Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.06.2026
Share:

By Village Missionary Movement

Monday, 08-Jun-2026

ಧೈನಂದಿನ ಧ್ಯಾನ(Kannada) – 08.06.2026

 

ನ್ಯಾಯ ವಿಚಾರಣೆಗೆ ಒಳಗಾಗದಂತೆ

 

"ನಮ್ಮನ್ನು ನಾವೇ ವಿಚಾರಿಸಿಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ." - 1 ಕೊರಿಂಥ. 11:31

 

ಒಂದು ಪಟ್ಟಣದ ಎಲ್ಲೆಯಲ್ಲಿ ಸುಂದರವಾದ ಮಹಿಳೆಯ ಪ್ರತಿಮೆಯೊಂದನ್ನು ಇಡಲಾಗಿತ್ತು. ಆ ಪ್ರತಿಮೆಯ ಸೌಂದರ್ಯಕ್ಕೆ ಆಕರ್ಷಿತಳಾದ ಒಬ್ಬ ಬಡ ಹುಡುಗಿ, ತನ್ನನ್ನು ತಾನು ಅದರಂತೆ ಅಲಂಕರಿಸಿಕೊಳ್ಳಲು ಬಯಸಿದಳು. ಪ್ರತಿಮೆಯ ಕೂದಲು ಸುಂದರವಾಗಿ ಬಾಚಿಕೊಂಡಿರುವುದನ್ನು ನೋಡಿ, ಅವಳು ಪ್ರತಿದಿನ ತನ್ನ ಮುರಿದ ಬಾಚಣಿಗೆಯಿಂದ ತನ್ನ ಕೂದಲನ್ನು ಸುಂದರವಾಗಿ ಬಾಚಿಕೊಳ್ಳುತ್ತಿದ್ದಳು. ಅಲ್ಲಲ್ಲಿ ಹರಿದುಹೋಗಿದ್ದ ತನ್ನ ಕೊಳಕು ಬಟ್ಟೆಗಳನ್ನು ಒಗೆದು ಹೊಲಿದು ಹಾಕಿಕೊಂಡಳು. ಹೀಗೆ ದಿನದಿಂದ ದಿನಕ್ಕೆ ತನ್ನನ್ನು ತಾನು ಸರಿಮಾಡಿಕೊಳ್ಳುತ್ತಲೇ ಬಂದಳು. ಹೀಗೆ, ದಿನಗಳು ಕಳೆದಂತೆ ಅವಳ ನೋಟವು ಸುಂದರವಾಗಿ ಬದಲಾಯಿತು.

 

ನಮ್ಮನ್ನು ನಾವೇ ವಿಚಾರಿಸಿಕೊಳ್ಳುವುದು ಹೇಗೆ? ಮೇಲ್ಕಂಡ ಸತ್ಯವೇದ ಭಾಗದಲ್ಲಿ ಫರಿಸಾಯನು ತನ್ನನ್ನು ತಾನು ಹೆಚ್ಚಿಸಿಕೊಂಡು ಪ್ರಾರ್ಥಿಸಿದನು. ಆದರೆ ಸತ್ಯವೇದವು ಏನು ಹೇಳುತ್ತದೆ? ತಮ್ಮ ತಮ್ಮೊಳಗೆ ತಮ್ಮನ್ನು ಅಳತೆಮಾಡಿಕೊಂಡು ತಮತಮಗೆ ಹೋಲಿಸಿಕೊಂಡು ವಿವೇಕವಿಲ್ಲದವರಾಗಿದ್ದಾರೆ (2 ಕೊರಿಂಥ. 10:12) ಎಂದೂ, ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯನಲ್ಲ; ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು (2 ಕೊರಿಂಥ. 10:18) ಎಂದೂ ಸತ್ಯವೇದವು ಹೇಳುತ್ತಿದೆ. ನಮ್ಮನ್ನು ನಾವೇ ವಿಚಾರಿಸಿಕೊಂಡರೆ, ನಾನೊಬ್ಬ ಪಾಪಿ ಎಂದು ಅರಿತುಕೊಂಡು, ಕರ್ತನ ಕೃಪೆಗಾಗಿ ಬೇಡಿಕೊಂಡ ಸುಂಕದವನು ಕರ್ತನಿಂದ ಹೊಗಳಲ್ಪಟ್ಟು, ನೀತಿವಂತರಾಗುತ್ತಾರೆ ಹೊರತು ಫರಿಸಾಯನಲ್ಲ. 

 

ಪ್ರಿಯರೇ, ನಮ್ಮನ್ನು ನಾವೇ ಅಳತೆ ಮಾಡಿಕೊಂಡು, ಇತರರಿಗಿಂತ ನಾವು ಎಷ್ಟೋ ಒಳ್ಳೆಯವರು, ಪರಿಶುದ್ಧರು ಎಂದೆಲ್ಲಾ ನೆನೆಸುತ್ತಾ ಇರಬೇಡ. ಒಂದೊಂದು ದಿನವೂ ಯೇಸುವಿನ ಪ್ರೀತಿ, ತಾಳ್ಮೆ, ಕ್ಷಮೆಯಾಚನೆ, ಶಾಂತಗುಣ, ಪರಿಶುದ್ಧತೆ, ಸತ್ಕಾರ್ಯಗಳನ್ನು ಮಡುವುದರೊಂದಿಗೆ ನಮ್ಮ ಗುಣಾತಿಶಯಗಳನ್ನು ಹೋಲಿಸಿ ನೋಡಿ, ನಾವು ಎಷ್ಟು ಕೊರತೆಯುಳ್ಳವರು ಎಂಬುದನ್ನು ಅರಿತುಕೊಂಡು "ನಿಮ್ಮಂತೆ ನನ್ನನ್ನು ಮಾರ್ಪಡಿಸಿ" ಎಂದು ನಮ್ಮ ಹೃದಯಾಂತರಾಳದಿಂದ ಕರ್ತನನ್ನು ನೋಡಿ ಪ್ರಾರ್ಥಿಸಬೇಕು. ಪರಿಶುದ್ಧಾತ್ಮನು ನಮಗೆ ಖಂಡಿತವಾಗಿಯೂ ಸಹಾಯ ಮಾಡುತ್ತಾರೆ. ನಾವು ದೇವರ ದೃಷ್ಟಿಯಲ್ಲೂ, ಮನುಷ್ಯರ ದೃಷ್ಟಿಯಲ್ಲೂ ಮಾರ್ಪಡಿಸಲ್ಪಟ್ಟವರಾಗಿ ಆಧ್ಯಾತ್ಮಿಕವಾದ ಅಲಂಕಾರದೊಂದಿಗೆ ಮಾರ್ಪಡುತ್ತೇವೆ. ಪರಿಶುದ್ಧತೆಯ ಮೇಲೆ ಪರಿಶುದ್ಧತೆ ಹೊಂದುತ್ತಲೇ ಮುಂದುವರಿಯಲು ದೇವರು ನಮಗೆ ಕೃಪೆ ತೋರಲಿ. ಆಮೆನ್. 

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಕಣ್ಮಣಿ ಮಗು ಯೇಸುವಿಗಾಗಿ ಎಂಬ ಪ್ರಾರ್ಥನೆ ಯೋಜನೆಯಲ್ಲಿ ಸೇರಿರುವ ಮಕ್ಕಳ ರಕ್ಷಣೆ ಮತ್ತು ಸ್ವಸ್ಥತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al queenbet holiganbet casinoroyal betplay bahiscasino