಬಲ್ ನಲ್ಲಿರುವ ಪರಿಶುದ್ಧರು ತಮ್ಮ ಶತ್ರುಗಳನ್ನು ಸಂಹರಿಸುವುದಕ್ಕೆ, ದೇಶಗಳನ್ನು ಸ್ವತಂತ್ರಿಸಿಕೊಳ್ಳುವದಕ್ಕೆ ಮುಂಜಾನೆಯೆದ್ದು ಹೋದದ್ದನ್ನು ಓದುತ್ತೇವೆ.

 

ಮುಖ್ಯವಾಗಿ ಯೆಹೋಷಫಾಟನೆಂಬ ಯೆಹೂದ್ಯರ ಅರಸನಿಗೆ ವಿರುದ್ಧವಾಗಿ ಯುದ್ಧ ಮಾಡುವುದಕ್ಕೆ ಮೋವಾಬ್ಯರು, ಅಮೋರಿಯರು ನೋಡುತ್ತಿದಾಗ ಆತನು ಬಹಳ ಕಳವಳಗೊಂಡನು. ಆದರೂ ಅರಸನನ್ನು, ದೇಶದ ಜನರನ್ನು ಅವರ ದೃಷ್ಟಿಯನ್ನು ದೇವರ ಕಡೆಗೆ ತಿರುಗಿಸಿ, ತಮ್ಮ ಕೈಗಳನ್ನು ಆತನ ಕಡೆಗೆ ಚಾಚಿ ಪ್ರಾರ್ಥನೆ ಮಾಡಿದರು. ಉತ್ತರವಾಗಿ ದೇವರು ಭಯಪಡಬೇಡಿರಿ, ಯುದ್ಧವು ನಿಮ್ಮದಲ್ಲ ಯುದ್ಧವು ನನ್ನದೇ ಎಂದರು. ನಡೆದದ್ದೇನು ಅವರ ಶತ್ರುಗಳನ್ನು ಸಂಹರಿಸುವುದಕ್ಕೆ ಮುಂಜಾನೆಯೇ ಎದ್ದರು. ದೇವರನ್ನು ಸ್ತುತಿಸಿ ಹಾಡು ಹಾಡುವ ಗುಂಪುಗಳನ್ನು ಸೈನಿಕರ ಮುಂದೆ ನಿಲ್ಲಿಸಿದರು. ಸ್ತುತಿ ಮಾಡಲು ಪ್ರಾರಂಭಿಸಿದಾಗ ಶತ್ರುಗಳು ತಮ್ಮೊಳಗೆ ತಾವೇ ಕಡಿದುಕೊಂಡು ಸಾಯಿಸಲ್ಪಟ್ಟರು. ಎಷ್ಟು ದೊಡ್ಡ ಜಯದಘೋಷ.

 

ಪ್ರಿಯರೇ ಶತ್ರುವಾದ ಸೈತಾನನು ನಿಮ್ಮನ್ನು ಬೆದರಿಸುತ್ತಿದ್ದಾನಾ?? ನಿಮ್ಮನ್ನು ಸಾಯಿಸುತ್ತೇನೆ ಎಂದು ಸವಾಲು ಹಾಕುತ್ತಿದ್ದಾನಾ?? ಇಲ್ಲವೇ ಮನುಷ್ಯರು ನಿಮಗೆ ವಿರುದ್ಧವಾಗಿ ಎದ್ದೇಳಿದ್ದಾರಾ?? ಚಿಂತಿಸಬೇಡಿರಿ. ದೇವರು ನಮ್ಮೊಂದಿಗೆ ನಿಂತಿರುವಾಗ ನಾವು ಚಿಂತಿಸುವುದು ಏಕೆ. ಯುದ್ಧವು ಯಹೋವನ ದಲ್ಲವೇ! ನಾವು ಮಾಡಬೇಕಾದದ್ದೆಲ್ಲಾ ಮುಂಜಾನೆ ಎದ್ದು ದೇವರ ಸನ್ನಿಧಾನದಲ್ಲಿ ನಿಂತುಕೊಳ್ಳಬೇಕು.ಹೌದು ಮುಂಜಾನೆ ಮಾಡುವ ಪ್ರಾರ್ಥನೆ ಬಹುಮುಖ್ಯವಾದದ್ದು. ಬಹಳ ಕತ್ತಲಾಗಿರುವಾಗ ಸಮಯ ಬಹಳ ಮಹಿಮೆಯುಳ್ಳ ಸಮಯ. ಮುಂಜಾನೆಯ ಪ್ರಾರ್ಥನೆ ಜಯವನ್ನು ಕೊಡುತ್ತದೆ. ಮುಂಜಾನೆ ಎದ್ದೇಳುವ ಅನುಭವವನ್ನು ಅಭ್ಯಾಸ ಮಾಡಿಕೊಂಡು ಜಯ ವೀರರಾಗಿ ಜೀವಿಸಿ ಮುಂದಕ್ಕೆ ಹೋಗೋಣ.

- ಎಸ್. ಮನೋಜ್ ಕುಮಾರ್

 

ಪ್ರಾರ್ಥನಾ ಅಂಶ:-

ದೈನಂದಿನ ಧ್ಯಾನ ಸಂದೇಶವನ್ನು ಓದುತ್ತಾ ಒಳಿತನ್ನು ಹೊಂದಿಕೊಂಡವರು ಸತ್ಯಕ್ಕನುಸಾರವಾಗಿ ನಡೆದುಕೊಂಡು ಸಾಕ್ಷಿಯಾಗಿ ಜೀವಿಸುವಂತೆ ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş