Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.06.2026
Share:

By Village Missionary Movement

Saturday, 06-Jun-2026

ಧೈನಂದಿನ ಧ್ಯಾನ(Kannada) – 06.06.2026

 

ಸದ್ಗುಣ

 

"ಆತ್ಮನ ಫಲವು ಎಲ್ಲಾ ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಇರುತ್ತದೆ" - ಎಫೆಸ 5:9

 

ಚಾರ್ಲ್ಸ್ ವಿಲಿಯಮ್ಸ್, ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ವಿಶ್ವಪ್ರಸಿದ್ಧ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಿದವರು. ಇವರು ಹುಟ್ಟಿನಿಂದಲೇ ಮುಖ ದೋಷದಿಂದ ಬಳಲುತ್ತಿದ್ದ ಕಾರಣ ಅವರನ್ನು ಸಹವರ್ತಿಗಳು ದೂರವಿಟ್ಟರು. ಆ ದೋಷವನ್ನು ಸರಿಪಡಿಸಲು ಅವರು ಹಲವು ಬಾರಿ ಪ್ರಯತ್ನಿಸಿದರು ಆದರೆ ವಿಫಲರಾದರು. ಆ ಸಮಯದಲ್ಲಿ, ಅವರ ತಾಯಿ, ನಮ್ಮಿಂದ ಈ ದೋಷವನ್ನು ಸರಿಪಡಿಸಲು ಸಾಧ್ಯವಿಲ್ಲ. ದೇವರ ಬಲವನ್ನು ಹೊಂದಿಕೊಂಡು, ಸತ್ಕಾರ್ಯಗಳನ್ನು ಮಾಡು. ಆಗ ಜನರು ನಿನ್ನ ಮುಖವನ್ನಲ್ಲ, ನಿನ್ನ ಕಾರ್ಯಗಳನ್ನು ನೋಡುತ್ತಾರೆ ಎಂದು ಹೇಳಿದರು. ಚಾರ್ಲ್ಸ್ ಬೈಬಲ್ ಓದಿದರು, ಪ್ರಾರ್ಥಿಸಿದರು ಮತ್ತು ದೇವರ ಶಕ್ತಿಯಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. 35 ನೇ ವಯಸ್ಸಿನಲ್ಲಿ, ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಕ್ಷರಾದರು ಮತ್ತು ಚೆನ್ನಾಗಿ ಕೆಲಸ ಮಾಡಿ, ವಿಶ್ವವಿದ್ಯಾಲಯವನ್ನು ಉತ್ತಮ ಶಿಕ್ಷಣ ಸಂಸ್ಥೆಯನ್ನಾಗಿ ಪರಿವರ್ತಿಸಿದರು. ಅವರು ರಾಜಕೀಯ, ವ್ಯವಹಾರ, ಸಮಾಜ ಮತ್ತು ಆಧ್ಯಾತ್ಮಿಕತೆಯಲ್ಲಿ ಶ್ರೇಷ್ಠರಾಗಿ ಕಾಣಲ್ಪಟ್ಟರು.

 

ನಾವು ಉತ್ತಮವಾಗಿ ಕಾಣಲು ಪ್ರಯತ್ನಗಳನ್ನು ಮಾಡುತ್ತೇವೆ. "ಸೌಂದರ್ಯವು ಮೋಸಕರ; ಲಾವಣ್ಯವು ವ್ಯರ್ಥ; ಕರ್ತನಿಗೆ ಭಯಪಡುವವಳು ಹೊಗಳಲ್ಪಡುವಳು" ಎಂದು ಜ್ಞಾನೋಕ್ತಿ 31:30 ರಲ್ಲಿ ಓದುತ್ತೇವೆ. ಆದರೆ ನಮ್ಮ ರೂಪಕ್ಕಿಂತ ಹೆಚ್ಚಾಗಿ ನಮ್ಮ ಕ್ರಿಯೆಗಳು ಮಾತ್ರವೇ ನಾವು ಈ ಲೋಕವನ್ನು ಬಿಟ್ಟು ಪರಲೋಕದೊಳಗೆ ಪ್ರವೇಶಿಸಿದರೂ ಮಾತನಾಡಲ್ಪಡುತ್ತದೆ. ನಮ್ಮ ಒಳ್ಳೆಯ ನಡವಳಿಕೆ ಮತ್ತು ನಮ್ಮ ಬಾಯಿಂದ ಹೊರಬರುವ ಮಾತುಗಳು ಇತರರಿಗೆ ಮಾದರಿಯಾಗಿರಬೇಕು. ಅದಕ್ಕಾಗಿ, ನಮ್ಮ ಗುಣಗಳನ್ನು ಬದಲಾಯಿಸಬೇಕಾಗಿದೆ. ನಾವು ಕರ್ತನಿಗಾಗಿ ಕಾಯಬೇಕು ಮತ್ತು ನಮ್ಮ ಗುಣಗಳನ್ನು ಬದಲಾಯಿಸಿಕೊಳ್ಳಲು ದೇವರ ಶಕ್ತಿಯನ್ನು ಪಡೆಯಬೇಕು. ನಾನಿಲ್ಲದೆ ನೀವು ಏನೂ ಮಾಡಲಾರಿರಿ ಎಂದು ದೇವರು ಸ್ವತಃ ಹೇಳಿದ್ದಾರೆ. "ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನಿಮಗೆ ಬೇಕಾದದ್ದನ್ನು ಬೇಡಿಕೊಳ್ಳಿರಿ, ನಿಮಗೆ ಅದು ದೊರೆಯುವದು ಎಂದು ಹೇಳುತ್ತಾರೆ. ಸತ್ಯವೇದವನ್ನು ಓದಿ ಅದರ ಪ್ರಕಾರ ಜೀವಿಸಬೇಕು. ಇತರರನ್ನು ಪ್ರೀತಿಸಿ ಸತ್ಕಾರ್ಯಗಳನ್ನು ಮಾಡಬೇಕು. ದೇವರ ಪ್ರೀತಿಯು ನಮ್ಮೊಳಗೆ ಸುರಿಯದ ಹೊರತು ನಾವು ಒಳ್ಳೆಯ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ. ನಾವು ದೇವರಿಗೆ ಹತ್ತಿರವಾಗಿ ಆತನ ವಾಕ್ಯಗಳಿಗೆ ವಿಧೇಯರಾಗಿ ಬದುಕೋಣ. 

 

ನಮ್ಮಲ್ಲಿ ಅನೇಕರು ನಮ್ಮ ರೂಪವು ಚೆನ್ನಾಗಿ ಇರಬೇಕು ಎಂಬುದಕ್ಕಾಗಿ ತುಂಬಾ ಸಮಯ ಖರ್ಚುಮಾಡುತ್ತೇವೆ, ಅದರಲ್ಲಿ ತಪ್ಪಿಲ್ಲ. ಒಳ್ಳೆಯ ರೂಪವು ಅಗತ್ಯವೇ. ಆದರೆ ಅದರ ಬಗ್ಗೆ ಹೆಮ್ಮೆ ಪಡಲು ಏನೂ ಇಲ್ಲ. ನಮ್ಮ ದೇವರು ನಮ್ಮ ಬಾಹ್ಯ ನೋಟ ಅಥವಾ ನಾವು ಮನುಷ್ಯರ ಮುಂದೆ ವರ್ತಿಸುವ ರೀತಿಯಿಂದ ನಮ್ಮನ್ನು ನಿರ್ಣಯಿಸುವುದಿಲ್ಲ. ಆತನು ನಮ್ಮ ಹೃದಯಗಳನ್ನು ನೋಡುತ್ತಾರೆ! ಅದು ಒಳ್ಳೆಯತನದಿಂದ ತುಂಬಿದ್ದಾಗ, ಹೆಚ್ಚು ಫಲಗಳನ್ನು ಕೊಡುತ್ತೇವೆ.

- Mrs. ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ಕಣ್ಮಣಿ ಮಗು ಯೇಸುವಿಗಾಗಿ ಎಂಬ ಪ್ರಾರ್ಥನೆ ಯೋಜನೆಯಲ್ಲಿ ಸೇರಿರುವ ಮಕ್ಕಳ ಭವಿಷ್ಯಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş