Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.06.2026
Share:

By Village Missionary Movement

Wednesday, 03-Jun-2026

ಧೈನಂದಿನ ಧ್ಯಾನ(Kannada) – 03.06.2026

 

ಯೇಸುವನ್ನು ಕಳೆದುಕೊಂಡಿದ್ದೀರಾ?

 

“…ಕರ್ತನು ತನ್ನನ್ನು ಬಿಟ್ಟು ತೊಲಗಿದ್ದನ್ನು ಅರಿಯದೆ ಬೇರೆ ಸಮಯಗಳಂತೆಯೇನಾನು ಹೊರಟು ಕೊಸರಿಕೊಂಡು ಹೋಗುವೆನು ಅಂದುಕೊಂಡನು." - ನ್ಯಾಯಸ್ಥಾಪಕರು 16:20

 

ನಿಮಗೊಂದು ಗೊತ್ತಾ ಒಬ್ಬ ಕನ್ಯೆಯು, ತಾಯಿಯಾದಳು. ದೇವರಿಂದ ಮುಂಸೂಚಿಸಲ್ಪಟ್ಟ ಮಹಿಳೆ ಅವಳು, ದೇವದೂತನೇ ಅವಳಿಗೆ ಆ ಸುದ್ದಿಯನ್ನು ಹೇಳಿದರು, ಪವಿತ್ರಾತ್ಮದಿಂದ ತುಂಬಲ್ಪಟ್ಟು ಆ ಮಗುವಿಗೆ ಜನ್ಮ ನೀಡಿದಳು. ಬಡವರು ಶ್ರೀಮಂತರು ಎಲ್ಲರೂ ಬಂದು ಮಗುವನ್ನು ನೋಡಿ ನಮಸ್ಕರಿಸಿ ಉಡುಗೊರೆಗಳನ್ನು ಕೊಟ್ಟು ಹೋದರು. ಆ ಮಗುವಿನ ಬಗ್ಗೆ ಹೇಳಲ್ಪಟ್ಟ ಅನೇಕ ಪ್ರವಾದನೆಗಳನ್ನು ಕೇಳಿ ಪೋಷಕರು ಆಶ್ಚರ್ಯಚಕಿತರಾಗಿ, ನಡೆದ ಎಲ್ಲವನ್ನು ತಮ್ಮ ಹೃದಯದಲ್ಲಿಟ್ಟುಕೊಂಡು ಆ ಮಗುವನ್ನು ಬೆಳೆಸುತ್ತಿದ್ದರು. ಆದರೆ ಜಾತ್ರೆಗೆ ಬಂದ ಪೋಷಕರು ಹಬ್ಬದ ಆಚರಣೆಯ ಸಮಯದಲ್ಲಿ ತಮ್ಮ ಮಗನನ್ನು ಕಳೆದುಕೊಂಡಾಗ ಮನೆಗೆ ಪ್ರಯಾಣಿಸುತ್ತಿದ್ದ ಜನಸಮೂಹದ ನಡುವೆ ಹುಡುಕಿದರು. ಆ ಮಹಿಳೆ ಬೇರೆ ಯಾರೂ ಅಲ್ಲ, ಯೇಸುವಿನ ತಾಯಿ ಮರಿಯಳು. 

 

ಇದೇ ರೀತಿ, ಹಳೆಯ ಒಡಂಬಡಿಕೆಯಲ್ಲಿ ಸಂಸೋನ ಎಂಬ ವ್ಯಕ್ತಿ ಇದ್ದರು. ಸಂಸೋನನು ಕರ್ತನ ಆತ್ಮದಿಂದ ಅಸಾಧಾರಣವಾದ ಕೆಲಸಗಳನ್ನು ಮಾಡಿದರು. ಆದರೆ ಅವರು ಲೌಕಿಕ ಸುಖಗಳು, ಆಸೆಗಳು ಮತ್ತು ಕಾಮಗಳಲ್ಲಿ ತೊಡಗಿಸಿಕೊಂಡಿದ್ದರಿಂದ, ಕರ್ತನು ತನ್ನನ್ನು ಬಿಟ್ಟು ಹೋಗಿದ್ದಾರೆಂದು ತಿಳಿಯದೇ ಇದ್ದರು. ಯೇಸು ಯಾವ ತಪ್ಪೂ ಮಾಡದವರು ಎಂದು ಪಿಲಾತನು ತಿಳಿದಿದ್ದರೂ, ಜನರಿಗಾಗಿ ತನ್ನ ಕೈಗಳನ್ನು ತೊಳೆದುಕೊಂಡು ಬಿಟ್ಟರು. ಇಂದಿಗೂ, ಕರ್ತನನ್ನು ತಿಳಿದಿದ್ದೇವೆಂದು ಹೇಳಿಕೊಳ್ಳುವ ಅನೇಕ ಕ್ರೈಸ್ತರು ಹಬ್ಬಗಳು, ಕೃತಜ್ಞತಾ ಹಬ್ಬಗಳು ಮತ್ತು ಸುಗ್ಗಿಯ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಯೇಸುವನ್ನು ಕಳೆದುಬಿಟ್ಟು ಯೇಸುವೇ ಇಲ್ಲದೆ ಆಚರಿಸುತ್ತಿದ್ದಾರೆ. ಅದಲ್ಲದೆ, ಲೌಕಿಕ ವಿಷಯಗಳಿಗೆ ಪ್ರಾಮುಖ್ಯತೆಯನ್ನು ಕೊಟ್ಟುಬಿಟ್ಟು, ಯೇಸುಕ್ರಿಸ್ತನು ಅವರನ್ನು ಬಿಟ್ಟು ಹೋಗಿರುವುದನ್ನು ಸಹ ತಿಳಿಯದೇ, ಹಿಂದಿನಂತೆಯೇ ಮಾಡುತ್ತಲೇ ಇರುತ್ತಾರೆ. ಆದರೆ ಅದರಲ್ಲಿ ಯಾವುದೇ ಆಶೀರ್ವಾದವಿಲ್ಲ ಎಂದು ಕಂಡುಕೊಂಡಾಗ ಮನೋವೇದನೆ ಪಡುತ್ತಾರೆ. ಸ್ನೇಹಿತರು, ಸಂಬಂಧಿಕರು, ಸಮಾಜ ಎಂದು ಮನುಷ್ಯರು ನೋಡುವ ಹಾಗೆ ಪ್ರಾರ್ಥಿಸುವುದು, ಬೈಬಲ್ ಅನ್ನು ಓದುವುದು. ಹೀಗೆ ದೇವರಿಗೆ ಮೆಚ್ಚಿಕೆಯಾಗಿ ಬದುಕುವುದನ್ನು ಬಿಟ್ಟೇ ಬಿಡುತ್ತಾರೆ. ಪ್ರಿಯರೇ, ನೀವು ಸಹ ಮರಿಯಳಂತೆ, ಸಂಸೋನನಂತೆ, ಪಿಲಾತನಂತೆ ಇದ್ದೀರಾ? ಅದರ ಬಗ್ಗೆ ಯೋಚಿಸಿ ನೋಡಿ. ನೀವು ಇಂದು ಯೇಸುವನ್ನು ಕಳೆದುಕೊಂಡಿದ್ದರೂ, ಮಾನಸಾಂತರ ಹೊಂದಿ ಅವರನ್ನು ಹುಡುಕಿ ಬರುವಾಗ, ಆತನು ನಿಮಗೆ ದೊಡ್ಡ ಆಶೀರ್ವಾದಗಳನ್ನು ನೀಡಲು ಶಕ್ತರಾಗಿದ್ದಾರೆ. ಮರಿಯಳು ಯೇಸುವನ್ನು ಹುಡುಕಿ ಬಂದಾಗ, ಯೇಸುವನ್ನು ನೋಡಿದ್ದು ಮಾತ್ರವಲ್ಲದೆ ಆತನ ಬುದ್ಧಿವಂತಿಕೆಗೆ ಆಶ್ಚರ್ಯಚಕಿತರಾದರು. ಸಂಸೋನನು ಕರ್ತನು ತನ್ನೊಂದಿಗೆ ಇಲ್ಲ ಎಂದು ಗ್ರಹಿಸಿ, ಇದೊಂದು ಬಾರಿ ಮಾತ್ರ ನನ್ನನ್ನು ನೆನೆಸಿಕೊಳ್ಳಿ ಎಂದು ಮನತಿರುಗಿ ಬೇಡಿಕೊಂಡಾಗ ಕರ್ತನು ಅವರನ್ನು ಬಲಪಡಿಸಿದರು. ಸಂಸೋನನು ಸಾಯುವಾಗ ಅವನ ಮೂಲಕ ಕೊಲ್ಲಲ್ಪಟ್ಟವರ ಸಂಖ್ಯೆ ಬಹಳ‌ ಹೆಚ್ಚು. ಬಲವಾಗಿ ದೇವರ ಶಕ್ತಿ ಇಳಿಯಿತು. ನೀವು ಕರ್ತನನ್ನು ಕಳೆದುಕೊಂಡಿದ್ದರೆ, ಇಂದೇ ಮನತಿರುಗಿರಿ. ನಾನು ಹೇಳುವುದು ಒಂದೇ. ಯಾವುದಕ್ಕಾಗಿಯೂ ಯೇಸುವನ್ನು ಕಳೆದುಕೊಳ್ಳಬೇಡಿ. ಯೇಸುವಿಗಾಗಿ ಏನು ಬೇಕಾದರೂ ಕಳೆದುಕೊಳ್ಳಲು ಸಿದ್ಧರಾಗಿರಿ. ಕ್ರಿಸ್ತನಿಗಾಗಿ ಕಳೆದುಕೊಂಡವರು ಎಂದಿಗೂ ದರಿದ್ರರು ಆಗಿದ್ದೇ ಇಲ್ಲ. 

- Bro. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಡೇ ಕೇರ್ ಸೆಂಟರ್‌ನಲ್ಲಿರುವ ಮಕ್ಕಳ ಶೈಕ್ಷಣಿಕ ಅಗತ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş