Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.06.2026
Share:

By Village Missionary Movement

Wednesday, 10-Jun-2026

ಧೈನಂದಿನ ಧ್ಯಾನ(Kannada) – 10.06.2026

 

ಮೊದಲು ಯೇಸುವೇ 

 

"ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ..." - ಮತ್ತಾಯ 6:33

 

ಒಬ್ಬ ರಾಜನು ತನ್ನ ನಿಧಿಯ ಪೆಟ್ಟಿಗೆಯನ್ನು ಆಭರಣಗಳು ಮತ್ತು ಅಮೂಲ್ಯ ಕಲ್ಲುಗಳಿಂದ ತುಂಬಿಸಿ ಅರಮನೆಗೆ ಪ್ರಯಾಣಿಸುತ್ತಿದ್ದರು. ಅವರ ರಕ್ಷಣೆಗಾಗಿ, ಸೇವಕರು ಮತ್ತು ಮಂತ್ರಿಗಳು ಆನೆಯ ಮೇಲೆ ಸವಾರಿ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ, ಆನೆ ಎಡವಿ ನಿಧಿಯ ಪೆಟ್ಟಿಗೆ ಜಾರಿ ಕೆಳಗೆ ಬಿತ್ತು. ಆಗ ನಿಧಿಯ ಪೆಟ್ಟಿಗೆ ತೆರೆಯಲ್ಪಟ್ಟು ಅದರೊಳಗಿನ ಆಭರಣಗಳು ಚದುರಿಹೋದವು. ಚಿನ್ನದ ನಾಣ್ಯಗಳು ಮತ್ತು ಅಮೂಲ್ಯ ಮುತ್ತುಗಳು ನಾಲ್ಕು ದಿಕ್ಕುಗಳಲ್ಲಿಯೂ ಉರುಳಿದವು. ರಾಜನು ಏನು ಆದೇಶಿಸುತ್ತಾನೆಂದು ತಿಳಿಯದೆ ಎಲ್ಲರೂ ಸ್ತಬ್ಧವಾಗಿ ನಿಂತರು. ರಾಜನು ಒಳ್ಳೆಯ ಮನಸ್ಸುಳ್ಳ ಉದಾರ ಪ್ರಭುವಾಗಿದ್ದರು. ಅವರು ಒಂದು ಕ್ಷಣ ಯೋಚಿಸಿಬಿಟ್ಟು, "ಎಲ್ಲವೂ ನಿಮ್ಮದೇ. ನಿಮಗೆ ಬೇಕಾದುದನ್ನು ತೆಗೆದುಕೊಳ್ಳಿರಿ" ಎಂದು ಹೇಳಿದರು. ಸೇವಕರು ಮತ್ತು ಮಂತ್ರಿಗಳು ಆಕಡೆ ಈಕಡೆ ಓಡುತ್ತಾ ಕೆಳಗೆ ಬಿದ್ದದ್ದನ್ನು ಎತ್ತಿ ಸೇರಿಸಿಕೊಂಡರು. ಆಗ ರಾಜನ ನೋಟವು ಅವರ ಬಳಿ ನಿಂತಿದ್ದ ಒಬ್ಬ ಸೇವಕನ ಮೇಲೆ ಬಿತ್ತು. ಅವನು ರಾಜನ ಮೇಲಿಟ್ಟಿದ್ದ ತನ್ನ ದೃಷ್ಟಿಯನ್ನು ಆಕಡೆ ಈಕಡೆ ತಿರುಗಿಸದೇ ಈಟಿಯ ಮೇಲಿನ ಹಿಡಿತವನ್ನು ಸಡಿಲಿಸದೇ ನಿಂತಿದ್ದನು. ರಾಜನಿಗೆ ಆಶ್ಚರ್ಯವಾಯಿತು! ನಿನ್ನ ಕುಟುಂಬಕ್ಕಾಗಿ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಲು ನಿನಗೆ ಇಷ್ಟವಿಲ್ಲವಾ? ಎಂದು ಕೇಳಿದರು. 

 

ಮಹಾರಾಜ, ಎಲ್ಲರ ಕಣ್ಣುಗಳು ಆಭರಣಗಳ ಮೇಲೆ ಇವೆ. ಯಾರೂ ಗಮನಿಸದೇ ಇರುವಾಗ ಯಾರಾದರೂ ನಿಮಗೆ ಹಾನಿ ಮಾಡಿದರೆ ಏನು ಮಾಡುವುದು? ಅದಕ್ಕಾಗಿಯೇ ನಾನು ನನ್ನ ಕಣ್ಣುಗಳನ್ನು ಆಕಡೆ ಈಕಡೆ ತಿರುಗಿಸದೇ ನಿಂತಿದ್ದೇನೆ. ಈ ಆಭರಣಗಳಿಗಿಂತ ನೀವೇ ಹೆಚ್ಚು ಅಮೂಲ್ಯರು ಎಂದು ಸೇವಕ ಹೇಳಿದನು. ಸಂತೋಷಗೊಂಡ ರಾಜನು ಅವನನ್ನು ತನ್ನ ಅಂಗರಕ್ಷಕನಾಗಿ ನೇಮಿಸಿಕೊಂಡು ಅವನಿಗೆ ಆಭರಣಗಳು, ವಜ್ರಗಳು ಮತ್ತು ಮುತ್ತುಗಳನ್ನು ಉಡುಗೊರೆಯಾಗಿ ನೀಡಿದರು.

 

ಪ್ರಿಯ ದೇವರ ಮಕ್ಕಳೇ, ಈ ದಿನಗಳಲ್ಲಿ ನಾವು ಯಾವುದಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದೇವೆ? ಆ ಸೇವಕನ ಕಣ್ಣುಗಳು ರಾಜನ ಮೇಲೆ ಕೇಂದ್ರೀಕೃತವಾಗಿದ್ದವು. ಇಂದು ನಮ್ಮ ಕಣ್ಣುಗಳು ಏನನ್ನು ಯಾವುದನ್ನು, ಯಾರನ್ನು ನೋಡುತ್ತಿವೆ? ಈ ಲೋಕದ ಆಶೀರ್ವಾದಕ್ಕಾಗಿ ಓಡುತ್ತಿದ್ದೇವೆಯೇ ಅಥವಾ ದೇವರ ಮೇಲೆ ಕೇಂದ್ರೀಕೃತವಾಗಿದೆಯಾ? ನಮ್ಮ ಹೃದಯಗಳು ಪ್ರತಿದಿನ ಯಾವುದನ್ನು ನೋಡಿ ಓಡುತ್ತಿದೆ? ರಾಜನು ಆ ಸೇವಕನಿಗೆ ಉನ್ನತ ಪದವಿಯನ್ನು ನೀಡಿ ಅವನಿಗೆ ಚಿನ್ನ ಮತ್ತು ಬೆಳ್ಳಿಯನ್ನು ನೀಡಲು ಸಾಧ್ಯವೆಂದರೆ ನಮ್ಮ ರಾಜ ಯೇಸು ಜೀವನಾಧಾರವಾದವುಗಳು ಮತ್ತು ನಿತ್ಯಜೀವವನ್ನು ಕೊಡುವುದು ಎಷ್ಟು ಖಚಿತ! ಆದ್ದರಿಂದ, ನಾವು ಯೇಸುವನ್ನು ನೋಡೋಣ. ಅವರಿಗೆ ಮೊದಲ ಸ್ಥಾನವನ್ನು ನೀಡೋಣ. ಕರ್ತನು ನಿಮ್ಮನ್ನು ಆಶೀರ್ವದಿಸಲಿ! 

- Rev.S.A. ಇಮ್ಮಾನುವೇಲ್ 

 

ಪ್ರಾರ್ಥನಾ ಅಂಶ:

ಭಾರತದಾದ್ಯಂತ 7000 ಮಿಷನರಿಗಳನ್ನು ರೂಪಿಸಲು ಪ್ರಾರ್ಥಿಸಿರಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş