By Village Missionary Movement
Tuesday, 09-Jun-2026ಧೈನಂದಿನ ಧ್ಯಾನ(Kannada) – 09.06.2026
ಬಲವಂತ
"…ಬಲಾತ್ಕಾರಿಗಳು ನುಗ್ಗಿ ಅದನ್ನು ಸ್ವಾಧೀನ ಮಾಡಿಕೊಳ್ಳುತ್ತಾರೆ" - ಮತ್ತಾಯ 11:12
ನಾವು ಒಂದು ಉತ್ಪನ್ನವನ್ನು ತೆಗೆದುಕೊಳ್ಳಬೇಕೆಂದು ನಿರ್ಧರಿಸಿ, ಅದರ ಕುರಿತಾದ ವಿವರಗಳನ್ನು ತಿಳಿಯಲು ಮೊಬೈಲ್‌ನಲ್ಲಿರುವ App ನಲ್ಲಿ ಹುಡುಕುವಾಗ ಅದರ ಬೆಲೆ ನಾವು ನಿರೀಕ್ಷಿಸಿದಷ್ಟು ಹೆಚ್ಚಿಲ್ಲದಿರಬಹುದು. ಆದರೆ ಅದರ ನಂತರ ಕೆಲವೇ ನಿಮಿಷಗಳಲ್ಲಿ, ಇನ್ನೊಂದು ಕಂಪನಿಯು ಈ ಬೆಲೆಗೆ ಆ ಉತ್ಪನ್ನವನ್ನು ನಮಗೆ ನೀಡುವುದಾಗಿ ಹೇಳಲು ಪ್ರಾರಂಭಿಸುತ್ತದೆ. ಹಾಗೆಯೇ ಅದು ಮುಂದುವರಿಯಲು ಸಹ ಪ್ರಾರಂಭಿಸುತ್ತದೆ. ನಾವು ಯಾವಾಗೆಲ್ಲಾ ಮೊಬೈಲ್ ಅನ್ನು Open ಮಾಡುತ್ತೇವೋ ಆಗೆಲ್ಲಾ ಮೊದಲು ನಾವು ಯಾವ ಉತ್ಪನ್ನವನ್ನು ಹುಡುಕಿದೆವೋ ಆ ಉತ್ಪನ್ನವು ಆ ಮೊಬೈಲ್‌ನಲ್ಲಿ ಬಂದು ನಿಲ್ಲುತ್ತದೆ. ಅನೇಕ ಕಂಪನಿಗಳು ನಮ್ಮ ಬಳಿ ಆ ಉತ್ಪನ್ನವನ್ನು ಬಲವಂತವಾಗಿ ಕೊಡಲು ಪ್ರಯತ್ನಿಸುತ್ತಲೇ ಇರುತ್ತವೆ. ನಾವು ಮುಂದಿನ ಉತ್ಪನ್ನವನ್ನು ಖರೀದಿಸುವವರೆಗೂ ಅದು ಮುಂದುವರಿಯುತ್ತಲೇ ಇರುತ್ತದೆ. ಅವರು ನಮ್ಮನ್ನು ಸಂಪರ್ಕಿಸಿ ತಮ್ಮ ಕಂಪನಿಯ ಉತ್ಪನ್ನವನ್ನು ಖರೀದಿಸುವಂತೆ ವಿವಿಧ ರೀತಿಯಲ್ಲಿ ಒತ್ತಾಯಿಸುತ್ತಾರೆ.
ಈ ಲೌಕಿಕ ಉತ್ಪನ್ನವನ್ನು ಖರೀದಿಸುವುದಕ್ಕೇ ನಮ್ಮನ್ನು ಇಷ್ಟೊಂದು ಬಲವಂತ ಪಡಿಸಲು ಸಾಧ್ಯವೆಂದರೆ, ನಾವು ಪರಲೋಕ ರಾಜ್ಯದ ಕುರಿತು ಎಷ್ಟು ಜನರನ್ನು ಬಲವಂತ ಪಡಿಸುತ್ತಿದ್ದೇವೆ? ಯೇಸು ಕ್ರಿಸ್ತನ ಬಗ್ಗೆ ಎಷ್ಟು ಜನರಿಗೆ ಹೇಳಲು ಪ್ರಯತ್ನಿಸುತ್ತಿದ್ದೇವೆ? ಯೇಸುವನ್ನು ಹೇಗಾದರೂ ಅವರೊಳಗೆ ತರಬೇಕೆಂದು ನಾವು ಪ್ರಯತ್ನಿಸುವ ಕಾರ್ಯ ಯಾವುದು? ಅವರು ನಮಗೆ ರಕ್ಷಣೆಯನ್ನು ನೀಡಿದ್ದಾರೆ. ಆ ಅಮೂಲ್ಯವಾದ ಪರಲೋಕ ಜೀವನವನ್ನು ನಮಗೆ ನೀಡಿದ್ದಾರೆ. ನಿಮಗಾಗಿ ಒಂದು ಸ್ಥಳವನ್ನು ಸಿದ್ಧಪಡಿಸಲು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಪರಲೋಕ ರಾಜ್ಯದ ಬಗ್ಗೆ, ಯೇಸು ಕ್ರಿಸ್ತನ ಬಗ್ಗೆ ನಾವು ಎಷ್ಟು ಜನರಿಗೆ ಹೇಳುತ್ತಿದ್ದೇವೆ? ನಾವು ಅದನ್ನು ಮತ್ತೆ ಮತ್ತೆ ಹೇಳಲು ಪ್ರಯತ್ನಿಸುತ್ತಿದ್ದೇವಾ? ಹೇಗಾದರೂ ನನ್ನ ಸಹೋದರ, ಸಹೋದರಿ, ಒಡಹುಟ್ಟಿದವರು, ಸಂಬಂಧಿಕರು, ಸ್ನೇಹಿತರು, ನನ್ನ ಮಕ್ಕಳು ಹೀಗೆ ಎಲ್ಲರೂ ಕೂಡ ಯೇಸುವನ್ನು ತಿಳಿದುಕೊಳ್ಳಲು ಬಲವಂತ ಮಾಡುತ್ತಿದ್ದೇವಾ ಎಂದು ಸ್ವಲ್ಪ ಯೋಚಿಸಿ ನೋಡೋಣ. ಕರ್ತನು, ಸ್ನಾನಿಕನಾದ ಯೋಹಾನನ ಕಾಲದಿಂದ ಈವರೆಗೂ ಪರಲೋಕರಾಜ್ಯವು ಬಲಾತ್ಕಾರಕ್ಕೆ ಗುರಿಯಾಗಿರುತ್ತದೆ ಎಂದು ಹೇಳುತ್ತಾರೆ. ಇಂದಿಗೂ, ಅನೇಕರು ದೇವರನ್ನು ತಿಳಿಯದೇ ಅಲೆದಾಡುತ್ತಿದ್ದಾರೆ. ಅನೇಕ ಮಿಷನರಿಗಳು ನಮ್ಮ ದೇಶಕ್ಕೆ ಬಂದು ತಮ್ಮ ಆಸ್ತಿಯನ್ನು ಕಳೆದುಕೊಂಡಿದ್ದಾರೆ, ತಮ್ಮ ಕುಟುಂಬಗಳಿಂದ ಬೇರ್ಪಟ್ಟಿದ್ದಾರೆ ಮತ್ತು ತಮ್ಮ ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ. ನಾವು ಸಹ ಪರಲೋಕ ರಾಜ್ಯವನ್ನು ಬಲವಂತ ಮಾಡುವವರಾಗಿ ಎಲ್ಲರಿಗೂ ಯೇಸುವಿನ ಪ್ರೀತಿಯನ್ನು ಹೇಳೋಣ. ಯೇಸು ಕ್ರಿಸ್ತನ ಬಗ್ಗೆ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಹೇಳಲು ಪ್ರತಿದಿನ ಬಲವಂತವಾಗಿ ಪ್ರಯತ್ನಿಸುವುದನ್ನು ಮುಂದುವರಿಸೋಣ.
ಖಂಡಿತವಾಗಿಯೂ ದೇವರು ನಾವೊಂದು ದೊಡ್ಡ ಉಜ್ಜೀವನವನ್ನು ಕಾಣುವಂತೆ ಮಾಡುತ್ತಾರೆ. ಕರ್ತನು ನಿಮ್ಮೆಲ್ಲರನ್ನೂ ಆಶೀರ್ವದಿಸಲಿ.
- P. ವೇಣು ವಿಲಿಯಮ್ಸ್
ಪ್ರಾರ್ಥನಾ ಅಂಶ:
ಪ್ರತಿಯೊಂದು ರಾಜ್ಯದಲ್ಲೂ 500 ಸೇವಕರು ಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482