Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.06.2026 (Kids Special)
Share:

By Village Missionary Movement

Sunday, 07-Jun-2026

ಧೈನಂದಿನ ಧ್ಯಾನ(Kannada) – 07.06.2026 (Kids Special)

 

ಜ್ಞಾನವೇ ಮುಖ್ಯ

 

“ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ" - ಜ್ಞಾನೋಕ್ತಿ 2:6

 

ಹಲೋ ಪುಟಾಣಿಗಳೇ, ಹೊಸ ಶೈಕ್ಷಣಿಕ ವರ್ಷಕ್ಕೆ ಕಾಲಿಟ್ಟು ಮುಂದಿನ ತರಗತಿಗೆ ಹೋಗಿರುವ ನಿಮ್ಮೆಲ್ಲರಿಗೂ ನಮ್ಮ ಹೃತ್ಪೂರ್ವಕ ಶುಭಾಶಯಗಳು. ನೀವು ಹಲವು ದಿನಗಳ ರಜೆಯ ನಂತರ ಶಾಲೆಗೆ ಹೋಗಿದ್ದೀರಿ. ಶಿಕ್ಷಕರಿಗೆ ವಿಧೇಯರಾಗಿ ಒಳ್ಳೆಯ ಮಕ್ಕಳಾಗಿ ಈಗಿನಿಂದಲೇ ಓದಲು ಪ್ರಾರಂಭಿಸಬೇಕು O.K. ನಾ ಪುಟಾಣಿಗಳೇ. 

 

ಬೈಬಲ್‌ನಲ್ಲಿ, ಕರ್ತನು ಕನಸಿನಲ್ಲಿ ಒಬ್ಬ ಮನುಷ್ಯನೊಂದಿಗೆ ಮಾತನಾಡಿ, ನಿನಗೆ ಏನು ಬೇಕೋ ಕೇಳು ಎಂದರು. ಕರ್ತನು ನಿಮ್ಮ ಬಳಿ ಕೇಳಿದರೆ, ನೀವು ಏನು ಉತ್ತರ ಕೊಡ್ತೀರ. ಅದರ ಬಗ್ಗೆ ಯೋಚಿಸಿಕೊಳ್ಳಿರಿ. ಕಥೆ ಮುಗಿಯುವಾಗ ಕೇಳುತ್ತೇನೆ. ಆ ಮನುಷ್ಯ ಯಾರು? ಏನಾದ್ರು ಕೇಳಿದರು ಎಂದು ನಾನು ನಿಮಗೆ ಹೇಳ್ಳಾ? ಅರಸನಾದ ದಾವೀದನ ನಂತರ, ಸೊಲೊಮೋನನೇ ಇಸ್ರಾಯೇಲ್ ಜನರ ಅರಸ. ಜನರ ಬಗ್ಗೆ ಅಥವಾ ರಾಜಕೀಯದ ಬಗ್ಗೆ ಏನೂ ತಿಳಿಯದ ಯೌವ್ವನ ವಯಸ್ಸಿನಲ್ಲಿ ಸೊಲೊಮೋನನು ಹೇಗೆ ಈ ರಾಜ್ಯಗಳನ್ನು ಆಳುವುದು ಎಂಬ ಆಲೋಚನೆಗಳೊಂದಿಗೆ ಜವಾಬ್ದಾರಿಯನ್ನು ವಹಿಸಿಕೊಂಡರು. ದೇವರು ಅವರಿಗೆ ಕನಸಿನಲ್ಲಿ ಕಾಣಿಸಿಕೊಂಡು, ನೀನು ಬಯಸುವುದನ್ನು ನನ್ನ ಬಳಿ ಕೇಳು ಎಂದು ಹೇಳಿದರು. ಅರಸನಾದ ಸೊಲೊಮೋನನು ಏನು ಕೇಳಿದರು ಎಂದು ನಿಮಗೆ ಗೊತ್ತಾ? "ಲೆಕ್ಕಿಸಲಾಗದಂಥ ಮಹಾ ಜನಾಂಗವನ್ನು ಆಳುವದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವದಕ್ಕೂ ನನಗೆ ವಿವೇಕವನ್ನು ದಯಪಾಲಿಸು ಎಂದು ಕೇಳಿದರು. ಈ ಬಿನ್ನಹವನ್ನು ಕರ್ತನಾದ ದೇವರು ಮೆಚ್ಚಿದರು. ಆದ್ದರಿಂದ ಅವರು ಕೇಳಿದ ಜ್ಞಾನವು ಮಾತ್ರವಲ್ಲ, ಕೇಳದ ಐಶ್ವರ್ಯವನ್ನೂ ಘನತೆಯನ್ನೂ ಕೊಟ್ಟರು. ಅವರ ಜ್ಞಾನದ ಬಗ್ಗೆ ಕೇಳಲ್ಪಟ್ಟ ಅನೇಕ ರಾಜರು ಮತ್ತು ರಾಣಿಯರು ಬಂದು ಅದನ್ನು ಕಂಡು ಆಶ್ಚರ್ಯಚಕಿತರಾದರು. ಅರಸನಾದ ಸೊಲೊಮೋನನಂತೆ ಮುಂಚೆಯೂ ಇರಲಿಲ್ಲ ಮುಂದೆಯೂ ಇರುವದಿಲ್ಲ ಎಂದು ದೇವರು ಹೇಳಿದರು. ಅವರ ಆಳ್ವಿಕೆ ಮತ್ತು ನ್ಯಾಯ ವಿಚಾರಿಸುವ ಕಾರ್ಯವನ್ನು ನೋಡಿದ ಜನರು ಆಶ್ಚರ್ಯಪಟ್ಟು ಹೊಗಳಿದರು. ಅರಸನಾದ ಸೊಲೊಮೋನನ ದಿನಗಳಲ್ಲಿ, ದೇಶವು ನಲವತ್ತು ವರ್ಷಗಳ ಕಾಲ ಸಮಾಧಾನವಾಗಿತ್ತು. ಎಷ್ಟು Super ಅಲ್ವಾ.

 

ಪುಟಾಣಿಗಳೇ, ನೀವು ಸಹ ಯೇಸಪ್ಪನ ಬಳಿ ಜ್ಞಾನವನ್ನು ಕೇಳಿ ಪಡೆದುಕೊಳ್ಳಬೇಕು. ನನಗೆ Maths ತುಂಬಾ ಕಷ್ಟ, Maths ಅಂದ್ರೇನೆ ಇಷ್ಟವಿಲ್ಲ, ನನಗೆ Science ಬರಲ್ಲ ಹಾಗೆಲ್ಲ ಹೇಳಬಾರದು. ಜ್ಞಾನ ಬಹಳ ಮುಖ್ಯ. ಯೇಸಪ್ಪನ ಬಳಿ ಜ್ಞಾನವನ್ನು ಕೇಳಿ ಪಡೆಯಲು ನೀವು ರೆಡಿ ತಾನೇ ಪುಟಾಣಿಗಳೇ O.K.Bye. 

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş jojobet superbetin superbetin giriş casibom casibom giriş holiganbet holiganbet giriş jojobet jojobet giriş alobet alobet giriş amgbahis amgbahis giriş sweet bonanza casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin superbetin giriş marsbahis marsbahis giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/